hassan News, hassan News in kannada, hassan ಕನ್ನಡದಲ್ಲಿ ಸುದ್ದಿ, hassan Kannada News – HT Kannada

Latest hassan Photos

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥಸ್ವಾಮೀಜಿ, ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಯಿತು.

ವರ್ಷಕ್ಕೆ ಒಂದೇ ಬಾರಿ ದರ್ಶನ ಕೊಡುವ ಹಾಸನಾಂಬ ದೇಗುಲದ ಬಾಗಿಲು ತೆರೆಯಿತು, ಹೀಗಿವೆ ಹಾಸನದ ಜಾತ್ರಾ ಮಹೋತ್ಸವದ ವಿಶೇಷ ಕ್ಷಣಗಳು

Thursday, October 24, 2024

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು.2129.80  ಅಡಿ ನೀರು ಸಂಗ್ರಹವಾಗಿದ್ದು ಈವರೆಗೂ 21.91 ಟಿಎಂಸಿ ನೀರು ಬಂದಿದೆ. ಜಲಾಶಯದ ಒಳ ಹರಿವಿನ ಪ್ರಮಾಣ  693 ಕ್ಯೂಸೆಕ್‌ ಹಾಗೂ ಹೊರ ಹರಿವಿನ ಪ್ರಮಾಣ135 ಕ್ಯೂಸೆಕ್‌ ಇದೆ.

2 ವಾರದಿಂದ ಮಳೆ ಕಡಿಮೆಯಾದರೂ ಕರ್ನಾಟಕ ಆಲಮಟ್ಟಿ, ಕೆಆರ್‌ಎಸ್‌, ಭದ್ರಾ, ಸೂಪಾ, ತುಂಗಭದ್ರಾ, ಕಬಿನಿ ಜಲಾಶಯಗಳಲ್ಲಿ ಎಷ್ಟು ನೀರು ಸಂಗ್ರಹವಿದೆ

Thursday, September 19, 2024

ಅರಣ್ಯ ಇಲಾಖೆಯಲ್ಲಿ ಮುಖ್ಯವಾಗಿ ವನ್ಯಜೀವಿ ವಲಯಗಳಾದ ಹುಲಿ ಸಂರಕ್ಷಿತ ಪ್ರದೇಶ, ರಾಷ್ಟ್ರೀಯ ಉದ್ಯಾನ, ಅಭಯಾರಣ್ಯದಂತಹ ವನ್ಯಜೀವಿಗಳ ವ್ಯಾಪನೆ ಹೆಚ್ಚಾಗಿರುವ ಸ್ಥಳಗಳಲ್ಲಿ ಕೆಲಸ ಮಾಡುವುದು ಬಹಳ ಸವಾಲಿನದ್ದು. ಇಲ್ಲಿ ಬೇಟೆಗಾರರು, ಮರಗಳ್ಳರು, ಒತ್ತುವರಿದಾರರ, ಕಾಡ್ಗಿಚ್ಚು ಮುಂತಾದ ಹೊರಗಿನ ಸವಾಲುಗಳನ್ನು ಎದುರಿಸುವುದು ಒಂದು ಕಡೆಯಾದರೆ, ಆನೆ, ಹುಲಿ,ಚುರತೆ, ಕಾಟಿಯಂತಹ ಆಕ್ರಮಣಕಾರಿ ಪ್ರಾಣಿಗಳ ಜೊತೆಯೇ ಇದ್ದು ಕೆಲಸ ಮಾಡಬೇಕಾದ ಸವಾಲು ಮತ್ತೊಂದು ಕಡೆ. ಇಂತಹ ಸಂದರ್ಭದಲ್ಲಿ ಪ್ರತಿ ವರ್ಷ ಹಲವರು ಹುತಾತ್ಮರಾಗುತ್ತಾರೆ. ಅವರಿಗೆ ಗೌರವ ಸಲ್ಲಿಸಲಾಗುತ್ತದೆ.

Forest News: ಅರಣ್ಯ ಸೇವೆಯಲ್ಲಿ ಹುತಾತ್ಮರಾದವರಿಗೆ ಕರ್ನಾಟಕದ ಹಾಸನ, ಹಾವೇರಿ, ಮೈಸೂರು ಜಿಲ್ಲೆಗಳಲ್ಲಿ ಗೌರವ photos

Thursday, September 12, 2024

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಎತ್ತಿನ ಹೊಳೆ ಯೋಜನೆಗೆ ಸಿಎಂ ಸಿದ್ದರಾಮಯ್ಯ ಟೇಪು ಕತ್ತರಿಸುವ ಮೂಲಕ ಚಾಲನೆ ನೀಡಿದರು. ಮಾಜಿ ಸಿಎಂ ವೀರಪ್ಪ ಮೊಯ್ಲಿ, ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರಾದ ಎಂ.ಬಿ.ಪಾಟೀಲ. ಡಾ.ಜಿ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ ಭಾಗಿಯಾದರು.

