ಅಕ್ಟೋಬರ್‌ನಲ್ಲಿ 2024ರ ಕೊನೆಯ ಸೂರ್ಯ ಗ್ರಹಣ; ಈ 2 ರಾಶಿಯವರಿಗೆ ಎಚ್ಚರಿಕೆ ಅಗತ್ಯ, ಇಲ್ಲಿದೆ ಕಾರಣ
Sep 23, 2024 09:47 AM IST
2024ರ ಅಕ್ಟೋಬರ್‌ನಲ್ಲಿ ಸಂಭವಿಸಲಿರುವ ಸೂರ್ಯ ಗ್ರಹಣದಿಂದ ಎರಡು ರಾಶಿಯವರಿಗೆ ಎಚ್ಚರಿಕೆಯಿಂದರಬೇಕೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ.
- 2024ರ ಅಕ್ಟೋಬರ್‌ನಲ್ಲಿ ಸಂಭವಿಸಲಿರುವ ಸೂರ್ಯ ಗ್ರಹಣದಿಂದ ಎರಡು ರಾಶಿಯವರಿಗೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರು ಎಚ್ಚರಿಕೆಯಿಂದರಬೇಕು. ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
2024ರ ಎರಡು ಸೂರ್ಯ ಗ್ರಹಣಗಳ ಪೈಕಿ ಏಪ್ರಿಲ್‌ನಲ್ಲಿ ಮೊದಲ ಗ್ರಹಣ ಸಂಭವಿಸಿದ್ದು, ಎರಡನೇ ಸೂರ್ಯ ಗ್ರಹಣ ಅಕ್ಟೋಬರ್ 2 ರಂದು ನಡೆಯಲಿದೆ. ಚಂದ್ರ ಗ್ರಹಣ ನಡೆದ ಹದಿನೈದು ದಿನಗಳ ನಂತರ ಸೂರ್ಯಗ್ರಹಣ ಸಂಭವಿಸುತ್ತಿದೆ. ವರ್ಷದ ಕೊನೆಯ ಮತ್ತು ಎರಡನೇ ಸೂರ್ಯಗ್ರಹಣ ಇದಾಗಿದೆ. ಪಿತೃ ಪಕ್ಷದ ಕೊನೆಯ ದಿನದಂದು ಸೂರ್ಯಗ್ರಹಣದ ನೆರಳು ಇರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಗ್ರಹಣಗಳು ಯಾವಾಗಲೂ ಅಮವಾಸ್ಯೆ ಮತ್ತು ಪೂರ್ಣಿಮಾ ತಿಥಿಗಳಲ್ಲಿ ಮಾತ್ರ ಸಂಭವಿಸುತ್ತವೆ. ಅಮವಾಸ್ಯೆ ತಿಥಿಯಂದು ಸೂರ್ಯಗ್ರಹಣ ಮತ್ತು ಪೂರ್ಣಿಮಾ ತಿಥಿಯಂದು ಚಂದ್ರಗ್ರಹಣ ಸಂಭವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಕ್ಟೋಬರ್ 2 ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅಂದು ಸರ್ವಪಿತೃ ಅಮವಾಸ್ಯೆ ಇರುತ್ತೆ. ಇದು ಪಿತ್ರ ಪಕ್ಷದ ಕೊನೆಯ ದಿನ. ಈ ದಿನದಂದು ಎಲ್ಲಾ ಪೂರ್ವಜರಿಗೆ ಭೂಮಿಯಿಂದ ಬೀಳ್ಕೊಡಲಾಗುತ್ತೆ ಎಂದು ಹೇಳಲಾಗುತ್ತದೆ.
ತಾಜಾ ಫೋಟೊಗಳು
ಜ್ಯೋತಿಷ್ಯದಲ್ಲಿ ಸೂರ್ಯ ಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಸೂರ್ಯ ಗ್ರಹಣವು ರಾಷ್ಟ್ರ, ಜಗತ್ತಿನ ಜೊತೆಗೆ ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ. 2024ರ ಅಕ್ಟೋಬರ್ 2 ರಂದು ಸಂಭವಿಸಲಿರುವ ಸೂರ್ಯ ಗ್ರಹಣವು ಜನರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಾ ಹನ್ನೆರಡು ಚಿಹ್ನೆಗಳ ಮೇಲೆ ಸೂರ್ಯ ಗ್ರಹಣದ ಪ್ರಭಾವ ಇರಲಿದೆ, ಆದರೆ ಎರಡು ರಾಶಿಯವರ ಮೇಲೆ ಹೆಚ್ಚು ಇರುತ್ತದೆ. ಅವು ಯಾವ ರಾಶಿಗಳು ಎಂಬುದನ್ನು ತಿಳಿಯೋಣ.
