logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sarpa Dosha: ಸರ್ಪದೋಷ ನಿವಾರಣೆಗೆ ಸುಲಭ ಪರಿಹಾರಗಳಿವು, ನಾಗರಪಂಚಮಿ ದಿನ ಈ ವಿಚಾರ ಮರೆಯದಿರಿ

Sarpa Dosha: ಸರ್ಪದೋಷ ನಿವಾರಣೆಗೆ ಸುಲಭ ಪರಿಹಾರಗಳಿವು, ನಾಗರಪಂಚಮಿ ದಿನ ಈ ವಿಚಾರ ಮರೆಯದಿರಿ

HT Kannada Desk HT Kannada

Aug 18, 2023 03:38 PM IST

google News

ನಾಗ ಪಂಚಮಿ 2023 (ಸಾಂಕೇತಿಕ ಚಿತ್ರ)

  • Sarpa Dosha Remedy: ಜನ್ಮಕುಂಡಲಿಯಲ್ಲಿ ಬಂದಿರುವ ಸರ್ಪ ದೋಷ ನಿವಾರಣೆಗೆ ಅನುಸರಿಸಬೇಕಾದ ವಿಧಿ ವಿಧಾನಗಳು ಯಾವುವು?, ಈ ವಿಧಿ ವಿಧಾನಕ್ಕೂ ನಾಗನಿಗೆ ಸಂಬಂಧಿಸಿದ ಹಬ್ಬ ಹರಿದಿನ ಮಾಡುವ ಪೂಜೆಗೂ ಸಂಬಂಧವಿದೆಯೇ? ಈ ರೀತಿ ಸಾಮಾನ್ಯ ಪೂಜೆ ಮಾಡಿಸಿದರೆ ಜನ್ಮಕುಂಡಲಿಯ ಸರ್ಪದೋಷ ನಿವಾರಣೆಯಾಗುವುದೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. 

ನಾಗ ಪಂಚಮಿ 2023 (ಸಾಂಕೇತಿಕ ಚಿತ್ರ)
ನಾಗ ಪಂಚಮಿ 2023 (ಸಾಂಕೇತಿಕ ಚಿತ್ರ) (PC - Dr. Sudheendhra Putty )

ನಾಗಪಂಚಮಿ ಪೂಜೆಯಿಂದ ಸರ್ಪ ದೋಷ ನಿವಾರಣೆ ಆಗುವುದೇ.ನಿಜಕ್ಕೂ ಸುಲಭವಾಗಿ ಉತ್ತರಿಸಲು ಆಗದಂತಹ ಪ್ರಶ್ನೆ.ಆದರೆ ನಾಗಚೌತಿ ಮತ್ತು ನಾಗರಪಂಚಮಿಗಳು ಸಹ ಗೌರಿ–ಗಣೇಶ,ದೀಪಾವಳಿಯಂತಹ ಒಂದು ಹಬ್ಬ.ಆದ್ದರಿಂದ ನಾಗರ ಪಂಚಮಿ ಪೂಜೆಯಿಂದ ಕುಂಡಲಿಯಲ್ಲಿರುವ ಸರ್ಪ ದೋಷ ನಿವಾರಣೆಗೆ ಸೂಕ್ತ ಪರಿಹಾರ ಕಂಡುಹಿಡಿಯುವುದು ಸಾಧ್ಯ.

ತಾಜಾ ಫೋಟೊಗಳು

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಕೆಲಸದ ಸ್ಥಳದಲ್ಲಿ ಬದಲಾವಣೆ ಸಾಧ್ಯತೆ, ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿರಿ; ನಾಳಿನ ದಿನಭವಿಷ್ಯ

Dec 17, 2024 05:14 PM

12 ವರ್ಷಗಳ ನಂತರ ಮೀನ ರಾಶಿಯಲ್ಲಿ ಲಕ್ಷ್ಮೀನಾರಾಯಣ ರಾಜಯೋಗ: 2025 ಈ 3 ರಾಶಿಯವರಿಗೆ ದೊರೆಯಲಿದೆ ಲಕ್ಷ್ಮೀ ಕಟಾಕ್ಷ

Dec 16, 2024 09:59 PM

ನಾಳಿನ ದಿನ ಭವಿಷ್ಯ: ಆರ್ಥಿಕ ವಿಚಾರದಲ್ಲಿ ಏರಿಳಿತಗಳನ್ನು ಕಾಣುತ್ತೀರಿ, ಸಂಗಾತಿಗೆ ಇಷ್ಟವಾಗದ ಯಾವುದೇ ಕೆಲಸ ಮಾಡಬೇಡಿ

Dec 16, 2024 03:08 PM

ಶೀಘ್ರದಲ್ಲೇ ಕುಂಭ ರಾಶಿಯಲ್ಲಿ ಶುಕ್ರ, ಶನಿ ಸಂಯೋಗ: ಡಿಸೆಂಬರ್‌ನಿಂದ ಈ 5 ರಾಶಿಯವರ ಜೀವನವೇ ಬದಲಾಗಲಿದೆ

Dec 15, 2024 09:24 PM

ಕೇವಲ ಪೂಜೆಯಿಂದಷ್ಟೇ ಯಾವುದೇ ವ್ರತಗಳಲ್ಲಿ ಪರಿಹಾರ ದೊರೆಯುವುದಿಲ್ಲ.ವ್ರತದ ಕೊನೆಯಲ್ಲಿ ಉಪಾಯನದಾನ ಎಂಬ ಕರ್ತವ್ಯ ಒಂದಿದೆ.ಕೋಟಿ ಕೋಟಿ ಖರ್ಚು ಮಾಡಿ ಯಾವುದೇ ವ್ರತವನ್ನು ವಿಜೃಂಬಣೆಯಿಂದ ಮಾಡಿದರು,ಬಂದವರಿಗೆ ಹೊಟ್ಟೆ ತುಂಬ ಊಟವನ್ನು ಬಡಿಸಿ ಅವರ ಹಸಿವನ್ನು ನೀಗಿಸಬೇಕು.ಆನಂತರ ಬಂದವರಿಗೆ ಕೈಲಾದಷ್ಟು ದಕ್ಷಿಣೆ-ತಾಂಬೂಲವನ್ನು ನೀಡಬೇಕು.ಇದಕ್ಕೂ ಮುನ್ನ ಉಪಾಯನದಾನವನ್ನು ನೀಡಲೇಬೇಕು.

ಕೆಲವು ಜೋತಿಷ್ಯ ಶಾಸ್ತ್ರಗಳ ಅನುಸಾರ ಕುಂಡಲಿಯಲ್ಲಿನ ಸರ್ಪದೋಷದ ಆದಿಯಾಗಿ ಯಾವುದೇ ದೋಷವು ಕೇವಲ ಇಂದಿನ ಜನ್ಮಕ್ಕೆ ಸಂಬಂಧಿಸಿದ್ದಲ್ಲ ಕೆಲವೊಮ್ಮೆ ಹಿಂದಿನ ಜನ್ಮವೊಂದ ಪ್ರತಿಫಲನವಾಗಿರಬಹುದು. ದೇಹಕ್ಕಷ್ಟೇ ಸಾವು ಆದರೆ ಆತ್ಮಕ್ಕಲ್ಲ. ಪುನರ್ಜನ್ಮದ ಬಗ್ಗೆ ಎಲ್ಲರೂ ಕೇಳಿದ್ದೇವೆ. ಶ್ರದ್ದೆ,ಭಕ್ತಿ ಮತ್ತು ನಂಬಿಕೆಗಳೆ ಅತಿ ಮುಖ್ಯ. ಕೆಲವು ವಿಚಾರಗಳು ನಮ್ಮ ನಂಬಿಕೆ ಮತ್ತು ಸ್ವಂತ ನಿರ್ಧಾರಗಳನ್ನು ಅವಲಂಬಿಸಿರುತ್ತದೆ.

