ಮದುವೆ ಆಗಲು ಸೂಕ್ತ ವಯಸ್ಸು ಯಾವುದು? 20, 30, 40 ಏಜ್‌ನಲ್ಲಿ ಮದುವೆಯಾದರೆ ಏನು ಲಾಭ, ಏನು ಸಮಸ್ಯೆ?
Relationship: ಮದುವೆ, ಎರಡು ಜೀವಗಳನ್ನು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಬೆಸೆಯುವ ಬಂಧ. ಆದರೆ ಮದುವೆಯಾಗಲು ಮನಸ್ಸು, ಆರ್ಥಿಕ ಪರಿಸ್ಥಿತಿ, ಹೊಂದಾಣಿಕೆ ಗುಣ ಎಲ್ಲವೂ ಮುಖ್ಯ. ಯಾವ ವಯಸ್ಸಿನಲ್ಲಿ ಮದುವೆ ಆದರೆ ಒಳ್ಳೆಯದು? 20-30, 30-40 ಹಾಗೂ ನಂತರ ಮದುವೆ ಆದರೆ ಏನು ಲಾಭ, ಏನು ಸಮಸ್ಯೆ? ಇಲ್ಲಿದೆ ಮಾಹಿತಿ.
Relationship: ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಪ್ರಮುಖ ಘಟ್ಟವಾಗಿದೆ. ನಮ್ಮನ್ನು ಕೈ ಹಿಡಿಯುವವರು ಹೀಗಿರಬೇಕು, ನನ್ನ ವೈವಾಹಿಕ ಜೀವನ ಚೆನ್ನಾಗಿರಬೇಕು, ಒಳ್ಳೆ ಕುಟುಂಬದ ಸಂಗಾತಿ ದೊರೆಯಬೇಕು ಎಂದು ಮದುವೆ ಬಗ್ಗೆ ಎಲ್ಲರೂ ಕನಸು ಕಾಣುತ್ತಾರೆ. ಆದರೆ ಇಲ್ಲಿ ಕನಸು ಕಾಣುವುದಷ್ಟೇ ಮುಖ್ಯವಲ್ಲ, ಯಾವ ವಯಸ್ಸಿಗೆ ಮದುವೆ ಆಗಬೇಕು ಎನ್ನುವುದೂ ಬಹಳ ಮುಖ್ಯವಾಗಿರುತ್ತದೆ.
ಮನಶಾಸ್ತ್ರಜ್ಞ ನೂಪುರ್ ಧಾಕೆ ಹೇಳುವುದೇನು?
ಕೆಲವರು 21 ವರ್ಷ ಕಳೆಯುತ್ತಿದ್ದಂತೆ ಮದುವೆಯಾಗುತ್ತಾರೆ. ಕೆಲವರು ಲೈಫ್‌ನಲ್ಲಿ ಸೆಟಲ್ ಆದ ನಂತರ ಮದುವೆ ಆಗೋಣ ಅಂತ 30ರ ನಂತರ ಮದುವೆ ಆಗುತ್ತಾರೆ. ಇನ್ನೂ ಕೆಲವರು 35-40 ದಾಟಿದರೂ ಮದುವೆ ಆಗುವುದಿಲ್ಲ. ಹಾಗಾದರೆ ಮದುವೆ ಆಗಲು ಬೆಸ್ಟ್ ಟೈಮ್ ಯಾವುದು? ಯಾವ ವಯಸ್ಸಿನಲ್ಲಿ ಮದುವೆ ಆದರೆ ವೈವಾಹಿಕ ಜೀವನ ಕೊನೆವರೆಗೂ ಇರುತ್ತದೆ? ಮನಶಾಸ್ತ್ರಜ್ಞ, ಸೆಂಟರ್ ಫಾರ್ ಮೆಂಟಲ್ ಹೆಲ್ತ್‌ನ ಸ್ಥಾಪಕ ನೂಪುರ್ ಧಾಕೆ ಫಾಲ್ಕರ್ ಈ ವಿಚಾರದ ಬಗ್ಗೆ ಹಿಂದುಸ್ತಾನ್ ಟೈಮ್ಸ್ ಜೊತೆ ಮಾತನಾಡಿದ್ದಾರೆ.
