Latest weather Photos

ಬೆಂಗಳೂರಿನ ಭಾರಿ ಮಳೆಯಿಂದ ಬೆಂಗಳೂರು ಮೆಟ್ರೊ ನೇರಳೆ ಮಾರ್ಗದ ಎಂ.ಜಿ.ರಸ್ತೆ ನಿಲ್ದಾಣ ಮತ್ತು ಟ್ರಿನಿಟಿ ನಿಲ್ದಾಣ ನಡುವೆ ಹಳಿಗಳ ಮೇಲೆ ಮರದ ಕೊಂಬೆಗಳು ಬಿದ್ದಿರುವ ಕಾರಣ ಎಂ.ಜಿ.ರಸ್ತೆ ಹಾಗೂ ಇಂದಿರಾ ನಗರ ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತಗೊಂಡಿತ್ತು.ಭಾರಿ ಮಳೆಗೆ ದೊಡ್ಡ ಮರವೇ ಕುಸಿದು ಮೆಟ್ರೊ ರೈಲು ಮಾರ್ಗದ ವಯಡಕ್ಟ್ ಮೇಲೆ ಬಿದ್ದಿತ್ತು. ಇದನ್ನು ಸಿಬ್ಬಂದಿ ಸರಿಪಡಿಸಿ ಮೆಟ್ರೋ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Bangalore Rains: ಬೆಂಗಳೂರಲ್ಲಿ ಸತತ 6 ಗಂಟೆಯಿಂದ ಭಾರೀ ಮಳೆ, ಉರುಳಿ ಬಿದ್ದ ಮರಗಳು, ಜನಜೀವನ ಅಸ್ತವ್ಯಸ್ತ photos

Sunday, June 2, 2024

ಮೈಸೂರಿನ ಚಾಮುಂಡಿಬೆಟ್ಟವನ್ನು ಸಂಪೂರ್ಣವಾಗಿ ಸುತ್ತುವರೆದಿರುವ ಕಪ್ಪು ಮೋಡಗಳು. ಈಗಾಗಲೇ ಮೈಸೂರಿನಲ್ಲಿ ಭಾರೀ ಮಳೆ ಗುಡುಗು ಸಹಿತ ಜೋರಾಗಿಯೇ ಶುರುವಾಗಿದೆ.

Karnataka Rains: 4 ದಿನದ ಬಿಡುವಿನ ನಂತರ ಬೆಂಗಳೂರು, ಮೈಸೂರಲ್ಲಿ ಮಳೆ ಅಬ್ಬರ, ಆಲಿಕಲ್ಲು ಕಂಡ ಜನ ಖುಷಿ photos

Saturday, June 1, 2024

ಕೊಚ್ಚಿಯಲ್ಲಿ ಧಾರಾಕಾರ ಮಳೆಯಾಗಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ಕೊಚ್ಚಿ ಮತ್ತು ಅದರ ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ನೆರೆಯ ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶ; ಮುಂದುವರಿದ ಧಾರಾಕಾರ ಮಳೆ; ಫೋಟೊಸ್

Thursday, May 30, 2024

ಬಂಗಾಳಕೊಲ್ಲಿಯಲ್ಲಿ ರೆಮಲ್ ಚಂಡಮಾರುತದ ಪರಿಚಲನೆ ಇರುವ ಕಾರಣ, ಉಳ್ಳಾಲ ಸೋಮೇಶ್ವರ ಬೀಚ್‌ನಲ್ಲಿ ಆಳೆತ್ತರದ ಅಲೆಗಳು ಅಪ್ಪಳಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಜಿಲ್ಲಾಡಳಿತವೂ ಈ ಕುರಿತು ಮುನ್ನೆಚ್ಚರಿಕೆ ನೀಡಿದ್ದು, ಭಾನುವಾರ ಸೋಮೇಶ್ವರ ಬೀಚ್ ಹೀಗಿತ್ತು.

ಬಂಗಾಳ ಕೊಲ್ಲಿಯಲ್ಲಿ ರೆಮಲ್ ಚಂಡಮಾರುತ; ಉಳ್ಳಾಲ ಸೋಮೇಶ್ವರ ಬೀಚ್‌ನಲ್ಲಿ ಆಳೆತ್ತರದ ಅಲೆಗಳ ಅಬ್ಬರ-ಚಿತ್ರನೋಟ

Sunday, May 26, 2024

ಗುವಾಹಟಿಯ ಮರ ಒಂದರಲ್ಲಿ ಭಾನುವಾರ (ಮೇ 26) ಮಧ್ಯಾಹ್ನ ಬಿಸಿಲ ಬೇಗೆ ನಿವಾರಿಸಲು ಮರದ ಮೇಲೆ ಕುಳಿತಿರುವ ಬೆಳ್ಳಕ್ಕಿ.

