icc News, icc News in kannada, icc ಕನ್ನಡದಲ್ಲಿ ಸುದ್ದಿ, icc Kannada News – HT Kannada

Latest icc Photos

ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತರೂ ಭಾರತ ತಂಡ ಟೆಸ್ಟ್ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲೇ ಮುಂದುವರೆದಿದೆ. ಭಾರತ 111 ರೇಟಿಂಗ್ ಅಂಕ ಹೊಂದಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ, ಭಾರತ ಟೆಸ್ಟ್ ಶ್ರೇಯಾಂಕದಲ್ಲಿ ಕುಸಿಯುವ ಸಾಧ್ಯತೆ ಇದೆ.

ಭಾರತ-ನ್ಯೂಜಿಲೆಂಡ್ ಸರಣಿ ನಂತರ ಟೆಸ್ಟ್ ರ‍್ಯಾಂಕಿಂಗ್‌; ಒಂದು ಸ್ಥಾನ ಮೇಲೇರಿದ ಕಿವೀಸ್, ಆದರೆ ಟೀಮ್ ಇಂಡಿಯಾ...

Monday, November 4, 2024

ಪಾಕಿಸ್ತಾನದ ಸ್ಟಾರ್​ ಬ್ಯಾಟರ್​ ಬಾಬರ್ ಅಜಮ್ ಅವರು ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಸೀಮಿತ ಓವರ್​​ಗಳ ಕ್ರಿಕೆಟ್​ ಜೊತೆಗೆ ಟೆಸ್ಟ್ ಕ್ರಿಕೆಟ್​​​ನಲ್ಲೂ ಅವರ ಬ್ಯಾಟ್ ಸದ್ದು ಮಾಡುತ್ತಿಲ್ಲ. ಇದು ಅವರ ಟೆಸ್ಟ್​ ರ್ಯಾಂಕಿಂಗ್ ಮೇಲೆ ಪರಿಣಾಮ ಬೀರಿದೆ.

ಏಕಾಏಕಿ 6 ಸ್ಥಾನ ಕುಸಿದ ಬಾಬರ್ ಅಜಮ್; 2 ಸ್ಥಾನ ಮೇಲೇರಿದ ವಿರಾಟ್ ಕೊಹ್ಲಿ; 6, 7, 8ನೇ ಶ್ರೇಯಾಂಕದಲ್ಲಿ ಭಾರತೀಯರು!

Thursday, August 29, 2024

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿ ಹುದ್ದೆಗೆ ಸಜ್ಜಾಗುತ್ತಿದ್ದಾರೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ನೇಮಕಗೊಳ್ಳುವ ನಿರೀಕ್ಷೆಗಳಿವೆ.

ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಯ್​ ಶಾ ಆಯ್ಕೆ ಖಚಿತ? ಜುಲೈ 19ರಂದು ನಡೆಯುವ ವಾರ್ಷಿಕ ಸಭೆಯಲ್ಲಿ ಚರ್ಚೆ

Thursday, July 18, 2024

ICC T20 Ranking: ಜಿಂಬಾಬ್ವೆ ವಿರುದ್ಧ ಭಾರತ 4-1 ಅಂತರದಲ್ಲಿ ಸರಣಿ ಜಯಿಸಿದೆ. ಮೊದಲ ಪಂದ್ಯವನ್ನು ಸೋತ ನಂತರ ಅವರು ಪುಟಿದೇಳಿದ್ದ ಭಾರತ, ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಸರಣಿಗೆ ಮುತ್ತಿಕ್ಕಿತು. ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರು ಐಸಿಸಿ ಟಿ20ಐ ಶ್ರೇಯಾಂಕದಲ್ಲಿ ಜಿಗಿತ ಕಂಡಿದ್ದಾರೆ. ಟಾಪ್​-10ರಲ್ಲೇ ಮೂವರು ಸ್ಥಾನ ಪಡೆದಿದ್ದಾರೆ.

ICC T20I Ranking: ಭಾರತೀಯರದ್ದೇ ಹವಾ, ಟಾಪ್-10ರಲ್ಲಿ ನಮ್ಮವರೇ ಮೂವರು

Wednesday, July 17, 2024

ಟಿ20 ಬ್ಯಾಟರ್​​ಗಳ ಪಟ್ಟಿಯಲ್ಲಿ ಸೂರ್ಯಕುಮಾರ್ 2ನೇ ಸ್ಥಾನ ಪಡೆದರೆ, ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್​ನ ಫಿಲ್ ಸಾಲ್ಟ್, ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.

