Latest space technology Photos

ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುವನಂತಪುರಂನ ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್ಎಸ್ಸಿ) ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾದ ಗಗನಯಾನದ ಭಾಗವಾಗಲಿರುವ ನಾಲ್ವರು ಗಗನಯಾತ್ರಿಗಳ  ಹೆಸರನ್ನು ಘೋಷಿಸಿದರು. ಈ ಮಿಷನ್ ಅನ್ನು 2024-25ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಇಸ್ರೋ ಗಗನಯಾನ; ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾತ್ರೆಗೆ ಸಜ್ಜಾದ್ರು 4 ಗಗನಯಾತ್ರಿಗಳು; ಹೆಸರು ಘೋಷಿಸಿದ ಪ್ರಧಾನಿ ಮೋದಿ

Tuesday, February 27, 2024

ಚಂದಮಾಮನ ಚಂದ ಚಂದದ ಫೋಟೋಗಳನ್ನು ಕಳುಹಿಸಿದೆ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, ಇದು ಅಮೆರಿಕದ ಖಾಸಗಿ ಕಂಪನಿ ಇಂಟ್ಯೂಟಿವ್‌ ಮಷಿನ್ಸ್‌ನ ಕಾರ್ಗೋ ಲ್ಯಾಂಡರ್. ಈ ಒಡಿಸ್ಸಿಯಸ್, ವಾರಾಂತ್ಯದಲ್ಲಿ ಚಂದ್ರನ ಮೇಲ್ಮೈಯಿಂದ ಅದು ತೆಗೆದ ಚಂದ್ರನ ಮೊದಲ ಚಿತ್ರಗಳನ್ನು ತೆಗೆದಿತ್ತು. ಆ ಚಿತ್ರಗಳು ಆಕರ್ಷಕವಾಗಿವೆ ಇಲ್ನೋಡಿ.

ಚಂದಮಾಮನ ಚಂದ ಚಂದದ ಫೋಟೋಗಳನ್ನು ಕಳುಹಿಸಿದೆ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, ಇಲ್ನೋಡಿ

Tuesday, February 27, 2024

ಮಂಗಳಯಾನ-2 ಮಿಷನ್ ಎಂಬ ಮಾರ್ಸ್ ಆರ್ಬಿಟರ್ ಮಿಷನ್‌ ಜಾರಿಗೊಳಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೆಲಸ ಮಾಡುತ್ತಿದೆ. ವರದಿಗಳ ಪ್ರಕಾರ, ಈ ಮಿಷನ್ ಹಿಂದಿನ ಮಂಗಳಯಾನದಂತೆಯೇ ಕಕ್ಷೆಯಿಂದಲೇ ಮಂಗಳನ ಕುರಿತಾದ ಅಧ್ಯಯನಗಳನ್ನು ನಡೆಸುತ್ತದೆ.

