Latest north karnataka Photos

ನರೇಗಾ ಕಾರ್ಮಿಕರು ಉತ್ಸಾಹದಿಂದ ಮತದಾನದ ಕರ್ತವ್ಯ ನಿಭಾಯಿಸಿ ನಂತರ ತಮ್ಮ ಎಂದಿನ ಕಾಯಕ ಮುಂದುವರೆಸುವ ಮೂಲಕ ಮಾದರಿಯಾದರು. ನಿಡಗುಂದಿ ತಾಲೂಕಿನ ಹೆಬ್ಬಾಳ, ಯಲಗೂರ, ಬೀರಲದಿನ್ನಿಮ, ಬಳಬಟ್ಟಿ ಮೊದಲಾದ ಗ್ರಾಮಗಳಲ್ಲಿ ನೊಂದಾಯಿತ ನರೇಗಾ ಕಾರ್ಮಿಕರು ಬೆಳಿಗ್ಗೆಯೇ ಮತದಾನ ಕೇಂದ್ರಕ್ಕೆ ತೆರಳಿ ಸಂಭ್ರಮದಿಂದ ಮತಚಲಾಯಿಸಿದರು. ನಂತರ ಎಂದಿನಂತೆ ತಮ್ಮ ಕರ್ತವ್ಯಕ್ಕೆ ಸ್ವಯಂಪ್ರೇರಿತವಾಗಿ ಕೆಲಸಕ್ಕೆ ಹಾಜರಾಗಿ ಗಮನ ಸೆಳೆದಿದ್ದು ವಿಶೇಷವಾಗಿತ್ತು.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ 2ನೇ ಹಂತದ ಮತದಾನ, ಗುಮ್ಮಟ ನಗರಿ ವಿಜಯಪುರದಲ್ಲಿ ಮುಗಿಲು ಮುಟ್ಟಿದ ಮತದಾರರ ಸಂಭ್ರಮ- ಚಿತ್ರನೋಟ

Wednesday, May 8, 2024

ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಕಂದ ಸಾತ್ವಿಕ್‌ ಮುಜುಗೊಂಡ (ಎಡಚಿತ್ರ); ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ವಿಷಯ ತಿಳಿದ ಕೂಡಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ಶುರುಮಾಡಿದ್ದಾರೆ. ರಾತ್ರಿಯೂ ರಕ್ಷಣಾ ಕಾರ್ಯ ಮುಂದುವರಿದಿತ್ತು.

ಕರ್ನಾಟಕದ ಘೋರ ದುರಂತ; ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಕಂದ ಸಾತ್ವಿಕ್‌, ರಕ್ಷಣಾಕಾರ್ಯದ ಫೋಟೋಸ್‌

Thursday, April 4, 2024

32 ಜನ ಕ್ರೀಡಾಟಪಟುಗಳು ಕಲಬುರಗಿ ಓಪನ್ ಕಿರೀಟಕ್ಕಾಗಿ ಜಿದ್ದಾಜಿದ್ದಿನ ಆಟಕ್ಕಿಳಿದಿದ್ದಾರೆ. 8 ಆಟಗಾರರು ಕ್ವಾಲಿಫೈಯರ್ ಪಂದ್ಯವಾಡಿ ಪ್ರಮುಖ ಘಟಕ್ಕೆ ತಲುಪಿದರೆ, 20 ಜನ ಅಟಗಾರರು ಐಟಿಎಫ್ ಶ್ರೇಯಾಂಕ ಮತ್ತು 4 ಜನ ವೈಲ್ಡ್ ಕಾರ್ಡ್ ಪಡೆದು ಮುಖ್ಯ ಪಂದ್ಯಗಳಿಗೆ ನೇರಪ್ರವೇಶ ಪಡೆದಿದ್ದಾರೆ.

