logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗೋತ್ರ ಎಂದರೇನು? ಹಿಂದೂ ಸಂಪ್ರದಾಯದಲ್ಲಿ ಗೋತ್ರಕ್ಕೆ ಇರುವ ಪ್ರಾಮುಖ್ಯತೆ ಏನು, ಒಟ್ಟು ಎಷ್ಟು ಗೋತ್ರಗಳಿವೆ?

ಗೋತ್ರ ಎಂದರೇನು? ಹಿಂದೂ ಸಂಪ್ರದಾಯದಲ್ಲಿ ಗೋತ್ರಕ್ಕೆ ಇರುವ ಪ್ರಾಮುಖ್ಯತೆ ಏನು, ಒಟ್ಟು ಎಷ್ಟು ಗೋತ್ರಗಳಿವೆ?

Rakshitha Sowmya HT Kannada

Jun 17, 2024 07:00 AM IST

google News

ಗೋತ್ರ ಎಂದರೇನು? ಹಿಂದೂ ಸಂಪ್ರದಾಯದಲ್ಲಿ ಗೋತ್ರಕ್ಕೆ ಇರುವ ಪ್ರಾಮುಖ್ಯತೆ ಏನು, ಒಟ್ಟು ಎಷ್ಟು ಗೋತ್ರಗಳಿವೆ?

  • ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದರೆ ಅಲ್ಲಿ ನಿಮ್ಮ ಗೋತ್ರ, ನಕ್ಷತ್ರ, ರಾಶಿಗಳನ್ನು ಕೇಳಲಾಗುತ್ತದೆ. ಅದೇ ರೀತಿ ವಧು–ವರರ ಅನ್ವೇಷಣೆಯ ಸಮಯದಲ್ಲೂ ಗೋತ್ರದ ಹೆಸರು ಪ್ರಮುಖವಾಗಿರುತ್ತದೆ. ಹಾಗಾದರೆ ಗೋತ್ರ ಎಂದರೇನು? ಗೋತ್ರದಲ್ಲಿ ಎಷ್ಟು ವಿಧ? ಗೋತ್ರದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆಸಕ್ತಿದಾಯಕರ ಸಂಗತಿಗಳು ಇಲ್ಲಿವೆ.

ಗೋತ್ರ ಎಂದರೇನು? ಹಿಂದೂ ಸಂಪ್ರದಾಯದಲ್ಲಿ ಗೋತ್ರಕ್ಕೆ ಇರುವ ಪ್ರಾಮುಖ್ಯತೆ ಏನು, ಒಟ್ಟು ಎಷ್ಟು ಗೋತ್ರಗಳಿವೆ?
ಗೋತ್ರ ಎಂದರೇನು? ಹಿಂದೂ ಸಂಪ್ರದಾಯದಲ್ಲಿ ಗೋತ್ರಕ್ಕೆ ಇರುವ ಪ್ರಾಮುಖ್ಯತೆ ಏನು, ಒಟ್ಟು ಎಷ್ಟು ಗೋತ್ರಗಳಿವೆ?

ಹಿಂದೂ ಧರ್ಮದಲ್ಲಿ ಸಾಮಾನ್ಯವಾಗಿ ಪೂಜೆ ಮಾಡಿಸುವಾಗ, ವಧು ವರರ ಅನ್ವೇಷಣೆಯಲ್ಲಿರುವಾಗ ಗೋತ್ರದ ಹೆಸರನ್ನು ಕೇಳಲಾಗುತ್ತದೆ. ಗೋತ್ರದ ಮೂಲಕ ಅವರ ವಂಶದ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ಈ ಪದ್ಧತಿ ಸಾವಿರಾರು ವರ್ಷಗಳಿಂದ ನಡೆದು ಬಂದಿದೆ. ವಿವಾಹದಂಥ ಶುಭ ಸಂದರ್ಭಗಳಿಂದ ಹಿಡಿದು ಪಿತೃ ಕಾರ್ಯಗಳವರೆಗೂ ಗೋತ್ರ ಮಹತ್ವದ ಪಾತ್ರವನ್ನು ವಹಿಸುತ್ತದೆ. ತಂದೆಯು ಯಾವ ಗೋತ್ರಕ್ಕೆ ಸೇರಿರುತ್ತಾನೋ ಅದೇ ಮಕ್ಕಳ ಗೋತ್ರ ಸಹ ಆಗಿರುತ್ತದೆ. ಆದರೆ ಹೆಣ್ಣು ಮಕ್ಕಳು ಮದುವೆಯಾದ ನಂತರ ಗಂಡನ ಮನೆಯ ಗೋತ್ರಕ್ಕೆ ಸೇರ್ಪಡೆಯಾಗುತ್ತಾರೆ. ಹಾಗಾದರೆ ಈ ಗೋತ್ರದ ಮೂಲ ಎಲ್ಲಿಂದ ಪ್ರಾರಂಭವಾಗುತ್ತದೆ? ಗೋತ್ರದಲ್ಲಿರುವ ವಿಧಗಳೆಷ್ಟು? ಮುಂತಾದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಗೋತ್ರ ಎಂದರೇನು?