Mangalyaan-2: ಕುತೂಹಲ ಕೆರಳಿಸಿದೆ ಇಸ್ರೋದ ಮಂಗಳಯಾನ 2 ಯೋಜನೆ, ಇಲ್ಲಿದೆ ಕೆಲವು ಮುಖ್ಯ ಅಂಶ

Tuesday, November 7, 2023

ಸಹಯೋಗದ ಮೂನ್‌ ಮಿಷನ್: ಮಹತ್ವದ ಚಂದ್ರನ ಪರಿಶೋಧನಾ ಕಾರ್ಯಾಚರಣೆಗಾಗಿ ಜಪಾನ್ ಮತ್ತು ಭಾರತವು ಜತೆಯಾಗಿವೆ, ಇದು 2026 ರಲ್ಲಿ ಉಡಾವಣೆಯಾಗುವ ನಿರೀಕ್ಷೆ ಇದೆ. ಈ ಮೂನ್‌ ಮಿಷನ್‌ಗೆ ಚಂದ್ರಯಾನ-4 ಮಿಷನ್ ಎಂದು ಹೆಸರಿಸಲಾಗಿದೆ, ಆದರೂ ನಿಜವಾದ ಹೆಸರು LUPEX ಮಿಷನ್‌. ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (JAXA) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಡುವೆ 2019 ರಲ್ಲಿ ಪ್ರಾರಂಭವಾದ ಈ ಪಾಲುದಾರಿಕೆಯು ಕೆಲವು ಗುರಿಗಳನ್ನು ಹೊಂದಿದೆ. ಚಂದ್ರಯಾನ-4 ಮಿಷನ್ ಉದ್ದೇಶಗಳ ಪೈಕಿ ಚಂದ್ರನ ದಕ್ಷಿಣ ಧ್ರುವದ ಅನ್ವೇಷಣೆಯನ್ನು ಒಳಗೊಂಡಿವೆ. ಇಸ್ರೋ ಚಂದ್ರನ ಲ್ಯಾಂಡರ್ ಅನ್ನು ನಿರ್ಮಿಸುತ್ತದೆ. ಚಂದ್ರಯಾನ -4 ಮಿಷನ್ ಉಡಾವಣೆಯ ಮೇಲ್ವಿಚಾರಣೆಯನ್ನು ಜಕ್ಸಾ ಮಾಡುತ್ತದೆ ಮತ್ತು ಚಂದ್ರನ ರೋವರ್ ಅನ್ನು ಒದಗಿಸುತ್ತದೆ.

Chandrayaan-4: ಅಂತಾರಾಷ್ಟ್ರೀಯ ಸಹಯೋಗದಲ್ಲಿ ನಡೆಯಲಿದೆ ಚಂದ್ರಯಾನ 4 ಮಿಷನ್‌, ಇಲ್ಲಿದೆ ಫೋಟೋ ವರದಿ

Saturday, October 14, 2023

ಚಂದ್ರಯಾನ-3 ಮಿಷನ್‌ನ ಐತಿಹಾಸಿಕ ಯಶಸ್ಸಿನ ನಂತರ, ಭಾರತವು ಮಂಗಳ ಗ್ರಹಕ್ಕೆ ಎರಡನೇ ಮಹತ್ವದ ಯೋಜನೆ ಕೈಗೊಳ್ಳಲು ಸಜ್ಜಾಗಿದೆ. ಇದು ಮಂಗಳಯಾನ-2 ಮಿಷನ್. ಇಸ್ರೋ ಈಗಾಗಲೇ 2014 ರಲ್ಲಿ ತನ್ನ ಚೊಚ್ಚಲ ಮಾರ್ಸ್ ಆರ್ಬಿಟರ್ ಮಿಷನ್‌ನೊಂದಿಗೆ ಇತಿಹಾಸವನ್ನು ನಿರ್ಮಿಸಿದೆ. ಮಂಗಳಯಾನ-2 ಮಿಷನ್ ಉದ್ದೇಶ ಮತ್ತು ಇತರೆ ವಿವರ ಹೀಗಿದೆ.

Mangalyaan-2: ಮಂಗಳಯಾನ 2ಕ್ಕೆ ಸಜ್ಜಾಗುತ್ತಿದೆ ಇಸ್ರೋ, 5 ಫೋಟೋಗಳೊಂದಿಗೆ ಉದ್ದೇಶ ಮತ್ತು ಇತರೆ ವಿವರ

Friday, October 13, 2023

ಆದಿತ್ಯ ಎಲ್‌-1 ನೌಕೆ ಅಂತರಿಕ್ಷಕ್ಕೆ ಜಿಗಿದ ಕ್ಷಣ

Aditya L1: ಫೋಟೋಗಳಲ್ಲಿ ನೋಡಿ ಆದಿತ್ಯ ಎಲ್‌-1 ನೌಕೆ ಅಂತರಿಕ್ಷಕ್ಕೆ ಜಿಗಿದ ಕ್ಷಣವನ್ನು..

