ವೃಶ್ಚಿಕದವರು ಯಾವ ರಾಶಿಯವರನ್ನು ಮದುವೆಯಾದರೆ ಸರಿಯಾದ ಹೊಂದಾಣಿಕೆ ಇರುವುದಿಲ್ಲ? 5 ರಾಶಿಯವರ ವಿವರ ಇಲ್ಲಿದೆ
Nov 28, 2024 10:31 AM IST
ವೃಶ್ಚಿಕ ರಾಶಿಯವರ ಮದುವೆಗೆ ಯಾವ ರಾಶಿಯವರು ಸರಿಯಾದ ಹೊಂದಾಣಿಕೆ ಆಗುವುದಿಲ್ಲ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
- ವೃಶ್ಚಿಕ ರಾಶಿಯವರು ಮದುವೆಯಾಗಲು ಯಾವ ರಾಶಿಯವರು ಹೊಂದಾಣಿಕೆಯಾಗುವುದಿಲ್ಲ, ಒಂದು ವೇಳೆ ಈ ರಾಶಿಯವರು ಮದುವೆಯಾದರೆ ಅವರ ಜೀವನ ಹೇಗಿರುತ್ತೆ ಎಂಬುದನ್ನು ತಿಳಿಯೋಣ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯವರಿಗೆ 5 ರಾಶಿಯವರು ಸರಿ ಹೊಂದುವುದಿಲ್ಲ. ಅದರ ವಿವರ ಇಲ್ಲಿದೆ.
ಮದುವೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ತುಂಬಾ ಮಹತ್ವದ ಘಟ್ಟ. ಮದುವೆಗೂ ಮುನ್ನ ಸಾಕಷ್ಟು ಕನಸುಗಳನ್ನು ಕಂಡಿರುತ್ತಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ತಮ್ಮ ಸಂಗಾತಿಯ ಮೂಲಕ ಆ ಕನಸುಗಳನ್ನು ನನಸು ಮಾಡಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಮದುವೆ ಮುನ್ನ ತಮ್ಮ ಇಷ್ಟದ ಹುಡುಗ ಅಥವಾ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಈ ಪ್ರಕ್ರಿಯೆಯಲ್ಲಿ ಕುಲ, ಗೋತ್ರ ಹಾಗೂ ರಾಶಿಗಳ ಹೊಂದಾಣಿಕೆಯನ್ನು ಹಿಂದೂ ಧರ್ಮದಲ್ಲಿ ತಪ್ಪದೇ ಪಾಲಿಸುತ್ತಾರೆ. ವಿಶೇಷವಾಗಿ ವೃಶ್ಚಿಕ ರಾಶಿಯವರಿಗೆ ಯಾವ ರಾಶಿಯವರನ್ನು ಮದುವೆ ಮಾಡಿಕೊಂಡರೆ ಹೊಂದಾಣಿಕೆ ಆಗುವುದಿಲ್ಲ ಎಂಬುದನ್ನು ಇಲ್ಲಿ ತಿಳಿಯೋಣ.
ತಾಜಾ ಫೋಟೊಗಳು
ವೃಶ್ಚಿಕ ಮತ್ತು ಕಟಕ ರಾಶಿಯವರ ಹೊಂದಾಣಿ
ದಾಂಪತ್ಯ ಜೀವನದಲ್ಲಿ ವೃಶ್ಚಿಕ ಮತ್ತು ಕಟಕ ರಾಶಿಯವರ ಹೊಂದಾಣಿಕೆ ಅಷ್ಟು ಸರಿ ಬರುವುದಿಲ್ಲ. ಇವರ ದಾಂಪತ್ಯದಲ್ಲಿ ಸಾಕಷ್ಟು ಏರುಪೇರುಗಳನ್ನು ಕಾಣುತ್ತಾರೆ. ಕಟಕ ರಾಶಿಯಲ್ಲಿ ವೃಶ್ಚಿಕ ರಾಶಿಯವರೊಂದಿಗೆ ಸ್ಥಿರವಾಗಿರಲು ಶಕ್ತಿ ಮೀರಿ ಹೋರಾಡುತ್ತಾರೆ. ಕಟಕ ರಾಶಿಯವರು ತಮ್ಮ ಸ್ವಂತ ಭಾವನೆಗಳನ್ನೇ ಇಷ್ಟಪಡುವುದಿಲ್ಲ. ಇದು ದಾಂಪತ್ಯದಲ್ಲಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೆಮ್ಮದಿ ಜೀವನದಲ್ಲಿ ಇದು ಅಡ್ಡಿಯಾಗುತ್ತದೆ. ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡುತ್ತಾರೆ.