ಗೋತ್ರಗಳು ಭಾರತೀಯ ಸಂಸ್ಕೃತಿಯ ವಿಶೇಷವಾಗಿ ಹಿಂದೂ ಸಮಾಜದಲ್ಲಿ ಕಂಡು ಬರುವ ಪ್ರಮುಖ ವಿಷಯವಾಗಿದೆ. ಇದು ಒಬ್ಬ ವ್ಯಕ್ತಿಯು ಸೇರಿರುವ ವಂಶಾವಳಿಯನ್ನು ಗುರುತಿಸುತ್ತದೆ. ಈ ಪದ್ದತಿಯನ್ನು ಶತಮಾನಗಳಿಂದ ಅನುಸರಿಸಿಕೊಂಡು ಬರಲಾಗುತ್ತಿದೆ. ಗೋತ್ರವನ್ನು ಋಷಿಗಳ ಹೆಸರಿನಿಂದ ಕರೆಯಲಾಗುತ್ತದೆ. ಉದಾಹರಣೆಗೆ ಭಾರದ್ವಾಜ ಗೋತ್ರಕ್ಕೆ ಮಹರ್ಷಿ ಭಾರದ್ವಾಜರ ಹೆಸರನ್ನು ಇಡಲಾಗಿದೆ. ಕಶ್ಯಪ ಗೋತ್ರಕ್ಕೆ ಕಶ್ಯಪ ಋಷಿಯ ಹೆಸರನ್ನು ಇಡಲಾಗಿದೆ. ಹೀಗೆ ವ್ಯಕ್ತಿಯ ಪೂರ್ವಜರನ್ನು ಅರ್ಥ ಮಾಡಿಕೊಳ್ಳಲು ಗೋತ್ರಗಳು ಸಹಾಯ ಮಾಡುತ್ತವೆ. ಮದುವೆಗಳು ಮತ್ತು ಧಾರ್ಮಿಕ ಆಚರಣೆಗಳಂತಹ ಪ್ರಮುಖ ಸಂದರ್ಭಗಳಲ್ಲಿ ಗೋತ್ರಗಳನ್ನು ಹೆಚ್ಚಾಗಿ ಉಲ್ಲೇಖಿಸಲಾಗುತ್ತದೆ. ಒಂದೇ ಗೋತ್ರಕ್ಕೆ ಸೇರಿದವರು ಮದುವೆಯಾಗಲು ಬಯಸಿದಾಗ ಸಾಮಾನ್ಯವಾಗಿ ಯಾರೂ ಅದಕ್ಕೆ ಒಪ್ಪಿಗೆ ನೀಡುವುದಿಲ್ಲ. ಒಂದೇ ಗೋತ್ರಕ್ಕೆ ಸೇರಿದವರೆಂದರೆ ಅವರು ಸಹೋದರ–ಸಹೋದರಿಯರು ಎಂದು ಭಾವಿಸಲಾಗುತ್ತದೆ.

ಗೋತ್ರದಲ್ಲಿ ಬರುವ ಏಳು ಋಷಿಗಳು ಯಾರು?

ಪುರಾಣಗಳಲ್ಲಿ ಗೋತ್ರಗಳ ಬಗ್ಗೆ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಪ್ರಾಚೀನ ಗ್ರಂಥಗಳ ಪ್ರಕಾರ 7 ಮೂಲ ಗೋತ್ರಗಳು ಸಪ್ತಋಷಿಗಳೊಂದಿಗೆ ಸಂಬಂಧವನ್ನು ಹೊಂದಿವೆ. ಆ ಋಷಿಗಳು ಸೃಷ್ಟಿಕರ್ತ ಬ್ರಹ್ಮನ ಏಳು ಮಾನಸ ಪುತ್ರರು ಎಂದು ಹೇಳಲಾಗುತ್ತದೆ.

ಏಳು ಋಷಿಗಳು ಯಾರು?