Ettinahole: ಕೊನೆಗೂ ಉದ್ಘಾಟನೆ ಕಂಡ ಎತ್ತಿನಹೊಳೆ ಯೋಜನೆ: ಸಿಎಂ ಚಾಲನೆ, ಡಿಕೆಶಿ ಹೋಮ ಹವನದ ಸಂಭ್ರಮ ಹೀಗಿತ್ತು

Friday, September 6, 2024

ಅಲ್ಲದೆ, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಇಬ್ಬರು ಸಹಾಯಕ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಘಟನೆಗಳು ನಡೆದಿದ್ದವು. ಆದರೆ ಕ್ರಮ ಜರುಗಿರಲಿಲ್ಲ.

Hassan News: ಮಕ್ಕಳ ಆಟಾಟೋಪ, ಸರ್ಕಾರಿ ಹಾಸ್ಟೆಲ್‌ನಲ್ಲಿ ಮಕ್ಕಳಿಂದ ಧಂ ಮಾರೋ ಧಂ, ಹೇಳೋರಿಲ್ಲ ಕೇಳೋರಿಲ್ಲ!

Sunday, September 1, 2024

ಕೊಡಗಿನ ಹಾರಂಗಿ ಜಲಾಶಯದ ಹಿನ್ನೀರು ಕುಶಾಲನಗರ, ಸೋಮವಾರಪೇಟೆ ತಾಲ್ಲೂಕಿನ ಅತ್ಯುತ್ತಮ ತಾಣ,. ಹಲವು ಕಡೆಗಳಲ್ಲಿ ನೀರಿನ ವೈಭವ ನೋಡಲು ಯುವ ಸಮೂಹ ಬೈಕ್‌ನಲ್ಲಿಯೇ ಇಲ್ಲಿಗೆ ಬರುವುದುಂಟು. ಮೈಸೂರಿನಿಂದ 100  ಕಿ.ಮಿ ದೂರದಲ್ಲಿದೆ.

Reservoirs Back water Trip: ಕರ್ನಾಟಕದ ಜಲಾಶಯಗಳ ಹಿನ್ನೀರಿನ ಟ್ರಿಪ್‌ಗೆ ಯೋಜಿಸಿ: ಎಲ್ಲಿ ಏನೇನಿದೆ ,ಹೇಗೆ ಹೋಗಬಹುದು

Thursday, August 22, 2024

ಒಂದು ಕಡೆ ಪಶ್ಚಿಮ ಘಟ್ಟದ ಶೃೇಣಿ, ಇನ್ನೊಂದು ಕಡೆ ರೈಲ್ವೆ ಮಾರ್ಗ, ಅದೂ ಮಾರ್ಗದ ಹಲವು ಕಡೆ ಕುಸಿತ ಕಂಡು ರೈಲು ಓಡಾಡದ ಸ್ಥಿತಿ ಇತ್ತು. ದುರ್ಗಮ ಪ್ರದೇಶದಲ್ಲಿ ತುರ್ತು ಪುನರ್‌ ನಿರ್ಮಾಣ ಕಾರ್ಯ ನಡೆದಿದೆ.

Indian Railways: ಹಾಸನ ಜಿಲ್ಲೆಯಲ್ಲಿ ಭೂಕುಸಿತದಿಂದ ಅಡಚಣೆ, ಕೊನೆ ಹಂತಕ್ಕೆ ಬಂದ ರೈಲ್ವೆ ತೆರವು ಕಾರ್ಯಾಚರಣೆ photos

Tuesday, August 6, 2024

ಎಡಬಿಡದೇ ಸುರಿದ ಭಾರೀ ಮಳೆಯಿಂದ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ  ಕುಂಬರಡಿ ಬಳಿ ರಸ್ತೆಯೇ ಬಿರುಕು ಬಿಟ್ಟಿದೆ.