ಪಂಡಿತರ ಪ್ರಕಾರ, ಸರ್ವಪಿತೃ ಅಮಾವಾಸ್ಯೆ ಎಂದರೆ ಅಕ್ಟೋಬರ್ 2 ರಂದು ಸಂಭವಿಸುವ ಸೂರ್ಯಗ್ರಹಣವಾಗಿದ್ದು, ಇದು ಕನ್ಯಾರಾಶಿ ಮತ್ತು ಮೀನ ರಾಶಿಯವರಿಗೆ ಹೆಚ್ಚು ಪರಿಣಾಮ ಬೀರುತ್ತದೆ. ಕನ್ಯಾ ರಾಶಿಯಲ್ಲಿ ಸೂರ್ಯ ಗ್ರಹಣ ಸಂಭವಿಸಲಿದೆ. ಆದ್ದರಿಂದ, ಈ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು ಎಂದು ವಿದ್ವಾಂಸರು ಸೂಚಿಸುತ್ತಾರೆ. ಮೀನ ರಾಶಿಯಲ್ಲಿ ರಾಹುವಿನ ಸಂಚಾರದಿಂದಾಗಿ ಈ ರಾಶಿಯವರೂ ಎಚ್ಚರದಿಂದಿರಬೇಕು.
ಹಿಂದೂ ಧರ್ಮದಲ್ಲಿ, ಗ್ರಹಣ ಎಂಬ ಪದವನ್ನು ಋಣಾತ್ಮಕವೆಂದು ಪರಿಗಣಿಸಲಾಗುತ್ತದೆ. ಸೂರ್ಯ ಗ್ರಹಣವು ಒಂದು ಅಶುಭ ಘಟನೆಯಾಗಿದೆ. ಆದ್ದರಿಂದ ಸೂರ್ಯ ಗ್ರಹಣವು ಯಾರಿಗೂ ಶುಭವಲ್ಲ ಅಥವಾ ಪ್ರಯೋಜನಕಾರಿಯಲ್ಲ. ಈ ಅವಧಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಜಾಗರೂಕರಾಗಿರಬೇಕು. ಸೂರ್ಯಗ್ರಹಣದ ಸಮಯದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಈ ಅವಧಿಯಲ್ಲಿ ಆರ್ಥಿಕವಾಗಿ ಎಚ್ಚರ ವಹಿಸುವುದು ಒಳ್ಳೆಯದು.
ಇದನ್ನೂ ಓದಿ: ಚಂದ್ರಗ್ರಹಣದ ಸಮಯದಲ್ಲಿ ಏನು ಮಾಡಬಹುದು, ಏನು ಮಾಡಬಾರದು?
ಯಾವ ದೇಶಗಳಲ್ಲಿ ಸೂರ್ಯ ಗ್ರಹಣ ಕಾಣಿಸುತ್ತದೆ?
ನಾಸಾದ ವೆಬ್‌ಸೈಟ್ ಪ್ರಕಾರ, ಇದು ವಾರ್ಷಿಕ ಸೂರ್ಯ ಗ್ರಹಣವಾಗಿರುತ್ತದೆ. ದಕ್ಷಿಣ ಅಮೆರಿಕದಲ್ಲಿ ವಾರ್ಷಿಕ ಸೂರ್ಯಗ್ರಹಣ ಗೋಚರಿಸುತ್ತದೆ. ದಕ್ಷಿಣ ಅಮೆರಿಕ, ಅಂಟಾರ್ಟಿಕಾ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಸಾಗರ ಮತ್ತು ಉತ್ತರ ಅಮೆರಿಕದಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ. ಇದನ್ನು ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ. ಸೂರ್ಯನ ಸುತ್ತ ಕೆಂಪು ಉಂಗುರವು ರೂಪುಗೊಳ್ಳುತ್ತದೆ.
ಭಾರತದಲ್ಲಿ ಸೂರ್ಯಗ್ರಹಣ ಆಗಲಿದೆಯೇ?
ಅಕ್ಟೋಬರ್ 2 ರಂದು ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಈ ಕಾರಣದಿಂದಾಗಿ ದೇಶದಲ್ಲಿ ಸೂತಕ ಇರುವುದಿಲ್ಲ. ಸೂತಕ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಮತ್ತು ಚಂದ್ರಗ್ರಹಣದ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಈ ಸಮಯವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ವಾತಾವರಣದಲ್ಲಿ ಹೆಚ್ಚು ನಕಾರಾತ್ಮಕ ಶಕ್ತಿ ಇರುತ್ತದೆ. ರಾಹು ಕೇತುಗಳ ಶಕ್ತಿ ಬಲವಾಗಿದೆ. ಆದ್ದರಿಂದಲೇ ಈ ಅವಧಿಯಲ್ಲಿ ತಿನ್ನುವುದು, ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ.