logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗುರು ಸಂಕ್ರಮಣ 2025: ಕಟಕ ರಾಶಿಯವರಿಗೆ ಧಾರ್ಮಿಕ ಕಾರ್ಯಗಳಿಗೆ ಹಣ ಖರ್ಚು, ಕನ್ಯಾ ರಾಶಿಯವರ ವೈವಾಹಿಕ ಸಂಬಂಧಗಳು ಬಲಗೊಳ್ಳುತ್ತವೆ

ಗುರು ಸಂಕ್ರಮಣ 2025: ಕಟಕ ರಾಶಿಯವರಿಗೆ ಧಾರ್ಮಿಕ ಕಾರ್ಯಗಳಿಗೆ ಹಣ ಖರ್ಚು, ಕನ್ಯಾ ರಾಶಿಯವರ ವೈವಾಹಿಕ ಸಂಬಂಧಗಳು ಬಲಗೊಳ್ಳುತ್ತವೆ

Rakshitha Sowmya HT Kannada

Dec 02, 2024 05:56 PM IST

google News

ಕಟಕ, ಸಿಂಹ, ಕನ್ಯಾ ರಾಶಿ ಗುರು ಸಂಕ್ರಮಣ ಫಲ 2025

  • Jupiter Transit 2025: ಮುಂದಿನ ವರ್ಷ ಮಾರ್ಚ್‌ನಲ್ಲಿ ಶನಿ ಸಂಕ್ರಮಣದ ಜೊತೆ ಮೇನಲ್ಲಿ ಗುರುವು ರಾಶಿ ಬದಲಿಸಲಿದ್ದಾನೆ. 15 ಮೇ 2025 ರಂದು ಮದ್ಯಾಹ್ನ ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಕಟಕ, ಸಿಂಹ, ಕನ್ಯಾ ರಾಶಿಯವರಿಗೆ ಯಾವ ರೀತಿಯ ಫಲಗಳನ್ನು ನೀಡಲಿದ್ದಾನೆ ನೋಡೋಣ.

ಕಟಕ, ಸಿಂಹ, ಕನ್ಯಾ ರಾಶಿ ಗುರು ಸಂಕ್ರಮಣ ಫಲ 2025
ಕಟಕ, ಸಿಂಹ, ಕನ್ಯಾ ರಾಶಿ ಗುರು ಸಂಕ್ರಮಣ ಫಲ 2025 (PC: Canva)

ಗುರು ಸಂಕ್ರಮಣ 2025: ಗುರು ಗ್ರಹವನ್ನು ಬೃಹಸ್ಪತಿ ಅಥವಾ ದೇವಗುರು ಎಂದು ಕರೆಯಲಾಗುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಇದನ್ನು ಅತ್ಯಂತ ಅನುಕೂಲಕರ ಗ್ರಹವೆಂದು ಪರಿಗಣಿಸಲಾಗಿದೆ. ಗುರುವು ಕಳೆದ ವರ್ಷದಿಂದ ಶುಕ್ರನಿಂದ ನಿಯಂತ್ರಿಸಲ್ಪಡುವ ವೃಷಭ ರಾಶಿಯಲ್ಲಿ ನೆಲೆಸಿದ್ದಾನೆ. 15 ಮೇ 2025 ರಂದು ಮದ್ಯಾಹ್ನ 2:30 ವೃಷಭ ರಾಶಿಯಿಂದ ಬುಧದ ಆಳ್ವಿಕೆಯ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು, ಸಣ್ಣ ಪ್ರವಾಸಗಳು ಹೆಚ್ಚಿನ ಆನಂದವನ್ನು ನೀಡುತ್ತವೆ

Dec 02, 2024 03:50 PM

ಗಜಲಕ್ಷ್ಮಿ ರಾಜಯೋಗ; 2025 ರಲ್ಲಿ ಈ ರಾಶಿಯವರಿಗೆ ಸಾಲದ ಹೊರೆ ಕಡಿಮೆಯಾಗುತ್ತೆ, ಹಣದ ಕೊರತೆಯೇ ಇರಲ್ಲ

Dec 02, 2024 12:37 PM

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ, ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ವಿವಾದಗಳನ್ನು ತಪ್ಪಿಸಿ

Dec 01, 2024 04:26 PM

Venus Transit: ಡಿಸೆಂಬರ್ 2 ರಿಂದ ಈ 3 ರಾಶಿಯವರ ಶುಕ್ರದೆಸೆ ಶುರು ನೋಡಿ, ಉದ್ಯೋಗದಲ್ಲಿ ಉನ್ನತಿ, ಆದಾಯ ವೃದ್ಧಿ, ಒಟ್ಟಿನಲ್ಲಿ ಅದೃಷ್ಟವಂತರು

