andhra-pradesh News, andhra-pradesh News in kannada, andhra-pradesh ಕನ್ನಡದಲ್ಲಿ ಸುದ್ದಿ, andhra-pradesh Kannada News – HT Kannada

Latest andhra pradesh Photos

ರಿಪಬ್ಲಿಕನ್ ಪಕ್ಷದ ಪರ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಜೆಡಿ ವ್ಯಾನ್ಸ್ ಅವರ ಪತ್ನಿ ಚಿಲುಕುರಿ ಉಷಾ ಅವರ ಕುಟುಂಬವು ಈಗ ಅಮೆರಿಕದಲ್ಲಿ ನೆಲೆಸಿದೆ. ಉಷಾ ಅವರ ಪೋಷಕರು 60ರ ದಶಕದಲ್ಲೇ ಯುಎಸ್​ಗೆ ತೆರಳಿದ್ದರು. ಪ್ರಸ್ತುತ ರಿಪಬ್ಲಿಕ್ ಪಕ್ಷವು ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಮತ್ತೊಂದೆಡೆ ಡೆಮಾಕ್ರಟಿಕ್ ಪಕ್ಷದ ಪರವಾಗಿ ಸ್ಪರ್ಧಿಸುತ್ತಿರುವ ಕಮಲಾ ಹ್ಯಾರಿಸ್ ಅವರ ಪೂರ್ವಜರು ತಮಿಳುನಾಡಿನವರು ಎಂಬುದು ವಿಶೇಷ.

ಅಮೆರಿಕ ಅಧ್ಯಕ್ಷ ಚುನಾವಣೆ: ಉಪಾಧ್ಯಕ್ಷ ರೇಸ್​ನಲ್ಲಿ ಆಂಧ್ರಪ್ರದೇಶದ ಅಳಿಯ; ಯಾರವರು, ಭಾರತಕ್ಕೆ ಕನೆಕ್ಷನ್ ಹೇಗೆ?

Wednesday, November 6, 2024

ಪವನ್‌ ಕಲ್ಯಾಣ್‌ ಇಂದು ಕಾಲ್ನಡಿಗೆಯಲ್ಲಿ ತಿರುಪತಿಗೆ ತೆರಳಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಜೊತೆಗೆ ಇಬ್ಬರು ಪುತ್ರಿಯರೂ ದೇವರ ದರ್ಶನ ಪಡೆದಿದ್ದಾರೆ.

ಹೆಣ್ಣು ಮಕ್ಕಳೊಂದಿಗೆ ತಿರುಪತಿಗೆ ತೆರಳಿದ ಪವನ್‌ ಕಲ್ಯಾಣ್‌; ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಆದ್ಯ ಕೊನಿಡೇಲ, ಪೌಲಿನಾ ಅಂಜನಿ

Wednesday, October 2, 2024

ತಿರುಮಲ ತಿರುಪತಿ ಬೆಟ್ಟದ ಆಸುಪಾಸಿನಲ್ಲಿ ಮತ್ತೊಮ್ಮೆ ಚಿರತೆ ಕಂಡುಬಂದಿದೆ. ಈ ಬಾರಿ ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿಯೇ ಚಿರತೆ ಕಾಣಸಿಕ್ಕಿರುವುದು ಭಕ್ತರಲ್ಲಿ ಕಳವಳ ಮೂಡಿಸಿದೆ. ಇದರ ಬಗ್ಗೆ ಟಿಟಿಡಿ ಅಧಿಕಾರಿಗಳಿಗೆ ಭಕ್ತರು ಮಾಹಿತಿ ನೀಡಿದ್ದು, ಅದನ್ನು ಹಿಮ್ಮೆಟ್ಟಿಸುವ ಪ್ರಯತ್ನ ಶುರುವಾಗಿದೆ.

ಚಿರತೆ ಇದೆ ಎಚ್ಚರ, ಗುಂಪು ಗುಂಪಾಗಿ ಬನ್ನಿ; ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿ ಸಾಗುವ ಭಕ್ತರಿಗೆ ಟಿಟಿಸಿ ಸೂಚನೆ

Sunday, September 29, 2024

ತಿರುಪತಿ ವೆಂಕಟೇಶ್ವರ ದೇವಸ್ಥಾನವು ಭಾರತದ ಅತ್ಯಂತ ಶ್ರೀಮಂತ ಮತ್ತು ಪ್ರತಿಷ್ಠಿತ ದೇಗುಲಗಳಲ್ಲಿ ಒಂದು. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ಇರುವ ತಿರುಮಲ ಬೆಟ್ಟದ ಮೇಲೆ ಶ್ರೀನಿವಾಸನ ದೇಗುಲವಿದೆ. ಇಲ್ಲಿ ಮಹಾವಿಷ್ಣುವನ್ನು ವೆಂಕಟೇಶ್ವರನ ರೂಪದಲ್ಲಿ ಪೂಜಿಸಲಾಗುತ್ತದೆ. ಇದು ತಿರುಪತಿ ಬಾಲಾಜಿ ಎಂಬ ಹೆಸರಿನಿಂದ ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿದೆ. ವೆಂಕಟೇಶ್ವರನು ತನ್ನ ಪತ್ನಿ ಪದ್ಮಾವತಿಯೊಂದಿಗೆ ತಿರುಮಲದಲ್ಲಿ ನೆಲೆಸಿದ್ದಾನೆ ಎನ್ನುವುದು ಆಸ್ತಿಕರ ನಂಬಿಕೆ.

ದೇಗುಲ ವಿಶೇಷ: ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿರುವ ನಿಗೂಢ ರಹಸ್ಯಗಳು, ಹಲವರಿಗೆ ತಿಳಿದಿರದ ಕುತೂಹಲಕಾರಿ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ

Tuesday, September 24, 2024

ತಿರುಮಲ ಶ್ರೀವಾರಿ ಲಡ್ಡು ಕಲಬೆರಕೆ ವಿವಾದ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಸಂಬಂಧ ಹಿಂದೂ ಸಮುದಾಯಗಳು ಮತ್ತು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿನ ಸರ್ಕಾರದ ನಿರ್ಲಕ್ಷ್ಯದಿಂದ ಶ್ರೀವಾರಿ ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಲಾಗಿದೆ ಎಂದು ಸಮ್ಮಿಶ್ರ ಸರ್ಕಾರ ಟೀಕಿಸಿದೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ.

ತಿರುಪತಿ ಲಡ್ಡು ಕಲಬೆರಕೆ ವಿವಾದ; 3 ದಿನಗಳ ಮಹಾಶಾಂತಿ ಯಾಗ ನಡೆಸುವ ಮಹತ್ವದ ನಿರ್ಧಾರ ಪ್ರಕಟಿಸಿದ ಟಿಟಿಡಿ

Saturday, September 21, 2024

ಭಾರೀ ಮಳೆಯಿಂದಾಗಿ ಆಂಧ್ರಪ್ರದೇಶದ ಪ್ರಮುಖ ನಗರ ವಿಜಯವಾಡ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆಗಳಲ್ಲಿ ನೀರು ಹರಿದು ಜನ ಸಂಚಾರವೂ ಕಷ್ಟವಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಮಳೆಗೆ ಏಳು ಮಂದಿ ಬಲಿಯಾಗಿದ್ದಾರೆ. ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಗುಂಟೂರು ಮತ್ತು ವಿಜಯವಾಡದಲ್ಲಿ ಮಳೆಯು ಭೂಕುಸಿತ ಮತ್ತು ಜಲಾವೃತವಾದ ರಸ್ತೆಗಳಿಗೆ ಕಾರಣವಾಯಿತು.

Andhra Rains: ಆಂಧ್ರಪ್ರದೇಶ,ತೆಲಂಗಾಣದಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ, 7 ಮಂದಿ ಸಾವು, ಮಳೆ ಅಬ್ಬರಕ್ಕೆ ಮುಳುಗಿದ ವಿಜಯವಾಡ photos

Sunday, September 1, 2024

ಗೋದಾವರಿ ಭಾಗದ ಜನರ ಆತಿಥ್ಯ ಎಂದರೆ ನೆನಪಾಗುವುದು ಭಕ್ಷ್ಯ ವೈವಿಧ್ಯ. ಅಂದ ಹಾಗೆ ಇಂದು (ಆಗಸ್ಟ್ 11) ಕಾಕಿನಾಡದಲ್ಲಿ ಹೊಸ ಅಳಿಯನಿಗೆ ಆಷಾಢದ ಆತಿಥ್ಯಕ್ಕೆ ಸಿದ್ಧಪಡಿಸಿಟ್ಟ 100 ಬಗೆ ಬಗೆಯ ಭಕ್ಷ್ಯಗಳು ಗಮನಸೆಳೆದವು. ಸೋಷಿಯಲ್ ಮೀಡಿಯಾದಲ್ಲಿ ಈ ಭೋಜನದ ಫೋಟೋಸ್, ವಿಡಿಯೋ ವೈರಲ್‌ ಆಗಿವೆ.

ಉಫ್, ಇಷ್ಟೊಂದು ಹೇಗಪ್ಪಾ ತಿನ್ನೋದು; ಹೊಸ ಅಳಿಯನ ಉಪಚಾರಕ್ಕೆ 100ಬಗೆ ಭಕ್ಷ್ಯ, ವೈರಲ್ ಆಯ್ತು ಕಾಕಿನಾಡ ಆಷಾಢದ ಆತಿಥ್ಯ ಇಲ್ನೋಡಿ Viral Photos

Sunday, August 11, 2024

ಈಗಲೂ ಆಂಧ್ರಪ್ರದೇಶ ಅರಣ್ಯ ಇಲಾಖೆ ಒಂಬತ್ತು ಆನೆಗಳಿಗೆ ಬೇಡಿಕೆಯನ್ನು ಇಟ್ಟಿದೆ. ಕರ್ನಾಟಕ ಇಲಾಖೆಯು ಸಚಿವರ ಒಪ್ಪಿಗೆಯೊಂದಿಗೆ ಆನೆ ನೀಡಲು ಮುಂದಾಗಿದೆ. ಇದಕ್ಕಾಗಿ ಒಂಬತ್ತು ಆನೆ ಆಯ್ಕೆ ಪ್ರಕ್ರಿಯೆಯೂ ಆರಂಭವಾಗಲಿದೆ.

Forest News: ಕರುನಾಡ ಆನೆಗಳಿಗೆ ಹೊರ ನಾಡಿನಲ್ಲಿ ಭಾರೀ ಬೇಡಿಕೆ, ಆಂಧ್ರಪ್ರದೇಶಕ್ಕೆ ಬೇಕಿದೆ 9 ಆನೆ

Tuesday, July 9, 2024

ಚಂದ್ರಬಾಬು ನಾಯ್ಡು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ದಿಗ್ಗಜ ನಟ ರಜನಿಕಾಂತ್.

Andhra Pradesh News: ಜೈಲು ಸೇರಿ ಬಂದ ನಂತರ ಆಂಧ್ರದ ಚುಕ್ಕಾಣಿ ಹಿಡಿದ ಚಂದ್ರಬಾಬು, ಹೀಗಿತ್ತು ಗಣ್ಯರ ಸಮಾಗಮ

Wednesday, June 12, 2024

ಜಗತ್ತಿನ ಅತಿಶ್ರೀಮಂತ ದೇವಸ್ಥಾನಗಳ ಪೈಕಿ ಒಂದಾಗಿರುವ ತಿರುಮಲ ತಿರುಪತಿ ದೇವಸ್ಥಾನಗಳು ಧಾರ್ಮಿಕ ಪ್ರವಾಸೋದ್ಯಮದ ಬಹುದೊಡ್ಡ ಶಕ್ತಿಕೇಂದ್ರ. ನಿತ್ಯವೂ ಇಲ್ಲಿ  50,000 ದಿಂದ 1 ಲಕ್ಷದ ಆಸುಪಾಸಿನಲ್ಲಿ ಭಕ್ತರು ಬಂದು ದೇವರ ದರ್ಶನ ಮಾಡುತ್ತಾರೆ. ಹೀಗೆ ತಿರುಪತಿಗೆ ಬಂದವರು ತಪ್ಪಿಸಿಕೊಳ್ಳದೇ ನೋಡಬೇಕಾದ ಒಂಬತ್ತು ಪ್ರವಾಸಿ ಆಕರ್ಷಣೆಗಳಿವೆ. ಅವುಗಳ ವಿವರ ಇಲ್ಲಿದೆ ನೋಡಿ.

Tirupati Tourism: ತಿರುಪತಿಯಲ್ಲಿ ಮಿಸ್ ಮಾಡದೇ ನೋಡಬೇಕಾದ 9 ಪ್ರವಾಸಿ ಆಕರ್ಷಣೆಗಳಿವು - ಚಿತ್ರನೋಟ

Tuesday, June 11, 2024

ತಿರುಪತಿಗೆ ಭೇಟಿ ಕೊಡ್ತಿದ್ದೀರಾ, ಈ 6 ದೇವಸ್ಥಾನಗಳು ಕೂಡ ಕೆಲವೇ ಮೈಲಿ ಅಂತರದಲ್ಲಿವೆ. ಪ್ಲಾನ್ ಮಾಡಿಕೊಂಡು ಹೋದರೆ ದರ್ಶನ ಮಾಡ್ಕೊಂಡು ಬರಬಹುದು. ಅದಕ್ಕಾಗಿ ಈ ದೇವಸ್ಥಾನಗಳ ಕಿರು ವಿವರ ಇಲ್ಲಿದೆ.

ತಿರುಪತಿಗೆ ಭೇಟಿ ಕೊಡ್ತಿದ್ದೀರಾ, ಈ 6 ದೇವಸ್ಥಾನಗಳು ಕೂಡ ಕೆಲವೇ ಮೈಲಿ ಅಂತರದಲ್ಲಿವೆ, ಪ್ಲಾನ್ ಮಾಡಿಕೊಂಡು ಹೋದರೆ ದರ್ಶನ ಮಾಡ್ಕೊಂಡು ಬರಬಹುದು

Tuesday, June 11, 2024

ಲೋಕಸಭಾ ಚುನಾವಣೆ 2024ರಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವಿನತ್ತ ಸಾಗುತ್ತಿದೆ. ಇಲ್ಲಿನ ಪಿಠಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜನಸೇನಾ ನಾಯಕ ಪವನ್ ಕಲ್ಯಾಣ್ ಭಾರಿ ಬಹುಮತದಿಂದ ಗೆಲ್ಲುವ ಸಾಧ್ಯತೆ ಇದೆ.

Andhra Pradesh Election Result: ಪಿಠಾಪುರ‌ದಲ್ಲಿ ಪವನ್‌ ಕಲ್ಯಾಣ್‌ಗೆ ಗೆಲುವು ಖಚಿತ; ಭಾರಿ ಮುನ್ನಡೆಯಲ್ಲಿ ಜನಸೇನಾ ಪಕ್ಷದ ನಾಯಕ

Tuesday, June 4, 2024

ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು. ಇಬ್ಬರೂ ಕಾಂಗ್ರೆಸಿಗರಾಗಿದ್ದು, ಸ್ಟಾರ್ ಚಂದ್ರು (ಎಡಚಿತ್ರ) ಮಂಡ್ಯ ಲೋಕಸಭಾ ಕ್ಷೇತ್ರದಿಂದ, ಡಿಕೆ ಸುರೇಶ್ (ಬಲಚಿತ್ರ) ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇನ್ನು ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ವಿವರ ಗಮನಿಸೋಣ.

ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು, ನಂಬರ್ 1 ಸ್ಥಾನದಲ್ಲಿ ಆಂಧ್ರದ ಪೆಮ್ಮಸಾನಿ

Friday, May 31, 2024

ಆತ್ಮವು ಸಾರಥಿ, ದೇಹವು ರಥ, ಬುದ್ಧಿಯು ಚಾಲಕ, ಮನಸ್ಸು ಲಗಾಮು, ಇಂದ್ರಿಯಗಳು ಕುದುರೆಗಳು ಮತ್ತು ವಸ್ತುಗಳು ಬೀದಿಗಳಾಗಿವೆ. ಹೀಗೆ ದೇಹವನ್ನು ರಥದೊಂದಿಗೆ ಹೋಲಿಸಿ ನೋಡಿದಾಗ ಸ್ಥೂಲ ಶರೀರವೇ ಬೇರೆ, ಸೂಕ್ಷ್ಮ ಶರೀರವೇ ಬೇರೆ, ಆತ್ಮವೇ ಬೇರೆ. ರಥೋತ್ಸವದಲ್ಲಿ ತತ್ತ್ವಜ್ಞಾನವಿದೆ ಎಂದು ವಿದ್ವಾಂಸರು ನಂಬುತ್ತಾರೆ.

ತಿರುಪತಿಯಲ್ಲಿ ಜರುಗಿದ ಗೋವಿಂದರಾಜಸ್ವಾಮಿ ವಾರ್ಷಿಕ ಬ್ರಹ್ಮೋತ್ಸವ; ರಥೋತ್ಸವದಲ್ಲಿ ಭಾಗಿಯಾದ ಸಾವಿರಾರು ಭಕ್ತರು

Thursday, May 23, 2024

ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಎಲ್ಲಿ ಮತದಾನ ಮಾಡಿದರು? ರಾಜಕೀಯ ಪಕ್ಷಗಳು ನಾಯಕರು, ಗಣ್ಯರ ಮತದಾನ ಮಾಡಿರುವ ಫೋಟೊ ಮತ್ತು ಮಾಹಿತಿ ಇಲ್ಲಿದೆ.

Lok Sabha Election 2024: ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ; ಗಣ್ಯರಿಂದ ಹಕ್ಕು ಚಲಾವಣೆ; ಫೋಟೊಸ್

Monday, May 13, 2024

ಟಾಲಿವುಡ್ ಹಿರಿಯ ನಟ ಹಾಗೂ ರಾಜಕಾರಣ ಚಿರಂಜೀವಿ, ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ನಟರಾದ ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್ ಮತದಾನ ಮಾಡಿದ್ದಾರೆ. ಎಲ್ಲರೂ ವೋಟಿಂಗ್ ಮಾಡಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದು ಕರೆ ನೀಡಿದ್ದಾರೆ.

Election 2024: ಸಿಎಂ ಜಗನ್‌ರಿಂದ ನಟ ಜೂ.ಎನ್‌ಟಿಆರ್‌ವರೆಗೆ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಗಣ್ಯರಿಂದ ಮತದಾನ; ಫೋಟೊಸ್

Monday, May 13, 2024

ಬೆಂಗಳೂರು ಬಾಲಕಿ ಕುಮಾರಿ ಕೀರ್ತನಾ (17) ಗೋವಿಂದ ಕೋಟಿ ಬರೆದು ತಿರುಮಲ ತಿರುಪತಿ ಸನ್ನಿಧಾನಕ್ಕೆ ಒಪ್ಪಿಸಿದ್ದು, ಮಂಗಳವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ಸಮೀಪ ದರ್ಶನ ಪಡೆದು ಭಾವಪರವಶರಾದರು. ಇಷ್ಟ ದೇವರ ದರ್ಶನ ಭಾಗ್ಯ ಪಡೆದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದು ಟಿಟಿಡಿ ಟ್ವೀಟ್ ಮಾಡಿದೆ.

ಗೋವಿಂದ ಕೋಟಿ ಬರೆದ 17 ವರ್ಷದ ಬೆಂಗಳೂರು ಬಾಲಕಿಗೆ ಶ್ರೀವಾರಿ ದೇವರ ಅನುಗ್ರಹ, ಗಮನ ಸೆಳೆಯಿತು ಟಿಟಿಡಿ ಟ್ವೀಟ್‌

Wednesday, May 1, 2024

ಶ್ರೀ ಮಲಯಪ್ಪಸ್ವಾಮಿಗೆ ವಸಂತ ಋತುವಿನಲ್ಲಿ ನಡೆಯುವ ಈ ಉತ್ಸವಕ್ಕೆ 'ವಸಂತೋತ್ಸವ' ಎಂದು ಕರೆಯಲಾಗುತ್ತದೆ. ಸೂರ್ಯನ ಶಾಖದಿಂದ ಭಗವಂತನನ್ನು ನಿವಾರಿಸುವ ಹಬ್ಬವಾದ್ದರಿಂದ ಇದನ್ನು ಉಪಸಮಾನೋತ್ಸವವೆಂದೂ ಕರೆಯುತ್ತಾರೆ.