Saturday, September 2, 2023

ಭಾರತವು ತನ್ನ ಮೊದಲ ಸೌರ ಮಿಷನ್ ಆದಿತ್ಯ-L1 ಅನ್ನು ನಾಳೆ (ಸೆ.2) ಉಡಾವಣೆ ಮಾಡಲು ಸಿದ್ಧವಾಗಿದೆ. ಸೂರ್ಯನ ಕುರಿತು ಅಧ್ಯಯನ ಮಾಡುವುದು ಈ ಕಾರ್ಯಾಚರಣೆಯ ಗುರಿಯಾಗಿದೆ. ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಎಜೆಕ್ಷನ್, ಪ್ರೀ-ಫ್ಲೇರ್ ಮತ್ತು ಫ್ಲೇರ್ ಚಟುವಟಿಕೆಗಳು ಮತ್ತು ಅವುಗಳ ಗುಣಲಕ್ಷಣಗಳು, ಬಾಹ್ಯಾಕಾಶ ಹವಾಮಾನದ ಡೈನಾಮಿಕ್ಸ್ ಮತ್ತು ಕಣಗಳು ಮತ್ತು ಕ್ಷೇತ್ರಗಳ ಪ್ರಸರಣ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಆದಿತ್ಯ L1 ನಿರ್ಣಾಯಕ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ.

Aditya-L1 launch: ಇಸ್ರೋ ಆದಿತ್ಯ ಎಲ್‌ 1 ಮಿಷನ್ ಉಡಾವಣೆಗೆ ಕೌಂಟ್‌ ಡೌನ್ ಶುರು, ನಾಳೆ ಬೆಳಗ್ಗೆ 11.50ಕ್ಕೆ ಲಾಂಚ್‌

Friday, September 1, 2023

Asteroid 2023 QH:  ಆಸ್ಟ್ರಾಯ್ಡ್‌ 2023  ಕ್ಯೂಎಚ್‌ ಎಂಬ ಕ್ಷುದ್ರಗ್ರಹವು ಇಂದು ಭೂಮಿಯ ಸನಿಹಕ್ಕೆ ಬರಲಿದೆ ಎಂದು ನಾಸಾದ ಜೆಪಿಎಲ್‌ ಕಂಡುಕೊಂಡಿದೆ. ಇದು ಗಾತ್ರದಲ್ಲಿ ಸುಮಾರು 200ಅಡಿ ಇರಲಿದೆ. ಇದು ಭೂಮಿಯತ್ತ ಗಂಟೆಗೆ 57,259 ಕಿ.ಮೀ. ವೇಗದಲ್ಲಿ ಆಗಮಿಸುತ್ತಿದೆ. ಇದು ಭೂಮಿಯ 4.6 ದಶಲಕ್ಷ ಸಮೀಪಕ್ಕೆ ಆಗಮಿಸಲಿದೆ. ಇದರ ಸಣ್ಣ ಗಾತ್ರದಿಂದಾಗಿ ಅತ್ಯಧಿಕ ವೇಗದಲ್ಲಿ ಬರಲಿದೆ. ಇದು ವಿಮಾನದಂತೆ ವೇಗವಾಗಿ ಬರಲಿದ್ದು, ಎಲ್ಲಾದರೂ ಭೂಮಿಗೆ ಅಪ್ಪಳಿಸಿದರೆ ದೊಡ್ಡ ನಗರವೊಂದನ್ನು ನಾಶಪಡಿಸುವ ಸಾಮರ್ಥ್ಯವಿದೆ.

NASA News: ಮುಂದಿನ 48 ಗಂಟೆಗಳಲ್ಲಿ ಭೂಮಿಯತ್ತ 5 ಕ್ಷುದ್ರಗ್ರಹಗಳು, ಅವುಗಳಲ್ಲಿ ಒಂದು ರಾಕ್ಷಸ ಗಾತ್ರದ ಕ್ಷುದ್ರಗ್ರಹ, ನಾಸಾದಿಂದ ಮಾಹಿತಿ

Thursday, August 31, 2023

Aditya L1 Launch Date: ಇದೇ ಸೆಪ್ಟೆಂಬರ್‌ 2ರಂದು ಭಾರತದ ಮೊದಲ ಸೌರ ಮಿಷನ್‌ ಆದಿತ್ಯ ಎಲ್‌1 ನಭಕ್ಕೆ ನೆಗೆಯಲಿದೆ. ಈ ಆದಿತ್ಯ ಎಲ್‌1 ಅನ್ನು ಲಾಂಚ್‌ ಪ್ಯಾಡ್‌ನಲ್ಲಿ ಸಜ್ಜುಗೊಳಿಸಲಾಗುತ್ತಿದೆ.  ಇದೇ ಶುಕ್ರವಾರ ಆದಿತ್ಯ ಎಲ್‌1 ನಭಕ್ಕೆ ನೆಗೆಯಲಿದೆ. ಸುಮಾರು ನಾಲ್ಕು ತಿಂಗಳು, 1.5 ದಶಲಕ್ಷ ಕಿಲೋಮೀಟರ್‌ ಪ್ರಯಾಣಿಸಿದ ಬಳಿಕ ಸೂರ್ಯನ ಸಮೀಪ ತಲುಪಲಿದೆ.

