ಹಿಂದೂಸ್ತಾನ್ ಟೈಮ್ಸ್‌ಗೆ 100 ವರ್ಷ; ಎಚ್‌ಟಿ ಹೌಸ್‌ನಲ್ಲಿ ಅದ್ಭುತವಾದ ಮೋಷನ್ ಪ್ರೊಜೆಕ್ಷನ್‌ನ ದೃಶ್ಯ ವೈಭವ, ನೇರ ಪ್ರಸಾರ ನೀವೂ ನೋಡಿ
ನವದೆಹಲಿ: ಹಿಂದೂಸ್ತಾನ್ ಟೈಮ್ಸ್‌ಗೆ ಶತಮಾನೋತ್ಸವದ ಸಂಭ್ರಮ. ನೂರು ವರ್ಷಗಳ ಕಾಲ ಭಾರತದಲ್ಲಿ ಸಾರ್ವಜನಿಕ ಸಂವಾದವನ್ನು ರೂಪಿಸಿದ ಪತ್ರಿಕೋದ್ಯಮದ ಪರಂಪರೆಯ ಪ್ರತೀಕವಾಗಿ ಹೆಮ್ಮೆಯಿಂದ ಮುನ್ನಡೆದಿದೆ. 1924 ರಲ್ಲಿ ಸ್ಥಾಪನೆಯಾದ ಹಿಂದೂಸ್ತಾನ್ ಟೈಮ್ಸ್ ಓದುಗರಿಗೆ ಆಳವಾದ ವರದಿ ಮತ್ತು ಒಳನೋಟವುಳ್ಳ ವಿಶ್ಲೇಷಣೆಯನ್ನು ಸತತವಾಗಿ ಒದಗಿಸಿದೆ. ದಶಕಗಳಲ್ಲಿ, ವೃತ್ತಪತ್ರಿಕೆಯು ಮಾಧ್ಯಮದ ಬದಲಾಗುತ್ತಿರುವ ಅಗತ್ಯಗಳಿಗೆ ಹೊಂದಿಕೊಂಡಿದೆ. ಅದರ ಮೂಲ ಮೌಲ್ಯಗಳಾದ ಸಮಗ್ರತೆ ಮತ್ತು ಸತ್ಯಕ್ಕೆ ಬದ್ಧವಾಗಿದೆ. ಭವಿಷ್ಯದತ್ತ ನೋಡುತ್ತಿರುವಂತೆ, ಹಿಂದೂಸ್ತಾನ್ ಟೈಮ್ಸ್ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ನಾಗರಿಕರಿಗೆ ತಿಳಿಸುವ ಮತ್ತು ಅಧಿಕಾರ ನೀಡುವ ತನ್ನ ಧ್ಯೇಯವನ್ನು ಎತ್ತಿಹಿಡಿಯುವುದನ್ನು ಮುಂದುವರೆಸಿದೆ. ತನ್ನಿಮಿತ್ತವಾಗಿ ಇಂದು ನವದೆಹಲಿಯ ಎಚ್‌ಟಿ ಹೌಸ್‌ನಲ್ಲಿ ಅದ್ಭುತವಾದ ಮೋಷನ್ ಪ್ರೊಜೆಕ್ಷನ್ ಮೂಲಕ ಇತಿಹಾಸದ ಹೆಜ್ಜೆ ಗುರುತನ್ನು ದೃಶ್ಯ ವೈಭವದ ಮೂಲಕ ನಿರೂಪಿಸಿದೆ. ಈ ಕಾರ್ಯಕ್ರಮದ ನೇರ ಪ್ರಸಾರ ನೀವೂ ವೀಕ್ಷಿಸಿ, ಶುಭ ಹಾರೈಕೆಯೂ ಜೊತೆಗಿರಲಿ..