Suryakumar Yadav Diet: 'ಮಿಸ್ಟರ್ 360 ಆಗಿ ಬದಲಾಗಲು ಡಯಟ್ ನಲ್ಲಿ ಬದಲಾವಣೆ'; ಸೂರ್ಯಕುಮಾರ್ ತಿನ್ನುವ ಆಹಾರವಿದು
ಟೀಂ ಇಂಡಿಯಾ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಮ್ಮ ಆಹಾರಕ್ರಮವನ್ನು ಬದಲಾಯಿಸಿದ ಬಳಿಕ ಮಿಸ್ಟರ್ 360 ಆಗಿ ಬದಲಾಗಿದ್ದಾರಂತೆ. ಈ ವಿಷಯವನ್ನು ಪೌಷ್ಟಿಕತಜ್ಞ ಶ್ವೇತಾ ಭಾಟಿಯಾ ಬಹಿರಂಗಪಡಿಸಿದ್ದಾರೆ.
ಏನ್ ತಿಂತ್ತಾನೆ ಗುರು ಹಿಂಗ್ ಆಡ್ತಾನೆ. ಬೌಲರ್ ಗಳನ್ನು ದಂಗಾಗಿಸುತ್ತಾನೆ ಅಂತ ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್ ನೋಡಿದ ಯಾರಾದರೂ ಹೀಗೆ ಉದ್ಗರಿಸದೆ ಇರಲಾರರು. ಸ್ಕೈ ಬ್ಯಾಟ್ ಹಿಡಿದು ಕ್ರೀಸ್ ಗೆ ಬಂದರೆ ಸಾಕು ಬೌಲರ್ ಹೇಗೆ ಚೆಂಡು ಎಸೆದ್ರೂ ಗ್ರೌಂಡ್ ನ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ ಹೋಗೋದು ಕನ್ಫರ್ಮ್!.
ಈ ವರ್ಷದ ಟಿ20ಯಲ್ಲಿ ಈಗಾಗಲೇ 1000ಕ್ಕೂ ಹೆಚ್ಚು ರನ್ ಗಳಿಸಿರುವ ಸೂರ್ಯಕುಮಾರ್ ಯಾದವ್ ಈ ಬಾರಿ ಕೊಹ್ಲಿಯಂತೆ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ. ಕ್ರಿಕೆಟ್ ನ ಹೊಸ ಮಿಸ್ಟರ್ 360 ಡಿಗ್ರಿ ಪ್ಲೇಯರ್ ಎಂದೇ ಖ್ಯಾತಿ ಪಡೆದಿರುವ ಸೂರ್ಯಕುಮಾರ್ ಮೈದಾನದಲ್ಲಿ ಮಾತ್ರವಲ್ಲದೆ ಹೊರಗಡೆಯೂ ತಮ್ಮ ಆಹಾರ ಕ್ರಮದಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದಾರೆ.
ಸೂರ್ಯ ಅವರ ವೈಯಕ್ತಿಕ ಪೌಷ್ಟಿಕತಜ್ಞ ಶ್ವೇತಾ ಭಾಟಿಯಾ ಹೇಳುವಂತೆ, ಹಿಂದೆ ಸಾಕಷ್ಟು ಯೋಜನೆ ಇತ್ತು ಮತ್ತು ಅವರು ತಮ್ಮ ಆಹಾರ ಪದ್ಧತಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ ಎಂದು ಬಹಿರಂಗಪಡಿಸಿದರು. ಒಂದು ವರ್ಷದಿಂದ ಆತನ ಫಿಟ್ನೆಸ್ ಸುಧಾರಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.
ಸೂರ್ಯಕುಮಾರ್ ಅವರ ಐದು ಅಂಶಗಳ ಅಜೆಂಡಾ
ಸೂರ್ಯ ತನ್ನ ಫಿಟ್‌ನೆಸ್‌ಗಾಗಿ ಐದು ಅಂಶಗಳ ಅಜೆಂಡಾವನ್ನು ಅನುಸರಿಸುತ್ತಾನೆ ಎಂದು ಶ್ವೇತಾ ಹೇಳಿದ್ದಾರೆ. ಇವುಗಳಲ್ಲಿ ಮೊದಲನೆಯದು ಪಂದ್ಯಗಳಲ್ಲಿ ತರಬೇತಿ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವುದು.
