ಅಶ್ವಿನ್-ಕುಲ್ದೀಪ್ ನೋಡಿ ಕಲಿಯಿರಿ; ಇಂಗ್ಲೆಂಡ್ ವೈಫಲ್ಯಕ್ಕೆ ಕಿಡಿಕಾರಿದ ಮಾಜಿ ನಾಯಕ ನಾಸರ್ ಹುಸೇನ್
- Nasser Hussain: ಬಜ್‌ಬಾಲ್ ಬಗ್ಗೆ ತುಂಬಾ ಹೇಳಲಾಗಿದೆ ಮತ್ತು ಬರೆಯಲಾಗಿದೆ. ಆದರೆ ಈ ಅವಧಿಯಲ್ಲಿ ಕಳೆದುಹೋಗುತ್ತಿದ್ದೇವೆ. ಆದರೆ ತಂಡವು ಅದರಂತೆ ಪ್ರದರ್ಶನ ನೀಡುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ನಾಸರ್ ಹುಸೇನ್ ಕಿಡಿಕಾರಿದ್ದಾರೆ.
- Nasser Hussain: ಬಜ್‌ಬಾಲ್ ಬಗ್ಗೆ ತುಂಬಾ ಹೇಳಲಾಗಿದೆ ಮತ್ತು ಬರೆಯಲಾಗಿದೆ. ಆದರೆ ಈ ಅವಧಿಯಲ್ಲಿ ಕಳೆದುಹೋಗುತ್ತಿದ್ದೇವೆ. ಆದರೆ ತಂಡವು ಅದರಂತೆ ಪ್ರದರ್ಶನ ನೀಡುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ನಾಸರ್ ಹುಸೇನ್ ಕಿಡಿಕಾರಿದ್ದಾರೆ.
(1 / 9)
ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರಲ್ಲಿ ವಶಪಡಿಸಿಕೊಂಡಿದೆ. ಸಿರೀಸ್ನ ಮೊದಲ ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್, ಉಳಿದ 4 ಪಂದ್ಯಗಳಲ್ಲಿ ಸೋಲು ಅನುಭವಿಸಿತು.(AFP)
(2 / 9)
ಧರ್ಮಶಾಲಾ ಮೈದಾನದಲ್ಲಿ 5ನೇ ಟೆಸ್ಟ್ ಸೋತ ನಂತರ ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸ್ಸೆನ್ ಬೇಸರ ವ್ಯಕ್ತಪಡಿಸಿದ್ದಾರೆ. ತಂಡದ ಕಳಪೆ ಬ್ಯಾಟಿಂಗ್ ಕುರಿತು ಟೀಕೆ ಮಾಡಿದ್ದಾರೆ. ಹಾಗೆಯೇ ಸರಣಿ ಸೋಲಿಗೆ ಕಾರಣವನ್ನೂ ತಿಳಿಸಿದ್ದಾರೆ.(REUTERS)
(3 / 9)
ಕ್ರಿಕೆಟ್‌ನ ನಿರ್ದಿಷ್ಟ ಬ್ರ್ಯಾಂಡ್ ಬಜ್‌ಬಾಲ್ ಸಂದರ್ಭದಲ್ಲಿ ಇಂಗ್ಲೆಂಡ್ ತಮ್ಮ ವೈಯಕ್ತಿಕ ಪ್ರದರ್ಶನಗಳ ಮೇಲೆ ಕೇಂದ್ರೀಕರಿಸುವ ಬದಲು ಗಮನಹರಿಸಬೇಕು ಎಂದು ಹುಸೇನ್ ಸಲಹೆ ನೀಡಿದ್ದಾರೆ.(PTI)
(4 / 9)