ದೆಹಲಿ, ಗುವಾಹಟಿ ಮೃಗಾಲಯಗಳಲ್ಲಿ ಬಿಸಿಲ ಬೇಗೆ; ಬೆಳ್ಳಕ್ಕಿಯಿಂದ ಹಿಡಿದು ಬಿಳಿ ಹುಲಿಯ ತನಕ ವಿವಿಧ ಪ್ರಾಣಿ ಪಕ್ಷಿಗಳ ಭಾವ ಭಂಗಿ- Photos

Sunday, May 26, 2024

ಮೈಸೂರಿನ ಅತ್ಯಂತ ಜನನಿಬಿಡ ರಸ್ತೆಯಿದು. ಆಲ್ಟರ್ಟ್‌ ವಿಕ್ಟರ್‌ ರಸ್ತೆಯಲ್ಲಿ ಮಳೆ ಸುರಿಯುತ್ತಲೇ ಇದ್ದರೆ ವಾಹನಗಳ ಸಂಚಾರವೂ ಕಂಡು ಬಂದಿತು.

Mysore Rains: ಮ್ಯಾಲೆ ಕವ್ಕೊಂಡ ಮುಂಗಾರು ಮೋಡ, ಮೈಸೂರಿನಲ್ಲಿ ರಜೆ ದಿನ ಹದ ಮಳೆ, ಹೀಗಿದೆ ಚಿತ್ರನೋಟ

Sunday, May 19, 2024

ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯು ಪ್ರಸ್ತುತ ಕೇರಳ ತೀರದಿಂದ ಮರಾಠವಾಡದ ಕಡೆಗೆ ಚಲಿಸುತ್ತಿದ್ದು, ಇದರ ಪರಿಣಾಮ ಮುಂದಿನ ಒಂದು ವಾರದವರೆಗೆ ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಅಂದರೆ, ಕರ್ನಾಟಕ ಹವಾಮಾನ ವರದಿಯಂತೆ ಮೇ 18ರ ತನಕ ಕರಾವಳಿ ಕರ್ನಾಟಕ, ಮಲೆನಾಡು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕರ್ನಾಟಕ ಹವಾಮಾನ; ಮೇ 18ರ ತನಕ ಕರಾವಳಿ ಕರ್ನಾಟಕ, ಮಲೆನಾಡು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ

Thursday, May 16, 2024

ಬೆಳಗಾವಿ ಜಿಲ್ಲೆಯಲ್ಲೂ ಪೂರ್ವ ಮುಂಗಾರು ಮಳೆ ಎರಡೂವರೆ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚ ಸುರಿದಿದೆ.

Karnataka Rains: ಕರ್ನಾಟಕದ 4 ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಭರಪೂರ, 16 ಜಿಲ್ಲೆಯಲ್ಲಿ ಸಾಮಾನ್ಯ, 11 ಜಿಲ್ಲೆಗಳಲ್ಲಿ ಕೊರತೆ

Wednesday, May 15, 2024

ಮೇ 13ರ ಸೋಮವಾರ ಮುಂಬೈನಲ್ಲಿರುವ ಪ್ರಭಾದೇವಿ, ಪರೇಲ್ ನಗರದಲ್ಲಿ ದಿಢೀರ್ ಉಂಟಾಗಿದ್ದ ಧೂಳಿನ ಬಿರುಗಾಳಿಗೆ ಕತ್ತಲು ಆವರಿಸಿದಂತೆ ಕಂಡಿತು. ನಗರದಲ್ಲಿ ಭಾರಿ ಮಳೆಯಾಗಿದ್ದು, ಹಲವು ಅವಾಂತರಗಳಿಗೆ ಕಾರಣವಾಗಿದೆ.

Mumbai Dust Storm: ಭಾರಿ ಮಳೆ, ಧೂಳಿನ ಬಿರುಗಾಳಿಗೆ ಮುಂಬೈ ತತ್ತರ; ಕನಿಷ್ಠ 8 ಮಂದಿ ಸಾವು, ಹಲವರಿಗೆ ಗಾಯ; ಫೋಟೊಸ್

Tuesday, May 14, 2024

ಕತ್ತಲಾಗುತ್ತಲೇ ಬೆಂಗಳೂರು ಬೆಳಕಿನೂರಾಗಿ ಪರಿವರ್ತನೆಗೊಳ್ಳುತ್ತದೆ. ಆಗ ಮೂಡುವುದೇ ಕೋಲ್ಮಿಂಚು

Bangalore Rains: ಬೆಂಗಳೂರಲ್ಲಿ ಸಂಜೆ ಬೆಳ್ಳಿ ಮೋಡಗಳು, ರಾತ್ರಿ ಬಾನಂಗಳಲ್ಲಿ ಮಿಂಚಿನ ಸಂಚಾರ, ಹೀಗಿದೆ ಚಿತ್ರನೋಟ

Monday, May 13, 2024

ಮುಂಬೈ ಮಹಾನಗರಿ ಸೋಮವಾರ ಎಂದಿನಂತೆ ಇರಲಿಲ್ಲ. ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ, ಗಾಳಿ ಸನ್ನಿವೇಶ ಕಂಡು ಬಂದಿತು.