ಮದುವೆಗೆ ಸಿದ್ಧರಿರುವ ಜೋಡಿ ಮೊದಲು ಉತ್ತಮ ಸಂವಹನ ಬೆಳೆಸಿಕೊಳ್ಳಬೇಕು. ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಅರ್ಥ ಮಾಡಿಕೊಳ್ಳಬೇಕು. ತಮ್ಮ ಸಂಗಾತಿಗೆ ಜೀವನದಲ್ಲಿ ಏನು ಗುರಿಗಳಿವೆ ಎಂಬುದನ್ನು ಕೇಳಿ ತಿಳಿದುಕೊಳ್ಳಬೇಕು. ಮದುವೆ ಬಗ್ಗೆ ಅವರ ಭಾವನೆಗಳು ಏನು ಎಂಬುದನ್ನು ಅರಿಯಬೇಕು. ಆತ/ಆಕೆಯೊಂದಿಗೆ ನೀವು ಕಂಫರ್ಟಬಲ್ ಇರುವಿರಿ, ಅವರ ಬೆಂಬಲ ನಿಮಗೆ ಇರಲಿದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಇಬ್ಬರ, ಕುಟುಂಬ, ಲೈಫ್‌ಸ್ಟೈಲ್, ಆರ್ಥಿಕ ಪರಿಸ್ಥಿತಿ ಎಲ್ಲದರ ಬಗ್ಗೆಯೂ ಮುಕ್ತವಾಗಿ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳಿ.
20-30 ವಯಸ್ಸಿನಲ್ಲಿ ಮದುವೆ ಆಗುವುದರಿಂದ ಏನು ಒಳಿತು, ಏನು ಸಮಸ್ಯೆ?
ಇನ್ನು ಯುವಕ ಹಾಗೂ ಯುವಕ ಇಬ್ಬರ ಪೋಷಕರು ಕೂಡಾ ತಮ್ಮ ಮಕ್ಕಳೊಂದಿಗೆ ಮದುವೆ ಬಗ್ಗೆ ಚರ್ಚಿಸಬೇಕು. ಅವರು ಮದುವೆಗೆ ಸಿದ್ದ ಎಂದಾಗಲಷ್ಟೇ ಮುಂದುವರೆಯಬೇಕು. 20 ರಿಂದ 30 ವಯಸ್ಸಿಗೆ ಮದುವೆ ಆಗುವವರು ತಮ್ಮ ಸಂಗಾತಿಯನ್ನು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ದೊರೆಯುತ್ತದೆ. ಇಂತಹ ಮದುವೆಗಳಲ್ಲಿ ಡಿವೋರ್ಸ್ ಸಾಧ್ಯತೆಗಳು ಬಹಳ ಕಡಿಮೆ ಎಂದು ನೂಪುರ್ ಹೇಳುತ್ತಾರೆ. ನ್ಯಾಷನಲ್ ಸರ್ವೆ ಆಫ್ ಫ್ಯಾಮಿಲಿ ಗ್ರೋತ್ ನಡೆಸಿದ ಅಧ್ಯಯನದ ಪ್ರಕಾರ, 32 ವರ್ಷಕ್ಕಿಂತ ಮೊದಲು ಆಗಿರುವ ಮದುವೆಗಳಲ್ಲಿ ವಿಚ್ಛೇದನದ ಸಾಧ್ಯತೆ ಶೇ.11 ಪ್ರತಿಶತ ಕಡಿಮೆ. ಆದರೆ ಚಿಕ್ಕ ವಯಸ್ಸಿನಲ್ಲಿ ಮದುವೆ ಆದವರ ಮನಸ್ಥಿತಿ ಕ್ರಮೇಣ ಬದಲಾಗುವ ಸಾಧ್ಯತೆಗಳಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು 30-40ರ ಅವಧಿಯಲ್ಲಿ ಆಗಲೇ ನಿಮ್ಮ ಮನೆಯವರು, ಸಂಬಂಧಿಕರು, ಸ್ನೇಹಿತರಿಂದ ನಿಮಗೆ ಮದುವೆ ಆಗಲು ಒತ್ತಡ ಹೆಚ್ಚಾಗಿರುತ್ತದೆ. ಈ ವಯಸ್ಸಿನಲ್ಲಿ ಮದುವೆಯಾದರೆ ನಿಮಗೆ ಇನ್ನಷ್ಟು ಅನುಕೂಲಗಳಿವೆ. ಈ ವಯಸ್ಸಿಗೆ ಬಹುತೇಕ ಎಲ್ಲರೂ ಆರ್ಥಿಕವಾಗಿ ಸ್ವತಂತ್ಯ್ರರಾಗಿರುತ್ತಾರೆ. ಮದುವೆ, ಜೀವನದ ಬಗ್ಗೆ ಅವರಿಗೆ ಹೆಚ್ಚು ತಿಳುವಳಿಕೆ ಇರುತ್ತದೆ. ತಮ್ಮ ಸಂಗಾತಿಯಿಂದ ಅವರು ಏನನ್ನು ಬಯಸುತ್ತಾರೆ ಎಂಬುದರ ಬಗ್ಗೆ ಅವರಿಗೆ ಸ್ಪಷ್ಟನೆ ಇರುತ್ತದೆ. ಈ ವಯಸ್ಸಿನಲ್ಲಿ ಮದುವೆ ಆಗುವವರ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ ಎಂದು ನೂಪುರ್ ಹೇಳುತ್ತಾರೆ.
30-40 , ಅದರ ನಂತರ ಮದುವೆ ಯಾವ ರೀತಿ ಇರುತ್ತೆ?
"ತಮ್ಮ 30 ಅಥವಾ 40 ರ ದಶಕದ ಅಂತ್ಯದ ವೇಳೆಗೆ, ಅನೇಕ ವ್ಯಕ್ತಿಗಳು ತಮ್ಮ ವೈಯಕ್ತಿಕ ಮೌಲ್ಯಗಳು, ಗುರಿಗಳು ಮತ್ತು ಪಾಲುದಾರರಲ್ಲಿ ಅವರು ನಿಜವಾಗಿಯೂ ಏನನ್ನು ಬಯಸುತ್ತಾರೆ ಎಂಬುದರ ಬಗ್ಗೆ ಸ್ಪಷ್ಟವಾದ ಅರ್ಥವನ್ನು ಹೊಂದಿರುತ್ತಾರೆ, ಇದು ಹೆಚ್ಚಿನ ಹೊಂದಾಣಿಕೆ ಮತ್ತು ಆಳವಾದ ಸಂಬಂಧದ ತೃಪ್ತಿಗೆ ಕಾರಣವಾಗಬಹುದು. ಸೇರಿಸಿದ ಜೀವನ ಅನುಭವವು ದಂಪತಿಗಳು ಹೆಚ್ಚು ಅನುಭವಿಸುತ್ತಾರೆ ಎಂದರ್ಥ. ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸ್ಥಿರವಾಗಿದೆ, ಇದು ಮದುವೆಯೊಳಗೆ ಸ್ಥಿತಿಸ್ಥಾಪಕತ್ವಕ್ಕೆ ಕೊಡುಗೆ ನೀಡುತ್ತದೆ," ಎಂದು ಅವರು ಹೇಳುತ್ತಾರೆ. ಆದರೆ ಈ ವಯಸ್ಸಿನ ಮದುವೆಯಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು, ಅದರಲ್ಲೂ ಮಕ್ಕಳನ್ನು ಪಡೆಯುವ ವಿಚಾರದಲ್ಲಿ ಆರೋಗ್ಯ ಸಮಸ್ಯೆ ಅಡ್ಡಿಯಾಗಬಹುದು.
ವಿಭಾಗ