ಮಗು ಬೇಕು, ಆದರೆ ತಕ್ಷಣಕ್ಕೆ ಬೇಡ ಅನ್ನೋರಿಗೆ ಅಂಡಾಣು ಘನೀಕರಣ ನೆಚ್ಚಿನ ಆಯ್ಕೆ ಆಗ್ತಿದೆ; ಏನಿದು ಹೊಸ ಬೆಳವಣಿಗೆ -ಸಮಗ್ರ ಮಾಹಿತಿ
ಕೆಲ ವರ್ಷಗಳ ಬಳಿಕ ಬೇಕೆಂದಾಗ ಗರ್ಭಧಾರಣೆ ಮಾಡಲು ಬಯಸುವ ಮಹಿಳೆಯರಲ್ಲಿ ಅಂಡಾಣು ಘನೀಕರಣ ಟ್ರೆಂಡ್ ಹೆಚ್ಚಳವಾಗುತ್ತಿದೆ. ಏನಿದು ಅಂಡಾಣು ಘನೀಕರಣ ಪ್ರಕ್ರಿಯೆ, ಇದು ಗರ್ಭಧಾರಣೆಗೆ ಹೇಗೆ ಪ್ರಯೋಜನಕಾರಿ, ಎಷ್ಟು ಸಮಯ ಬೇಕು, ಖರ್ಚು ಎಷ್ಟಾಗುತ್ತೆ ಎಂಬಿತ್ಯಾದಿ ವಿವರ.
(1 / 8)
ತಡವಾಗಿ ಮಕ್ಕಳನ್ನು ಹೆರುವ ಟ್ರೆಂಡ್ ಹೆಚ್ಚಳವಾಗುತ್ತಿದ್ದು, ಈ ರೀತಿ ಬಯಸುವ ಮಹಿಳೆಯರು ಅಂಡಾಣು ಘನೀಕರಣ (Egg Freezing) ತಂತ್ರದ ಮೊರೆ ಹೋಗುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲೇ ಈ ಪ್ರಕ್ರಿಯೆಗೆ ಒಳಗಾಬೇಕು ಎನ್ನುತ್ತಾರೆ ಪರಿಣತರು.
(2 / 8)
ಸಣ್ಣ ವಯಸ್ಸಿನಲ್ಲೆ ಅಂಡಾಣು ಘನೀಕರಣ ಮಾಡಿಸಿಕೊಳ್ಳಬೇಕು ಎಂದು ಹೇಳುವುದೇಕೆ? ಅಂಡಾಣು ಘನೀಕರಣದ ವಿಷಯಕ್ಕೆ ಬಂದಾಗ, ಮಹಿಳೆಯರು 35 ವರ್ಷ ದಾಟುವ ಮೊದಲೇ ಇದನ್ನು ಮಾಡಬೇಕು ಎಂದು ಪರಿಣತರು ಶಿಫಾರಸು ಮಾಡುತ್ತಾರೆ. ಈ ಹಂತದಲ್ಲಿ, ಸಾಮಾನ್ಯವಾಗಿ ಮಹಿಳೆಯರು ಅತ್ಯುತ್ತಮ ಆರೋಗ್ಯ ಹೊಂದಿರುತ್ತಾರೆ ಎಂಬುದು ಇದಕ್ಕೆ ಕಾರಣ.
(3 / 8)
ಏನಿದು ಅಂಡಾಣು ಘನೀಕರಣ- ಇದು ಹೊಸ ತಂತ್ರಜ್ಞಾನವಾಗಿದೆ. ಇದರಲ್ಲಿ ಅಂಡಾಣುಗಳನ್ನು ಮಹಿಳೆಯಿಂದ ಹೊರತೆಗೆಯಲಾಗುತ್ತದೆ. ನಂತರ ಅವುಗಳನ್ನು ಘನೀಕರಿಸಿ ಇಡಲಾಗುತ್ತದೆ. ಮುಂದೆ ಮಹಿಳೆ ತಾನು ಗರ್ಭ ಧರಿಸಬೇಕು ಎಂದು ಬಯಸಿದಾಗ, ಈ ಘನೀಕರಿಸಿದ ಅಂಡಾಣುವನ್ನು ಮತ್ತೆ ಸಹಜ ಸ್ಥಿತಿಗೆ ತಂದು ಗರ್ಭಾಶಯಕ್ಕೆ ಸೇರಿಸಲಾಗುತ್ತದೆ.
(4 / 8)
ಅಂಡಾಣು ಘನೀಕರಣಕ್ಕೆ ವಯೋಮಿತಿ ಏನು- ಅಥವಾ ಅಂಡಾಣು ಘನೀಕರಿಸುವುದಕ್ಕೆ ಯಾವ ವಯಸ್ಸು ಸೂಕ್ತ ಎಂದು ಕೇಳಿದರೆ, 20 ರಿಂದ 35 ವರ್ಷದೊಳಗೆ ನಡೆಸಬೇಕಾದ ಪ್ರಕ್ರಿಯೆ ಇದು ಎನ್ನುತ್ತಾರೆ ಆರೋಗ್ಯ ತಜ್ಞರು. ಈ ವಯಸ್ಸಿನಲ್ಲಿ, ಮಹಿಳೆಯರು ಉತ್ತಮ ಪ್ರಮಾಣ ಮತ್ತು ಗುಣಮಟ್ಟದ ಅಂಡಾಣುಗಳನ್ನು ಹೊಂದಿರುವುದು ಇದಕ್ಕೆ ಕಾರಣ,
(5 / 8)
ಎಗ್ ಫ್ರೀಜಿಂಗ್ ಅಥವಾ ಅಂಡಾಣು ಘನೀಕರಣ ಪ್ರಕ್ರಿಯೆ ಹೇಗಿರುತ್ತದೆ?- ಸರಳ ಆಪರೇಷನ್ ಮೂಲಕ ಮಹಿಳೆಯ ಅಂಡಾಶಯದಿಂದ ಅಂಡಾಣುಗಳನ್ನು ಹೊರತೆಗೆಯಲಾಗುತ್ತದೆ. ಅದಾಗಿ ಘನೀಕರಿಸಿ ಇರಿಸಲಾಗುತ್ತದೆ.
(6 / 8)
ಅಂಡಾಣು ಘನೀಕರಣ ಪ್ರಕ್ರಿಯೆಗೆ ಎಷ್ಟು ಹೊತ್ತು ಬೇಕು? ಸಂಪೂರ್ಣ ಅಂಡಾಣು ಘನೀಕರಣ ಪ್ರಕ್ರಿಯೆಯು ಪೂರ್ಣಗೊಳ್ಳಲು 2 ರಿಂದ 3 ವಾರ ಬೇಕಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಈ ಪ್ರಕ್ರಿಯೆಯನ್ನು 2 ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ.
(7 / 8)
ಭಾರತದಲ್ಲಿ ಅಂಡಾಣು ಘನೀಕರಣದ ವೆಚ್ಚವು ವಿಭಿನ್ನ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ಕ್ಲಿನಿಕ್, ವೈದ್ಯರು ಮತ್ತು ಬಳಸಿದ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಭಾರತದಲ್ಲಿ ಅಂಡಾಣು ಘನೀಕರಣ ವೆಚ್ಚವು ಸರಾಸರಿ 50,000 ರಿಂದ 2,50,000 ರೂಪಾಯಿ ಇದೆ.
ಇತರ ಗ್ಯಾಲರಿಗಳು