logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Malavya Rajayoga: 2025ರ ಜನವರಿಯಲ್ಲಿ ಮಾಲವ್ಯ ರಾಜಯೋಗ; ಈ 5 ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಧನ ಲಾಭ

Malavya Rajayoga: 2025ರ ಜನವರಿಯಲ್ಲಿ ಮಾಲವ್ಯ ರಾಜಯೋಗ; ಈ 5 ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಧನ ಲಾಭ

Raghavendra M Y HT Kannada

Dec 02, 2024 07:40 AM IST

google News

ಮಾಲವ್ಯ ರಾಜಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಹೆಚ್ಚಿನ ಶುಭ ಫಲಗಳಿವೆ ಎಂಬುದನ್ನು ತಿಳಿಯೋಣ

    • 2025 ರ ಜನವರಿಯಲ್ಲಿ ಪ್ರಮುಖ ಗ್ರಹ ಬದಲಾವಣೆಗಳು ನಡೆಯುತ್ತವೆ. ಈ ಬದಲಾವಣೆಗಳು ಕೆಲವು ರಾಶಿಚಕ್ರದ ಚಿಹ್ನೆಗಳ ಜೀವನದಲ್ಲಿ ತಿರುವುಗಳನ್ನು ತರುತ್ತವೆ. 2025 ರ ಜನವರಿಯಲ್ಲಿ ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಮಾಲವ್ಯ ಯೋಗ ಉಂಟಾಗುತ್ತದೆ. ಇದು ಕೆಲವು ರಾಶಿಯವರನ್ನು ಶ್ರೀಮಂತರನ್ನಾಗಿ ಮಾಡುತ್ತದೆ.
ಮಾಲವ್ಯ ರಾಜಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಹೆಚ್ಚಿನ ಶುಭ ಫಲಗಳಿವೆ ಎಂಬುದನ್ನು ತಿಳಿಯೋಣ
ಮಾಲವ್ಯ ರಾಜಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಹೆಚ್ಚಿನ ಶುಭ ಫಲಗಳಿವೆ ಎಂಬುದನ್ನು ತಿಳಿಯೋಣ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಾಳವ್ಯ ರಾಜಯೋಗವು ಪಂಚ ಮಹಾಪುರುಷ ರಾಜಯೋಗಗಳಲ್ಲಿ ಅತ್ಯಂತ ಪವಿತ್ರ ಮತ್ತು ನಿರ್ಣಾಯಕವಾಗಿದೆ. ಶುಕ್ರನ ಸಂಕ್ರಮಣ ಬದಲಾವಣೆಯಿಂದ ಈ ಯೋಗವು ರೂಪುಗೊಳ್ಳುತ್ತದೆ. ಶುಕ್ರನು ಅದೃಷ್ಟ, ಸಮೃದ್ಧಿ, ಹಿರಿಮೆ, ಪ್ರೀತಿ, ಕೀರ್ತಿ, ಸಂಪತ್ತು ಹಾಗೂ ಆಕರ್ಷಣೆಯ ಸಂಕೇತವಾಗಿದೆ. ಶುಕ್ರನ ಸಂಕ್ರಮಣದಿಂದಾಗಿ ವ್ಯಕ್ತಿಯು ಧೈರ್ಯಶಾಲಿ, ಶಕ್ತಿಶಾಲಿ ಹಾಗೂ ಅದೃಷ್ಟಶಾಲಿಯಾಗುತ್ತಾನೆ. ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಶಾಂತವಾಗಿರುತ್ತಾನೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚುತ್ತದೆ. ಪ್ರೀತಿಯಲ್ಲಿ ಸಂತೋಷದ ಕ್ಷಣಗಳನ್ನು ಕಳೆಯುತ್ತಾನೆ. ಎಲ್ಲದರಲ್ಲೂ ಅದೃಷ್ಟವು ದಾರಿ ಮಾಡಿಕೊಡುತ್ತದೆ. ಅಗತ್ಯದ ಸಮಯದಲ್ಲಿ ಹಣವು ಹರಿದು ಬರುತ್ತದೆ ಮತ್ತು ಹೇರಳವಾಗಿ ಬರುತ್ತದೆ.