Photos: ಐಟಿಎಫ್ ಕಲಬುರಗಿ ಓಪನ್ ಪುರುಷರ ಟೆನಿಸ್ ಕ್ರೀಡಾಕೂಟಕ್ಕೆ ಚಾಲನೆ

Tuesday, November 28, 2023

ನರೇಗಲ್ಲ ಪಟ್ಟಣದ ಜನರು ದೇವರ ಆರಾಧನೆ ಜತೆಗೆ ವಿಶಿಷ್ಟ ಜನಪದ ನೃತ್ಯದ ಮೂಲಕ ದೇವಿಯ ಆರಾಧನೆಗೂ ಮಾಡುತ್ತಾರೆ. ದೇವಿ ಮತ್ತು ರಾಕ್ಷಸರ ನಡುವೆ ನಡೆಯುವ ಹೋರಾಟವನ್ನು ಸೋಗಿನ ಮೂಲಕ ಪ್ರದರ್ಶನ ನೀಡಲಾಗುತ್ತಿದೆ. ಇದನ್ನು ‘ಕಡಬಡ ಸೋಗು’ ಎಂದು ಕರೆಯಲಾಗುತ್ತದೆ. ಗದಗ ಜಿಲ್ಲೆ ಬಿಟ್ಟರೆ ಈ ‘ಕಡಬಡ ಸೋಗು’ ರಾಜ್ಯದ ಬೇರೆಡೆ ಎಲ್ಲಿಯೂ ಕಾಣ ಸಿಗುವುದಿಲ್ಲ. ಶ್ರಾವಣ ಮಾಸದಲ್ಲಿ ಅದರಲ್ಲೂ ಮುಂಗಾರು ಮಳೆ ಬಾರದಿದ್ದಾಗ ನಡೆಯುವ ಪ್ರದರ್ಶನದ ಉತ್ಸವ ವಿಶೇಷ ಎನಿಸಿದೆ.

ಶ್ರಾವಣದ ಕಡಬಡ ಸೋಗು, ಗದಗ ಜಿಲ್ಲೆ ನರೇಗಲ್‌ ಬಿಟ್ಟು ಬೇರೆಲ್ಲೂ ಕಾಣ ಸಿಗದ ವಿಶಿಷ್ಟ ಆಟ, ಇಲ್ಲಿದೆ ಸಚಿತ್ರ ವರದಿ

Monday, September 11, 2023

ನರೇಂದ್ರ ಮೋದಿ ಸರ್ಕಾರಕ್ಕೆ ತಾಕತ್ತಿದ್ದರೆ ದೇಶದೆಲ್ಲೆಡೆ ಗ್ಯಾರಂಟಿ ಯೋಜನೆ ಜಾರಿಗೆ ತರಲಿ ಎಂದು ಸಿಎಂ ಸಿದ್ದರಾಮಯ್ಯ ಅಬ್ಬರದ ಭಾಷಣ ನಡೆಸಿದರು.

Gruha Jyothi: ಕಲಬುರಗಿಯಲ್ಲಿ ಸಿದ್ದರಾಮಯ್ಯ-ಮಲ್ಲಿಕಾರ್ಜುನ ಖರ್ಗೆ ಹವಾ; ಗೃಹ ಜ್ಯೋತಿಗೆ ಚಾಲನೆ ನೀಡಿ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ

Saturday, August 5, 2023

ಆಲಮಟ್ಟಿ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು ಎಲ್ಲಾ ಗೇಟ್‌ಗಳಿಂದ ಬಿಡಲಾಗುತ್ತಿದೆ.

Alamatti Dam: ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ, ತುಂಬಿದ ಆಲಮಟ್ಟಿಯಿಂದ ಭಾರೀ ನೀರು ಹೊರಕ್ಕೆ: ಹೀಗಿದೆ ಜಲವೈಭವದ ಚಿತ್ರಾವಳಿ

Thursday, July 27, 2023

ಕೃಷ್ಣಾ ಮಲಪ್ರಭಾ ನದಿಗಳ ಸಂಗಮ ಸ್ಥಳದಲ್ಲಿ ನೀರಿನ ಪ್ರವಾಹದಿಂದ ಕೂಡಲಸಂಗಮದ ನೋಟ.

