Aryan Raaj Photo Gallery: ಮರ್ಡರ್‌ ಮಿಸ್ಟ್ರಿ ಭೇದಿಸಲು ಹೊರಟ 'ಉಘೇ ಉಘೇ ಮಾದೇಶ್ವರ' ಖ್ಯಾತಿಯ ಆರ್ಯನ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aryan Raaj Photo Gallery: ಮರ್ಡರ್‌ ಮಿಸ್ಟ್ರಿ ಭೇದಿಸಲು ಹೊರಟ 'ಉಘೇ ಉಘೇ ಮಾದೇಶ್ವರ' ಖ್ಯಾತಿಯ ಆರ್ಯನ್‌

Aryan Raaj Photo Gallery: ಮರ್ಡರ್‌ ಮಿಸ್ಟ್ರಿ ಭೇದಿಸಲು ಹೊರಟ 'ಉಘೇ ಉಘೇ ಮಾದೇಶ್ವರ' ಖ್ಯಾತಿಯ ಆರ್ಯನ್‌

  • ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಉಘೇ ಉಘೇ ಮಾದೇಶ್ವರ' ವೀಕ್ಷಕರಿಗೆ ಈ ನಟ ಪರಿಚಯವಿರುಬಹುದು. ಧಾರಾವಾಹಿಯಲ್ಲಿ ಮಾದೇಶ್ವರನಾಗಿ ನಟಿಸಿದ್ದ ಆರ್ಯನ್‌ ಈಗ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಚಿತ್ರಕ್ಕೆ 'ಲಿಪ್‌ಸ್ಟಿಕ್ ಮರ್ಡರ್' ಎಂಬ ಹೆಸರಿಡಲಾಗಿದ್ದು ಈ ಚಿತ್ರದಲ್ಲಿ ಆರ್ಯನ್‌ ರಾಜ್‌ ಪ್ರಕರಣವನ್ನು ಭೇದಿಸುವ ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ನಟಿಸಿದ್ದಾರೆ.
icon

(1 / 8)

ಚಿತ್ರಕ್ಕೆ 'ಲಿಪ್‌ಸ್ಟಿಕ್ ಮರ್ಡರ್' ಎಂಬ ಹೆಸರಿಡಲಾಗಿದ್ದು ಈ ಚಿತ್ರದಲ್ಲಿ ಆರ್ಯನ್‌ ರಾಜ್‌ ಪ್ರಕರಣವನ್ನು ಭೇದಿಸುವ ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ನಟಿಸಿದ್ದಾರೆ.(PC: Aryan Raaj )

ಆರ್ಯನ್‌ ರಾಜ್‌, 'ಉಘೇ ಉಘೇ ಮಾದೇಶ್ವರ' ಮಾತ್ರವಲ್ಲದೆ, ಕೆಲವು ಧಾರಾವಾಹಿಗಳಲ್ಲಿ ಪೌರಾಣಿಕ ಪಾತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. 
icon

(2 / 8)

ಉತ್ತರ ಕರ್ನಾಟಕ ಮೂಲದ ಆರ್ಯನ್‌ ರಾಜ್‌, ಮೊದಲು ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದರು. ಕೆಲವೊಂದು ಆಡ್‌ ಫಿಲ್ಮ್‌ಗಳಲ್ಲೂ ಅವರು ನಟಿಸಿದ್ದಾರೆ. 
icon

(3 / 8)

ಆರ್ಯನ್‌ ನಟಿಸುತ್ತಿರುವ 'ಲಿಪ್‌ಸ್ಟಿಕ್ ಮರ್ಡರ್' ಚಿತ್ರಕ್ಕೆ ಇತ್ತೀಚೆಗೆ ಸೆನ್ಸಾರ್‌ ಮಂಡಳಿ ಯಾವುದೇ ಕಟ್ ಅಥವಾ ಮ್ಯೂಟ್‌ ಇಲ್ಲದೆ ಯು/ಎ ಸರ್ಟಿಫಿಕೇಟ್ ನೀಡಿದೆ.
icon

(4 / 8)

ಈಗಾಗಲೇ ಬಿಡುಗಡೆ ಆಗಿರುವ 'ಲಿಪ್‌ಸ್ಟಿಕ್ ಮರ್ಡರ್' ಟ್ರೇಲರ್‌ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. 
icon

(5 / 8)

Ughe Ughe Fame Madesha Fame Aryan Raaj in Murder Mistry movie
icon

(6 / 8)

Ughe Ughe Fame Madesha Fame Aryan Raaj in Murder Mistry movie

ಸಿನಿ ವ್ಯಾಲಿ ಕ್ರಿಯೇಷನ್ಸ್ ಬ್ಯಾನರ್‌ ಮೂಲಕ ಬಿ.ಎಸ್. ಮಂಜುನಾಥ್ ಹಾಗೂ ರಾಜೇಶ್ ಮೂರ್ತಿ ಸೇರಿ ಚಿತ್ರವನ್ನು ನಿರ್ಮಿಸಿದ್ದಾರೆ. ಬಂಡವಾಳ ಹೂಡುವುದರೊಂದಿಗೆ ರಾಜೇಶ್‌ ಮೂರ್ತಿ ಚಿತ್ರವನ್ನು ನಿರ್ದೇಶನ ಕೂಡಾ ಮಾಡಿದ್ದಾರೆ. 
icon

(7 / 8)

ಡೇಟಿಂಗ್ ಆಪ್ ಮೂಲಕ ಪರಿಚಯ ಆಗುವ ಮಹಿಳೆಯರು, ಕರೆದಲ್ಲಿಗೆ ಹೋಗುವ ಯುವಕರು ಯಾವ ರೀತಿ ಕೊಲೆಯಾಗುತ್ತಾರೆ, ಹೆಣ್ಣೊಬ್ಬಳು ಇಂತಹ ಯುವಕರನ್ನು ಏಕೆ ಟಾರ್ಗೆಟ್ ಮಾಡುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. 
icon

(8 / 8)

ಇತರ ಗ್ಯಾಲರಿಗಳು