logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶಿಕ್ಷಣ ಭವಿಷ್ಯ 2025: ಕಟಕ ರಾಶಿ ವಿದ್ಯಾರ್ಥಿಗಳಿಗೆ ಮನೆ ವಾತಾವರಣದಿಂದ ಓದಿಗೆ ತೊಂದರೆ, ಸಿಂಹ ರಾಶಿಯ ಕಾನೂನು ವಿದ್ಯಾರ್ಥಿಗಳಿಗೆ ಶುಭ ಫಲ

ಶಿಕ್ಷಣ ಭವಿಷ್ಯ 2025: ಕಟಕ ರಾಶಿ ವಿದ್ಯಾರ್ಥಿಗಳಿಗೆ ಮನೆ ವಾತಾವರಣದಿಂದ ಓದಿಗೆ ತೊಂದರೆ, ಸಿಂಹ ರಾಶಿಯ ಕಾನೂನು ವಿದ್ಯಾರ್ಥಿಗಳಿಗೆ ಶುಭ ಫಲ

Rakshitha Sowmya HT Kannada

Dec 02, 2024 12:29 PM IST

google News

ಕಟಕ, ಸಿಂಹ, ಕನ್ಯಾ ರಾಶಿಯ ಶಿಕ್ಷಣ ಭವಿಷ್ಯ 2025

  • Education Horoscope 2025: ಜ್ಯೋತಿಷ್ಯದ ಪ್ರಕಾರ ಗ್ರಹಗಳು ಶಿಕ್ಷಣದ ವಿಚಾರದಲ್ಲೂ ಪ್ರಭಾವ ಬೀರುತ್ತದೆ. ಹೊಸ ವರ್ಷದಲ್ಲಿ ದ್ವಾದಶ ರಾಶಿಗಳ ವಿದ್ಯಾರ್ಥಿಗಳ ಮೇಲೆ ಗ್ರಹಗಳು ಹೇಗೆ ಪ್ರಭಾವ ಬೀರುತ್ತವೆ ನೋಡೋಣ. ಕಟಕ, ಸಿಂಹ, ಕನ್ಯಾ ರಾಶಿ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯ 2025.

ಕಟಕ, ಸಿಂಹ, ಕನ್ಯಾ ರಾಶಿಯ ಶಿಕ್ಷಣ ಭವಿಷ್ಯ 2025
ಕಟಕ, ಸಿಂಹ, ಕನ್ಯಾ ರಾಶಿಯ ಶಿಕ್ಷಣ ಭವಿಷ್ಯ 2025 (PC: Canva)

 ಶಿಕ್ಷಣ ಭವಿಷ್ಯ 2025: ಮಕ್ಕಳಿಗೆ 3 ವರ್ಷ ತುಂಬುತ್ತಿದ್ದಂತೆ ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಸೇರಿಸುತ್ತೇವೆ. ವಿದ್ಯೆ ಪ್ರತಿಯೊಬ್ಬರಿಗೂ ಬಹಳ ಅವಶ್ಯಕ. ಮಕ್ಕಳಿಗೆ ವಿದ್ಯೆ ಒಲಿಯಬೇಕು. ಶಿಕ್ಷಣದಲ್ಲಿ ಅವರು ಸಾಧನೆ ಮಾಡಿ ಒಳ್ಳೆ ಕೆಲಸ ಸಂಪಾದಿಸಬೇಕು ಎನ್ನುವುದು ಪ್ರತಿಯೊಬ್ಬ ಪೋಷಕರ ಕನಸು. ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಕೆಲವರಿಗೆ ವಿದ್ಯೆ ಹತ್ತುವುದಿಲ್ಲ. ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೂಡಾ ಗ್ರಹಗತಿಗಳು ಪ್ರಮುಖ ಪಾತ್ರ ವಹಿಸುತ್ತವೆ.