ತಾಜಾ ಫೋಟೊಗಳು

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ, ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ವಿವಾದಗಳನ್ನು ತಪ್ಪಿಸಿ

Dec 01, 2024 04:26 PM

Venus Transit: ಡಿಸೆಂಬರ್ 2 ರಿಂದ ಈ 3 ರಾಶಿಯವರ ಶುಕ್ರದೆಸೆ ಶುರು ನೋಡಿ, ಉದ್ಯೋಗದಲ್ಲಿ ಉನ್ನತಿ, ಆದಾಯ ವೃದ್ಧಿ, ಒಟ್ಟಿನಲ್ಲಿ ಅದೃಷ್ಟವಂತರು

Nov 30, 2024 06:55 PM

ಧನು ರಾಶಿಯಲ್ಲಿ ಸೂರ್ಯ ಸಂಚಾರ; ಈ 4 ರಾಶಿಚಕ್ರದವರು ಭಾರಿ ಅದೃಷ್ಟವಂತರು, ಶೀಘ್ರದಲ್ಲೇ ಕೈ ಸೇರಲಿದೆ ಧನ ಸಂಪತ್ತು, ಸುಖ ಸಂತೋಷಕ್ಕೂ ಇಲ್ಲ ಕೊರತೆ

Nov 30, 2024 05:54 PM

ಕನಸಲ್ಲಿ ಆನೆ ಬಂತಾ, ಎಷ್ಟು ಆನೆಗಳಿದ್ದವು, ಹೇಗಿದ್ದವು, ಆ ಕನಸಿನ ಅರ್ಥ ಏನು- ವಾಸ್ತು ತಜ್ಞ ಮುಕುಲ್ ರಸ್ತೋಗಿ ವಿವರಣೆ ಹೀಗಿದೆ ನೋಡಿ

Nov 30, 2024 04:19 PM

ಪಂಚಾಂಗದ ಪ್ರಕಾರ 2025 ರ ಜನವರಿ 28 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಉಂಟಾಗುವ ಮಾಲವ್ಯ ಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಚೆನ್ನಾಗಿ ಹೊಂದುತ್ತದೆ. ಈ ಅಪರೂಪದ ಯೋಗದಿಂದ ಯಾರಿಗೆ ಅದೃಷ್ಟ ಒಲಿಯುತ್ತದೆ ಎಂದು ತಿಳಿಯೋಣ.

ವೃಷಭ ರಾಶಿ

ಶುಕ್ರ ಅಧಿಪತ್ಯವಿರುವ ವೃಷಭ ರಾಶಿಯವರಿಗೆ ಈ ಮಾಲವ್ಯ ಯೋಗವು ಅನೇಕ ಲಾಭಗಳನ್ನು ತರುತ್ತದೆ. ಆವಿಷ್ಕಾರದ ಬಯಕೆ ಈಡೇರುತ್ತದೆ. ಆರ್ಥಿಕವಾಗಿ ಹೆಚ್ಚು ಲಾಭದಾಯಕ ದಿನಗಳನ್ನು ಕಾಣಬಹುದು. ವಾಹನ ಖರೀದಿಸುವ ನಿಮ್ಮ ಆಸೆ ಈಡೇರಲಿದೆ. ಅವಿವಾಹಿತರು ಈ ಸಮಯದಲ್ಲಿ ಮದುವೆಯ ಬಗ್ಗೆ ಒಳ್ಳೆಯ ಸುದ್ದಿ ಕೇಳುತ್ತಾರೆ. ಪೀಡಿಸುವ ಸಾಲದ ಸಂಕಟಗಳು ಕೊನೆಗೊಳ್ಳುತ್ತವೆ. ಪ್ರೀತಿ ಮತ್ತು ದಾಂಪತ್ಯ ಜೀವನದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ. ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ.