ಕೆಲವರು ವಿಜೃಂಭಣೆಯಿಂದ ಪೂಜೆಯನ್ನು ಮಾಡುತ್ತಾರೆ ಆದರೆ ಕೈ ತೊರೆದು ದಾನ- ಧರ್ಮವನ್ನು ಮಾಡುವುದಿಲ್ಲ.ದಾನ ಧರ್ಮ ಎಂದರೆ ಸಾವಿರ ಅಥವ ಲಕ್ಷ ರೂಪಾಯಿ ಎಂದರ್ಥವಲ್ಲ. ಒಳ್ಳೆಯ ಮನಸ್ಸಿನಿಂದ ನಾವು ನೀಡುವ ಕೇವಲ ಒಂದು ರೂಪಾಯಿ ಸಹ ನಮ್ಮನ್ನು ಆಪತ್ತಿನಿಂದ ಪಾರು ಮಾಡುತ್ತದೆ. ಮತ್ತೊಂದು ಮುಖ್ಯ ವಿಚಾರವೆಂದರೆ ಪೂಜೆಗೆ ಆಗಮಿಸಿದ ಪ್ರತಿಯೊಬ್ಬರನ್ನು ಗೌರವದಿಂದ ಕಾಣಬೇಕು.ಪ್ರತಿಯೊಬ್ಬರ ಆತ್ಮದಲ್ಲಿಯೂ ದೇವರು ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಅವಮಾನಗೊಂಡವರು ಮನಸ್ಸಿನಲ್ಲಿಯೇ ಕೆಟ್ಟದ್ದನ್ನು ಹಾರೈಸಿದರೆ ಕತೃಗಳು ಮಾಡುವ ಪೂಜೆ-ಪುನಸ್ಕಾರ, ಹವನ-ಹೋಮಗಳಿಂದ ಯಾವುದೇ ಶುಭಫಲಗಳು ದೊರೆಯುವುದಿಲ್ಲ. ಅದರ ಬದಲಾಗಿ ಕರ್ತೃಗಳು ತೊಂದರೆ ಪಡುವುದು ಶತಸಿದ್ಧ.

ಹಿಂದಿನ ಕಾಲದಲ್ಲಿ ಪ್ರತಿಯೊಂದು ವಿಚಾರಗಳಿಗೂ ಕುಟುಂಬದ ಹಿರಿಯರ ಆಶೀರ್ವಾದವನ್ನು ಪಡೆಯುತ್ತಿದ್ದರು.ಈಗ ಆ ಸಂಪ್ರದಾಯವೇ ಕ್ರಮೇಣವಾಗಿ ಕಣ್ಮರೆಯಾಗುತ್ತಿದೆ.ಇಂದು ಆಶೀರ್ವಾದ ಕೇಳುವುದು, ಆಶೀರ್ವಾದ ಕೊಡುವುದು ಕೇವಲ ಸಂದೇಶಗಳ ಮುಖಾಂತರ ನಡೆದು ಹೋಗುತ್ತದೆ. ಪೂಜೆಯನ್ನು ಆರಂಭಿಸುವ ಮೊದಲು ಕುಟುಂಬದ ಹಿರಿಯರ ಆಶೀರ್ವಾದವನ್ನು ಪಡೆಯಲೇಬೇಕು.ಆಶೀವಾದ ಎಂದರೆ ಅದು ಸಾಮಾನ್ಯವಾದ ವಿಚಾರವಲ್ಲ. ಆಶೀರ್ವಾದ ಮಾಡುವವರ ಪುಣ್ಯದಲ್ಲೆ ಅಲ್ಪಭಾಗ ದೊರೆಯುತ್ತದೆ.

ರಾಹುವು ಮೇಷ, ಕಟಕ, ತುಲಾ, ಅಥವಾ ಮಕರ ರಾಶಿಗಳಲ್ಲಿ ಇದ್ದು ಕ್ರಮೇಣವಾಗಿ ಜಾತಕನ ಜನ್ಮ ಲಗ್ನವು ಧನಸ್ಸು, ಮೀನಾ, ಮಿಥುನ ಅಥವ ಕನ್ಯಾ ರಾಶಿಗಳಾಗಿದ್ದಲ್ಲಿ, ಜಾತಕನು ತನಗೆ ಅರಿವಿಲ್ಲದೆ ನಾಗರ ಹಾವಿನ ಮೊಟ್ಟೆಗಳಿಗೆ ತೊಂದರೆ ನೀಡಿರುತ್ತಾನೆ. ಇವರು ನಾಗರ ಪಂಚಮಿಯ ಪೂಜೆ ಮಾಡಿ ಬಡತನದಲ್ಲಿ ಇರುವ ಗರ್ಭಿಣಿ ಸ್ತ್ರೀಗೆ ಸಹಾಯ ಮಾಡಿದರೆ ಜಾತಕದಲ್ಲಿನ ಈ ದೋಷವು ನಿವಾರಣೆ ಯಾಗುತ್ತದೆ.

ಜಾತಕನ ಜನ್ಮ ಲಗ್ನವು ಮೇಷ,ಕಟಕ,ತುಲಾ,ಅಥವ ಮಕರ ರಾಶಿಗಳಾಗಿದ್ದು ಕ್ರಮವಾಗಿ ರಾಹುವು ಸಿಂಹ,ವೃಶ್ಚಿಕ,ಕುಂಭ ಅಥವಾ ವೃಷಭ ರಾಶಿಯಲ್ಲಿ ಇದ್ದರೆ ನಾಗರಹಾವು ವಾಸವಾಗಿರುವ ಹುತ್ತಕ್ಕೆ ನೆರಳು ನೀಡಿರುವ ಮರವನ್ನು ಕಡಿದಿರುತ್ತಾರೆ.ಈ ಕಾರಣದಿಂದಾಗಿ ನಾಗರ ಪಂಚಮಿಯ ದಿನದಂದು ಪೂಜೆ ಮಾಡಿ ವಂಶದ ಹಿರಿಯರು ನಾಗ ಪ್ರತಿಷ್ಠೆ ಮಾಡಿದ್ದಲ್ಲಿ ,ಅದಕ್ಕೆ ಗೂಡನ್ನು ಕಟ್ಟಿಸಿಕೊಡಬೇಕು. ಇಲ್ಲವಾದಲ್ಲಿ ಬೇರೆ ಯಾವುದೇ ವ್ಯಕ್ತಿಯು ನಾಗ ಪ್ರತಿಷ್ಠೆ ಮಾಡಿದ್ದರೂ ಆ ನಾಗರ ವಿಗ್ರಹಗಳಿಗೆ ನೆರಳು ನೀಡುವ ಗೂಡನ್ನು ಕಟ್ಟಿಸಿ ಕೊಡುವುದರಿಂದ ಈ ದೋಷವು ನಿವಾರಣೆಯಾಗುತ್ತದೆ

ಜಾತಕನ ಜನ್ಮ ಲಗ್ನವು ವೃಷಭ,ಸಿಂಹ,ವೃಶ್ಚಿಕ,ಅಥವಾ ಕುಂಭ ರಾಶಿಗಳಾಗಿದ್ದು ರಾಹುವು ಕ್ರಮವಾಗಿ ಕನ್ಯಾ, ಧನಸ್ಸು, ಮೀನಾ ಅಥವಾ ಮಿಥುನ ರಾಶಿಗಳಲ್ಲಿ ಜಾತಕರು ನಾಗರ ಹಾವಿನ ಮರಿಗಳಿಗೆ ತೊಂದರೆ ನೀಡಿರುತ್ತಾರೆ. ಈ ಕಾರಣದಿಂದಾಗಿ ಜಾತಕರು ನಾಗರ ಪಂಚಮಿಯದಿನ ಪೂಜೆ ಮಾಡಿ, ಆಗಷ್ಟೇ ಜನಿಸಿದ ಮೂರು ತಿಂಗಳ ಒಳಗಿನ ಮಗುವಿಗೆ ಯಾವುದೇ ರೀತಿಯ ಸಹಾಯ ಮಾಡುವ ಮೂಲಕ ಸರ್ಪ ದೋಷದಿಂದ ಪಾರಾಗಬಹುದು.

ಅಂದು ಉಪವಾಸ ಮಾಡಬಾರದು.ಆದರೆ ನಾಗ ಚೌತಿ ಮತ್ತು ನಾಗರ ಪಂಚಮಿ ಎಂದು ಒಗ್ಗರಣೆ ಹಾಕುವುದು, ಚಪಾತಿ ಮುಂತಾದ ಸುಡುವ ತಿಂಡಿಯನ್ನು ಮಾಡಬಾರದು. ಕುಟುಂಬದ ಹೆಣ್ಣು ಮಗಳು ಮತ್ತು ಅಳಿಯನನ್ನು ಮನೆಯ ಆಹ್ವಾನಿಸಿ ಅವರಿಗೆ ಹೊಸ ವಸ್ತ್ರಗಳನ್ನು ಇಟ್ಟು ಉಡುಗೊರೆಯಾಗಿ ದಕ್ಷಿಣಯ ಸಮೇತ ನೀಡಬೇಕು. ಇದರಿಂದಾಗಿ ಸರ್ಪ ದೋಷದಿಂದ ವಿಮುಕ್ತರಾಗಬಹುದು.

ಎಚ್.ಸತೀಶ್, ಜ್ಯೋತಿಷಿ

(Festivals of Karnataka details from Hindustan Times Kannada. ಕರ್ನಾಟಕದ ಹಬ್ಬ, ಸಂಸ್ಕೃತಿಯ ಬಗ್ಗೆ ಮತ್ತಷ್ಟು ಮಾಹಿತಿಗೆ kannada.hindustantimes.com ಜಾಲತಾಣ ನೋಡಿ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