ವೃಶ್ಚಿಕ ಮತ್ತು ಸಿಂಹ ರಾಶಿಯವರ ಹೊಂದಾಣಿ
ವೃಶ್ಚಿಕ ಮತ್ತು ಸಿಂಹ ರಾಶಿಯವರು ಮದುವೆಯಾದರೆ ಹೊಂದಿಕೊಂಡು ಜೀವನ ನಡೆಸುವುದು ಈ ರಾಶಿಯವರಿಗೆ ಕಷ್ಟವಾಗುತ್ತದೆ. ಏನಾಗುತ್ತಿದೆ ಎಂದು ಯೋಚಿಸುವ ಮುನ್ನವೇ ಈ ಎರಡೂ ರಾಶಿಯವರ ಪೈಕಿ ಕೆಲವರು ಮೊದಲೇ ಪ್ರೀತಿಯಲ್ಲಿ ಬೀಳುತ್ತಾರೆ. ಪ್ರೀತಿಯ ಬಳಿಕ ವಿವಾಹವಾಗುತ್ತಾರೆ. ಆ ನಂತರ ಇಬ್ಬರ ಅಭಿಪ್ರಾಯಗಳು ಬೇರೆ ಬೇರೆಯಾಗಿರುತ್ತವೆ. ಇಲ್ಲಿಂದ ಸಮಸ್ಯೆಗಳು ಆರಂಭವಾಗುತ್ತವೆ. ಹೊಂದಿಕೊಳ್ಳಲು ತುಂಬಾ ಕಷ್ಟ ಪಡುತ್ತಾರೆ. ರಾಜಿಯಾಗಲು ಪ್ರಯತ್ನಿಸುತ್ತಾರೆ. ಇಬ್ಬರೂ ಪರಸ್ಪರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು, ಪ್ರತಿಕ್ರಿಯೆಗಳನ್ನು ಅರ್ಥಮಾಡಿಕೊಳ್ಳಬೇಕು. ಒಬ್ಬರ ಅಗತ್ಯಗಳನ್ನು ಮತ್ತೊಬ್ಬರು ಒಪ್ಪಿಕೊಳ್ಳಬೇಕು. ಆದರೆ ವೃಶ್ಚಿಕ ಮತ್ತು ಸಿಂಹ ರಾಶಿಯ ಜೋಡಿ ಭಿನ್ನವಾಗಿ ನಡೆದುಕೊಳ್ಳುತ್ತಾರೆ. ಯಾವಾಗಲೂ ಗದ್ದಲ, ಗಲಾಟೆಗಳು ಇರುತ್ತವೆ. ಪ್ರೀತಿಯ ವಿಧಾನವನ್ನೇ ಮರೆತಿರುತ್ತಾರೆ. ಹೀಗಾಗಿ ಈ ಜೋಡಿಯ ಹೊಂದಾಣಿಕೆ ಕಷ್ಟಕರವಾಗಿರುತ್ತದೆ.
