History Of Islamic Calendar: ಇಸ್ಲಾಮಿಕ್ ಕ್ಯಾಲೆಂಡರ್‌ನ ಇತಿಹಾಸ ಮತ್ತು ಪ್ರಾಮುಖ್ಯತೆ ಬಗ್ಗೆ ತಿಳಿಯಿರಿ..
Dec 24, 2022 07:35 AM IST
ಮೆಕ್ಕಾ (ಸಂಗ್ರಹ ಚಿತ್ರ)
- ಜಗತ್ತಿನ ಮುಸ್ಲಿಂ ಸಹೋದರರು ಕೂಡ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರವಾಗಿ 2023ರಲ್ಲಿ ಬರುವ ಪ್ರಮುಖ ಧಾರ್ಮಿಕ ಆಚರಣೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಅದಕ್ಕೂ ಮೊದಲು ನಾವು ಇಸ್ಲಾಮಿಕ್ ಕ್ಯಾಲೆಂಡರ್ ಇತಿಹಾಸ ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ. ಈ ಕುರಿತು ಇಲ್ಲಿದೆ ವಿಸ್ತೃತ ಮಾಹಿತಿ.
ಬೆಂಗಳೂರು: 2022 ಕಳೆದು 2023ಕ್ಕೆ ನಾವೆಲ್ಲಾ ಕಾಲಿಡುತ್ತಿದ್ದೇವೆ. ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಅದೇ ರೀತಿ ಹೊಸ ವರ್ಷದಲ್ಲಿ ವಿವಿಧ ಧಾರ್ಮಿಕ ಆಚರಣೆಗಳ ಬಗ್ಗೆ ಆಯಾ ಧರ್ಮದ ಅನುಯಾಯಿಗಳು ಕೂಡ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ಜಗತ್ತಿನ ಮುಸ್ಲಿಂ ಸಹೋದರರು ಕೂಡ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರವಾಗಿ 2023ರಲ್ಲಿ ಬರುವ ಪ್ರಮುಖ ಧಾರ್ಮಿಕ ಆಚರಣೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಅದಕ್ಕೂ ಮೊದಲು ನಾವು ಇಸ್ಲಾಮಿಕ್ ಕ್ಯಾಲೆಂಡರ್ ಇತಿಹಾಸ ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ.
ತಾಜಾ ಫೋಟೊಗಳು
ಇಸ್ಲಾಮಿಕ್ ಕ್ಯಾಲೆಂಡರ್ ಇತಿಹಾಸ:
ಇಸ್ಲಾಮ್‌ನ 2ನೇ ಖಲೀಫರಾದ ಹಜರತ್ ಉಮರ್ ಬಿನ್ ಅಲ್ ಖತ್ತಾಬ್, ಇಸ್ಲಾಮಿಕ್ ಕ್ಯಾಲೆಂಡರ್ ಪರಿಕಲ್ಪನೆಯನ್ನು ಕ್ರಿ.ಶ 638ರಲ್ಲಿ ಪರಿಚಯಿಸಿದರು. ಪ್ರವಾದಿ ಮೊಹಮ್ಮದ್ ಅವರ ಆತ್ಮೀಯರಲ್ಲಿ ಒಬ್ಬರಾಗಿದ್ದ ಈ ಧಾರ್ಮಿಕ ಮುಖಂಡ, ಮುಸ್ಲಿಂ ಜಗತ್ತಿಗೆ ಅತ್ಯಂತ ಮುಖ್ಯವಾದ ಇಸ್ಲಾಮಿಕ್ ಕ್ಯಾಲೆಂಡರ್‌ನ್ನು ಆರಂಭಿಸಿದರು.
ಇಸ್ಲಾಮಿಕ್ ಕ್ಯಾಲೆಂಡರ್ 2023ಕ್ಕೆ ಹಿಜ್ರಿ ಕ್ಯಾಲೆಂಡರ್, ಅರೇಬಿಕ್ ಕ್ಯಾಲೆಂಡರ್, ಲೂನಾರ್ ಹಿಜ್ರಿ ಕ್ಯಾಲೆಂಡರ್ ಮತ್ತು ಮುಸ್ಲಿಂ ಕ್ಯಾಲೆಂಡರ್‌ನಂತಹ ಇತರ ಹೆಸರುಗಳಿಂದಲೂ ಕರೆಯಲಾಗುತ್ತದೆ.
ಇಸ್ಲಾಮಿಕ್ ಕ್ಯಾಲೆಂಡರ್ ಒಂದು ವರ್ಷದಲ್ಲಿ 12 ಚಂದ್ರನ ತಿಂಗಳುಗಳನ್ನು ಒಳಗೊಂಡಿರುವ ಚಂದ್ರನ ಕ್ಯಾಲೆಂಡರ್ ಆಗಿದೆ. ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಈ 12 ಚಂದ್ರನ ತಿಂಗಳುಗಳು ಕೆಳಕಂಡಂತಿವೆ.