ಬಜ್‌ಬಾಲ್ ಬಗ್ಗೆ ತುಂಬಾ ಹೇಳಲಾಗಿದೆ ಮತ್ತು ಬರೆಯಲಾಗಿದೆ. ಆದರೆ ಈ ಅವಧಿಯಲ್ಲಿ ಕಳೆದುಹೋಗುತ್ತಿದ್ದೇವೆ. ಆದರೆ ತಂಡವು ಅದರಂತೆ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ವೈಯಕ್ತಿಕ ಪ್ರದರ್ಶನಗಳ ಮೇಲೆ ಹೆಚ್ಚು ಗಮನ ಹರಿಸಬೇಕಿದೆ ಎಂದು ಸೂಚಿಸಿದ್ದಾರೆ. (PTI)
(5 / 9)
ಬ್ಯಾಟಿಂಗ್ ವಿಭಾಗದಲ್ಲಿ ಏಕೆ ಕುಸಿಯುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಿ. ಒಬ್ಬರಿಂದಲೂ ನೆನಪಿಟ್ಟುಕೊಳ್ಳವಂತಹ ಇನ್ನಿಂಗ್ಸ್ ಬರಲಿಲ್ಲ. ಜಾಕ್ ಕ್ರಾವ್ಲಿ ಬಿರುಸಿನ ಬ್ಯಾಟಿಂಗ್ ನಡೆಸುತ್ತಾರೆ, ಬೇಗ ಔಟಾಗುತ್ತಾರೆ. ಬೆನ್ ಡಕೆಟ್ ಬೌಲರ್ಗಳ ಮೇಲೆ ತಿರುಗಿಬೀಳವ ಅಗತ್ಯ ಇದೆ ಎಂದು ನಾಸರ್ ಹುಸೇನ್ ತಿಳಿಸಿದ್ದಾರೆ.(REUTERS)
(6 / 9)
ಒಲ್ಲಿ ಪೋಪ್ ಒಂದು ಇನ್ನಿಂಗ್ಸ್ನಲ್ಲಿ 196 ರನ್ ಸಿಡಿಸಿದ್ದು ಬಿಟ್ಟರೆ ನಂತರ ಏನೇನೂ ಆಡಲೇ ಇಲ್ಲ. ನಿಮ್ಮ ಸ್ವಂತ ಆಟದ ಮೇಲೆ ಗಮನ ಕೊಡಿ. ಸುಧಾರಿಸಿಕೊಳ್ಳಿ. ಆಗ ನೀವು ಆಟಗಾರರಾಗಿ ಉತ್ತಮರಾಗುತ್ತೀರಿ ಮತ್ತು ತಂಡವನ್ನೂ ಉತ್ತಮಗೊಳಿಸುತ್ತೀರಿ ಎಂದು ಡೈಲಿ ಮೇಲ್ ಅಂಕಣದಲ್ಲಿ ಹುಸೇನ್ ಬರೆದಿದ್ದಾರೆ.(AFP)
(7 / 9)
ಇಂಗ್ಲೆಂಡ್ ಸ್ಪಿನ್ನರ್ಗಳು ಅಶ್ವಿನ್ ಮತ್ತು ಕುಲ್ದೀಪ್ ಅವರನ್ನು ನೋಡಿ ಕಲಿಯಬೇಕು. ಇಬ್ಬರು ಸಹ ಚೆಂಡನ್ನು ಬಿಡುಗಡೆ ಮಾಡುವ ವಿಧಾನದ ಕುರಿತು ಒಂದು ಸಲ ಗಮನಿಸಿ ನೋಡಿ. ಇಬ್ಬರು ಸಹ ಸಾಕಷ್ಟು ಸುಧಾರಿಸಿ ವಿಕೆಟ್ ಪಡೆಯಲು ಸಾಧ್ಯವಾದರು ಎಂದು ಹೇಳಿದ್ದಾರೆ.
(8 / 9)
ಐದನೇ ಟೆಸ್ಟ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 218ಕ್ಕೆ ಕುಸಿಯಿತು. ಇದಕ್ಕೆ ಪ್ರತಿಯಾಗಿ ಭಾರತ 477 ರನ್ ಗಳಿಸಿ 259 ರನ್ಗಳ ಮುನ್ನಡೆ ಪಡೆಯಿತು. ಆದರೆ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 195 ರನ್ಗಳಿಗೆ ಕುಸಿತ ಕಂಡು 64 ರನ್ಗಳಿಂದ ಸೋಲನುಭವಿಸಿತು.
ಇತರ ಗ್ಯಾಲರಿಗಳು