ವೃಶ್ಚಿಕ ರಾಶಿಯವರು ಈ 5 ರಾಶಿಯವರ ಪೈಕಿ ಯಾರನ್ನೇ ಮದುವೆಯಾದರೂ ಜೀವನದಲ್ಲಿ ಸಂತೋಷ, ನೆಮ್ಮದಿಯಾಗಿರುತ್ತಾರೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಶ್ಚಿಕ ರಾಶಿಯವರು ಈ 5 ರಾಶಿಯವರ ಪೈಕಿ ಯಾರನ್ನೇ ಮದುವೆಯಾದರೂ ಜೀವನದಲ್ಲಿ ಸಂತೋಷ, ನೆಮ್ಮದಿಯಾಗಿರುತ್ತಾರೆ

ವೃಶ್ಚಿಕ ರಾಶಿಯವರು ಈ 5 ರಾಶಿಯವರ ಪೈಕಿ ಯಾರನ್ನೇ ಮದುವೆಯಾದರೂ ಜೀವನದಲ್ಲಿ ಸಂತೋಷ, ನೆಮ್ಮದಿಯಾಗಿರುತ್ತಾರೆ

ಪ್ರತಿಯೊಬ್ಬ ಅವಿವಾಹಿತರು ಯಾರನ್ನ ಮದುವೆಯಾದರೆ ತಮ್ಮ ಜೀವನದಲ್ಲಿ ಖುಷಿಯಾಗಿ ಇರುತ್ತೇವೆ ಎಂದು ಯೋಜಿಸುವುದು ತುಂಬಾ ಸಾಮಾನ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯವರು ಯಾವ ರಾಶಿಯವರನ್ನು ವಿವಾಹವಾದರೆ ನೆಮ್ಮದಿಯಾಗಿರುತ್ತಾರೆ ಎಂಬುದನ್ನು ತಿಳಿಯಿರಿ. ವೃಶ್ಚಿಕ ರಾಶಿಯವರಿಗೆ ಸೂಕ್ತವಾಗುವ 5 ರಾಶಿಗಳಿವು.

ವೃಶ್ಚಿಕ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ನೆಮ್ಮದಿಯಾಗಿರುತ್ತಾರೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಸೂಕ್ತವಾಗುವ 5 ರಾಶಿಗಳು ಇಲ್ಲಿವೆ.
ವೃಶ್ಚಿಕ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ನೆಮ್ಮದಿಯಾಗಿರುತ್ತಾರೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಸೂಕ್ತವಾಗುವ 5 ರಾಶಿಗಳು ಇಲ್ಲಿವೆ.

ಹಿಂದೂ ಸಂಪ್ರದಾಯದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಮದುವೆ ಸಂಬಂಧಗಳನ್ನು ನೋಡಲು ಶುರು ಮಾಡಿದಾಗ ಗೋತ್ರಗಳು, ನಕ್ಷತ್ರಗಳು ಹಾಗೂ ಗ್ರಹಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಗ್ರಹಗಳ ವಿಚಾರದಲ್ಲಿ ಮಗಳು ಅಥವಾ ಮಗನಿಗೆ ಸೂಕ್ತವಾಗುವ ರಾಶಿಯವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಮಾಡಿದರೆ ಅವರ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆಗಳ ಇಲ್ಲದೆ, ಸುಖ, ಶಾಂತಿ ಹಾಗೂ ನೆಮ್ಮದಿಯಾಗಿ ಬದುಕುತ್ತಾರೆ ಎಂಬ ನಂಬಿಕೆ ಇರುತ್ತದೆ. ಇದೇ ಕಾರಣಕ್ಕೆ ಮದುವೆಗೂ ಮುನ್ನ ಜಾತಕವನ್ನು ನೋಡಲಾಗುತ್ತದೆ. ಜಾತಕ ಸರಿಯಾಗಿ ಬಾರದಿದ್ದರೆ ಸಂಬಂಧಗಳನ್ನು ಮುಂದುವರಿಸುವುದಿಲ್ಲ. ವೃಶ್ಚಿಕ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ಅವರ ಜೀವನ ಉತ್ತಮವಾಗಿರುತ್ತದೆ ಎಂಬುದನ್ನು ತಿಳಿಯೋಣ.

