Latest England Photos

ಬೇಕರ್ ತನ್ನ ಹುಟ್ಟುಹಬ್ಬಕ್ಕೆ 14 ದಿನಗಳ ಮೊದಲು ನಿಧನರಾಗಿದ್ದಾರೆ. ಮೇ 16 ರಂದು ತಮ್ಮ 21 ನೇ ಹುಟ್ಟುಹಬ್ಬವನ್ನು ಆಚರಿಸಲಿದ್ದರು. ಆದರೆ ಅವರ ಸಾವಿಗೆ ಕಾರಣ ಬಹಿರಂಗಗೊಂಡಿಲ್ಲ.

Josh Baker: ಹುಟ್ಟುಹಬ್ಬಕ್ಕೆ 14 ದಿನಗಳಿರುವಾಗ ತನ್ನ 20ನೇ ವಯಸ್ಸಿಗೆ ಇಂಗ್ಲೆಂಡ್ ಕ್ರಿಕೆಟಿಗ ನಿಧನ

Thursday, May 2, 2024

ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ಸಾಧನೆ ಮಾಡಿದ ರವಿಚಂದ್ರ‌ನ್‌ ಅಶ್ವಿನ್, ಧರ್ಮಶಾಲಾ ಟೆಸ್ಟ್‌ ಮೂಲಕ 100ನೇ ಟೆಸ್ಟ್ ಪಂದ್ಯ ಆಡಿದ ವಿಶೇಷ ಮೈಲಿಗಲ್ಲು ತಲುಪಿದರು. ಧರ್ಮಶಾಲಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದ ರವಿ, ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದರು. ಅದರ ಬೆನ್ನಲ್ಲೇ ಐಸಿಸಿ ಶ್ರೇಯಾಂಕದಲ್ಲಿಬಡ್ತಿ ಪಡೆದಿದ್ದಾರೆ. ಧರ್ಮಶಾಲಾ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್‌ ಪಡೆದ ಅಶ್ವಿನ್, ಐಸಿಸಿಯ ನಂಬರ್ ವನ್ ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ.

ಐಸಿಸಿ ಬೌಲಿಂಗ್‌ ಶ್ರೇಯಾಂಕ: ಬುಮ್ರಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಅಶ್ವಿನ್‌; ರೋಹಿತ್, ಜೈಸ್ವಾಲ್‌ಗೂ ಬಡ್ತಿ

Wednesday, March 13, 2024

ಫೆಬ್ರುವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಒಟ್ಟು ಮೂವರು ನಾಮನಿರ್ದೇಶನಗೊಂಡಿದ್ದರು. ನ್ಯೂಜಿಲ್ಯಾಂಡ್‌ ತಂಡದ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಮತ್ತು ಶ್ರೀಲಂಕಾದ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕಾ ಅವರನ್ನು ಸೋಲಿಸಿ ಯಶಸ್ವಿ ಜೈಸ್ವಾಲ್ ಈ ಪ್ರಶಸ್ತಿ ಗೆದ್ದಿದ್ದಾರೆ.

ಫೆಬ್ರುವರಿ ತಿಂಗಳಲ್ಲಿ ಅಸಾಧಾರಣ ಪ್ರದರ್ಶನ; ಕೇನ್ ವಿಲಿಯಮ್ಸನ್ ಹಿಂದಿಕ್ಕಿ ಐಸಿಸಿ ಪ್ರಶಸ್ತಿ ಪಡೆದ ಯಶಸ್ವಿ ಜೈಸ್ವಾಲ್

Tuesday, March 12, 2024

ಗೆದ್ದ ಎಲ್ಲಾ 12 ಟೆಸ್ಟ್ ಪಂದ್ಯಗಳಲ್ಲಿಯೂ ಶತಕ ಗಳಿಸಿದ ವಿಶ್ವದ ಏಕೈಕ ಆಟಗಾರ ರೋಹಿತ್.‌ ಅಥವಾ ಶತಕ ಸಿಡಿಸಿದ ಎಲ್ಲಾ 12 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದ ಏಕೈಕ ಆಟಗಾರ ಹಿಟ್‌ಮ್ಯಾನ್.‌ ಇಷ್ಟು ಸಂಖ್ಯೆಯಲ್ಲಿ ಶತಕಗಳನ್ನು ಬಾರಿಸಿ ದೇಶವನ್ನು ಗೆಲ್ಲಿಸಿದ ಆಟಗಾರ ಬೇರೊಬ್ಬರಿಲ್ಲ.

12 ಸೆಂಚುರಿ, 12 ಗೆಲುವು; ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ ಎಲ್ಲಾ ಪಂದ್ಯಗಳಲ್ಲೂ ಗೆದ್ದಿದೆ ಭಾರತ!

Tuesday, March 12, 2024

ಕ್ರೈಸ್ಟ್‌ಚರ್ಚ್‌ ಟೆಸ್ಟ್‌ನಲ್ಲಿ ಕಿವೀಸ್‌ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಎರಡನೇ ಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್‌ ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಕಾಂಗರೂಗಳು, ಸದ್ಯ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆಡಿದ 12 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 62.50 ಸರಾಸರಿಯಲ್ಲಿ 90 ಅಂಕಗಳನ್ನು ಗಳಿಸಿದೆ. ಅಂಕಗಳ ವಿಷಯದಲ್ಲಿ ಆಸೀಸ್ ಇತರ ಎಲ್ಲ ತಂಡಗಳಿಗಿಂತ ಮುಂದಿದೆ. ಆದರೆ, ಟೆಸ್ಟ್ ಚಾಂಪಿಯನ್ಶಿಪ್ ಶ್ರೇಯಾಂಕ ಮತ್ತು ಅಂತಿಮ ಎರಡು ತಂಡಗಳನ್ನು ಅಂಕಗಳ ಬದಲಾಗಿ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.

WTC Points Table: ಕಿವೀಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಬಡ್ತಿ ಪಡೆದ ಆಸ್ಟ್ರೇಲಿಯಾ; ಭಾರತದ ಅಗ್ರಪಟ್ಟ ಅಬಾಧಿತ

Monday, March 11, 2024

ಐದನೇ ಟೆಸ್ಟ್​​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 218ಕ್ಕೆ ಕುಸಿಯಿತು. ಇದಕ್ಕೆ ಪ್ರತಿಯಾಗಿ ಭಾರತ 477 ರನ್ ಗಳಿಸಿ 259 ರನ್​ಗಳ ಮುನ್ನಡೆ ಪಡೆಯಿತು. ಆದರೆ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್​​ನಲ್ಲಿ 195 ರನ್​ಗಳಿಗೆ ಕುಸಿತ ಕಂಡು 64 ರನ್​ಗಳಿಂದ ಸೋಲನುಭವಿಸಿತು.

ಅಶ್ವಿನ್-ಕುಲ್ದೀಪ್​ ನೋಡಿ ಕಲಿಯಿರಿ; ಇಂಗ್ಲೆಂಡ್ ವೈಫಲ್ಯಕ್ಕೆ ಕಿಡಿಕಾರಿದ ಮಾಜಿ ನಾಯಕ ನಾಸರ್ ಹುಸೇನ್

Sunday, March 10, 2024

ಟೆಸ್ಟ್ ಕ್ರಿಕೆಟ್​ನಲ್ಲಿ ಬೆನ್ ಸ್ಟೋಕ್ಸ್​​ ಅವರಿಗೆ ರವಿಚಂದ್ರನ್ ಅಶ್ವಿನ್ ಒಟ್ಟು 647 ಎಸೆತಗಳನ್ನು ಎಸೆದಿದ್ದಾರೆ. 253 ರನ್​​ಗಳನ್ನು ನೀಡಿ 13 ಬಾರಿ ಔಟ್ ಮಾಡಿದ್ದಾರೆ. ಅಶ್ವಿನ್ ಬೌಲಿಂಗ್​ನಲ್ಲಿ ಸ್ಟೋಕ್ಸ್ 24 ಬೌಂಡರಿ ಮತ್ತು 5 ಸಿಕ್ಸರ್​​​​ ಸಿಡಿಸಿದ್ದಾರೆ.

