ಗೂಳೂರು ಗಣಪತಿಯ ವಿಶೇಷ; ಕಪ್ಪುಶಿಲೆಯ ವಿಗ್ರಹಕ್ಕೆ ಪೂಜೆ ಸಲ್ಲಿಸಿದಲ್ಲಿಆಶಾದಾಯಕ ಫಲ
Nov 08, 2024 08:07 PM IST
ಗೂಳೂರು ಗಣಪತಿಯ ವಿಶೇಷ; ಕಪ್ಪುಶಿಲೆಯ ವಿಗ್ರಹಕ್ಕೆ ಪೂಜೆ ಸಲ್ಲಿಸಿದಲ್ಲಿಆಶಾದಾಯಕ ಫಲ
- Gulur Ganapati Special: ಯಾವುದೇ ಕೆಲಸ ಆರಂಭಿಸುವ ಮುನ್ನ ಗೂಳೂರು ಗಣಪತಿ ದೇವಾಲಯದಲ್ಲಿ ಪೂಜೆ ಮಾಡಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಹೊಸ ವಾಹನ ಕೊಂಡರೂ ಮೊದಲು ಈ ಕ್ಷೇತ್ರದಲ್ಲಿ ಪೂಜೆ ಮಾಡಿಸುವ ಸಂಪ್ರದಾಯ ಇದೆ.
ಗೂಳೂರು ತುಮಕೂರಿನ ಹತ್ತಿರದಲ್ಲಿ ಇರುವ ಕೈದಾಳಕ್ಕೆ ಹೊಂದಿಕೊಂಡಿರುವ ಧಾರ್ಮಿಕ ಕ್ಶೇತ್ರವಾಗಿದೆ. ಇಲ್ಲಿರುವ ಮುಖ್ಯವಾದ ದೇವರೆ ಶ್ರೀ ಮಹಾಗಣಪತಿ. ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಈ ದೇವಾಲಯದಲ್ಲಿ ಪೂಜೆ ಮಾಡಿಸುವ ಸಂಪ್ರದಾಯ ಬೆಳೆದು ಬಂದಿದೆ. ಹೊಸ ವಾಹನವನ್ನು ಕೊಂಡರೂ ಮೊದಲು ಈ ಕ್ಷೇತ್ರದಲ್ಲಿ ಪೂಜೆ ಮಾಡಿಸುವ ಸಂಪ್ರದಾಯ ಬೆಳೆದು ಬಂದಿದೆ. ನೋಡಲು ಅತಿ ಸುಂದರವಾದ ಗೋಪುರವು ಎಲ್ಲರ ಗಮನ ಸೆಳೆಯುತ್ತದೆ. ಇಲ್ಲಿರುವ ಕಪ್ಪುಶಿಲೆಯ ವಿಗ್ರಹಕ್ಕೆ ಪೂಜೆ ಸಲ್ಲಿಸಿದಲ್ಲಿಆಶಾದಾಯಕ ಫಲಗಳು ದೊರೆಯುತ್ತವೆ.
ತಾಜಾ ಫೋಟೊಗಳು
ಭೃಗು ಮಹರ್ಷಿಯು ಬ್ರಹ್ಮನ ಹೃದಯದಲ್ಲಿ ಹುಟ್ಟಿದವರು. ಇವರು ಬ್ರಹ್ಮರ್ಷಿಗಳು. ಇವರು ಅಗ್ನಿಗೆ ಸರ್ವಭಕ್ಷಕನಾಗು ಎಂಬ ಶಾಪವನ್ನು ನೀಡುತ್ತಾರೆ. ಭಗವಾನ್ ವಿಷ್ಣುವಿಗೆ ಇವರು ಅನೇಕ ಅವತಾರಗಳನ್ನು ತಳೆದು ಗರ್ಭವಾಸ ಅನುಭವಿಸುವಂತೆ ಶಾಪವನ್ನು ನೀಡುತ್ತಾರೆ. ವರುಣದೇವನಿಂದ ರಸ ವಿದ್ಯೆಯನ್ನು ಕಲಿಯುತ್ತಾರೆ. ಇದನ್ನು ವಾರುಣೀ ವಿದ್ಯೆ ಎಂದು ಕರೆಯುತ್ತಾರೆ. ಆಗಾಧ ಪ್ರಮಾಣದ ವಿದ್ಯೆಯು ಇವರಿಗೆ ಸುಲಭವಾಗಿ ಒಲಿಯುತ್ತದೆ. ಇದರಿಂದ ಇವರಿಗೆ ಗರ್ವವೂ ಬರುತ್ತದೆ. ಹಾಗೆಯೇ ಅಪಾರವಾದ ಕೋಪವು ಇರುತ್ತದೆ. ಇವರು ಸಪ್ತರ್ಷಿಗಳ್ಲಲಿ ಒಬ್ಬರು. ಇವರು ಗೂಳೂರನ್ನು ಗೂಳಿಪಟ್ಟಣ ಎಂದು ಕರೆಯುತ್ತಿದ್ದರು. ಒಮ್ಮೆ ಇವರು ಬಾಧ್ರಪದ ಮಾಸದಲ್ಲಿ ಗಣೇಶ ಚತುರ್ಥಿಯದಿನದಂದು ಗೂಳೂರಿಗೆ ಆಗಮಿಸುತ್ತಾರೆ.