T20I Ranking: ಅಗ್ರಸ್ಥಾನ ಕಳೆದುಕೊಂಡ ಹಾರ್ದಿಕ್ ಪಾಂಡ್ಯ, ಟಾಪ್-10ರಲ್ಲಿ ಸ್ಥಾನ ಪಡೆದ ಋತುರಾಜ್ ಗಾಯಕ್ವಾಡ್

Wednesday, July 10, 2024

ಇದೇ ವೇಳೆ ಮಹಿಳೆಯರ ವಿಭಾಗದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿ ಗೆದ್ದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಅಬ್ಬರಿಸಿದ್ದರು.

ICC POTM Award: ಐಸಿಸಿ ಜೂನ್ ತಿಂಗಳ ಪ್ರಶಸ್ತಿ ಗೆದ್ದ ಜಸ್ಪ್ರೀತ್ ಬುಮ್ರಾ, ಸ್ಮೃತಿ ಮಂಧಾನ

Tuesday, July 9, 2024

ಮೊಟ್ಟ ಮೊದಲ ಬಾರಿಗೆ ಅಫ್ಘಾನಿಸ್ತಾನ ತಂಡವನ್ನು ಟಿ20 ವಿಶ್ವಕಪ್​ ಸೆಮಿಫೈನಲ್​ಗೇರಿಸಿದ್ದ ತಮ್ಮ ದೇಶದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಶೀದ್ ಖಾನ್ ಅವರಿಗೆ ಐಸಿಸಿ ಛೀಮಾರಿ ಹಾಕಿದೆ. ಅಲ್ಲದೆ, ದಂಡವನ್ನೂ ವಿಧಿಸಿದೆ. ಆದರೆ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ಎದುರು ಸೋತು ಟೂರ್ನಿಯಿಂದ ಹೊರಬಿತ್ತು. ಇದರೊಂದಿಗೆ ಚೊಚ್ಚಲ ಟ್ರೋಫಿಯ ಕನಸು ಭಗ್ನಗೊಂಡಿತು. ಸೆಮೀಸ್​ಗೂ ಮುನ್ನ ನಡೆದ ಸೂಪರ್​-8 ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ರಶೀದ್ ತೋರಿದ ವರ್ತನೆಗೆ ಐಸಿಸಿ ಬೇಸರ ವ್ಯಕ್ತಪಡಿಸಿದೆ.

Rashid Khan: ಕೋಪದಿಂದ ಬ್ಯಾಟ್ ಎಸೆದು ದುರ್ವತನೆ ತೋರಿದ ರಶೀದ್ ಖಾನ್; ಛೀಮಾರಿ ಹಾಕಿದ ಐಸಿಸಿ

Thursday, June 27, 2024

ಎರಡನೇ ಸೆಮಿಫೈನಲ್ ಪಂದ್ಯ ಜೂನ್ 27ರಂದು ಗಯಾನಾದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಜೂನ್ 27ರಂದು ರಾತ್ರಿ 8.30ಕ್ಕೆ ಪಂದ್ಯ ಆರಂಭವಾಗಲಿದೆ. ಪಂದ್ಯವು ಮೀಸಲು ದಿನವಾಗಿದ್ದರೆ, ಅದು ಜೂನ್ 28 ರಂದು ಸ್ಥಳೀಯ ಸಮಯ ಬೆಳಿಗ್ಗೆ 10:30ಕ್ಕೆ ನಡೆಯುತ್ತಿತ್ತು. ಅಂದರೆ, ಭಾರತೀಯ ಸಮಯದ ಪ್ರಕಾರ, ಆ ದಿನ ರಾತ್ರಿ 8:30ಕ್ಕೆ ಪಂದ್ಯ ಪ್ರಾರಂಭವಾಗಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡ 29 ರಂದು ಫೈನಲ್​ನಲ್ಲಿ ಆಡಬೇಕಾಗುತ್ತದೆ.

ಇಂಡೋ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯಕ್ಕಿಲ್ಲ ರಿಸರ್ವ್ ಡೇ; ಪಂದ್ಯ ರದ್ದಾದರೆ ಫೈನಲ್​ಗೇರುವ ತಂಡ ಯಾವುದು?