Mumbai Dust Storm 2024: ಮುಂಬೈ ಮಹಾನಗರಿಯೂ ಮಳೆ ಜತೆಗೆ ಭಾರೀ ಧೂಳಿನ ಬಿರುಗಾಳಿಗೆ ಬೆಚ್ಚಿತು photos

Monday, May 13, 2024

ಆರ್​ಸಿಬಿ ಪ್ಲೇಆಫ್​ ಆಸೆ ಜೀವಂತವಾಗಿರಬೇಕೆಂದರೆ ಈ ಮಹತ್ವದ ಪಂದ್ಯದಲ್ಲಿ ಗೆಲ್ಲಲೇಬೇಕು. ಸಿಎಸ್​ಕೆ ಎಲ್ಲಾ ಪಂದ್ಯ ಸೋಲಬೇಕು. ಡೆಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಎಲ್​ಎಸ್​ಜಿ ವಿರುದ್ಧ ಗೆಲ್ಲಬೇಕು. ಜಿಟಿ ಎರಡು ಪಂದ್ಯ ಪರಾಭವಗೊಳ್ಳಬೇಕು.ಒಂದು ವೇಳೆ ಮಳೆ ಬಂದರೆ ಆರ್​ಸಿಬಿ ಪ್ಲೇಆಫ್ ಕನಸು ಅಂತ್ಯಗೊಳ್ಳಲಿದೆ.

ಆರ್​ಸಿಬಿ vs ಡಿಸಿ ನಿರ್ಣಾಯಕ ಪಂದ್ಯ; ಮಾಡು ಇಲ್ಲವೇ ಮಡಿ ಪಂದ್ಯಕ್ಕಿದೆ ಮಳೆಯ ಭೀತಿ, ಹವಾಮಾನ ಇಲಾಖೆ ಹೇಳಿದ್ದೇನು?

Sunday, May 12, 2024

ಕೊಡಗಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಕಣಿವೆ ಪ್ರದೇಶದಲ್ಲೂ ನೀರು ಹರಿಯುತ್ತಿದೆ. ಕಾವೇರಿ ನದಿ ಒಳ ಹರಿವಿನ ಪ್ರಮಾಣದಲ್ಲೂ ಏರಿಕೆ ಕಂಡಿದೆ.

Karnataka Rains: ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಭಾರೀ ಮಳೆ, ಬೆಂಗಳೂರಲ್ಲೂ ತಂಪರೆದ ವರುಣ

Saturday, May 11, 2024

ಬೆಂಗಳೂರಿನ ಹಲವಾರು ಬಡಾವಣೆಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಹೀಗೆ ಸುರಿಯುತ್ತಲೇ ಇತ್ತು. ಜನ ಮಳೆಯ ಖುಷಿಯನ್ನು ಅನುಭವಿಸಿದರು.

Bangalore Rain: ಬೆಂಗಳೂರಿನಲ್ಲಿ 5 ತಿಂಗಳ ನಂತರ ಸುರಿದ ಮಳೆ ಹೇಗಿತ್ತು, ಇಲ್ಲಿದೆ ಚಿತ್ರನೋಟ

Friday, May 3, 2024

ಕಳೆದ ವಾರದಲ್ಲಿ ಬೆಂಗಳೂರಿನಲ್ಲಿ ತಾಪಮಾನ ಕಡಿಮೆಯಾಗಿತ್ತು. ಏಪ್ರಿಲ್ 6 ರಂದು 37.6 ಡಿಗ್ರಿ ಸೆಲ್ಸಿಯಸ್‌ಗೆ ಹೋಲಿಸಿದರೆ, ಏಪ್ರಿಲ್ 13 ರಂದು ಬೆಂಗಳೂರಿನಲ್ಲಿ ಕೇವಲ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Bangalore Rains: ಬಿಸಿಲಿಗೆ ಬೆಂದ ಬೆಂಗಳೂರು ಜನರಿಗೆ ಈ ವಾರವೂ ನಿರಾಸೆ; ಏಪ್ರಿಲ್ 19 ರವರೆಗೆ ಉದ್ಯಾನ ನಗರಿಗೆ ಮಳೆಯಿಲ್ಲ

Monday, April 15, 2024

ಕರ್ನಾಟಕದ ಕರವಾಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 4ರ ತನಕ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಚದುರಿದ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ವರದಿ ಹೇಳಿದೆ. ಮಾರ್ಚ್ 27ರಿಂದ ಏಪ್ರಿಲ್ 4ರ ತನಕ ಮಳೆ ಮುನ್ಸೂಚನೆ ಗಮನಿಸಿದರೆ ಕರಾವಳಿ ಜಿಲ್ಲೆಗಳು, ಮಲೆನಾಡು ಜಿಲ್ಲೆ, ಬೆಳಗಾವಿ ತನಕವೂ ಮಳೆ ಮುನ್ಸೂಚನೆ ಕಾಣಿಸಿದೆ.

ಏಪ್ರಿಲ್ 4ರ ತನಕದ ಮಳೆ ಮುನ್ಸೂಚನೆ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಚದುರಿದ ಮಳೆ ನಿರೀಕ್ಷೆ

Thursday, March 28, 2024

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ (ಫೆ.1) ಮಧ್ಯಂತರ ಬಜೆಟ್ ಮಂಡಿಸುವ ಮೊದಲು ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ಸಂದರ್ಭ. ದೆಹಲಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮೈ ನಡುಕದ ಚಳಿ, ಭಾರಿ ಮಳೆಯ ವಾತಾವರಣದಲ್ಲಿ ಕೇಂದ್ರ ಬಜೆಟ್‌ 2024 ಮಂಡನೆಯಾಗುತ್ತಿದೆ. ಇಲ್ಲಿದೆ. ದೆಹಲಿ ಹವಾಮಾನದ ಸಚಿತ್ರ ವರದಿ.

ಮೈ ನಡುಕದ ಚಳಿ, ಭಾರಿ ಮಳೆಯ ವಾತಾವರಣದಲ್ಲಿ ಕೇಂದ್ರ ಬಜೆಟ್‌ 2024 ಮಂಡನೆ; ಇಲ್ಲಿದೆ ದೆಹಲಿ ಹವಾಮಾನದ ಸಚಿತ್ರ ವರದಿ

Thursday, February 1, 2024

ಊಟಿಗೆ ಬರುವ ಪ್ರವಾಸಿಗರ ವಾಹನದ ಮೇಲೆ ಹಿಮ ಬೀಳುತ್ತಿದೆ. ಕಾಶ್ಮೀರದಲ್ಲ ಕಾಣಸಿಗುವ ಚಿತ್ರಣ ಈಗ ಊಟಿಯಲ್ಲೂ ನೋಡಬಹುದು

Ooty Weather: ಊಟಿಯಲ್ಲಿ ಭಾರೀ ಚಳಿ, ತಿಂಗಳಿನಿಂದ 2 ಡಿಗ್ರಿ ಸೆಲ್ಸಿಯಸ್‌ ಕೂಲ್‌ ಕೂಲ್‌; ಹೀಗಿದೆ ಚಿತ್ರಣ Photos

Tuesday, January 30, 2024

ತಮಿಳುನಾಡಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗಿದ್ದು, ತೂತುಕುಡಿ ಜಿಲ್ಲೆಯಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತ್ತಗೊಂಡಿದ್ದವು. ಮೊಣಕಾಲುದ್ದ ನೀರಿನಲ್ಲಿಲ್ಲೇ ಜನರು ರಸ್ತೆ ದಾಟಲು ಪರದಾಡಿದರು.

Tamil Nadu Rain: ಭಾರಿ ಮಳೆಯಿಂದ ತತ್ತರಿಸಿದ ತಮಿಳುನಾಡು; ಮನೆ, ರಸ್ತೆಗಳು ಜಲಾವೃತ್ತ; ಮುಂದುವರಿದ ರಕ್ಷಣಾ ಕಾರ್ಯ

Friday, December 22, 2023

ಭಾರೀ ಮಳೆಯಿಂದಾಗಿ ದಕ್ಷಿಣ ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ರೈಲ್ವೆ ಮಾರ್ಗವೇ ಕುಸಿದು ಹೋಗಿ ರೈಲು ಸಂಚಾರ ವ್ಯತ್ಯಯವಾಗಿದೆ.

TamilNadu Rains: ಮಳೆಯಲ್ಲಿ ಮುಳುಗಿತು ದಕ್ಷಿಣ ತಮಿಳುನಾಡು, ಕುಂಭದ್ರೋಣ ಮಳೆಗೆ ಬೆಚ್ಚಿದ ಜನ: ಸಂಚಾರ ಸಂಪೂರ್ಣ ಅಸ್ತವ್ಯಸ್ತ, ಹೀಗಿದೆ ಅವಾಂತರ

Monday, December 18, 2023