ಕಟಕ ರಾಶಿ

ಕಟಕ ರಾಶಿಯವರು ಮಾಲವ್ಯ ಯೋಗದಿಂದ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸುಧಾರಣೆ ಕಾಣುವರು. ಮೀನ ರಾಶಿಯಲ್ಲಿ ಶುಕ್ರ ಸಂಚಾರವು ಈ ರಾಶಿಯಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಯೋಜಿತ ಕೆಲಸವನ್ನು ನೀವು ಅಂದುಕೊಂಡತೆ ನಡೆಯುತ್ತವೆ. ಯಾವುದೇ ಚಿಂತೆಯಿಲ್ಲದೆ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲಾಗುತ್ತದೆ. ಈ ಯೋಗದಲ್ಲಿ ಅತಿ ದೊಡ್ಡ ಆರೋಗ್ಯ ಸಮಸ್ಯೆಗೂ ಪರಿಹಾರ ಸಿಗುತ್ತದೆ.

ತುಲಾ ರಾಶಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ತುಲಾವನ್ನು ಆಳುವ ಗ್ರಹ ಶುಕ್ರ. ಮಾಲವ್ಯ ಯೋಗವು ಶುಕ್ರನ ಸಂಕ್ರಮಣ ಬದಲಾವಣೆಯಿಂದ ತುಲಾ ರಾಶಿಯ ಸ್ಥಾನವನ್ನು ಬದಲಾಯಿಸುತ್ತದೆ. ಹಣಕಾಸಿನ ಲಾಭ ಹೆಚ್ಚಾಗುತ್ತದೆ. ನಿಮ್ಮ ಆದಾಯದ ಮೂಲಗಳು ಬಲಗೊಳ್ಳುತ್ತವೆ. ಇದು ನಿಮ್ಮ ಲಾಭವನ್ನು ಹೆಚ್ಚಿಸುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ.

ವೃಶ್ಚಿಕ ರಾಶಿ

ಮಾಲವ್ಯ ರಾಜಯೋಗದಿಂದಾಗಿ ವೃಶ್ಚಿಕ ರಾಶಿಯಲ್ಲಿ ಅತ್ಯುತ್ತಮ ಲಾಭವನ್ನು ಕಾಣಬಹುದು. ಅದರಲ್ಲೂ ಗೃಹಿಣಿಯರಿಗೆ ಅನುಕೂಲವಾಗಲಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಹಳೆಯ ಸಮಸ್ಯೆಗಳು ಬಗೆಹರಿಯುತ್ತವೆ. ಉತ್ತಮ ಆರ್ಥಿಕ ಸುಧಾರಣೆ ಇರುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂತೋಷವಾಗುತ್ತದೆ.

ಧನು ರಾಶಿ

ಮಾಳವ್ಯ ಯೋಗವು ಧನು ರಾಶಿಯವರಿಗೆ ಸೂಕ್ತವಾಗಿರುತ್ತದೆ. ಅನಾದಿ ಕಾಲದಿಂದ ಕಾಡುತ್ತಿದ್ದ ಹಳೆಯ ಸಮಸ್ಯೆಗಳು ಈಗ ಬಗೆಹರಿಯಲಿವೆ. ವ್ಯವಹಾರದಲ್ಲಿ ಬಹಳ ಲಾಭದಾಯಕ ದಿನಗಳು ಇರುತ್ತವೆ. ನೀವು ಪಾಲುದಾರಿಕೆ ವ್ಯವಹಾರ ಮಾಡುತ್ತಿದ್ದರೆ, ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. ಒಳ್ಳೆಯ ಸುದ್ದಿ ಕೇಳುತ್ತೀರಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