Thursday, June 27, 2024

ಅಪರಾಧದ ಗಂಭೀರತೆ ಅವಲಂಬಿಸಿ, ಪಂದ್ಯದ ಶುಲ್ಕದ ಕನಿಷ್ಠ ಶೇ.50 ರಷ್ಟು ದಂಡವನ್ನು ಸಹ ವಿಧಿಸಬಹುದಾಗಿದೆ. ಇದರೊಂದಿಗೆ ಮಾರ್ಷ್, ಗರಿಷ್ಠ 4 ಡಿಮೆರಿಟ್ ಅಂಕ ಮತ್ತು 2 ಅಮಾನತು ಅಂಕಗಳೊಂದಿಗೆ ಮೊದಲ ಎರಡು ಸೂಪರ್ 8 ಪಂದ್ಯಗಳಿಂದ ಹೊರಬೀಳಬಹುದು.

Mitchell Marsh: ಸೂಪರ್-8 ಪ್ರವೇಶಿಸಿದ ಆಸ್ಟ್ರೇಲಿಯಾ ತಂಡಕ್ಕೆ ಸಂಕಷ್ಟ; ನಿಷೇಧದ ಭೀತಿಯಲ್ಲಿ ಮಿಚೆಲ್ ಮಾರ್ಷ್

Thursday, June 13, 2024

ಮಳೆಯ ನಂತರ ಪಂದ್ಯ ಪುನರಾರಂಭಗೊಂಡಿತು. ಬ್ಯಾಟಿಂಗ್‌ ನಡೆಸಿದ ಸ್ಕಾಟ್ಲೆಂಡ್ ಆರಂಭಿಕ ಆಟಟಗಾರರು ಭದ್ರ ಅಡಿಪಾಯ ಹಾಕಿಕೊಟ್ಟರು. ಪವರ್ ಪ್ಲೇ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದರು. ಸ್ಕಾಟ್ಲೆಂಡ್ 6.2 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 51 ರನ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಮಳೆಯ ನಂತರ ಆಟ ಪುನರಾರಂಭಗೊಂಡಾಗ ಓವರ್‌ಗಳನ್ನು ಕಡಿತಗೊಳಿಸಲಾಯ್ತು. ಇನ್ನಿಂಗ್ಸ್‌ಗೆ 10 ಓವರ್‌ ನಿಗದಿಪಡಿಸಲಾಯಿತು.

ಟಿ20 ವಿಶ್ವಕಪ್: ಸ್ಕಾಟ್ಲೆಂಡ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಹೆಚ್ಚಿದ ಒತ್ತಡ

Wednesday, June 5, 2024

ಭಾರತದ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾತ್ರ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು  ಶುಕ್ಲಾ ಹೇಳಿದ್ದಾರೆ. ಈ ಕುರಿತು ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಕೇಂದ್ರ ಸರ್ಕಾರದ ನಿರ್ದೇಶನದ ಮೇಲೆ ಮುಂದುವರೆಯಲಾಗುತ್ತದೆ ಎಂದು ಹೇಳಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ 2025: ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಬಹುದು, ಆದರೆ…; ಬಿಸಿಸಿಐ ಷರತ್ತು

Tuesday, May 7, 2024

ಅಂತಾರಾಷ್ಟ್ರೀಯ ಟಿ20 ಬೌಲರ್​​ಗಳ ಪಟ್ಟಿಯಲ್ಲಿ ಭಾರತದ ಅಕ್ಷರ್ ಪಟೇಲ್, 4ನೇ ಸ್ಥಾನದಲ್ಲಿದ್ದಾರೆ. ರವಿ ಬಿಷ್ಣೋಯ್ ಮತ್ತು ಶ್ರೀಲಂಕಾದ ಮಹೀಶಾ ತೀಕ್ಷಣ ಜಂಟಿ 5ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್​ ತಂಡದ ಆದಿಲ್ ರಶೀದ್ ನಂಬರ್​ 1 ಸ್ಥಾನ ಉಳಿಸಿಕೊಂಡಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ, ವೆಸ್ಟ್ ಇಂಡೀಸ್​ನ ಅಕಿಲ್ ಹೊಸೈನ್ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಅರ್ಷ್​ದೀಪ್ ಸಿಂಗ್ 21 ಮತ್ತು ಕುಲ್ದೀಪ್ ಯಾದವ್ 24ನೇ ಸ್ಥಾನದಲ್ಲಿದ್ದಾರೆ.