Annual Vasanthotsavalu 2024: ತಿರುಪತಿಯಲ್ಲಿ ಅದ್ಧೂರಿಯಾಗಿ ನೆರವೇರಿದ ವಸಂತೋತ್ಸವ; ಕಾರ್ಯಕ್ರಮ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

Monday, April 22, 2024

ಮಿತಿಗಿಂತಲೂ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಜಯಲಲಿತಾ ವಿರುದ್ದ ಮೊಕದ್ದಮೆ ದಾಖಲಾಗಿತ್ತು.ಬೆಂಗಳೂರಿನ ವಿಶೇಷ ನ್ಯಾಯಾಲಯವು 2014,ರಲ್ಲಿ ಜಯಲಲಿತಾಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು ಸಿಎಂ ಹುದ್ದೆ ತೊರೆದು. ಜೈಲಿನಲ್ಲಿದ್ದೇ ಹೋರಾಟ ಮಾಡಿ ಮತ್ತೆ ಸಿಎಂ ಸ್ಥಾನಕ್ಕೆ ಜಯಲಲಿತಾ ಬಂದಿದ್ದರು.

ಜೈಲು ಸೇರಿದ ಭಾರತದ 7 ರಾಜ್ಯಗಳ ಸಿಎಂ, ಮಾಜಿ ಸಿಎಂಗಳು, ಯಾರು ಇದ್ದಾರೆ ಇಲ್ಲಿದೆ ಪಟ್ಟಿ photos

Tuesday, March 26, 2024

ಆಂಧ್ರಪ್ರದೇಶದಲ್ಲಿರುವ ಪಂಚರಾಮ ಶಿವದೇಗುಲಗಳು ಶಿವನಿಗೆ ಅರ್ಪಿತವಾಗಿರುವ ಅತ್ಯಂತ ಹಳೆಯ ದೇಗುಲಗಳಾಗಿವೆ. ಆಂಧ್ರದಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಇದೂ ಒಂದು. ಒಂದೇ ಲಿಂಗದಿಂದ 5 ಶಿವಲಿಂಗಗಳು ಹುಟ್ಟಿಕೊಂಡವು ಎಂದು ದಂತಕಥೆಗಳು ಹೇಳುತ್ತವೆ. ರಾಕ್ಷಸ ತಾರಕಾಸುರ ಶಿವನ ಮೇಲೆ ದಾಳಿ ಮಾಡಿದಾಗ ಲಿಂಗವು 5 ತುಂಡುಗಳಾಗಿ ಒಡೆಯಿತು ಎನ್ನಲಾಗುತ್ತದೆ. ಈ 5 ತುಂಡುಗಳು ಬಿದ್ದ ಜಾಗವನ್ನು ಪಂಚರಾಮ ಶಿವಕ್ಷೇತ್ರಗಳು ಎಂದು ಕರೆಯಲಾಯಿತು. ಈ ಪಂಚಲಿಂಗ ದೇಗುಲಗಳು ಯಾವುವು, ಅವು ಎಲ್ಲಿವೆ ತಿಳಿಯಿರಿ.

Maha Shivaratri 2024: ಆಂಧ್ರಪ್ರದೇಶದ ಪಂಚರಾಮ ಶಿವ ದೇಗುಲಗಳ ಪರಿಚಯ ಇಲ್ಲಿದೆ, ಮನಸಿಗೆ ಶಾಂತಿ ನೀಡುವ ಶಿವಾಲಯಗಳಿವು

Wednesday, March 6, 2024