ತಾಜಾ ಫೋಟೊಗಳು

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ, ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ವಿವಾದಗಳನ್ನು ತಪ್ಪಿಸಿ

Dec 01, 2024 04:26 PM

Venus Transit: ಡಿಸೆಂಬರ್ 2 ರಿಂದ ಈ 3 ರಾಶಿಯವರ ಶುಕ್ರದೆಸೆ ಶುರು ನೋಡಿ, ಉದ್ಯೋಗದಲ್ಲಿ ಉನ್ನತಿ, ಆದಾಯ ವೃದ್ಧಿ, ಒಟ್ಟಿನಲ್ಲಿ ಅದೃಷ್ಟವಂತರು

Nov 30, 2024 06:55 PM

ಧನು ರಾಶಿಯಲ್ಲಿ ಸೂರ್ಯ ಸಂಚಾರ; ಈ 4 ರಾಶಿಚಕ್ರದವರು ಭಾರಿ ಅದೃಷ್ಟವಂತರು, ಶೀಘ್ರದಲ್ಲೇ ಕೈ ಸೇರಲಿದೆ ಧನ ಸಂಪತ್ತು, ಸುಖ ಸಂತೋಷಕ್ಕೂ ಇಲ್ಲ ಕೊರತೆ

Nov 30, 2024 05:54 PM

ಕನಸಲ್ಲಿ ಆನೆ ಬಂತಾ, ಎಷ್ಟು ಆನೆಗಳಿದ್ದವು, ಹೇಗಿದ್ದವು, ಆ ಕನಸಿನ ಅರ್ಥ ಏನು- ವಾಸ್ತು ತಜ್ಞ ಮುಕುಲ್ ರಸ್ತೋಗಿ ವಿವರಣೆ ಹೀಗಿದೆ ನೋಡಿ

Nov 30, 2024 04:19 PM

ಮತ್ತೊಂದು ಹೊಸ ವರ್ಷ ಬರುತ್ತಿದೆ. ಶಿಕ್ಷಣದ ವಿಷಯದಲ್ಲಿ 2025 ವರ್ಷ ನಿಮಗೆ ಹೇಗಿರುತ್ತದೆ? ನಿಮ್ಮ ಉನ್ನತ ಶಿಕ್ಷಣದ ಕನಸು ಈ ವರ್ಷ ಯಶಸ್ವಿಯಾಗುವುದೇ? ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಕನಸು ಈಡೇರುವುದೇ? ನೀವು ಅದರಲ್ಲಿ ಯಶಸ್ವಿಯಾಗುತ್ತೀರಾ ಅಥವಾ ಇಲ್ಲವೇ? ದ್ವಾದಶ ರಾಶಿಗಳ ಶಿಕ್ಷಣ ಭವಿಷ್ಯ ಇಲ್ಲಿದೆ.

ಕಟಕ, ಸಿಂಹ, ಕನ್ಯಾ ರಾಶಿಯ ಶಿಕ್ಷಣ ಭವಿಷ್ಯ 2025

 

ಕಟಕ ರಾಶಿ

ಮೇ ಮಧ್ಯದ ನಂತರ, ಗುರುವು ಕಟಕ ರಾಶಿಯ 12ನೇ ಮನೆಯಲ್ಲಿ ಸಾಗುತ್ತಾನೆ. ಈ ಅವಧಿಯಲ್ಲಿ, ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಅದನ್ನು ಹೊರತುಪಡಿಸಿ, ತಮ್ಮ ಹುಟ್ಟೂರಿನಿಂದ ದೂರದಲ್ಲಿ ಅಧ್ಯಯನ ಮಾಡುತ್ತಿರುವ ಕಟಕ ರಾಶಿಯವರು ಬಯಸಿದ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಮೇ 2025 ರ ನಂತರ 2ನೇ ಮನೆಯಲ್ಲಿ ಕೇತುವಿನ ಪ್ರಭಾವದಿಂದ ಮನೆಯ ವಾತಾವರಣವು ಸ್ವಲ್ಪ ಕೆಡಬಹುದು. ಇದರಿಂದ ನಿಮ್ಮ ಅಧ್ಯಯನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ನೀವು ಏಕಾಗ್ರತೆಯಿಂದ ಓದಿನತ್ತ ಗಮನ ಹರಿಸಿದರೆ ಯಶಸ್ಸು ಸಾಧ್ಯ.

ಸಿಂಹ ರಾಶಿ

ವರ್ಷದ ಆರಂಭದಿಂದ ಮೇ 2025 ರ ಮಧ್ಯದವರೆಗೆ, ಗುರುವು 4ನೇ ಮನೆಯ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಒಂಬತ್ತನೇ ಅಂಶದಿಂದ, ಗುರುವು ಆರನೇ ಮನೆಯಲ್ಲಿ ಪ್ರಭಾವ ಬೀರುವ ಕಾರಣದಿಂದಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸಿಂಹ ರಾಶಿಯವರು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಬಹುದು. ಅದಲ್ಲದೆ ವೃತ್ತಿಪರ ಶಿಕ್ಷಣದಲ್ಲಿ ತೊಡಗಿರುವ ಈ ರಾಶಿಯ ವಿದ್ಯಾರ್ಥಿಗಳಿಗೆ ಗುರುವಿನ ಸ್ಥಾನವು ಅತ್ಯುತ್ತಮವಾಗಿರುತ್ತದೆ. ಮೇ ಮಧ್ಯಭಾಗದ ನಂತರ, ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಗುರುವಿನ ಅನುಗ್ರಹವನ್ನು ಪಡೆಯುತ್ತಾರೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು. ಶಿಕ್ಷಣ ಜಾತಕ 2025 ರ ಪ್ರಕಾರ, ಈ ವರ್ಷ ಬುಧ ಸಂಕ್ರಮಣವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಹೀಗಾಗಿ ನಿಮ್ಮ ಶಿಕ್ಷಣದ ಮಟ್ಟವನ್ನು ಸುಧಾರಿಸುತ್ತದೆ. ವೃತ್ತಿಪರ ಅಥವಾ ಕಾನೂನು ಶಿಕ್ಷಣದಲ್ಲಿ ತೊಡಗಿರುವ ಸಿಂಹ ರಾಶಿಯ ವಿದ್ಯಾರ್ಥಿಗಳು ಕೂಡಾ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

ಕನ್ಯಾ ರಾಶಿ

ಕನ್ಯಾ ರಾಶಿಯ ವಿದ್ಯಾರ್ಥಿಗಳ ಬಗ್ಗೆ ಹೇಳುವುದಾದರೆ, 2025 ರಲ್ಲಿ ನಿಮ್ಮ ಅಧ್ಯಯನದಲ್ಲಿ ಯಾವುದೇ ದೊಡ್ಡ ಸಮಸ್ಯೆಗಳು ಕಂಡುಬರುವುದಿಲ್ಲ. ಶಿಕ್ಷಣ ಜಾತಕ 2025 ರ ಪ್ರಕಾರ, ಉನ್ನತ ಶಿಕ್ಷಣದ ಅಂಶವಾದ ಗುರುವು ಜನವರಿಯಿಂದ ಕನ್ಯಾ ರಾಶಿಯವರಿಗೆ ಅನುಕೂಲಕರವಾಗಿರುತ್ತಾನೆ. 2024 ರ ಮೇ ಮಧ್ಯದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು. ಅದಕ್ಕೆ ತಕ್ಕಂತೆ ಶುಭ ಫಲಗಳು ಕೂಡಾ ದೊರೆಯುತ್ತದೆ. ಮೇ 2025 ರ ನಂತರ, ಗುರುವಿನ ಪ್ರಭಾವದಿಂದ ಕನ್ಯಾ ರಾಶಿಯ ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಉನ್ನತ ಶಿಕ್ಷಣವನ್ನು ಪಡೆಯುವ ಈ ರಾಶಿಚಕ್ರ ಚಿಹ್ನೆಯ ವಿದ್ಯಾರ್ಥಿಗಳಿಗೆ ಈ ಗುರು ಸಂಕ್ರಮಣ ಬಹಳ ಅನುಕೂಲಕರವಾಗಿದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