Kudala Sangama: ಆಲಮಟ್ಟಿಯಿಂದ ಭಾರೀ ನೀರು ಹೊರಕ್ಕೆ: ಕೃಷ್ಣಾ ನದಿ ತುಂಬಿ ಕೂಡಲಸಂಗಮಕ್ಕೆ ಬಂತು ಜೀವ ಕಳೆ

Wednesday, July 26, 2023

ಗ್ರಾಮದಲ್ಲಿ ಕಪ್ಪೆಗಳ ವಿಶೇಷ ಮದುವೆಗೆ ಎರಡ್ಮೂರು ದಿನಗಳ ಮೊದಲೇ ತಯಾರಿ ನಡೆದಿತ್ತು. ಹೆಣ್ಣಿನ ಕಡೆಯವರು, ಗಂಡಿನ ಕಡೆಯವರನ್ನು ಮೊದಲೇ ಗುರುತಿಸಲಾಗಿತ್ತು. ಪೆಂಡಾಲ್, ಅಡುಗೆ ಸಾಮಗ್ರಿ, ಹಾಡುಗಳಿಗಾಗಿ ಮೈಕನವರಿಗೆ ತಿಳಿಸಲಾಗಿತ್ತು. ಭೋಜನ ವ್ಯವಸ್ಥೆಗಾಗಿ ಕೆಲವರಿಗೆ ಜವಾಬ್ದಾರಿ ಕೂಡ ನೀಡಲಾಗಿತ್ತು. ಒಟ್ಟಾರೆ ಎಲ್ಲವೂ ಸಂಪ್ರದಾಯದಂತೆ ಅಚ್ಚುಕಟ್ಟಾಗಿ ನಿರ್ವಹಿಸಲು ಹಿರಿಯರು ಕಟ್ಟಾಳು ಆಗಿ ನಿಂತಿದ್ದರು. ಮಹಿಳೆಯರು, ಮಕ್ಕಳಾದಿಯಾಗಿ ಎಲ್ಲರೂ ನಿಂತು ಅದ್ಧೂರಿಯಾಗಿ ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು.

Dharwad News: ಊರಿನವರೇ ಹಣ ಹೊಂದಿಸಿ, ಹೆಣ್ಣು, ಗಂಡಿನವರಾಗಿ ಮಳೆಗಾಗಿ ಮಾಡಿಸಿದ್ದಾರೆ ಜೋಡಿ ಕಪ್ಪೆ ಮದುವೆ; ಫೋಟೋಸ್‌ ನೋಡಿ

Saturday, June 10, 2023

ಸಮಸ್ಯೆ ಬಂದಾಗ ವ್ಯಕ್ತಿಗಳು ಆತ್ಮವಿಶ್ವಾಸ ಕಳೆದುಕೊಳ್ಳದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಲು ಮುಂದಾಗಬೇಕು. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಜಿ ಶಾಂತಿ ಅವರು ಹೇಳಿದರು. ಅವರು ಗುರುವಾರ ಗುರುವಾರ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ನಿಮಿತ್ತದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

World Suicide Prevention Day 2022: ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಕೂಡ ಅಷ್ಟೆ ಮುಖ್ಯ - ನ್ಯಾಯಾಧೀಶೆ ಕೆ.ಜಿ.ಶಾಂತಿ

Thursday, September 22, 2022

Wednesday Webinar - ಜ್ಞಾನ ದೀಪ:  ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೊಂದು ಜೀವನ ಪಾಠ ಎಂಬ ಶೀರ್ಷಿಕೆಯಡಿ ಆನ್‌ಲೈನ್ ವೆಬಿನಾರಗಳನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಧಾರವಾಡ ಸಂಘಟಿಸುತ್ತಿದೆ. ಸೆಪ್ಟೆಂಬರ್ 21ರ ಬುಧವಾರದಂದು ನಡೆದ ಬೆಂಗಳೂರಿನ ಡಾ. ನಂದಿನಿ ಲಕ್ಷ್ಮಿಕಾಂತ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದು, ಟೀನ್ -ಏಜ್ ನಿರ್ವಹಣೆ ಹೇಗೆ? ಎಂಬ ವಿಷಯದ ಮೇಲೆ ಹಲವಾರು ಅಂಶಗಳನ್ನು ತಿಳಿಯ ಪಡಿಸಿದರು.