ಬೆನ್​ಸ್ಟೋಕ್ಸ್​ ವಿಕೆಟ್ ಪಡೆದು ಕಪಿಲ್ ದೇವ್​ರ ಎರಡು ಸಾರ್ವಕಾಲಿಕ ದಾಖಲೆಗಳನ್ನು ಮುರಿದ ಆರ್ ಅಶ್ವಿನ್

Saturday, March 9, 2024

ಟೀಂ ಇಂಡಿಯಾದ ಆರಂಭಿಕ ಹಾಗೂ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ 9 ಇನ್ನಿಂಗ್ಸ್‌ಗಳಿಂದ 712 ರನ್ ಬಾರಿಸಿ ಅಗ್ರ ಸ್ಥಾನ ಪಡೆದರು. ಅಲ್ಲದೆ, ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಭಾರತ-ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಅಗ್ರ 5 ಬ್ಯಾಟರ್‌ಗಳಿವರು

Saturday, March 9, 2024

ಐದನೇ ಟೆಸ್ಟ್​​ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. 4ನೇ ಟೆಸ್ಟ್​​ನಲ್ಲಿ ಜಯಿಸಿದ ನಂತರ ಡಬ್ಲ್ಯುಪಿಎಲ್​ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆದಿತ್ತು.

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಟೀಮ್ ಇಂಡಿಯಾ; ಹೀನಾಯ ಸೋಲುಂಡ ಇಂಗ್ಲೆಂಡ್​ಗೆ ಎಷ್ಟನೆ ಸ್ಥಾನ?

Saturday, March 9, 2024

ಧರ್ಮಶಾಲದಲ್ಲಿ 3ನೇ ದಿನಕ್ಕೆ ಮುಕ್ತಾಯವಾದ ಭಾರತ ಮತ್ತು ಇಂಗ್ಲೆಂಡ್ ನಡುವೆ  ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ದಂತಕಥೆ ಜೇಮ್ಸ್ ಆಂಡರ್ಸನ್ 700 ಟೆಸ್ಟ್ ವಿಕೆಟ್ ಪಡೆದ ಮೂರನೇ ಬೌಲರ್ ಮತ್ತು ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. (AFP)

ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳ ದಾಖಲೆ ಬರೆದ ಜೇಮ್ಸ್ ಆಂಡರ್ಸನ್; ಈ ಸಾಧನೆ ಮಾಡಿದ ವಿಶ್ವದ ಅಗ್ರ ಐವರು ಬೌಲರ್‌ಗಳು ಇವರೇ

Saturday, March 9, 2024

ಸುನಿಲ್ ಗವಾಸ್ಕರ್ ಅವರು ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಆರಂಭಿಕ ಆಟಗಾರ ಎನಿಸಿದ್ದಾರೆ. ಗವಾಸ್ಕರ್, ಇಂಗ್ಲೆಂಡ್ ವಿರುದ್ಧ 38 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕು ಶತಕ ಬಾರಿಸಿದ್ದಾರೆ. ಇದೀಗ ಈ ದಾಖಲೆಯನ್ನು ರೋಹಿತ್​ ಸರಿಗಟ್ಟಿದ್ದಾರೆ, ರೋಹಿತ್ ಸಹ ಇಂಗ್ಲೆಂಡ್ ವಿರುದ್ಧ ಆರಂಭಿಕನಾಗಿ 4 ಸೆಂಚುರಿ ಪೂರ್ಣಗೊಳಿಸಿದ್ದಾರೆ.

ಶತಕ ಸಿಡಿಸಿ ಒಂದೇ ಸಮಯದಲ್ಲಿ ಎರಡು ದಾಖಲೆ ಬರೆದ ರೋಹಿತ್​ ಶರ್ಮಾ; ದಿಗ್ಗಜರ ದಾಖಲೆಗಳನ್ನೇ ಸರಿಗಟ್ಟಿದ ನಾಯಕ

Friday, March 8, 2024

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿದ್ದಾರೆ. ಮೊದಲ ದಿನ 52 ರನ್ ಗಳಿಸಿ ಔಟಾಗದೆ ಉಳಿದ ಎರಡನೇ ದಿನ 103 ರನ್‌ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಅವರು ದಾಖಲೆಯನ್ನು ನಿರ್ಮಿಸಿದರು. ರೋಹಿತ್ ಶರ್ಮಾ ಅವರಿಗಿಂತ ಮೊದಲು ವಿಶ್ವದ ಏಕೈಕ ಕ್ರಿಕೆಟಿಗ ಮಾತ್ರ ಈ ವಿಶೇಷ ಮೈಲಿಗಲ್ಲನ್ನು ದಾಟಿದ್ದರು.

ಡಬ್ಲ್ಯೂಟಿಸಿಯಲ್ಲಿ ಸಿಕ್ಸರ್‌ಗಳ ಅರ್ಧಶತಕ; ವಿಶೇಷ ದಾಖಲೆ ನಿರ್ಮಿಸಿದ ಮೊದಲ ಭಾರತೀಯ ರೋಹಿತ್‌ ಶರ್ಮಾ

Friday, March 8, 2024

ಪಂದ್ಯದಲ್ಲಿ ಜೈಸ್ವಾಲ್, ಟೆಸ್ಟ್‌ ಕ್ರಿಕೆಟ್‌ನಲ್ಲಿ 1000 ರನ್‌ಗಳ ಮೈಲಿಗಲ್ಲನ್ನು ತಲುಪಿದರು. ಇದರೊಂದಿಗೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದರು.

ಒಂದೇ ಸರಣಿಯಲ್ಲಿ 700 ರನ್; ಸುನಿಲ್ ಗವಾಸ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಯಶಸ್ವಿ ಜೈಸ್ವಾಲ್

Thursday, March 7, 2024

ಕಪಿಲ್ ದೇವ್, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿ ಸೇರಿ ಒಟ್ಟು 13 ಮಂದಿ ಟೀಂ ಇಂಡಿಯಾ ಪರ 100ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರ ವಿವರ ಇಲ್ಲಿದೆ.

ಕಪಿಲ್ ದೇವ್‌ರಿಂದ ಅಶ್ವಿನ್‌ವರೆಗೆ; ಟೀಂ ಇಂಡಿಯಾ ಪರ 100 ಟೆಸ್ಟ್ ಪಂದ್ಯಗಳ ಸಾಧನೆ ಮಾಡಿದ ಆಟಗಾರರು ಇವರೇ

Thursday, March 7, 2024

ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದ ಭಾರತದ ಮೊದಲ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಕುಲ್ದೀಪ್ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, ಕುಲ್ದೀಪ್ ವಿಶ್ವದ ಮೂರನೇ ಎಡಗೈ ಸ್ಪಿನ್ನರ್ ಆಗಿದ್ದಾರೆ. ಉಳಿದ ಇಬ್ಬರೆಂದರೆ ಇಂಗ್ಲೆಂಡ್‌ನ ಜಾನಿ ವಾರ್ಡ್ಲ್, ಮತ್ತು ದಕ್ಷಿಣ ಆಫ್ರಿಕಾದ ಪಾಲ್ ಆಡಮ್ಸ್.

ಟೆಸ್ಟ್ ಕ್ರಿಕೆಟ್‌ನಲ್ಲಿ ಕುಲ್ದೀಪ್‌ ಯಾದವ್‌ ಮತ್ತೊಂದು ದಾಖಲೆ; ಕಡಿಮೆ ಎಸೆತಗಳಲ್ಲಿ ವೇಗವಾಗಿ 50 ವಿಕೆಟ್ ಕಿತ್ತ ಸ್ಪಿನ್ನರ್

Thursday, March 7, 2024

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತದ ಆಟಗಾರರು ಅಭ್ಯಾಸದಲ್ಲಿ ಭಾಗವ ಹಿಸುತ್ತಿರುವುದನ್ನು ನೋಡಬಹುದು. ಇದು ಭಾರತದ ಅತ್ಯಂತ ಸುಂದರ ಕ್ರೀಡಾಂಗಣ.