Solar mission: ಭಾರತದ ಸೂರ್ಯ ಶಿಕಾರಿ, ಆದಿತ್ಯ ಎಲ್‌1ನ ಚಿತ್ರಗಳನ್ನು ಹಂಚಿಕೊಂಡ ಇಸ್ರೋ, ನಭಕ್ಕೆ ನೆಗೆಯಲು ರಾಕೆಟ್‌ ಸಜ್ಜು

Wednesday, August 30, 2023

ಈ ಸೂಪರ್‌ಮೂನ್‌ ಹೆಸರು ನೀಲಿ ಚಂದಿರ. ಆದರೆ, ಇದು ನೀಲಿ ಬಣ್ಣದಲ್ಲಿ ಕಾಣಿಸದು. ಭೂಮಿಯಿಂದ  ನೋಡುವಾಗ ಇದು ದೊಡ್ಡ ಗಾತ್ರದಲ್ಲಿ ಕಾಣಿಸಲಿದೆ.

Super Blue Moon: ಆಗಸದಲ್ಲಿ ಇಂದು ನೀಲಿ ಚಂದಿರ, ಸೂಪರ್‌ ಬ್ಲೂ ಮೂನ್‌ ಕುರಿತಾದ 7 ಸೋಜಿಗದ ಸಂಗತಿಗಳು

Tuesday, August 29, 2023

ಚಂದ್ರನ ಮೇಲೆ ಚಂದ್ರಯಾನ-3 ಇಳಿದ ಸ್ಥಳವನ್ನು 'ಶಿವಶಕ್ತಿ' ಎಂದು ಕರೆಯಲಾಗುವುದು. ಅದೇ ರೀತಿ 2019 ರಲ್ಲಿ ಚಂದ್ರಯಾನ-2 ಚಂದ್ರನ ಮೇಲ್ಮೈಯಲ್ಲಿ ಕ್ರ್ಯಾಶ್-ಲ್ಯಾಂಡ್ ಆದ ಸ್ಥಳವನ್ನು 'ತಿರಂಗಾ' ಎಂದು ಹೆಸರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದರು.“ಇದು ಭಾರತ, ಇದು ಹೊಸತನದೊಂದಿಗೆ ಮತ್ತು ಅನನ್ಯವಾಗಿ ಯೋಚಿಸುತ್ತದೆ. ಈ ಭಾರತ ಕತ್ತಲೆಯ ಲೋಕಗಳಿಗೆ ಹೋಗುತ್ತದೆ ಮತ್ತು ಬೆಳಕನ್ನು ಹರಡುವ ಮೂಲಕ ಜಗತ್ತನ್ನು ಬೆಳಗಿಸುತ್ತದೆ” ಎಂದು ಪ್ರಧಾನಿ ಮೋದಿ ಬೆಂಗಳೂರಿನ ಇಸ್ರೋ ಕಮಾಂಡ್ ಸೆಂಟರ್‌ನಲ್ಲಿ ಹೇಳಿದರು.