1) ವಶಿಷ್ಟ

2) ವಿಶ್ವಾಮಿತ್ರ

3) ಅತ್ರಿ

4) ಜಮದಗ್ನಿ

5) ಗೌತಮ

6) ಭಾರದ್ವಾಜ

7) ಕಶ್ಯಪ

ಈ ಪ್ರತಿಯೊಬ್ಬ ಋಷಿಗಳ ಹೆಸರಿನಲ್ಲಿ ಕುಲಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ಇದೇ ಗೋತ್ರ ಪದ್ಧತಿಯ ಆಧಾರವಾಗಿದೆ. ಪುರಾಣಗಳ ಸಂಬಂಧದ ಪ್ರಕಾರ ಗೋತ್ರಗಳ ಪಾವಿತ್ರ್ಯವು ಪ್ರಾಚೀನ ಮೂಲಗಳ ಆಧಾರವಾಗಿದೆ.

ಗೋತ್ರಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳು

* ಹಿಂದೂ ಧರ್ಮದಲ್ಲಿ 49 ಕ್ಕೂ ಹೆಚ್ಚು ವಿವಿಧ ಗೋತ್ರಗಳಿವೆ. ಪ್ರತಿಯೊಂದಕ್ಕೂ ಒಬ್ಬ ಋಷಿಯ ಹೆಸರನ್ನು ಇಡಲಾಗಿದೆ. ಗೋತ್ರಗಳನ್ನು ಸಾಮಾನ್ಯವಾಗಿ ಪುರುಷ ರೇಖೆಯ ಮೂಲಕ ಕರೆಯಲಾಗುತ್ತದೆ. ಉದಾಹರಣೆಗೆ ಮಗ ತಂದೆಯ ಗೋತ್ರವನ್ನು ಆನುವಂಶಿಕವಾಗಿ ಪಡೆಯುತ್ತಾನೆ. ಆದರೆ ಮಹಿಳೆಯರ ವಿಷಯಕ್ಕೆ ಬಂದರೆ, ಮದುವೆಯ ನಂತರ ಮಹಿಳೆಯರು ತಮ್ಮ ಗಂಡನ ಗೋತ್ರಕ್ಕೆ ಸೇರ್ಪಡೆಯಾಗುತ್ತಾರೆ. ಮದುವೆಗೆ ಮೊದಲು ಅವರ ಗೋತ್ರವನ್ನು ಗೋತ್ರಕಾರಿಣಿ ಎಂದು ಕರೆಯಲಾಗುತ್ತದೆ. ಇದು ಅವರ ತಂದೆಯ ವಂಶವನ್ನು ಸೂಚಿಸುತ್ತದೆ.

* ಈ ಗೋತ್ರಗಳನ್ನು ಪ್ರಾಚೀನ ವೈದಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಭಾರತೀಯ ಸಂಪ್ರದಾಯಗಳಲ್ಲಿ ಇರುವ ಗೋತ್ರಗಳು ಅದರ ಪ್ರಾಮುಖ್ಯತೆಯನ್ನು ಹೇಳುತ್ತದೆ.

* ಗೋತ್ರಗಳು ಯಾವುದೇ ಪ್ರದೇಶ ಅಥವಾ ಭಾಷೆಗೆ ಸೀಮಿತವಾಗಿಲ್ಲ. ವಿವಿಧ ರಾಜ್ಯಗಳಲ್ಲಿ, ಅನೇಕ ಭಾಷೆಗಳನ್ನು ಮಾತನಾಡುವ ಜನರು ಗೋತ್ರಗಳನ್ನು ನಂಬುತ್ತಾರೆ. ಪ್ರದೇಶದಿಂದ ಪ್ರದೇಶಕ್ಕೆ ಗೋತ್ರಗಳ ಹೆಸರುಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ ಆದರೆ ಅವುಗಳ ಹಿಂದಿನ ಅರ್ಥವು ಒಂದೇ ಆಗಿದೆ. ಸಾಮಾನ್ಯವಾಗಿ ಕುಟುಂಬದ ಮುಖ್ಯಸ್ಥರಿಂದ ಗೋತ್ರವನ್ನು ತಿಳಿದುಕೊಳ್ಳುತ್ತಾರೆ. ಇದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಇಂದಿಗೂ ಮಗು ಜನಿಸಿದಾಗ ಅವರ ಹೆಸರಿನೊಂದಿಗೆ ಅವರ ಗೋತ್ರವನ್ನು ಘೋಷಿಸಲಾಗುತ್ತದೆ. ಇದು ಪೂರ್ವಜರ ವಂಶಾವಳಿಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ.

* ಗೋತ್ರವು ವಿಶೇಷ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಇದು ಜನರನ್ನು ಅವರ ಪ್ರಾಚೀನ ಬೇರುಗಳೊಂದಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಅವರ ಕುಲದ ಮಹತ್ವವನ್ನು ತೋರಿಸುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ ವಿ. ಭಟ್

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