Aditi Rao Hydari: ಎಷ್ಟು ಸಿಂಪಲ್ ಆಗಿ ಮದ್ವೆ ಆದ್ರು ನೋಡಿ ಅದಿತಿ ರಾವ್; ಉಟ್ಟಿದ್ದು ರೇಷ್ಮೆ ಸೀರೆ, ತೊಟ್ಟಿದ್ದು ಬೆರಳೆಣಿಕೆಯಷ್ಟು ಆಭರಣ!
- Aditi Rao Marriage Outfit: ಕೈಕಾಲಿಗೆ ಮದರಂಗಿಯೂ ಇಲ್ಲ. ವಿಶೇಷವಾದ ಹೇರ್‌ಸ್ಟೈಲ್ ಇಲ್ಲ. ಎಷ್ಟು ಸಿಂಪಲ್ಲಾಗಿ ತಮ್ಮ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ ನೋಡಿ ಅದಿತಿ ರಾವ್. ಆದರೆ ಅವರ ಸೌಂದರ್ಯ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ. ಅಂದವಾಗಿ ಕಾಣಲು ಆಭರಣವಲ್ಲ ಕಾರಣ ಎಂಬುದು ಇವರನ್ನು ನೋಡಿದಾಗಲೇ ತಿಳಿಯುತ್ತದೆ.
- Aditi Rao Marriage Outfit: ಕೈಕಾಲಿಗೆ ಮದರಂಗಿಯೂ ಇಲ್ಲ. ವಿಶೇಷವಾದ ಹೇರ್‌ಸ್ಟೈಲ್ ಇಲ್ಲ. ಎಷ್ಟು ಸಿಂಪಲ್ಲಾಗಿ ತಮ್ಮ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ ನೋಡಿ ಅದಿತಿ ರಾವ್. ಆದರೆ ಅವರ ಸೌಂದರ್ಯ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ. ಅಂದವಾಗಿ ಕಾಣಲು ಆಭರಣವಲ್ಲ ಕಾರಣ ಎಂಬುದು ಇವರನ್ನು ನೋಡಿದಾಗಲೇ ತಿಳಿಯುತ್ತದೆ.
(1 / 9)
ಅದಿತಿ ರಾವ್ ಮತ್ತು ಸಿದ್ಧಾರ್ಥ್ ಸಿಂಪಲ್ಲಾಗಿ ಮದುವೆಯಾಗಿದ್ದಾರೆ. ತಮ್ಮ ಕುಟುಂಬದವರ ಜೊತೆಗಿನ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಸ್ಟಾರ್ ತಮ್ಮ ಮದುವೆಗೆ ಇಷ್ಟು ಸಿಂಪಲ್ ಆಗಿ ರೆಡಿಯಾದ್ರೂ ಎಷ್ಟು ಅಂದವಾಗಿ ಕಾಣ್ತಿದ್ದಾರೆ ನೋಡಿ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. (Aditi Rao Hydari Facebook Page)
(2 / 9)
ಇವರು ಬಿಳಿ ಬಣ್ಣದ ಸಿಲ್ಕ್ ಲೆಹೆಂಗಾ ತೊಟ್ಟಿದ್ದರು. ಕಾಣಲು ತುಂಬಾ ಸುಂದರವಾದ ಒಂದು ಅಗಲವಾದ ಜುಮುಕಿ ತೊಟ್ಟಿದ್ದರು. ಹೆಚ್ಚೇನೂ ಮೇಕಪ್ ಇಲ್ಲದೆ ತುಂಬಾ ಸಿಂಪಲ್ ಆಗಿ ರೆಡಿಯಾಗಿದ್ದರು.
(3 / 9)
ತಲೆ ತುಂಬ ಮಲ್ಲಿಗೆ ಹೂವಿನ ಮಾಲೆ ಮುಡಿದುಕೊಂಡಿದ್ದರು. ಅವರ ಬ್ಲೌಸ್‌ಕೂಡ ತುಂಬಾ ಸಿಂಪಲ್ ಲುಕ್ ಹೊಂದಿತ್ತು. ವಿಶೇಷವಾದ ಯಾವುದೇ ಹೇರ್‌ಸ್ಟೈಲ್ ಕೂಡ ಮಾಡಿಕೊಂಡಿಲ್ಲ.
(4 / 9)
ಕಾಲಿಗೆ ಒಂದು ದಪ್ಪನೆಯ ಗೆಜ್ಜೆ ತೊಟ್ಟಿದ್ದಾರೆ. ಕೈಗೊಂದು ಸಿಂಪಲ್ ರಿಂಗ್ ತೊಟ್ಟಿದ್ದಾರೆ. ಯಾವುದೇ ಮದರಂಗಿಯನ್ನೂ ಹಾಕಿಕೊಂಡಿಲ್ಲ. ಇಷ್ಟೊಂದು ಸಿಂಪಲ್ಲಾ? ಎಂದು ಜನ ಪ್ರಶ್ನೆ ಮಾಡಿದ್ದಾರೆ.
(5 / 9)
ಕೈಗೆ ನೈಲ್ ಪಾಲಿಶ್ ಕೂಡ ಹಚ್ಚಿಲ್ಲ. ಎರಡೂ ಕೈಗಳಿಗೆ ಅರ್ಧ ಚಂದ್ರಾಕ್ರತಿಯ ಆಲ್ತಾದಿಂದ ಮಾಡಿ ಚಿತ್ರಗಳು ಕಾಣುತ್ತದೆ. ಇನ್ನೊಂದಷ್ಟು ಸಾದಾ ಬಳೆಗಳು ಬಿಟ್ಟರೆ ಇನ್ನೇನೂ ಇಲ್ಲ.
(6 / 9)
ಹಣೆಗೆ ಸಿಂಪಲ್ಲಾಗಿ ಒಂದು ಕೆಂಪು ಬಣ್ಣದ ಬೊಟ್ಟು ಇಟ್ಟುಕೊಂಡಿದ್ದಾರೆ. ಒಂದು ನೆಕ್‌ಲೇಸ್ ತೊಟ್ಟಿದ್ದಾರೆ. ಯಾವುದೇ ಡಾರ್ಕ್ ಮೇಕಪ್ ಕೂಡ ಇಲ್ಲ.
(7 / 9)
ಕಪ್ಪು - ಬಿಳುಪಿನ ಥೀಮ್‌ನಲ್ಲಿ ಕೆಲವು ಫೋಟೋಸ್ ತೆಗೆದುಕೊಂಡಿದ್ದಾರೆ. ಇನ್ನು ಸಿದ್ಧಾರ್ಥ್ ಕೂಡ ತುಂಬಾ ಸಿಂಪಲ್ ಆಗಿ ರೆಡಿಯಾಗಿದ್ದರು.
(8 / 9)
ಹೂವಿನಿಂದ ಅಲಂಕರಿಸಿದ ಮಂಟಪದಲ್ಲಿ ಸಿದ್ಧಾರ್ಥ್ ಸಿಂಪಲ್ ಬಿಳಿ ಬಣ್ಣದ ಕುರ್ತಾ ಧರಿಸಿ ಅದಿತಿ ಬರುವಿಕೆಗಾಗಿ ಕಾದ ಫೋಟೋ ಇದಾಗಿದೆ.
ಇತರ ಗ್ಯಾಲರಿಗಳು