ಕನ್ನಡ ಸುದ್ದಿ  /  Sports  /  Football News India Vs Afghanistan Match Ends In Goalless Draw In Fifa World Cup Qualifiers 2026 Sunil Chhetri Jra

FIFA World Cup: ಫಿಫಾ ವಿಶ್ವಕಪ್ ಕ್ವಾಲಿಫೈಯರ್: ಭಾರತ vs ಅಫ್ಘಾನಿಸ್ತಾನ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯ

FIFA World Cup Qualifiers 2026: ಫಿಫಾ ವಿಶ್ವಕಪ್ 2026ರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯವು ಯಾವುದೇ ಗೋಲು ಕಾಣದೆ 0-0 ಅಂಕಗಳೊಂದಿಗೆ ಅಂತ್ಯವಾಗಿದೆ. ಭಾರತವು ಸದ್ಯ ನಾಲ್ಕು ಅಂಕಗಳೊಂದೊಗೆ ನಾಲ್ಕು ತಂಡಗಳ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.

ಭಾರತ vs ಅಫ್ಘಾನಿಸ್ತಾನ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯ
ಭಾರತ vs ಅಫ್ಘಾನಿಸ್ತಾನ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯ (AFP)

ಫಿಫಾ ವಿಶ್ವಕಪ್ 2026ರ ಅರ್ಹತಾ (FIFA World Cup Qualifiers) ಸುತ್ತಿನ 'ಎ' ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಫುಟ್ಬಾಲ್‌ ತಂಡವು ಯಾವುದೇ ಗೋಲು ಗಳಿಸದೆ ನೀರಸ ಡ್ರಾ ಸಾಧಿಸಿದೆ. ಸೌದಿ ಅರೇಬಿಯಾದ ಅಭಾದಲ್ಲಿ ನಡೆದ ಪಂದ್ಯದಲ್ಲಿ ಭಾರತವು ಎರಡು ಬಾರಿ ಮನ್ವೀರ್ ಸಿಂಗ್ ನೆರವಿನೊಂದಿಗೆ ಗೋಲು ಗಳಿಸುವ ಸನಿಹಕ್ಕೆ ಬಂದು ಎಡವಿತು. ಈ ಪಂದ್ಯ ಡ್ರಾದಲ್ಲಿ ಅಂತ್ಯವಾದರೂ, ಭಾರತ ತಂಡವು ಮೂರು ಪಂದ್ಯಗಳಿಂದ ನಾಲ್ಕು ಅಂಕಗಳೊಂದಿಗೆ 'ಎ' ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ. ಕುವೈತ್ ಮೂರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವು 0-0 ಅಂತರದಿಂದ ಅಂತ್ಯವಾಗಿದೆ. ಗುರುವಾರ ನಡೆದ ಪಂದ್ಯದಲ್ಲಿ ಕತಾರ್ 3-0 ಗೋಲುಗಳಿಂದ ಕುವೈತ್ ತಂಡವನ್ನು ಸೋಲಿಸಿದ ನಂತರ, ಭಾರತವು ಸದ್ಯ ನಾಲ್ಕು ಅಂಕಗಳೊಂದೊಗೆ ನಾಲ್ಕು ತಂಡಗಳ ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.

ಒಂದು ವೇಳೆ ಅಫ್ಘಾನಿಸ್ತಾನವು ಆ ಪಂದ್ಯವನ್ನು ಗೆಲ್ಲದಿದ್ದರೆ ಮತ್ತು ಕುವೈತ್ ತಂಡ ಕತಾರ್ ಅನ್ನು ಸೋಲಿಸದಿದ್ದರೆ, ಭಾರತವು ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಮೂರನೇ ಸುತ್ತನ್ನು ಪ್ರವೇಶಿಸುವ ಸಾಧ್ಯತೆ ಇದೆ. ಇದೇ ವೇಳೆ 2027ರ ಏಷ್ಯನ್ ಕಪ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದೇ ಎಂಬುದು ಜೂನ್‌ ತಿಂಗಳಲ್ಲಿ ನಡೆಯಲಿರುವ ಪಂದ್ಯಗಳು ನಿರ್ಧರಿಸುತ್ತವೆ. ಭಾರತವು ತನ್ನ ಆಕ್ರಮಣಕಾರಿ ಆಟವನ್ನು ಸುಧಾರಿಸದಿದ್ದರೆ, ಅರ್ಹತೆ ಪಡೆಯುವುದು ಕಷ್ಟ ಎಂದು ಮುಖ್ಯ ಕೋಚ್ ಇಗೊರ್ ಸ್ಟಿಮಾಕ್ ಹೇಳಿದ್ದಾರೆ.

ಇದನ್ನೂ ಓದಿ | IPL: ಪ್ರತಿ ಓವರ್‌ಗೆ 2 ಬೌನ್ಸರ್‌, DRS ಬದಲಿಗೆ SRS,‌ ಸ್ಟಾಪ್‌ಕ್ಲಾಕ್‌ ಇಲ್ಲ; ಐಪಿಎಲ್ 2024ರ ಹೊಸ ನಿಯಮಗಳು ಹೀಗಿವೆ

ಜನವರಿಯಲ್ಲಿ ಹಿರಿಯ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ವಿಕ್ರಮ್ ಪ್ರತಾಪ್ ಸಿಂಗ್, ಇದೇ ಮೊದಲ ಬಾರಿಗೆ ಆರಂಭಿಕ 11 ಆಟಗಾರರ ಬಳಗದಲ್ಲಿ ಸ್ಥಾನ ಪಡೆದರು. ಅಲ್ಲದೆ ಅಫ್ಘಾನಿಸ್ತಾನದ ರಕ್ಷಣಾ ವಿಭಾಗಕ್ಕೆ ನಿರಂತರ ಮುಳ್ಳಾಗಿದ್ದರು.

ಭಾರತ ಮತ್ತು ಅಫ್ಘಾನಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗಲಿದ್ದು, ಮಾರ್ಚ್‌ 26ರ ಮಂಗಳವಾರ ಗುವಾಹಟಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಎದುರಾಗಲಿವೆ.