logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Holi Festival: ಹೋಳಿ ಹಬ್ಬದಲ್ಲಿ ಬಳಸುವ ಪ್ರತಿಯೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ; ಯಾವ ರಂಗು ಏನನ್ನು ಸೂಚಿಸುತ್ತದೆ?

Holi Festival: ಹೋಳಿ ಹಬ್ಬದಲ್ಲಿ ಬಳಸುವ ಪ್ರತಿಯೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ; ಯಾವ ರಂಗು ಏನನ್ನು ಸೂಚಿಸುತ್ತದೆ?

Rakshitha Sowmya HT Kannada

Mar 16, 2024 12:25 PM IST

google News

ಹೋಳಿ ಹಬ್ಬದಲ್ಲಿ ಬಳಸುವ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ

  • Holi Festival: ಮಾರ್ಚ್‌ 25 ರಂದು ದೇಶಾದ್ಯಂತ ಹೋಳಿ ಆಚರಿಸಲಾಗುತ್ತಿದೆ. ಹಬ್ಬದಲ್ಲಿ ಬಳಸುವ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ. ಹಸಿರು ಬಣ್ಣ ಪ್ರಕೃತಿಯನ್ನು ಪ್ರತಿನಿಧಿಸಿದರೆ ಕೇಸರಿ ಅಗ್ನಿಯನ್ನು ಪ್ರತಿನಿಧಿಸುತ್ತದೆ. ಉಳಿದ ಯಾವ ಬಣ್ಣ ಏನು ಅರ್ಥ? ಇಲ್ಲಿದೆ ಮಾಹಿತಿ. 

ಹೋಳಿ ಹಬ್ಬದಲ್ಲಿ ಬಳಸುವ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ
ಹೋಳಿ ಹಬ್ಬದಲ್ಲಿ ಬಳಸುವ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ (PC: Unsplash)

Holi Colors: ಹೋಳಿ ಹಬ್ಬ ಹತ್ತಿರ ಬರುತ್ತಿದೆ. ಬಣ್ಣದ ಓಕುಳಿಯಲ್ಲಿ ಮೀಯಲು ಜನರು ಕಾಯುತ್ತಿದ್ದಾರೆ. ದೊಡ್ಡವರು ಚಿಕ್ಕವರು ಜಾತಿ ಎಂಬ ತಾರತಮ್ಯವಿಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಒಬ್ಬರ ಮೇಲೆ ಮತ್ತೊಬ್ಬರು ರಂಗು ಎರಚಿ ಸಂಭ್ರಮಸುತ್ತಾರೆ. ಶುಭಾಶಯ, ಸಿಹಿ ವಿನಿಮಯ ಮಾಡಿಕೊಂಡು ಹಬ್ಬ ಆಚರಿಸುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಹೋಳಿ ಆಡುವಾಗ ನಾವು ವಿವಿಧ ಬಣ್ಣಗಳನ್ನು ಬಳಸುತ್ತೇವೆ. ಆದರೆ ಒಂದೊಂದು ಬಣ್ಣವೂ ಒಂದೊಂದು ಅರ್ಥ ನೀಡುತ್ತದೆ. ಶಾಂತಿ, ಪ್ರೀತಿಯ ಸಂಕೇತವನ್ನು ಪ್ರತಿನಿಧಿಸುತ್ತದೆ ಎಂಬುದು ನಿಮಗೆ ಗೊತ್ತೇ? ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಪ್ರತಿಯೊಂದು ಬಣ್ಣಕ್ಕೂ ತನ್ನದೇ ಆದ ಮಹತ್ವವಿದೆ ಯಾವ ಬಣ್ಣಕ್ಕೆ ಏನು ಅರ್ಥ ನೋಡೋಣ.

ಕೆಂಪು ಬಣ್ಣ

ಕೆಂಪು ಬಣ್ಣವು ಇಂದ್ರೀಯತೆ ಮತ್ತು ಶುದ್ಧತೆ ಎರಡನ್ನೂ ಸಂಕೇತಿಸುತ್ತದೆ. ಹಿಂದೂ ಧರ್ಮದಲ್ಲಿ ಕೆಂಪು ಬಣ್ಣವು ಪ್ರಮುಖ ಬಣ್ಣವಾಗಿದೆ. ಮದುವೆ, ಹಬ್ಬ ಇತ್ಯಾದಿಗಳಲ್ಲಿ ಹೆಚ್ಚಾಗಿ ಬಳಸುವ ಬಣ್ಣ ಇದಾಗಿದೆ. ಪ್ರಮುಖ ಸಂದರ್ಭಗಳಲ್ಲಿ ಹಣೆಯ ಮೇಲೆ ಕೆಂಪು ತಿಲಕವನ್ನು ಧರಿಸಲಾಗುತ್ತದೆ. ಮದುವೆಯ ಸಂಕೇತವಾಗಿ ಮಹಿಳೆಯರು ಕೆಂಪು ಬಿಂದಿ ಧರಿಸುತ್ತಾರೆ. ಮದುವೆ, ವ್ರತದ ಸಂದರ್ಭದಲ್ಲಿ ಕೆಂಪು ಸೀರೆ ಉಡಲು ಆಸಕ್ತಿ ತೋರಿಸುತ್ತಾರೆ. ದೇವಾದಿ ದೇವತೆಗಳು ಕೂಡ ಕೆಂಪು ಬಣ್ಣವನ್ನು ಪ್ರೀತಿಸುತ್ತಾರೆ. ಲಕ್ಷ್ಮಿ ದೇವಿಗೆ ಕೆಂಪು ಹೂವುಗಳನ್ನು ಅರ್ಪಿಸಲಾಗುತ್ತದೆ. ಈ ಬಣ್ಣವನ್ನು ಶಕ್ತಿ, ಧೈರ್ಯ, ದಾನ ಮತ್ತು ಪರಾಕ್ರಮದ ಸೂಚಕವೆಂದು ಪರಿಗಣಿಸಲಾಗುತ್ತದೆ.

ಕೇಸರಿ ಬಣ್ಣ

ಅಂಬರ್ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಬಣ್ಣವಾಗಿದೆ. ಇದು ಅಗ್ನಿಯನ್ನು ಪ್ರತಿನಿಧಿಸುತ್ತದೆ. ದೇಹ ಮತ್ತು ಮನಸ್ಸನ್ನು ಕಲ್ಮಶಗಳಿಂದ ಶುದ್ಧೀಕರಿಸಲಾಗಿದೆ ಎಂಬ ಸೂಚಕವಾಗಿ ಈ ಬಣ್ಣವನ್ನು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಸನ್ಯಾಸಿಗಳು ಹೆಚ್ಚಾಗಿ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಆಂಜನೇಯ ಸ್ವಾಮಿಗೆ ಸಂಬಂಧಿಸಿದಂತೆ ಕೇಸರಿ ಧ್ವಜವಿದೆ. ಹನುಮಂತನ ಇಡೀ ದೇಹವೂ ಇದೇ ಬಣ್ಣದ್ದಾಗಿದೆ.

ಹಸಿರು ಬಣ್ಣ

ಹಸಿರು ಪ್ರಕೃತಿಯನ್ನು ಪ್ರತಿನಿಧಿಸುತ್ತದೆ. ಇದು ಸಂತೋಷ, ಹೊಸ ಆರಂಭ ಮತ್ತು ಜೀವನದಲ್ಲಿ ಸಂತೋಷದ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಬಣ್ಣಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

ಹಳದಿ ಬಣ್ಣ

ಹಳದಿಯು ಜ್ಞಾನ, ಕಲಿಕೆಯನ್ನು ಪ್ರತಿನಿಧಿಸುತ್ತದೆ. ಸಂತೋಷ, ಶಾಂತಿ, ಧ್ಯಾನ, ದಕ್ಷತೆ, ಮಾನಸಿಕ ಬೆಳವಣಿಗೆಯನ್ನು ಸಂಕೇತಿಸುತ್ತದೆ. ವಸಂತ ಋತುವನ್ನು ಸೂಚಿಸುತ್ತದೆ. ಮನಸ್ಸನ್ನು ಪ್ರಚೋದಿಸುತ್ತದೆ. ಹಳದಿ ಬಣ್ಣದ ಬಟ್ಟೆ ಮತ್ತು ಹಳದಿ ಸಿಹಿತಿಂಡಿಗಳನ್ನು ವಿಷ್ಣು, ಕೃಷ್ಣ ಮತ್ತು ಗಣೇಶನಿಗೆ ಅರ್ಪಿಸಲಾಗುತ್ತದೆ. ವಸಂತ ಹಬ್ಬಗಳು ಹಳದಿ ಬಣ್ಣದಿಂದ ಪ್ರಾರಂಭವಾಗುತ್ತವೆ. ದುಷ್ಟಶಕ್ತಿಗಳನ್ನು ದೂರವಿಡಲು ಹಳದಿ ಬಣ್ಣವನ್ನು ಧರಿಸಲಾಗುತ್ತದೆ. ಅರಿಶಿನವು ಪವಿತ್ರವಾಗಿದೆ.

ಬಿಳಿ ಬಣ್ಣ

ಬಿಳಿ ಬಣ್ಣವು 7 ವಿಭಿನ್ನ ಬಣ್ಣಗಳ ಮಿಶ್ರಣವಾಗಿದೆ. ಇದು ಶುದ್ಧತೆ, ಗುಣಮಟ್ಟ, ಶುಚಿತ್ವ, ಶಾಂತಿ, ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. ಬುದ್ಧಿವಂತಿಕೆಯ ದೇವತೆಯಾದ ಸರಸ್ವತಿಯನ್ನು ಕೆಲವೊಮ್ಮೆ ಕಮಲದ ಮೇಲೆ ಕುಳಿತಿರುವಂತೆ ತೋರಿಸಲಾಗುತ್ತದೆ, ಬಿಳಿ ಬಣ್ಣ ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತದೆ. ಸಂತಾನದ ಸಂಕೇತವೂ ಹೌದು. ಆದರೆ ಹೋಳಿ ಆಚರಣೆಯಲ್ಲಿ ಬಿಳಿ ಬಣ್ಣವನ್ನು ಬಳಸಬಾರದು.

ನೀಲಿ ಬಣ್ಣ

ಸೃಷ್ಟಿಕರ್ತನು ಪ್ರಕೃತಿಗೆ ನೀಲಿ ಬಣ್ಣವನ್ನು ನೀಡಿದನು. ಆಕಾಶ, ಸಮುದ್ರ, ನದಿಗಳು ಮತ್ತು ಸರೋವರಗಳಲ್ಲಿ ನೀಲಿ ಬಣ್ಣವನ್ನು ಕಾಣಬಹುದು. ನೀಲಿ ಬಣ್ಣವು ಧೈರ್ಯ, ಪುರುಷತ್ವ, ಬಲವಾದ ಇಚ್ಛೆ, ಕಷ್ಟಕರ ಸಂದರ್ಭಗಳನ್ನು ಎದುರಿಸುವ ಸಾಮರ್ಥ್ಯ, ಸ್ಥಿರ ಮನಸ್ಸು ಮುಂತಾದ ಗುಣಗಳನ್ನು ಪ್ರತಿನಿಧಿಸುತ್ತದೆ. ಕೃಷ್ಣನ ದೇಹ ನೀಲಿ ಬಣ್ಣದಲ್ಲಿದೆ.

ಗುಲಾಬಿ ಬಣ್ಣ

ಹೋಳಿ ಆಚರಣೆಯಲ್ಲಿ ಹೆಚ್ಚಾಗಿ ಬಳಸುವ ಬಣ್ಣ ಗುಲಾಬಿ. ಯೌವನ, ಆರೋಗ್ಯವನ್ನು ಪ್ರತಿನಿಧಿಸುತ್ತದೆ. ಹೋಳಿ ಆಚರಣೆಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹುಡುಗಿಯರು ಹೆಚ್ಚು ಇಷ್ಟಪಡುವ ಬಣ್ಣ ಇದು.

ನಿಮ್ಮಿಷ್ಟವಾದ ಬಣ್ಣದೊಂದಿಗೆ ಈ ಬಾರಿ ಹೋಳಿ ಹಬ್ಬವನ್ನು ಆಚರಿಸಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