SVYM Jnanadeepa: ಟೀನೇಜ್‌ ನಿರ್ವಹಣೆ ಹೇಗೆ?; ಮಕ್ಕಳಿಗೆ ಅರಿವು ಮೂಡಿಸಿದ ಕಾರ್ಯಕ್ರಮ

Thursday, September 22, 2022

ಇಂದು ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದರು. ಬೆಂಗೇರಿಯಲ್ಲಿರುವ ರಾಷ್ಟ್ರ ಧ್ವಜ ತಯಾರಿಸುವ ಕೇಂದ್ರಕ್ಕೆ ರಾಹುಲ್‌ ಭೇಟಿ ನೀಡಿದರು. ದೇಶದಲ್ಲಿ ಬಿಐಎಸ್ ಮಾನ್ಯತೆ ಪಡೆದ ಏಕೈಕ ಕೇಂದ್ರ ಇದಾಗಿದ್ದು, ಇಲ್ಲಿನ ಸಿಬ್ಬಂದಿ ಜತೆಗೆ ಚರ್ಚೆ ನಡೆಸಿದ್ದಾರೆ.

Hubballi: ಬೆಂಗೇರಿಯ ರಾಷ್ಟ್ರಧ್ವಜ ತಯಾರಿಕಾ ಕೇಂದ್ರಕ್ಕೆ ರಾಹುಲ್‌ ಭೇಟಿ; ಫೋಟೋಗಳು ಇಲ್ಲಿವೆ

Wednesday, August 3, 2022

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ “ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ”ದ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗವೀಪುರಂ ಶ್ರೀ ಗೋಸಾಯಿ ಮಹಾಸಂಸ್ಥಾನದ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ, ಸಚಿವ ಡಾ ಅಶ್ವತ್ಥ್ ನಾರಾಯಣ, ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಎಂ.ಜಿ. ಮುಳೆ ಹಾಗೂ ಇತರರು ಉಪಸ್ಥಿತರಿದ್ದರು.

KMCDCL Inaugurated: ಮರಾಠ ನಿಗಮ ಉದ್ಘಾಟಿಸಿದ ಸಿಎಂ; ಕಾರ್ಯಕ್ರಮದ ಫೋಟೋ ಝಲಕ್‌ ಇಲ್ಲಿದೆ

Tuesday, July 19, 2022

ಹುಬ್ಬಳ್ಳಿಯ ಉಣಕಲ್‌ ಕೆರೆ ಸಮೀಪದ ಹೋಟೆಲ್‌ ರಿಸೆಪ್ಶನ್‌ನಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ರಕ್ತದ ಮಡುವಿನಲ್ಲಿ ಬಿದ್ದ ಸರಳವಾಸ್ತು ಚಂದ್ರಶೇಖರ ಗುರೂಜಿ ಅವರನ್ನು ಕೂಡಲೇ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟು ಹೊತ್ತಿಗೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Chandrasekhar guruji Death: ಹತ್ಯೆ ನಡೆದ ಸ್ಥಳದ ಸಿಸಿಟಿವಿ ದೃಶ್ಯ ಬಹಿರಂಗ

Tuesday, July 5, 2022

ಹುಬ್ಬಳ್ಳಿಯಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರ ಶೇಖರ್‌ ಗುರೂಜಿ ಅವರು ತಂಗಿದ್ದ ಹೋಟೆಲ್‌ನಲ್ಲಿ  ಬಿಗಿ ಪೊಲೀಸ್‌ ಬಂದೋಬಸ್ತ್‌

Chandrasekhar guruji Death: ಸರಳವಾಸ್ತು ಗುರೂಜಿ ಹತ್ಯೆ ನಡೆದ ಸ್ಥಳದ ಫೋಟೋಸ್‌ ಇಲ್ಲಿವೆ

Tuesday, July 5, 2022