logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜನವರಿ 2025 ಮಾಸ ಭವಿಷ್ಯ: ಹಣಕಾಸಿನ ವಿಚಾರದಲ್ಲಿ ಸ್ಥಿರತೆ, ಆರೋಗ್ಯದ ಬಗ್ಗೆ ಎಚ್ಚರ ವಹಿಸಿ; ಮೇಷ, ವೃಷಭ, ಮಿಥುನ ರಾಶಿಯವರ ತಿಂಗಳ ಭವಿಷ್ಯ

ಜನವರಿ 2025 ಮಾಸ ಭವಿಷ್ಯ: ಹಣಕಾಸಿನ ವಿಚಾರದಲ್ಲಿ ಸ್ಥಿರತೆ, ಆರೋಗ್ಯದ ಬಗ್ಗೆ ಎಚ್ಚರ ವಹಿಸಿ; ಮೇಷ, ವೃಷಭ, ಮಿಥುನ ರಾಶಿಯವರ ತಿಂಗಳ ಭವಿಷ್ಯ

Raghavendra M Y HT Kannada

Dec 19, 2024 09:49 AM IST

google News

2025ರ ಜನವರಿ ಮಾಸ ಭವಿಷ್ಯ

    • ಜನವರಿ 2025 ಮಾಸ ಭವಿಷ್ಯ: ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ 2025 ರ ಜನವರಿ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಆದರೆ ಕೆಲವೇ ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಮೇಷ, ವೃಷಭ ಹಾಗೂ ಮಿಥುನ ರಾಶಿಯವರಿಗೆ ಜನವರಿ ತಿಂಗಳ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
2025ರ ಜನವರಿ ಮಾಸ ಭವಿಷ್ಯ
2025ರ ಜನವರಿ ಮಾಸ ಭವಿಷ್ಯ

ಜನವರಿ 2025 ಮಾಸ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. 2025ರ ಜನವರಿಯಲ್ಲಿ ಮೇಷ, ವೃಷಭ ಹಾಗೂ ಮಿಥುನ ರಾಶಿಯವರ ಮಾಸ ಭವಿಷ್ಯ ಇಲ್ಲಿದೆ.

ತಾಜಾ ಫೋಟೊಗಳು

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಕೆಲಸದ ಸ್ಥಳದಲ್ಲಿ ಬದಲಾವಣೆ ಸಾಧ್ಯತೆ, ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿರಿ; ನಾಳಿನ ದಿನಭವಿಷ್ಯ

Dec 17, 2024 05:14 PM

12 ವರ್ಷಗಳ ನಂತರ ಮೀನ ರಾಶಿಯಲ್ಲಿ ಲಕ್ಷ್ಮೀನಾರಾಯಣ ರಾಜಯೋಗ: 2025 ಈ 3 ರಾಶಿಯವರಿಗೆ ದೊರೆಯಲಿದೆ ಲಕ್ಷ್ಮೀ ಕಟಾಕ್ಷ

Dec 16, 2024 09:59 PM

ನಾಳಿನ ದಿನ ಭವಿಷ್ಯ: ಆರ್ಥಿಕ ವಿಚಾರದಲ್ಲಿ ಏರಿಳಿತಗಳನ್ನು ಕಾಣುತ್ತೀರಿ, ಸಂಗಾತಿಗೆ ಇಷ್ಟವಾಗದ ಯಾವುದೇ ಕೆಲಸ ಮಾಡಬೇಡಿ

Dec 16, 2024 03:08 PM

ಶೀಘ್ರದಲ್ಲೇ ಕುಂಭ ರಾಶಿಯಲ್ಲಿ ಶುಕ್ರ, ಶನಿ ಸಂಯೋಗ: ಡಿಸೆಂಬರ್‌ನಿಂದ ಈ 5 ರಾಶಿಯವರ ಜೀವನವೇ ಬದಲಾಗಲಿದೆ

Dec 15, 2024 09:24 PM

ಮೇಷ ರಾಶಿ

ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಬುದ್ದಿವಂತಿಕೆಯಿಂದ ಗೆಲ್ಲುವಿರಿ. ಆದರೆ ಎಚ್ಚರ ತಪ್ಪಿದಲ್ಲಿ ವಿವಾದಕ್ಕೆ ಗುರಿಯಾಗುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಕ್ರಮೇಣವಾಗಿ ಪ್ರಗತಿಯತ್ತ ಸಾಗುವಿರಿ. ಆತ್ಮಗೌರವಕ್ಕೆ ಧಕ್ಕೆ ಬರುವಂತಹ ಕೆಲಸ ಕಾರ್ಯಗಳಿಂದ ದೂರ ಉಳಿಯುವಿರಿ. ಹೊಸ ಯೋಜನೆಗಳಿಂದ ಆರ್ಥಿಕ ಪ್ರಗತಿ ಸಾಧಿಸುವಿರಿ. ಉತ್ತಮ ಆದಾಯವಿದ್ದರೂ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವ ಕಾರಣ ಮನಸ್ಸಿಗೆ ನೆಮ್ಮದಿ ಇರುತ್ತದೆ. ವಿದ್ಯಾರ್ಥಿಗಳು ದೊರೆಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಹೊಸ ಉತ್ಸಾಹದಿಂದ ಕೆಲಸಗಳನ್ನು ಮಾಡಲು ನಿರ್ಧಾರ ಮಾಡುತ್ತೀರಿ. ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಚಿಸುತ್ತೀರಿ.

ವೃಷಭ ರಾಶಿ

ಆಶ್ಚರ್ಯಕರ ಬದಲಾವಣೆಗಳು ಅನುಕೂಲಕರವಾಗಿದ್ದು, ಮಾನಸಿಕ ನೆಮ್ಮದಿ ಇರುತ್ತದೆ. ಉದ್ಯೋಗದಲ್ಲಿ ಉನ್ನತ ಮಟ್ಟವನ್ನು ತಲುಪುವಿರಿ. ನಿಮ್ಮ ಪ್ರಯತ್ನಗಳಿಗೆ ಎಲ್ಲರ ಮೆಚ್ಚುಗೆ ದೊರೆಯುತ್ತದೆ. ಹಣಕಾಸಿನ ಹೂಡಿಕೆಯಿಂದ ಉತ್ತಮ ಲಾಭ ಗಳಿಸುವಿರಿ. ಬಿಡುವಿನ ವೇಳೆ ಸಣ್ಣ ಬಂಡವಾಳದ ವ್ಯಾಪಾರವನ್ನು ಆರಂಭಿಸುವಿರಿ. ಖರ್ಚು ವೆಚ್ಚಗಳು ಮಿತಿಮೀರುತ್ತದೆ. ಕುಟುಂಬದಲ್ಲಿ ಅನಾವಶ್ಯಕ ವಾದ ವಿವಾದಗಳು ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಸುಲಭವಾಗಿ ನಿರ್ವಹಿಸುತ್ತಾರೆ. ಸಾಲದ ವ್ಯವಹಾರದಿಂದ ಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಉತ್ಸಾಹದಿಂದ ಕೆಲಸ ಆರಂಭಿಸುತ್ತೀರಿ. ಸ್ನೇಹಿತರ ಭೇಟಿ ಸಂತೋಷವನ್ನು ಹೆಚ್ಚಿಸುತ್ತದೆ. ವ್ಯಾಪಾರಿಗಳಿಗೆ ಲಾಭದ ಸಾಧ್ಯತೆ ಇದೆ.

ಮಿಥುನ ರಾಶಿ

ನಷ್ಟದಲ್ಲಿ ಇದ್ದ ಉದ್ದಿಮೆಯನ್ನು ಕೊಂಡು ಉತ್ತಮ ಲಾಭ ಗಳಿಸುವಿರಿ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಕಂಡು ಬರುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುತ್ತದೆ. ಸಮಾಜದಲ್ಲಿನ ಉನ್ನತ ಸ್ಥಾನವು ನಿಮಗೆ ದೊರೆಯುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಸ್ತ್ರೀಯರು ಕುಟುಂಬದಲ್ಲಿನ ಮಂಗಳ ಕಾರ್ಯವು ನೆರವೇರಲು ಮೂಲ ಕಾರಣರಾಗುತ್ತಾರೆ. ಆರೋಗ್ಯದ ಸಮಸ್ಯೆ ಎದುರಾಗುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಹೆಚ್ಚಿನ ಲಾಭಾಂಶ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಇರುವುದಿಲ್ಲ. ಒತ್ತಡದ ಜೀವನದಿಂದ ಮುಕ್ತಿ ಪಡೆಯಲು ಯೋಚಿಸುತ್ತೀರಿ. ಹೆಚ್ಚಿನ ಹಣ ಬರಲಿದೆ. ಖರ್ಚಿನ ಮೇಲೆ ಗಮನ ಹರಿಸುತ್ತೀರಿ. ಕುಟುಂಬದಿಂದ ಅನಾವಶ್ಯಕ ಖರೀದಿಗಳನ್ನು ತಪ್ಪಿಸಲು ಪ್ರಯತ್ನಿಸುತ್ತೀರಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