ಐಸಿಸಿ ಟಿ20 ನೂತನ ರ‍್ಯಾಂಕಿಂಗ್​ ಪ್ರಕಟ; ಐಪಿಎಲ್​ಗೂ ಮುನ್ನ ಭಾರತೀಯ ಆಟಗಾರರ ಶ್ರೇಯಾಂಕ ಹೇಗಿದೆ ನೋಡಿ

Wednesday, March 20, 2024

ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ಸಾಧನೆ ಮಾಡಿದ ರವಿಚಂದ್ರ‌ನ್‌ ಅಶ್ವಿನ್, ಧರ್ಮಶಾಲಾ ಟೆಸ್ಟ್‌ ಮೂಲಕ 100ನೇ ಟೆಸ್ಟ್ ಪಂದ್ಯ ಆಡಿದ ವಿಶೇಷ ಮೈಲಿಗಲ್ಲು ತಲುಪಿದರು. ಧರ್ಮಶಾಲಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದ ರವಿ, ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದರು. ಅದರ ಬೆನ್ನಲ್ಲೇ ಐಸಿಸಿ ಶ್ರೇಯಾಂಕದಲ್ಲಿಬಡ್ತಿ ಪಡೆದಿದ್ದಾರೆ. ಧರ್ಮಶಾಲಾ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್‌ ಪಡೆದ ಅಶ್ವಿನ್, ಐಸಿಸಿಯ ನಂಬರ್ ವನ್ ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ.

ಐಸಿಸಿ ಬೌಲಿಂಗ್‌ ಶ್ರೇಯಾಂಕ: ಬುಮ್ರಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಅಶ್ವಿನ್‌; ರೋಹಿತ್, ಜೈಸ್ವಾಲ್‌ಗೂ ಬಡ್ತಿ

Wednesday, March 13, 2024

ಫೆಬ್ರುವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಒಟ್ಟು ಮೂವರು ನಾಮನಿರ್ದೇಶನಗೊಂಡಿದ್ದರು. ನ್ಯೂಜಿಲ್ಯಾಂಡ್‌ ತಂಡದ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಮತ್ತು ಶ್ರೀಲಂಕಾದ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕಾ ಅವರನ್ನು ಸೋಲಿಸಿ ಯಶಸ್ವಿ ಜೈಸ್ವಾಲ್ ಈ ಪ್ರಶಸ್ತಿ ಗೆದ್ದಿದ್ದಾರೆ.

ಫೆಬ್ರುವರಿ ತಿಂಗಳಲ್ಲಿ ಅಸಾಧಾರಣ ಪ್ರದರ್ಶನ; ಕೇನ್ ವಿಲಿಯಮ್ಸನ್ ಹಿಂದಿಕ್ಕಿ ಐಸಿಸಿ ಪ್ರಶಸ್ತಿ ಪಡೆದ ಯಶಸ್ವಿ ಜೈಸ್ವಾಲ್

Tuesday, March 12, 2024

ಇದರ ನಡುವೆಯೂ ಟಿಮ್ ಸೌಥಿ ವಿಶೇಷ ದಾಖಲೆಯೊಂದನ್ನು ಬರೆದರು. ಟಿ20, ಏಕದಿನ ಮತ್ತು ಟೆಸ್ಟ್​​ ಕ್ರಿಕೆಟ್​ನಲ್ಲಿ ನೂರು ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್​​ಗಳನ್ನಾಡಿದ ವಿಶ್ವದ ನಾಲ್ಕನೇ ಆಟಗಾರ ಎಂಬ ವಿಶೇಷ ದಾಖಲೆಗೆ ಪಾತ್ರರಾದರು. ಹಾಗಾಗಿ ಸೌಥಿ ಹೊರತಾಗಿ ಎಲ್ಲಾ ಫಾರ್ಮೆಟ್​​ಗಳಲ್ಲಿ ನೂರು ಪಂದ್ಯಗಳನ್ನಾಡಿದ ಆಟಗಾರರು ಯಾರು? ಇಲ್ಲಿದೆ ವಿವರ.