ಚಂದಮಾಮನ ಅಂಗಳದ ಸೈಟ್‌ಗಳಿಗೆ ಹೆಸರಿಡುವುದು ಹೇಗೆ? ಮಾನದಂಡಗಳ ವಿವರ ಹೀಗಿದೆ ನೋಡಿ

Monday, August 28, 2023

ಚಂದ್ರಯಾನ 3, ವಿಶ್ವ ಬಾಹ್ಯಾಕಾಶ ವಿಜ್ಞಾನದ ಇತಿಹಾಸದಲ್ಲಿ ಮೊದಲ ಬಾರಿಗೆ, ಚಂದ್ರನ ದಕ್ಷಿಣ ಧ್ರುವದ ಮಣ್ಣನ್ನು ಅದರ ಮೇಲ್ಮೈ ಕೆಳಗೆ 10 ಸೆಂ.ಮೀ. ಕೆಳಗಿನ ತಾಪಮಾನದ ವ್ಯತ್ಯಾಸವನ್ನು ವಿವರಿಸಿದೆ. ಇಸ್ರೋದ ಚಂದ್ರಯಾನ ಆಗಸ್ಟ್ 23 ರಂದು ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಾಲ್ಕು ದಿನಗಳ ನಂತರ, ಚಂದ್ರಯಾನ 3 ಹಂಚಿಕೊಂಡ ಮೊದಲ ಅವಲೋಕನಗಳನ್ನು ಇಸ್ರೋ ಭಾನುವಾರ  ಶೇರ್ ಮಾಡಿದೆ.

ಚಂದ್ರಯಾನ 3 ಕಳುಹಿಸಿದೆ ಚಂದ್ರನ ದಕ್ಷಿಣ ಧ್ರುವದ ಮಣ್ಣಿನ ವಿವರ; ಜಗತ್ತಿಗೇ ಇದು ಮೊದಲ ಮಾಹಿತಿ

Sunday, August 27, 2023

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಪ್ರಜ್ಞಾನ್ ರೋವರ್ ಚಂದ್ರಯಾನ -3 ವಿಕ್ರಮ್ ಲ್ಯಾಂಡರ್‌ನಿಂದ ಹೊರಹೋಗುವ ಮತ್ತು ಚಂದ್ರನ ಮೇಲ್ಮೈಯಲ್ಲಿ ನಡೆಯುವ ವಿಡಿಯೋವನ್ನು ಶೇರ್ ಮಾಡಿದೆ. ಕೆಲವು ಫೋಟೋಗಳನ್ನೂ ಹಂಚಿಕೊಂಡಿದೆ.

Chandrayaan-3: ಹೀಗಿದೆ ನೋಡಿ ಚಂದ್ರನ ಅಂಗಳ; ಇಸ್ರೋ ಶೇರ್ ಮಾಡಿದ ಚಂದಮಾಮನ ಫೋಟೊಗಳು

Friday, August 25, 2023

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತು ಇಸ್ರೋ ವಿಜ್ಞಾನಿಗಳ ಬಗ್ಗೆ ಇನ್ನಿಲ್ಲದ ಕುತೂಹಲ. ಅನೇಕರಿಗೆ ಅವರು ಪ್ರೇರಣೆ ಕೂಡ. ಚಂದ್ರಯಾನದ ಸಕ್ಸಸ್‍ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಕಲಾವಿದ ಅಜಿತ್ ಕೌಂಡಿನ್ಯ ತಮ್ಮದೇ ಆದ ರೀತಿಯಲ್ಲಿ ವಿಜ್ಞಾನಿಗಳಿಗೆ ಕಲಾಕುಂಚದ ಗೌರವ ಸಲ್ಲಿಸಿದ್ದಾರೆ. ಅವರು ಬಿಡಿಸಿದ ವಿಜ್ಞಾನಿಗಳ ಕ್ಯಾರಿಕೇಚರ್ ಜತೆಗೆ ಆ ವಿಜ್ಞಾನಿಗಳ ಕಿರುಪರಿಚಯವನ್ನು ಇಲ್ಲಿ ಪ್ರಸ್ತುತಿ ಮಾಡಿದ್ದೇವೆ.

Chandrayaan-3: ವಾವ್, ವಿಜ್ಞಾನಿಗಳಿಗಿದು ಅಪರೂಪದ ಅಭಿನಂದನೆ: ಇಸ್ರೋ ಸಾಧಕರಿಗೆ ಕುಂಚ ಗೌರವ ಸಲ್ಲಿಸಿದ ಶಿಡ್ಲಘಟ್ಟದ ಅಜಿತ್ ಕೌಂಡಿನ್ಯ

Thursday, August 24, 2023

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನ-3 ಬಾಹ್ಯಾಕಾಶ ನೌಕೆ ಬುಧವಾರ ಚಂದ್ರನ ಮೇಲೆ ಇಳಿಯಿತು ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಇದು ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸಲು ಭಾರತದ ಎರಡನೇ ಪ್ರಯತ್ನವಾಗಿದೆ ಮತ್ತು ರಷ್ಯಾದ ಲೂನಾ -25 ಮಿಷನ್ ವಿಫಲವಾದ ಒಂದು ವಾರದ ನಂತರ ಬರುತ್ತದೆ.

Chandrayaan 3: ಬೇರಾವುದೇ ದೇಶ ಮಾಡದ ಸಾಧನೆ ಈಗ ಭಾರತದ್ದು; ಚಂದ್ರಯಾನ 3ರ ಯಶಸ್ಸು, ಸಂಭ್ರಮದ ಚಿತ್ರಾವಳಿ

Wednesday, August 23, 2023

ಶ್ರೀಹರಿಕೋಟಾದ ಎರಡನೇ ಲಾಂಚ್‌ ಪ್ಯಾಡ್‌ನಿಂದ ಮಿಷನ್ ಚಂದ್ರಯಾನ-3 ರ ಉಡಾವಣೆ ದಿನಾಂಕ ಜುಲೈ 14 ಎಂದು ಇಸ್ರೋ ಜುಲೈ 6 ರಂದು ಘೋಷಿಸಿತು.

Chandrayaan-3: ಚಂದ್ರನ ಮೇಲ್ಮೈಗೆ ಚಂದ್ರಯಾನ 3 ಇಳಿಯುವುದಕ್ಕೆ ಶುರುವಾಗಿದೆ ದಿನಗಣನೆ; ಯೋಜನೆ ಟೈಮ್‌ಲೈನ್‌ ಹೀಗಿದೆ ನೋಡಿ

Friday, August 11, 2023

ನಾಸಾದ ಸೋಲಾರ್‌ ಡೈನಾಮಿಕ್‌ ಅಬ್ಸರ್ವೇಟರಿ ಮೂಲಕ sunspot AR3386 ಎಂಬ ಪ್ರಬಲ ಸೌರಜ್ವಾಲೆಯ ಚಿತ್ರ ಸೆರೆಹಿಡಿಯಲಾಗಿದೆ ಎಂದು ಸ್ಪೇಸ್‌ವೆದರ್‌.ಕಾಂ ವರದಿ ಮಾಡಿದೆ.

Solar flare: ನಾಸಾದ ಕಣ್ಣಿಗೆ ಬಿದ್ದ ತೀವ್ರ ಸೌರ ಜ್ವಾಲೆಗಳು, ಪ್ರಬಲ ಭೂಕಾಂತೀಯ ಚಂಡಮಾರುತದ ಎಚ್ಚರಿಕೆ, ಇಲ್ಲಿದೆ ಚಿತ್ರ ಮಾಹಿತಿ

Tuesday, August 8, 2023

Asteroid 2023 HO6: ಈ ಕ್ಷುದ್ರಗ್ರಹ ಇಂದು ಭೂಮಿಯ ತುಂಬಾ ಹತ್ತಿರಕ್ಕೆ ಬರಲಿದೆ. ಇದು ಸುಮಾರು 570 ಅಡಿ ಗಾತ್ರದ ಕ್ಷುದ್ರಗ್ರಹ. ಇದು ಗಂಟೆಗೆ  27969  ಕಿ.ಮೀ. ವೇಗದಲ್ಲಿ ಬರುತ್ತಿದ್ದು, ಭೂಮಿಯಿಂದ ಸುಮಾರು 2 ದಶಲಕ್ಷ ಕಿ.ಮೀ. ಹತ್ತಿರಕ್ಕೆ ಬರಲಿದೆ. ಇವುಗಳ ವೇಗಕ್ಕೆ ಹೋಲಿಸಿದರೆ ಇಷ್ಟು ಕಿ.ಮೀ.  ಅಂದುಕೊಂಡಷ್ಟು ದೂರವಲ್ಲ.

