Mangalore Rain :ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಗಾಳಿ ಮಳೆ ; ಸಮುದ್ರ ತೀರದಲ್ಲಿ ಹೆಚ್ಚಿದ ಭಾರೀ ಅಲೆಗಳ ಅಬ್ಬರ
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದೆ. ಭಾರೀ ಮಳೆಯಿಂದ ಮಂಗಳೂರಿನ ಉಚ್ಚಿಲ, ಉಳ್ಳಾಲ ಕಡಲ ತೀರದಲ್ಲಿ ಅಪಾಯಕಾರಿ ಪರಿಸ್ಥಿತಿಯುಂಟಾಗಿದ್ದು, ಮನೆಗಳಿಗೆ ಬೀಚ್ ರೆಸಾರ್ಟ್ ಗಳಿಗೆ ಅಲೆಗಳು ಅಪ್ಪಳಿಸುತ್ತಿವೆ. ಈಗಾಗಲೇ ಬಿದ್ದು ಹೋಗಿದ್ದ ಮನೆಗಳ ಅವಶೇಷಗಳು, ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ತಡೆಗೋಡೆಗೆ ಹಾಕಿರೋ ಕಲ್ಲುಗಳನ್ನೂ ಮೀರಿ ದಡಕ್ಕೆ ಬಡಿಯುತ್ತಿರೋ ರಕ್ಕಸ ಅಲೆಗಳು ದಡದಲ್ಲಿರುವ ಇನ್ನೂ ಅನೇಕ ಮನೆಗಳನ್ನ ಆಹುತಿ ತೆಗೆದುಕೊಳ್ಳುವ ಆತಂಕ ಎದುರಾಗಿದೆ. ತೀರ ಪ್ರದೇಶ ಮತ್ತು ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು ಮಳೆ ಹೀಗೇ ಮುಂದುವರೆದರೆ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಇನ್ನು ನೇತ್ರಾವತಿ ನದಿಗೂ ನೀರಿನ ಹರಿವು ಹೆಚ್ಚಾಗಿದೆ.