ಮೂರು ಮಾದರಿಯ ಕ್ರಿಕೆಟ್​ನಲ್ಲಿ 100 ಪಂದ್ಯ ಆಡಿದ ಎಲೈಟ್ ಕ್ಲಬ್​ಗೆ ಸೇರಿದ ಟಿಮ್ ಸೌಥಿ; ಈ ದಾಖಲೆ ವಿಶ್ವದ 4ನೇ ಆಟಗಾರ

Sunday, March 10, 2024

ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಬುಧವಾರ ಐಸಿಸಿ ಏಕದಿನ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ದಾಖಲೆ ಬರೆದಿದ್ದಾರೆ. ಆ ಮೂಲಕ ನಂಬರ್ 1 ಸ್ಥಾನ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ. ಅಲ್ಲದೆ. ಶಕೀಬ್ ಅಲ್ ಹಸನ್ ಅವರ ಸುದೀರ್ಘ ಆಳ್ವಿಕೆಯನ್ನು ಅಗ್ರಸ್ಥಾನಕ್ಕೇರಿ ಕೊನೆಗೊಳಿಸಿದ್ದಾರೆ.

1,739 ದಿನಗಳ ನಂತರ ಶಕೀಬ್ ಆಳ್ವಿಕೆ ಅಂತ್ಯ; ಏಕದಿನ ನಂಬರ್ 1 ಆಲ್​ರೌಂಡರ್ ಪಟ್ಟಕ್ಕೇರಿ ದಾಖಲೆ ಬರೆದ ಮೊಹಮ್ಮದ್​ ನಬಿ

Wednesday, February 14, 2024

ಐಸಿಸಿ ಶ್ರೇಯಾಂಕದಲ್ಲಿ ಭಾರತದ ಇಬ್ಬರು ಅನುಭವಿ ಆಟಗಾರರು ವಿಶೇಷ ದಾಖಲೆ ನಿರ್ಮಿಸಿದ್ದಾರೆ. ವಿರಾಟ್‌ ದಾಖಲೆಯನ್ನು ಬುಮ್ರಾ ಪುನರಾವರ್ತಿಸಿದ್ದಾರೆ.

ಕೊಹ್ಲಿ ಬಳಿಕ ಕ್ರಿಕೆಟ್‌ನ ಎಲ್ಲಾ 3 ಸ್ವರೂಪಗಳಲ್ಲೂ ನಂಬರ್ ವನ್; ಏಷ್ಯಾದ ಮೊದಲ ಬೌಲರ್ ಎನಿಸಿಕೊಂಡ ಬುಮ್ರಾ

Wednesday, February 7, 2024

9. ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಎತ್ತರ 5.4.

ವಿಶ್ವದ ಟಾಪ್-10 ಕುಬ್ಜ ಕ್ರಿಕೆಟರ್ಸ್; ನ್ಯೂಜಿಲೆಂಡ್ ಆಟಗಾರನಿಗೆ ಅಗ್ರಸ್ಥಾನ, ಭಾರತೀಯರೇ ಹೆಚ್ಚು

Thursday, February 1, 2024

ರಾಜಕೀಯ ಹಸ್ತಕ್ಷೇಪವನ್ನು ಉಲ್ಲೇಖಿಸಿ ಐಸಿಸಿ ಕಳೆದ ವರ್ಷ ನವೆಂಬರ್‌ನಲ್ಲಿ ಶ್ರೀಲಂಕಾ ಮಂಡಳಿಯನ್ನು ಅಮಾನತುಗೊಳಿಸಿತು.

ಶ್ರೀಲಂಕಾ ಕ್ರಿಕೆಟ್‌ ಮೇಲಿನ ಅಮಾನತು ಶಿಕ್ಷೆ ತೆರವುಗೊಳಿಸಿದ ಐಸಿಸಿ

Monday, January 29, 2024

ವಿರಾಟ್ ಕೊಹ್ಲಿ ಈವರೆಗೆ ಬರೋಬ್ಬರಿ 10 ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರೊಂದಿಗೆ 5 ಬಿಸಿಸಿಐ ಪ್ರಶಸ್ತಿಗಳು ಹಾಗೂ 3 ಐಸಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ‌. ಇದರೊಂದಿಗೆ 12 ಐಸಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳನ್ನು ಪಡೆಯುವ ಮೂಲಕ, ಪ್ರಶಸ್ತಿಗಳ ಸರದಾರನಾಗಿದ್ದಾರೆ.

10 ಐಸಿಸಿ ಪ್ರಶಸ್ತಿ, 5 ಬಿಸಿಸಿಐ ಪ್ರಶಸ್ತಿ; ದಾಖಲೆಗಳ ಸರದಾರ ವಿರಾಟ್ ಕೊಹ್ಲಿಗೆ ಒಲಿದ ಪ್ರಶಸ್ತಿಗಳು ಒಂದೆರಡಲ್ಲ

Sunday, January 28, 2024