ಗಣೇಶನ ಪೂಜೆಯನ್ನು ಮಾಡಲು ಅನುವಾದಾಗ ಇವರಿಗೆ ಅಲ್ಲಿ ಗಣಪತಿಯ ದೇವಾಲಯವು ಕಾಣುವುದಿಲ್ಲ. ಇವರಿಗೆ ದಾರಿ ತೋರಲು ಸಹ ಯಾರು ಸಿಗುವುದಿಲ್ಲ. ತಕ್ಷಣವೇ ಅತಿಯಾದ ಕೋಪಕ್ಕೆ ಒಳಗಾಗುತ್ತಾರೆ. ಕ್ರೋಧದಿಂದಲೇ ಗೂಳೂರಿನ ಕೆರೆಗೆ ತೆರಳಿ ಜೇಡಿಮಣ್ಣನ್ನು ತರುತ್ತಾರೆ. ಅದರಿಂದ ಸುಂದರವಾದ ಗಣಪತಿ ಮೂರ್ತಿಯನ್ನು ಮಾಡುತ್ತಾರೆ. ಅಲ್ಲಿಯೇ ಅದನ್ನು ಪ್ರತಿಷ್ಠಾಪಿಸಿ ವೇದ ಮಂತ್ರಗಳಿಂದ ಪಾಂಗಿತವಾಗಿ ಪೂಜೆಯನ್ನು ಸಲ್ಲಿಸುತ್ತಾರೆ. ಮಳೆಯಿಲ್ಲದೆ ಬರವಾಗಿದ್ದ ಆ ಊರಿನಲ್ಲಿ ವರುಣದ ಆಗಮನವಾಗುತ್ತದೆ. ಇದನ್ನು ಕಂಡ ಊರಿನ ಜನತೆ ಆಶ್ಚರ್ಯಗೊಳ್ಳುತ್ತಾರೆ. ಭಯ ಭಕ್ತಿಗಳಿಂದ ಭೃಗು ಮಹರ್ಷಿಗಳ ಪಾದಗಳಿಗೆ ನಮಸ್ಕರಿಸಿ.
ಗಣಪತಿಯ ಪೂಜೆಯನ್ನು ಮಾಡುವ ವಿಧಿ ವಿಧಾನಗಳನ್ನು ತಿಳಿಸಲು ಹೇಳುವಂತೆ ವಿನಂತಿಸಿಕೊಳ್ಳೂತ್ತಾರೆ. ಆದಿನದಿಂದ ಮಣ್ಣಿನ ಗಣಪತಿಯನ್ನು ಪೂಜಿಸುವ ಆಚರಣೆ ಆರಂಭವಾಯಿತೆಂದು ತಿಳಿದು ಬರುತ್ತದೆ. ಗ್ರಾಮದ ಜನರಿಗೆ ಮೊದಲು ಕೆರೆಯ ಜೇಡಿಮಣ್ಣಿನಿಂದ ಗಣೇಶನ ವಿಗ್ರಹ ತಯಾರಿಸಲು ತಿಳಿಸುತ್ತಾರೆ. ಆ ನಂತರ ಎಲ್ಲರಿಗೂ ಗಣಪತಿಯ ಪೂಜಾ ವಿಧಾನದ ಬಗ್ಗೆ ತಿಳಿಸುತ್ತಾರೆ. ಇದೇ ಅಲ್ಲಿನ ಪದ್ದತಿ ಆಗುತ್ತದೆ. ಇಂದಿಗೂ ಸಹ ಗಣೇಶ ಚತುರ್ಥಿಯ ದಿನದಂದು ಮಣ್ಣನ್ನು ತಂದು ಗಣಪತಿಯ ವಿಗ್ರಹವನ್ನು ಮಾಡಲು ಆರಂಭಿಸುತ್ತಾರೆ. ನವರಾತ್ರಿಯ ವೇಳೆಗೆ ಈ ಕಾರ್ಯವು ಪೂರ್ಣಗೊಳ್ಳುತ್ತದೆ.
ಕಾರ್ತಿಕ ಮಾಸದಲ್ಲಿ ವಿಶೇಷವಾದ ಪೂಜೆ ಪುನಸ್ಕಾರ
ದೊಡ್ಡ ಗಣಪತಿಯ ಹೊಟ್ಟೆಯ ಒಳಗೆ ಚಿಕ್ಕಗಣಪತಿಯ ವಿಗ್ರಹ ಮತ್ತು ಪೂಜಾ ಪ್ರಸಾದವನ್ನು ಇಟ್ಟು ಮುಚ್ಚಲಾಗುತ್ತದೆ. ದೀಪಾವಳಿಯಂದು ಆರಂಭವಾಗುವ ಪೂಜೆಯು ಕಾರ್ತಿಕ ಮಾಸದಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳಿಗೆ ಸಾಕ್ಷಿಯಾಗುತ್ತದೆ. ಆನಂತರ ಗಣಪತಿಯ ವಿಗ್ರಹದ ವಿಸರ್ಜನೆ ಆಗುತ್ತದೆ. ಈ ಸಮಾರಂಭದಲ್ಲಿ ಹಿಂದಿನ ಕಾಲದಲ್ಲಿ ರಾಜಾನುರಾಜರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಮೈಸೂರಿನ ಅರಸರು ಇಲ್ಲಿ ವಿಶೇಷವಾದ ಪೂಜೆ ಸಲ್ಲಿಸಿದ್ದರು ಎಂಬುದಕ್ಕೆ ಪುರಾವೆಗಳಿವೆ. ದೇವಾಲಯದ ಇತಿಹಾಸವನ್ನು ಕಲಿತ ನಂತರ, ನವರಾತ್ರಿಯ ಸುತ್ತ ಮತ್ತೊಂದು ಭೇಟಿ ಅತ್ಯಗತ್ಯ ಎಂದು ನಾನು ಅರಿತುಕೊಂಡೆ. ದೇವಾಲಯದ ಎದುರು ಏಕಶಿಲಾ ಸ್ತಂಭವಿದೆ.
ಸ್ತಂಭದ ಪಕ್ಕದಲ್ಲಿ ಗ್ರಾನೈಟ್‌ನಿಂದ ಮಾಡಿದ ಗಣೇಶನ ವಿಗ್ರಹವಿದೆ. ವಿಗ್ರಹವು ಪ್ರಾಚೀನವಾದುದು, ಬಹುಶಃ ನಾಲ್ಕೈದು ಶತಮಾನಗಳಷ್ಟು ಹಳೆಯದು. ಇದು ಎರಡು ಹಂತಗಳನ್ನು ಹೊಂದಿರುವ ದೇವಾಲಯದ ಮುಖ್ಯ ಸಭಾಂಗಣವಾಗಿದೆ. ಕಾರ್ತಿಕ ಅಮಾವಾಸ್ಯೆಯಲ್ಲಿ ಮಹಾ ಗಣಪತಿ ಮೂರ್ತಿಯನ್ನು ತಯಾರಿಸಿ ಅಲ್ಲಿಯೇ ನೆಲೆಸುತ್ತಾರೆ. ವಿಗ್ರಹವು ತುಂಬಾ ದೊಡ್ಡದಾಗಿದೆ, ಅದು ಗರ್ಭಗುಡಿಯನ್ನು ಸಂಪೂರ್ಣವಾಗಿ ಮರೆಮಾಡುತ್ತದೆ.
ಗರ್ಭಗುಡಿಯೊಳಗೆ ಕಪ್ಪು ಕಲ್ಲಿನ ವಿಗ್ರಹ
ಇದು ನಮ್ಮ ನಾಡಿನ ವಿಶಿಷ್ಟ ಗಣೇಶೋತ್ಸವಗಳಲ್ಲಿ ಒಂದಾಗಿದೆ. ನವರಾತ್ರಿ/ದೀಪಾವಳಿ ಸಮಯದಲ್ಲಿ ಮತ್ತೊಮ್ಮೆ ಗೂಳೂರಿಗೆ ಭೇಟಿ ನೀಡಿ ಮತ್ತು ಒಮ್ಮೆ ಮಹಾ ಗಣಪತಿಯನ್ನು ನೋಡುವ ಆಶಯದೊಂದಿಗೆ.