ವೃಶ್ಚಿಕ-ಮೇಷ ರಾಶಿಯವರ ಹೊಂದಾಣಿ ಹೇಗಿರುತ್ತೆ

ಪ್ರೀತಿ ಮತ್ತು ಕಾಳಜಿಯ ವಿಚಾರದಲ್ಲಿ ಈ ಎರಡೂ ರಾಶಿಯವರಿಗೆ ದಾಂಪತ್ಯ ಜೀವನ ತುಂಬಾ ಉತ್ತಮವಾಗಿ ಕೂಡಿಬರಲಿದೆ. ಹೊಂದಾಣಿಕೆ ಚೆನ್ನಾಗಿರುತ್ತದೆ. ಎರಡೂ ರಾಶಿಯವರ ಆಲೋಚನೆಗಳ, ನಿರ್ಧಾರಗಳು ಒಂದೇ ಆಗಿರುತ್ತವೆ. ಹೀಗಾಗಿ ವೃಶ್ಚಿಕ ಮತ್ತು ಮೇಷ ರಾಶಿಯವರಿಗೆ ಉತ್ತಮ ಜೋಡಿ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ಎರಡೂ ರಾಶಿಯವರು ತಮ್ಮ ಸಂಗಾತಿಯ ಬಗ್ಗೆ ಒಂದೇ ರೀತಿಯ ಕನಸುಗಳನ್ನು ಕಂಡಿರುತ್ತಾರೆ. ಇವರು ಮದುವೆಯಾದರೆ ಪ್ರೀತಿ, ಸಂತೋಷದಿಂದ ಬದುಕುತ್ತಾರೆ.

ವೃಶ್ಚಿಕ-ವೃಷಭ ರಾಶಿ ರಾಶಿಯವರ ಹೊಂದಾಣಿಕೆ

ವೃಶ್ಚಿಕ ಮತ್ತು ವೃಷಭ ರಾಶಿಯವರ ತುಂಬಾ ಚೆನ್ನಾಗಿ ಕೂಡಿ ಬರುತ್ತದೆ. ಈ ಜೋಡಿ ಪ್ರೀತಿಯ ತುಂಬಾ ಪ್ರಾಮುಖ್ಯವನ್ನು ನೀಡುತ್ತಾರೆ. ಇದೇ ಕಾರಣಕ್ಕಾಗಿ ಇವರದ್ದು ಅದ್ಭುತವಾದ ಜೋಡಿ ಎಂದು ಹೇಳಲಾಗುತ್ತದೆ. ಇವರ ಸಿದ್ಧಾಂತಗಳು, ಯೋಚನೆಗಳು ಹಾಗೂ ಮಾಡುವ ಕೆಲಸಗಳು ಹೆಚ್ಚು ಸಾಮ್ಯತೆ ಇರುತ್ತದೆ. ಸಂಬಂಧದಲ್ಲಿ ವೈಮನಸ್ಸು, ಸಮಸ್ಯೆಗಳನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತಾರೆ. ಭ್ರಮೆಗಿಂತ ವಾಸ್ತದಲ್ಲಿ ಜೀವಿಸಲು ಇವರು ಇಷ್ಟ ಪಡುತ್ತಾರೆ.