ಎರಡನೆಯದಾಗಿ, ಅಥ್ಲೆಟಿಕ್ ವಲಯದಲ್ಲಿ (12-15 ಪ್ರತಿಶತ) ದೇಹದ ಕೊಬ್ಬನ್ನು ಇಡುವುದು ಮುಖ್ಯವಾಗಿದೆ. ಮೂರನೆಯದಾಗಿ ಆತ ಯಾವಾಗಲೂ ಚೈತನ್ಯದಿಂದ ಇರಲು ಡಯಟ್ ಇರುತ್ತಾನೆ. ನಾಲ್ಕನೆಯದು ದೇಹಕ್ಕೆ ಬೇಡಿರುವ ಅಗತ್ಯವಾದ ಶಕ್ತಿ ಕುಗ್ಗದಂತೆ ನೋಡಿಕೊಳ್ಳುವುದು. ಕೊನೆಯದು ಪ್ರತಿ ಕ್ರೀಡಾಪಟುವಿಗೆ ಅಗತ್ಯವಿರುವ ಚೇತರಿಕೆಯನ್ನು ಉತ್ತೇಜಿಸುವಿಕೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಶ್ವೇತಾ ಅವರು ಸೂರ್ಯಕುಮಾರ್ ಅವರಲ್ಲಿ ಕಾರ್ಬೋಹೈಡ್ರೇಟ್ ಸೇವನೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿದರು. ಕಡಿಮೆ ಕಾರ್ಬೋಹೈಡ್ರೇಟ್‌ಗಳು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ ಎಂದು ಅವರು ಹೇಳಿದ್ದಾರೆ.
ಅವರ ಆಹಾರವು ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಿದೆ ಮತ್ತು ಆರೋಗ್ಯಕರ ಬೀಜಗಳು ಮತ್ತು ಒಮೆಗಾ 3 ಅನ್ನು ಒಳಗೊಂಡಿದೆ ಎಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಿದ್ದಾರೆ. ಪ್ರೋಟೀನ್ ಹೆಚ್ಚಾಗಿ ಮೊಟ್ಟೆ, ಮೀನು, ಮಾಂಸ, ಡೈರಿ ಉತ್ಪನ್ನಗಳು ಮತ್ತು ತರಕಾರಿಗಳಿಂದ ಬರುತ್ತದೆ ಎಂದು ಹೇಳಿದ್ದಾರೆ.
ದೇಹವು ನಿರ್ಜಲೀಕರಣಗೊಳ್ಳದ ರೀತಿಯಲ್ಲಿ ಸೂರ್ಯನಿಗೆ ದ್ರವಗಳು ಮತ್ತು ಎಲೆಕ್ಟ್ರೋಲೈಟ್‌ಗಳನ್ನು ನೀಡಲಾಗಿದೆ. ಕಳೆದ ಒಂದು ವರ್ಷದಿಂದ ಸೂರ್ಯ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸಿದ್ದಾನೆ.
ಈಗ ಆತ 360 ಡಿಗ್ರಿ ಪ್ಲೇಯರ್ ಆಗಿದ್ದಾರೆ. ನೆಲದಮಟ್ಟದಿಂದಲೇ ಹೊಡೆಯುವ ಹೊಡೆತಗಳಿಗೆ ದೇಹವನ್ನು ಹೊಂದಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಗಾಯದ ಅಪಾಯವಿದೆ. ಸೂರ್ಯ ತನ್ನ ತರಬೇತಿ ಮತ್ತು ಆಹಾರದ ಯೋಜನೆಯನ್ನು ನಿಖರವಾಗಿ ಅದೇ ದಿಕ್ಕಿನಲ್ಲಿ ಮುಂದುವರಿಸಿದನು. ಅವರು ಕೆಫೀನ್ ಅನ್ನು ಸಹ ತೆಗೆದುಕೊಳ್ಳುತ್ತಾರೆ, ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುವ ಪವರ್ ಸಪ್ಲಿಮೆಂಟ್ ಪಾನೀಯವಾಗಿದೆ ಎಂದಿದ್ದಾರೆ.
ಸದ್ಯ ಟೀಂ ಇಂಡಿಯಾದಲ್ಲಿ ಮತ್ತೊಬ್ಬ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಫಿಟ್ ಆಗಿರಲು ವಿರಾಟ್ ಕೆಲವು ದಿನಗಳ ಹಿಂದೆ ಸಸ್ಯಾಹಾರಿಯಾಗಿದ್ದರು. ಜಂಕ್ ಫುಡ್ ನಿಂದ ದೂರ ಉಳಿದಿದ್ದಾರೆ. ಸೂರ್ಯಕುಮಾರ್ ಕೂಡ ಇದೇ ರೀತಿಯ ತ್ಯಾಗ ಮಾಡಿದ್ದಾನೆ. ಬಿರಿಯಾನಿ, ಪಿಜ್ಜಾ, ಐಸ್ ಕ್ರೀಂಗಳಿಂದ ದೂರ ಇರುತ್ತಾನೆ. ಯಾವುದೇ ರೀತಿಯಲ್ಲಿ ಕ್ರಿಕೆಟ್ ಮೈದಾನದಲ್ಲಿ ಅವರ ಯಶಸ್ಸಿನ ಹಸಿವು ಇದೀಗ ನೀಗುತ್ತಿದೆ ಎಂದು ಶ್ವೇತಾ ಅವರು ಸೂರ್ಯಕುಮಾರ್ ಯಾದವ್ ಬಗ್ಗೆ ಫಿಟ್ನೆಸ್ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.