Asteroids: ಇಂದಿನಿಂದ ಜುಲೈ 10ರವರೆಗೆ ಭೂಮಿಯತ್ತ 5 ಕ್ಷುದ್ರಗ್ರಹ, 31ರಿಂದ 880 ಅಡಿ ಗಾತ್ರ, ಒಂದಕ್ಕಿಂತ ಒಂದು ಸ್ಪೀಡು, ನಾಸಾದಿಂದ ಮಾಹಿತಿ

Wednesday, July 5, 2023

ಕ್ಯಾಲ್ಟೆಕ್ ತಂಡವು ವಿಶ್ವದ ಮೊದಲ ಬಾಹ್ಯಾಕಾಶ-ಆಧಾರಿತ ವೈರ್‌ಲೆಸ್ ಪವರ್ ಟ್ರಾನ್ಸ್‌ಮಿಷನ್ ಅನ್ನು ಯಶಸ್ವಿಯಾಗಿ ನಡೆಸಿದೆ. ಮೊದಲ ಬಾರಿಗೆ ಪತ್ತೆಹಚ್ಚಬಹುದಾದ ಮಟ್ಟದ ಶಕ್ತಿಯನ್ನು ಭೂಮಿಗೆ ರವಾನಿಸುವಲ್ಲಿ ಅದು ಯಶಸ್ಸು ಕಂಡಿದೆ. ಬಾಹ್ಯಾಕಾಶ ಸೌರ ವಿದ್ಯುತ್ ಯೋಜನೆ (ಎಸ್‌ಎಸ್‌ಪಿಪಿ)ಯು ಬೃಹತ್ ಕಕ್ಷೀಯ ಶುದ್ಧ ಶಕ್ತಿ ಸಂಪನ್ಮೂಲಗಳನ್ನು ಅನ್ಲಾಕ್ ಮಾಡುವ ಗುರಿಯನ್ನು ಹೊಂದಿದೆ.

Science News: ದಿನಕ್ಕೆಷ್ಟು ಸಲ ಪವರ್‌ಕಟ್‌ ಮಾಡ್ತಾರಪ್ಪ ಎಂಬ ಚಿಂತೆ ಬಿಡಿ; 24X7 ವೈರ್‌ಲೆಸ್‌ ಪವರ್‌ ಸಪ್ಲೈ ಪ್ರಯೋಗ ಶುರುವಾಗಿದೆ

Sunday, June 25, 2023

ಮೆಡುಲ್ಲಾ ನೀಹಾರಿಕೆ ಸೂಪರ್ನೋವಾ ರೆಮಿನೆಂಟ್ (Medulla Nebula Supernova Remnant): ಇದಕ್ಕೆ ಸಿಟಿಬಿ 1 ಎಂದು ಹೆಸರು. ಇದನ್ನು ಮೆಡುಲ್ಲಾ ನೆಬ್ಯುಲಾ ಸೂಪರ್ನೋವಾ ರೆಮಿನೆಂಟ್ ಎಂದೂ ಕರೆಯುತ್ತಾರೆ. ಇದು ಅಪರೂಪದ ಕಾಸ್ಮಿಕ್ ಗುಳ್ಳೆ.  ನಾಸಾದ ಪ್ರಕಾರ, ಇದು ಸುಮಾರು ಒಂದು ಲಕ್ಷ ವರ್ಷದ ಹಿಂದೆ ಸಂಭವಿಸಿದ ಸೂಪರ್ನೊವ ಸ್ಪೋಟದ ಅವಶೇಷ. ಇದು ಮಿದುಳಿನ ಆಕಾರ ಹೊಂದಿರುವ ಕಾರಣದಿಂದ ಈ ಹೆಸರು ನೀಡಲಾಗಿದೆ. ಇದು ಕ್ಯಾಸಿಯೋಪಿಯಾ ನಕ್ಷತ್ರಪುಂಜದಾಚೆಗಿದೆ.

NASA Astronomy Pictures: ನಾಸಾದ ಅತ್ಯುತ್ತಮ ಖಗೋಳ ಚಿತ್ರಗಳು, ಅಂತರಿಕ್ಷದಲ್ಲಿ ನಿಹಾರಿಕೆಗಳ ಮಾಯಾಲೋಕ, ನಕ್ಷತ್ರಗಳ ಚಿತ್ತಾರ

Friday, April 28, 2023