ವೃಶ್ಟಿಕ-ತುಲಾ ರಾಶಿಯವರ ಹೊಂದಾಣಿಕೆ

ವೃಶ್ಚಿಕ ಮತ್ತು ತುಲಾ ರಾಶಿಯ ಜೋಡಿಯ ಬಗ್ಗೆ ಹೇಳುವುದಾದರೆ ಇವರದ್ದು ತುಂಬಾ ಉತ್ತಮವಾದ ಹೊಂದಾಣಿಕೆಯಾಗಿರುತ್ತದೆ. ಒಬ್ಬೊರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಒಬ್ಬರ ವಿಚಾರಗಳನ್ನು ಮತ್ತೊಬ್ಬರು ಕೇಳುತ್ತಾರೆ, ಅದನ್ನು ಒಪ್ಪಿಕೊಳ್ಳುತ್ತಾರೆ. ಹೆಚ್ಚು ಸಹಾನುಭೂತಿಯ ಮನಸ್ಥಿತಿಯನ್ನು ಹೊಂದಿರುವುದರಿಂದ ವೃಶ್ಚಿಕ-ತುಲಾ ರಾಶಿಯವರ ಜೋಡಿ ದಾಂಪತ್ಯ ಜೀವನವನ್ನು ಸಂತೋಷದಿಂದ ಮುನ್ನಡೆಸುತ್ತಾರೆ.

ವೃಶ್ಚಿಕ-ಕುಂಭ ರಾಶಿಯವರ ಹೊಂದಾಣಿ

ವೃಶ್ಚಿಕ ಮತ್ತು ಕುಂಭ ರಾಶಿಯವರ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ. ಈ ಎರಡು ರಾಶಿಯವರಿಗೆ ವಿವಾಹ ಕೂಡಿ ಬರುತ್ತದೆ. ಇವರು ತಮ್ಮ ಸಂಬಂಧದಲ್ಲಿ ಸಮಸ್ಯೆಗಳನ್ನು ಹೆಚ್ಚಿಸಿಕೊಳ್ಳುವುದು ತುಂಬಾ ಕಡಿಮೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು ಹೋಗುತ್ತಾರೆ. ಯಾವುದೇ ಸಮಸ್ಯೆ ಎದುರಾಗದಾಗ ಇಬ್ಬರೂ ರಾಜಿ ಮಾಡಿಕೊಳ್ಳುವ ಮನಸ್ಥಿತಿ ಹೆಚ್ಚಿರುತ್ತದೆ. ಒಬ್ಬರಿಗೊಬ್ಬರ ಬೆಂಬಲವನ್ನು ನೀಡುತ್ತಾರೆ. ಹೀಗಾಗಿ ಈ ರಾಶಿಯವರ ಜೋಡಿ ನೆಮ್ಮದಿಯ ಜೀವನ ನಡೆಸುತ್ತೆ.

ವೃಶ್ಚಿಕ-ಮೀನ ರಾಶಿಯವರ ಹೊಂದಾಣಿ

ವೃಶ್ಚಿಕ-ಮೀನ ರಾಶಿಯ ಜೋಡಿ ತುಂಬಾ ಪ್ರೀತಿಯಿಂದ ಜೀವನವನ್ನು ನಡೆಸುತ್ತಾರೆ. ಈ ರಾಶಿಯವರಿಗೆ ಮದುವೆ ಆಗಿ ಬರುತ್ತದೆ. ಸ್ವಾಭಾವಿಕವಾಗಿ ಆಕರ್ಷಿತರಾಗಿ ತಮ್ಮ ಪ್ರೀತಿಗೆ ಬೆಲೆ ನೀಡುತ್ತಾರೆ. ಮದುವೆಯ ನಂತರ ಪ್ರೇಮ ಸಂಬಂಧಗಳು ಅದ್ಭುತವಾಗಿರುತ್ತವೆ. ಯಾವುದೇ ಸಮಸ್ಯೆ ಬಂದಾಗ ಒಬ್ಬರಿಗೊಬ್ಬರು ಬಿಟ್ಟುಕೊಡುವುದಿಲ್ಲ. ಇವರ ಮದುವೆಯ ಸಂಬಂಧ ಮುರಿದು ಹೋಗುವ ಸಾಧ್ಯತೆಗಳೇ ಇರುವುದಿಲ್ಲ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.