Karnataka Rains: ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ, ಉಕ್ಕಿ ಹರಿಯುತ್ತಿರುವ ನದಿಗಳು, ಹೀಗಿದೆ ಚಿತ್ರಣ photos

Tuesday, July 30, 2024

ವಿಶೇಷವಾಗಿ ಕುಸಿತ ಕಂಡಿದ್ದ ಜಾಗದಲ್ಲಿ ಮರಳಿನ ಚೀಲಗಳು, ಭಾರೀ ಗಾತ್ರದ ಕಲ್ಲುಗಳನ್ನು ಹಾಕಿ ಬಿಗಿಗೊಳಿಸುವ ಕೆಲಸ ಮಾಡಲಾಗಿದೆ.

Indian Railways: ಮಳೆಹಾನಿ, ಹಾಸನ-ದಕ್ಷಿಣ ಕನ್ನಡ ರೈಲ್ವೆ ಮಾರ್ಗದ ತ್ವರಿತ ಪುನರ್‌ ನಿರ್ಮಾಣ, ರೈಲ್ವೆ ಸಿಬ್ಬಂದಿ ಫಟಾಫಟ್‌ ಕೆಲಸ ಹೀಗಿದೆ

Sunday, July 28, 2024

ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿಯಲ್ಲಿ ಭದ್ರಾ ನದಿ ತುಂಬಿ ಹರಿಯುತ್ತಿದೆ. ಆ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿಗೆ ಹೆಚ್ಚಿನ ನೀರು ಬರುತ್ತಿದೆ. ಭದ್ರಾ ಜಲಾಶಯಕ್ಕೂ ಒಳ ಹರಿವು ಹೆಚ್ಚಿದೆ.

Karnataka Rains: ಕರುನಾಡಲ್ಲಿ ಭಾರೀ ಮಳೆ, ತುಂಬಿ ಹರಿಯುತ್ತಿವೆ ಬಹುತೇಕ ಹೊಳೆ, ಹೀಗಿದೆ ನೋಡಿ ಜಲ ಕಳೆ photos

Monday, July 15, 2024

ಸೋಷಿಯಲ್‌ ಮೀಡಿಯಾದಲ್ಲಿ ಯಶ್‌ ಅವರ ಈ ಹೊಸ ಫೋಟೋಗಳು ವೈರಲ್‌ ಆಗ್ತಿದ್ದಂತೆ,  ಕೊನೆಗೂ ಟಾಕ್ಸಿಕ್‌ ಲುಕ್‌ ರಿವೀಲ್‌ ಮಾಡಿದ್ರಲ್ಲ ಎಂದು ಅಭಿಮಾನಿಗಳು ಕಾಮೆಂಟ್‌ ಹಾಕುತ್ತಿದ್ದಾರೆ.

ಅಂಬಾನಿ ಕುಟುಂಬದ ಮದುವೆಗೆ ‘ಟಾಕ್ಸಿಕ್‌’ ಲುಕ್‌ನಲ್ಲಿ ಎಂಟ್ರಿ ಕೊಟ್ಟ ರಾಕಿಂಗ್‌ ಸ್ಟಾರ್‌ ಯಶ್‌ PHOTOS

Friday, July 12, 2024

ಬಿಸ್ಲೆ ಘಾಟ್‌//
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ, ಬಿಸ್ಲೆಯಲ್ಲಿ 40 ಹೆಕ್ಟೇರುಗಳಷ್ಟು ಮೀಸಲು ಅರಣ್ಯವು ಹರಡಿಕೊಂಡಿದೆ.  ಏಷ್ಯಾದಲ್ಲಿ ಪ್ರಮುಖ ಅರಣ್ಯವೆಂದು ಗುರುತಿಸಲಾಗಿದ್ದು, ಈ ಅರಣ್ಯವು ಹಾಸನ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹರಡಿದೆ.  ಈ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಪುಷ್ಪಗಿರಿ, ಕುಮಾರ ಪರ್ವತ, ಎಣ್ಣೆಕಲ್ಲು, ಪಟ್ಲ, ದೊಡ್ಡಬೆಟ್ಟ ಮತ್ತು ಕನ್ನಡಿಕಲ್ಲು ಎಂದು ಹೆಸರಿಸಲಾದ ಅನೇಕ ಬೆಟ್ಟಗುಡ್ಡಗಳಿವೆ.  ಬಿಸಲೆ ಅರಣ್ಯ ಪ್ರದೇಶದಲ್ಲಿ ತೇಗ, ಬೀಟೆ, ಅಲೆಕ್ಸಾಂಡ್ರಿಯ ಲಾರೆಲ್, ಭಾರತೀಯ ಧೂಪದ ಮರ, ಟ್ಯೂಲಿಪ್, ಮಲಬಾರ್ ಕಿನೋ, ಇನ್ನಿತರೆ ಬಹಳಷ್ಟು ಜಾತಿಯ ಬೆಲೆಬಾಳುವ ಮರಗಳು ಹೇರಳವಾಗಿ ಇವೆ.  ಆನೆಗಳು, ಕಾಡುಕೋಣಗಳು, ಜಿಂಕೆ, ಕಡವೆ, ಕಾಡುಹಂದಿ, ಇನ್ನಿತರೆ ಕಾಡುಪ್ರಾಣಿಗಳು ಹೇರಳವಾಗಿ ಸಿಗುತ್ತವೆ.  ಬಿಸ್ಲೆ ಘಾಟ್‌
ರಸ್ತೆ ಮೂಲಕ ಸಕಲೇಶಪುರದಿಂದ 35 ಕಿಲೋಮೀಟರು.

Monsoon Tourism: ಮಳೆಯ ಸಂಭ್ರಮದ ನಡುವೆ ಹಾಸನ ಪ್ರವಾಸದ ಸೊಬಗು, ಬಿಸ್ಲೆ ಘಾಟ್‌, ಗೋರೂರು ಅಣೆಕಟ್ಟೆ, ಮತ್ತೇನು ನೋಡಬಹುದು

Monday, July 8, 2024

2018ರಲ್ಲಿ ಕೆ.ಜಿ ಕಾಳುಮೆಣಸಿನ ಬೆಲೆ  ₹780ಗೆ ತಲುಪಿತ್ತು ಸೋಮವಾರ  ಕೆ.ಜಿ ಕಾಳುಮೆಣಸು  ₹660ಕ್ಕೆ ಮಾರಾಟ ಆಗಿದ್ದು 6 ವರ್ಷಗಳಲ್ಲಿ ಇದು ಗರಿಷ್ಠ ಧಾರಣೆ.

Pepper Rate: ಕರ್ನಾಟಕದ ಕಾಳು ಮೆಣಸು ಬೆಲೆಯಲ್ಲಿ ಏರಿಕೆ ಖುಷಿ, ಎಷ್ಟಿದೆ ಕೆಜಿ ಕರಿ ಮೆಣಿಸಿನ ಬೆಲೆ

Monday, June 10, 2024

ಕ್ಷುದ್ರ ರಾಜಕೀಯದಾಟಕ್ಕೆ ಹೆಣ್ಣನ್ನು ಬಳಸಬೇಡಿ. ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದಿಗೆ ಕೇಂದ್ರದ ವಿಳಂಬ ನೀತಿಯೇಕೆ ಎನ್ನುವ ಘೋಷವಾಕ್ಯದ ಪೋಸ್ಟರ್‌ ಗಳು ಹಾಸನ ಚಲೋ ಹೋರಾಟದಲ್ಲಿ ಗಮನ ಸೆಳದವು

Prajwal Revanna: ಹಾಸನದಲ್ಲಿ ಪ್ರಜ್ವಲ್‌ ವಿರುದ್ದ ಮಹಿಳಾಕ್ರೋಶ, ಬೃಹತ್‌ ಮೆರವಣಿಗೆ, ಬಂಧನಕ್ಕೆ ಹಕ್ಕೊತ್ತಾಯ

Thursday, May 30, 2024

ಹಾಸನ ಲೈಂಗಿಕ ಹಗರಣ ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೇ 31ಕ್ಕೆ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಎದುರು ವಿಚಾರಣೆಗೆ ಖುದ್ದು ಹಾಜರಾಗುವುದಾಗಿ ಘೋಷಿಸಿದ್ದಾರೆ. ಇದುವರೆಗೆ ಮರೆಯಾಗಿರುವುದಕ್ಕೆ ಖಿನ್ನತೆಯೂ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರಜ್ವಲ್ ರೇವಣ್ಣ ಕೇಸ್; ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆ, ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು

Tuesday, May 28, 2024

ತುಮಕೂರು: ಜಿಲ್ಲೆಯ ಕುಡಿಯುವ ನೀರಿನ ಜೀವನಾಡಿಯಾಗಿರುವ ಹೇಮಾವತಿ ನಾಲೆಗೆ ಪ್ರತ್ಯೇಕ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ಮಾಗಡಿ ಹಾಗೂ ರಾಮನಗರಕ್ಕೆ ನೀರು ಕೊಂಡೊಯ್ಯಲು ಕೈಗೊಂಡಿರುವ ಯೋಜನೆ  ವಿರೋಧಿಸಿ ಭಾರೀ ಪ್ರತಿಭಟನೆ ನಡೆದಿವೆ.