ಭಾರತ vs ಇಂಗ್ಲೆಂಡ್‌ 5ನೇ ಟೆಸ್ಟ್;‌ ಧರ್ಮಶಾಲಾ ಟೆಸ್ಟ್‌ ಪಂದ್ಯದ ಸ್ವಾರಸ್ಯಕರ ಅಂಶಗಳಿವು

Wednesday, March 6, 2024

ಜೈಸ್ವಾಲ್ ಫೆಬ್ರುವರಿಯಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ರಾಜ್‌ಕೋಟ್ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ ಸಿಡಿಸುವ ಮೂಲಕ, ಈ ಸ್ವರೂಪದಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆಯನ್ನು ಸರಿಗಟ್ಟಿದರು. ಇದರೊಂದಿಗೆ ಬ್ಯಾಕ್-ಟು-ಬ್ಯಾಕ್ ದ್ವಿಶತಕ ಸಿಡಿಸಿದ ವಿಶ್ವದ ಮೂರನೇ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡರು.

ಇಂಗ್ಲೆಂಡ್ ವಿರುದ್ಧ ಸತತ ದ್ವಿಶತಕ; ಭಾರತದ ಏಕೈಕ ಆಟಗಾರನಾಗಿ ಐಸಿಸಿ ಪ್ರಶಸ್ತಿಗೆ ಯಶಸ್ವಿ ಜೈಸ್ವಾಲ್ ನಾಮನಿರ್ದೇಶನ

Monday, March 4, 2024

ರಾಜ್​ಕೋಟ್​​ ಟೆಸ್ಟ್​​​ನಲ್ಲಿ ಪದಾರ್ಪಣೆಗೈದ ಸರ್ಫರಾಜ್ ಖಾನ್ ಎರಡೂ ಇನ್ನಿಂಗ್ಸ್​​ಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದರು. ಆದರೆ ರಾಂಚಿ ಟೆಸ್ಟ್​​ನಲ್ಲಿ ವೈಫಲ್ಯ ಅನುಭವಿಸಿದರು.

ಟಾಮ್ ಹಾರ್ಟ್ಲೆ ಟು ಧ್ರುವ್ ಜುರೆಲ್; ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆಗೈದ ಆಟಗಾರರು ಯಾರು, ಅವರ ಪ್ರದರ್ಶನ ಹೇಗಿದೆ?

Monday, March 4, 2024

ನ್ಯೂಜಿಲೆಂಡ್ ಸೋಲಿನೊಂದಿಗೆ ಎರಡನೇ ಸ್ಥಾನದಲ್ಲಿದ್ದ ಭಾರತ ಅಗ್ರಸ್ಥಾನಕ್ಕೇರಿದೆ. ಈವರೆಗೂ ಆಡಿದ 8 ಪಂದ್ಯಗಳಲ್ಲಿ 5 ಗೆಲುವು, 2 ಸೋಲು ಮತ್ತು 1 ಡ್ರಾ ಸಾಧಿಸಿದೆ. ಗೆಲುವಿನ ಶೇಕಡವಾರು 64.58 ಇದೆ.

ಗೆದ್ದಿದ್ದು ಆಸ್ಟ್ರೇಲಿಯಾ, ಸೋತಿದ್ದು ನ್ಯೂಜಿಲೆಂಡ್, ಅಗ್ರಸ್ಥಾನಕ್ಕೇರಿದ್ದು ಮಾತ್ರ ಭಾರತ; ಹೀಗಿದೆ ಡಬ್ಲ್ಯುಟಿಸಿ ಅಂಕಪಟ್ಟಿ

Sunday, March 3, 2024

ರಾಜ್‌ಕೋಟ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯವಾಡಿದ ಸರ್ಫರಾಜ್ ಖಾನ್, ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ ಅರ್ಧಶತಕ ಸಿಡಿಸುವ ಮೂಲಕ ಅಬ್ಬರಿಸಿದರು. ಅಲ್ಲದೆ ವೇಗವಾಗಿ ಬ್ಯಾಟ್‌ ಬೀಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿದರು.

ಜುರೆಲ್‌ ಟಾಪ್‌, ಪಾಟೀದಾರ್‌ ಪ್ಲಾಪ್; ಭಾರತ vs ಇಂಗ್ಲೆಂಡ್ ಸರಣಿಯಲ್ಲಿ ಪದಾರ್ಪಣೆ ಮಾಡಿದ ಆಟಗಾರರ ಪ್ರದರ್ಶನ ಹೀಗಿತ್ತು

Thursday, February 29, 2024