ವೃಶ್ಚಿಕ ಮತ್ತು ಕನ್ಯಾ ರಾಶಿಯವರ ಹೊಂದಾಣಿಕೆ
ಈ ರಾಶಿಯವರು ಮದುವೆಯಾದರೆ ಉತ್ಸಾಹ ಕಡಿಮೆ ಇರುತ್ತದೆ. ಇಬ್ಬರದ್ದು ಬೇರೆ ಬೇರೆ ಮನೋಭಾವವಾಗಿರುತ್ತದೆ. ದೀರ್ಘಕಾಲದವರಿಗೆ ತಮ್ಮ ಸಂಬಂಧವನ್ನು ಸಂತೋಷ ಹಾಗೂ ನೆಮ್ಮದಿಯಾಗಿ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಶುಕ್ರನ ಕಾರಣದಿಂದಾಗಿ ಸಂಬಂಧದಲ್ಲಿ ಸಾಮಾನ್ಯವಾಗಿ ಸಮಸ್ಯೆಗಳು ಇರುತ್ತವೆ. ಇದದು ಪರಸ್ಪರ ಜೀವನವನ್ನು ಬೇರೆ ಮಾಡುವ ಹಂತಕ್ಕೆ ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೊಂದಾಣಿಕೆಯ ಕಾರಣದಿಂದ ಇಬ್ಬರೂ ಅವಮಾನ ಅಥವಾ ದುಃಖವನ್ನು ಉಂಟುಮಾಡುವಂತಹ ಟೀಕೆಗಳನ್ನು ಮಾಡಿಕೊಳ್ಳುತ್ತಾರೆ.
ವೃಶ್ಚಿಕ ಮತ್ತು ವೃಶ್ಚಿಕ ರಾಶಿಯವರ ಹೊಂದಾಣಿಕೆ
ಒಂದೇ ರಾಶಿಯ ಇಬ್ಬರುವ ಮದುವೆಯಾಗುವುದು ತುಂಬಾ ಅಪರೂಪ. ಅದೇ ರೀತಿಯಾಗಿ ಗಂಡು ಹೆಣ್ಣು ಇಬ್ಬರೂ ವೃಶ್ಚಿಕ ರಾಶಿಯವರೇ ಆಗಿದ್ದು, ಇವರು ಮದುವೆಯಾದರೆ ಸರಿಯಾಗಿ ಹೊಂದಾಣಿಕೆ ಆಗುವುದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು, ಪ್ರೀತಿಯನ್ನು ವ್ಯಕ್ತಪಡಿಸುವ ವಿಚಾರದಲ್ಲಿ ಹಿಂದೆ ಬೀಳುತ್ತಾರೆ. ಇವರು ಉತ್ತಮ ಸಂಗಾತಿಗಳಾಗಲು ಸಾಧ್ಯವಾಗುವುದಿಲ್ಲ. ನಂಬಲಾಗದ ರೀತಿಯಲ್ಲಿ ಇವರು ಪರಸ್ಪರ ಜೊತೆಯಾಗಿ ಜೀವಿಸಲು ಸಾಧ್ಯವಾಗುವುದಿಲ್ಲ.
ವೃಶ್ಚಿಕ ಮತ್ತು ಧನು ರಾಶಿಯವರ ಹೊಂದಾಣಿಕೆ
ಮದುವೆ ವಿಚಾರದಲ್ಲಿ ವೃಶ್ಚಿಕ ಮತ್ತು ಧನು ರಾಶಿಯವರಿಗೂ ಸರಿಯಾಗಿ ಹೊಂದಾಣಿಕೆ ಆಗುವುದಿಲ್ಲ. ಎಲ್ಲಾ ವಿಚಾರಗಳಲ್ಲೂ ಇವರ ವಿಭಿನ್ನವಾಗಿ ಯೋಚಿಸುತ್ತಾರೆ. ಪ್ರತ್ಯೇಕ ವಿಧಾನಗಳನ್ನೇ ಅನುಸರಿಸುತ್ತಾರೆ. ಧನು ರಾಶಿಯವರ ಗುಣಲಕ್ಷಣಗಳು ವೃಶ್ಚಿಕ ರಾಶಿಯವರಿಗೆ ಅಷ್ಟೇನು ಇಷ್ಟವಾಗುವುದಿಲ್ಲ. ಆದ್ದರಿಂದ ಇಬ್ಬರ ನಡುವೆ ಪ್ರೀತಿ ಶಾಶ್ವತವಾಗಿ ಉಳಿಯುದು ಕಷ್ಟ. ವೃಶ್ಚಿಕ ಮತ್ತು ಧನು ರಾಶಿಯವರ ಹೊಂದಾಣಿಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಹೋಗುತ್ತದೆ. ಹೀಗಾಗಿ ಈ ಎರಡೂ ರಾಶಿಯವರು ಮದುವೆಗೆ ಅಷ್ಟೊಂದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.