Ramanagar News: ಹೇಮಾವತಿ ನೀರಿಗಾಗಿ ಈಗ ತುಮಕೂರು ರಾಮನಗರದ ಜಟಾಪಟಿ, ಗದ್ದಲಕ್ಕೆ ಕಾರಣವೇನು photos

Saturday, May 18, 2024

ಚಿಕ್ಕಮಗಳೂರು ಜಿಲ್ಲೆಯ ನಿರಂತರ ಮಳೆಯೊಂದಿಗೆ ಆಲಿಕಲ್ಲು ಸುರಿದಿದ್ದರಿಂದ ಮನೆಯೊಂದರ ಅಂಗಳದಲ್ಲಿ ಕಂಡು ಬಂದ ಚಿತ್ರಣ ಹೀಗಿತ್ತು.

Karnataka Rains: ಚಿಕ್ಕಮಗಳೂರು, ತುಮಕೂರು, ಹಾಸನ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ, ಹೀಗಿತ್ತು ಚಿತ್ರಣ

Tuesday, May 7, 2024

ಇದು ಕೃಷ್ಣರಾಜಸಾಗರ ಜಲಾಶಯ, ಕಾವೇರಿ ನದಿ ಬತ್ತಿ ಹೋಗಿರುವುದರಿಂದ ಜಲಾಶಯದ ಸುತ್ತಮುತ್ತಲ ಪ್ರದೇಶ ಮೈದಾನದಂತಾಗಿದೆ.

Drought: ಭೀಕರ ಬರದ ಚಿತ್ರಣ ಸಾರುತ್ತಿವೆ ಕರ್ನಾಟಕದ ನದಿ, ಜಲಾಶಯಗಳು, ಹೀಗಿದೆ ಸ್ಥಿತಿಗತಿ photos

Sunday, April 28, 2024

ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದಿದ್ದರೆ ಸಮಸ್ಯೆಗಳ ಸರಮಾಲೆ ನಿಶ್ಚಿತವೆಂದು ಕಾಮಗಾರಿ ನೋಡಿದಾಗ ಭಾಸವಾಗುತ್ತದೆ. ದಿನಕ್ಕೆ ಸಾವಿರಾರು ವಾಹನಗಳು ಓಡಾಡುವ, ಮಂಗಳೂರಿನಿಂದ ಬೆಂಗಳೂರು, ಮೈಸೂರು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಭಾಗದ ಸುಮಾರು 2 ಕಿ.ಮೀ ರಸ್ತೆ ಮುಂದಿನ ಮಳೆಗಾಲ ಸಂದರ್ಭ ಸ್ತಬ್ಧವಾಗಬಹುದು ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಫ್ಲೈಓವರ್ ಕಾಮಗಾರಿ ನಡೆಯುವ ಜಾಗಗಳಲ್ಲಿ ಸರ್ವೀಸ್ ರಸ್ತೆಗಳು ವಾಹನ ಸಂಚಾರಕ್ಕೆಂದು ಇರುತ್ತವೆ. ಆದರೆ ಇಲ್ಲಿ ಹಾಗಲ್ಲ, ಮೇಲೆ ಕೆಲಸವಾಗುತ್ತಿದ್ದರೆ, ಅಡಿಯಲ್ಲೇ ವಾಹನಗಳು ಸಾಗುತ್ತವೆ. ಇದು ಸಮಸ್ಯೆ.

ಕಲ್ಲಡ್ಕದಲ್ಲಿ ಷಟ್ಪಥ ಫ್ಲೈಓವರ್ ಕಾಮಗಾರಿ ಸಂದರ್ಭ ಮಳೆ ಬಂದ್ರೆ ಮಂಗಳೂರು ಹಾಸನ ರಸ್ತೆ ಸಂಚಾರಕ್ಕೆ ತೊಡಕು, ಇಲ್ಲಿವೆ ಚಿತ್ರಮಾಹಿತಿ

Saturday, April 27, 2024

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿಯ ತೇಜಸ್ವಿ ಸೂರ್ಯ ಹಾಗೂ  ಮಾಜಿ ಶಾಸಕಿ, ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರ ನಡುವೆಯೇ ತುರುಸಿನ ಸ್ಪರ್ಧೆ.

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನೇರ ಹಣಾಹಣಿ, ಯಾರ ನಡುವೆ ಸ್ಪರ್ಧೆ photos

Thursday, April 25, 2024