1. ಅಲ್-ಮುಹರಮ್
2. ಸಫರ್
3. ರಬೀ ಅಲ್-ಅವ್ವಲ್, ರಬೀ ಅಲ್-ಅಲ್ಲಾ
4. ರಬಿಅತ್-ಥಾನಿ, ರಬೀ ಅಲ್-ಆಖಿರ್
5. ಜುಮಾದಾ ಅಲ್-ಅವ್ವಲ್, ಜುಮಾದಾ ಅಲ್-ಝ್ಲಾ
6. ಜುಮಾದಾ ಅತ್-ಥಾನಿಯಾ, ಜುಮಾದಾ ಅಲ್-ಆಖಿರಾ
7. ರಜಬ್
8. ಶಾಬಾನ್
9. ರಾಮಾನ್
10. ಶವ್ವಾಲ್
11. ಝು ಅಲ್-ಖಾದಾ
12. ಝು ಅಲ್-ಹೈಜ್ಜಾ
ಇಸ್ಲಾಮಿಕ್/ಹಿಜ್ರಿ ಕ್ಯಾಲೆಂಡರ್ 2023ರ ಪ್ರಾಮುಖ್ಯತೆ:
ಇಸ್ಲಾಮಿಕ್ ಕ್ಯಾಲೆಂಡರ್ 2023 ಪಾಶ್ಚಿಮಾತ್ಯ ಸೌರ ಕ್ಯಾಲೆಂಡರ್‌ಗಿಂತ 10-11 ದಿನಗಳಷ್ಟು ಚಿಕ್ಕದಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಕ್ಯಾಲೆಂಡರ್ ಅನ್ನು ಆಧರಿಸಿದ್ದು, ಇದು ವಾರ್ಷಿಕವಾಗಿ 354-355 ದಿನಗಳನ್ನು ಒಳಗೊಂಡಿರುತ್ತದೆ.. ಚಂದ್ರನ ತಿಂಗಳ ಅಡಿಪಾಯವು ಭೂಮಿಯ ಸುತ್ತ ಕಕ್ಷೆಯಲ್ಲಿ ಒಂದು ವೃತ್ತವನ್ನು ಪೂರ್ಣಗೊಳಿಸಲು, ಚಂದ್ರನು ತೆಗೆದುಕೊಳ್ಳುವ ಸಮಯವಾಗಿದೆ. ಇದರ ಸಮಯದ ಅವಧಿಯು 29 ದಿನಗಳಾಗಿದ್ದು, ಮುಸ್ಲಿಮರು ಇಸ್ಲಾಮಿಕ್ ಕ್ಯಾಲೆಂಡರ್ ಅನ್ನು ಪಡೆಯಲು ಹಲವು ಮಾರ್ಗಗಳಿವೆ.
ಸೌರ ವರ್ಷಕ್ಕಿಂತ ಭಿನ್ನವಾಗಿ, ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಹಜ್ ಮತ್ತು ರಂಜಾನ್ ಆಚರಣೆಗಳಿಗೆ ಪ್ರತಿ ವರ್ಷ ನಿರ್ದಿಷ್ಟವಾಗಿರದ ಹಲವು ದಿನಾಂಕಗಳಿವೆ. ಹವಾಮಾನ, ಋತು ಮತ್ತು ನೈಸರ್ಗಿಕ ಅಂಶಗಳಂತಹ ಅನೇಕ ವಿಷಯಗಳಿಂದಾಗಿ ಈ ದಿನಾಂಕಗಳನ್ನು ನಿಗದಿಪಡಿಸಲಾಗಿಲ್ಲ.
ಇದು ಪ್ರತಿ ವರ್ಷವೂ ಬದಲಾಗುತ್ತಲೇ ಇರುತ್ತದೆ. ಆದ್ದರಿಂದ ಮುಸ್ಲಿಮರು ಎಲ್ಲಾ ಸರಿಯಾದ ಆಚರಣೆಗಳ ಬಗ್ಗೆ ಮಾಹಿತಿ ಪಡೆಯಲು, ವಿಭಿನ್ನ ಸಮಯದ ಚೌಕಟ್ಟುಗಳಲ್ಲಿ ಇಸ್ಲಾಮಿಕ್ ಕ್ಯಾಲೆಂಡರ್ ಅವರಿಗೆ ಸಹಾಯ ಮಾಡುತ್ತದೆ.
ಚಂದ್ರನು ಹೊಸ ಚಂದ್ರಮಾಸದ ಆರಂಭವನ್ನು ಸೂಚಿಸುತ್ತಾನೆ. ಇದು ಇಸ್ಲಾಂ ಅನುಯಾಯಿಗಳಿಗೆ ಚಂದ್ರನನ್ನು ನೋಡುವುದು ಮತ್ತು ಹೊಸ ತಿಂಗಳ ಆರಂಭವನ್ನು ಲೆಕ್ಕಾಚಾರ ಮಾಡುವುದು ಸುಲಭವಾಗಿಸುತ್ತದೆ. ಯಹೂದಿಗಳು, ಗ್ರೀಕರು, ಹಿಂದೂಗಳು ಮತ್ತು ಚೀನಿಯರಂತಹ ಹೆಚ್ಚಿನ ಪ್ರಾಚೀನ ನಾಗರಿಕತೆಗಳು, ಒಂದು ತಿಂಗಳನ್ನು ಲೆಕ್ಕಾಚಾರ ಮಾಡಲು ಈ ವ್ಯವಸ್ಥೆಯನ್ನು ಬಳಸಿದರು ಎಂಬುದೂ ವಿಶೇಷ.
ಮುಂದಿನ ಸಂಚಿಕೆಯಲ್ಲಿ ನಾವು ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಹೊಸ ವರ್ಷದಲ್ಲಿ ಪ್ರಮುಖ ಇಸ್ಲಾಮಿಕ್ ಹಬ್ಬಗಳು ಮತ್ತು ಇತರ ಧಾರ್ಮಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯೋಣ.
ವಿಭಾಗ