Nov 30, 2024 06:55 PM

ಶನಿಯ ನಂತರ ನಿಧಾನವಾಗಿ ಚಲಿಸುವ ಎರಡನೇ ಗ್ರಹವೇ ಗುರು. ಗುರುವನ್ನು ದೇವತೆಗಳ ಗುರು ಎಂದೂ ಕರೆಯುತ್ತಾರೆ. ಉದ್ಯೋಗ, ಮದುವೆ, ಮಕ್ಕಳು, ಸಂತೋಷ, ಮನೆ, ಸಂಪತ್ತು, ಸಮೃದ್ಧಿ, ಸಂತೋಷದ ದಾಂಪತ್ಯ ಮತ್ತು ಸಾಮಾಜಿಕ ಗೌರವವನ್ನು ಒಳಗೊಂಡಂತೆ ಜೀವನದಲ್ಲಿ ಎಲ್ಲಾ ಗುರಿಗಳನ್ನು ಸಾಧಿಸಲು ಗುರುವಿನ ಆಶೀರ್ವಾದ ಇರಬೇಕು. ಗುರುವು 2025 ರ ಮೇ ತಿಂಗಳಲ್ಲಿ ಮಿಥುನ ರಾಶಿಯಲ್ಲಿ ಸಾಗಲಿದ್ದಾನೆ. ಈ ಸಮಯದಲ್ಲಿ ದ್ವಾದಶ ರಾಶಿಗಳಿಗೆ ವಿವಿಧ ಫಲಗಳನ್ನು ನೀಡುತ್ತಾನೆ.

ಕಟಕ, ಸಿಂಹ, ಕನ್ಯಾ ರಾಶಿ ಗುರು ಸಂಕ್ರಮಣ ಫಲ 2025

 

ಕಟಕ ರಾಶಿ

ಸಂಕ್ರಮಣದ ಸಮಯದಲ್ಲಿ ಕಟಕ ರಾಶಿಯ 12 ಮನೆಗೆ ಗುರು ಪ್ರವೇಶಿಸುತ್ತಾನೆ. ಇದರ ಪರಿಣಾಮವಾಗಿ, ನೀವು ದತ್ತಿ ಕಾರ್ಯಗಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಪೂಜೆ, ಧರ್ಮ, ಆಧ್ಯಾತ್ಮಿಕ ತೀರ್ಥಯಾತ್ರೆ ಮತ್ತು ಇತರ ಸಾಮಾಜಿಕ ಕಾರ್ಯಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಇದು ನಿಮಗೆ ಮಾನಸಿಕ ತೃಪ್ತಿ ನೀಡುವುದಲ್ಲದೆ, ಸಮಾಜದಲ್ಲಿ ಗೌರವವನ್ನು ಕೊಡುತ್ತದೆ. ಧಾರ್ಮಿಕ ಪ್ರಯಾಣ ಕೈಗೊಳ್ಳೂವಿರಿ, ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಜೊತೆಗೆ ಖರ್ಚು ವೆಚ್ಚಗಳು ಹೆಚ್ಚಾಗಬಹುದು.

ಅಕ್ಟೋಬರ್‌ನಲ್ಲಿ ಕಟಕ ರಾಶಿಯ ಕೆಲವರಿಗೆ ಕುಟುಂಬದಲ್ಲಿ ಸಾಮರಸ್ಯ ಸುಧಾರಿಸುತ್ತದೆ. ನೀವು ಶಿಕ್ಷಣ, ಸಂಪತ್ತು, ಮಕ್ಕಳು, ವೈವಾಹಿಕ ಜೀವನ, ವ್ಯಾಪಾರ ಮತ್ತು ವ್ಯವಹಾರದಲ್ಲಿ ವಿಶೇಷ ಫಲಿತಾಂಶಗಳನ್ನು ನೋಡುವಿರಿ, ಡಿಸೆಂಬರ್‌ನಲ್ಲಿ ಗುರುಗ್ರಹವು 12ನೇ ಮನೆಗೆ ಹಿಮ್ಮುಖವಾಗಿ ಪ್ರವೇಶಿಸುವುದರಿಂದ ಆರೋಗ್ಯದ ಸಮಸ್ಯೆ, ಖರ್ಚು ವೆಚ್ಚಗಳು ಹೆಚ್ಚಾಗಬಹುದು.

ಪರಿಹಾರ: ಗುರುವಾರ ನೀವು ವಿಷ್ಣುವಿನ ಆರಾಧನೆ ಮಾಡಬೇಕು

ಸಿಂಹ ರಾಶಿ

ಸಂಕ್ರಮಣದ ಸಮಯದಲ್ಲಿ ಗುರುವು ನಿಮ್ಮ ರಾಶಿಚಕ್ರದ 11ನೇ ಮನೆಗೆ ಪ್ರವೇಶಿಸುತ್ತಾನೆ. ಇದು ನಿಮಗೆ ಉತ್ತಮ ಯಶಸ್ಸಿನ ಅವಧಿಯಾಗಿದೆ. ಹಣಕಾಸಿನ ತೊಂದರೆ ಕಡಿಮೆಯಾಗುತ್ತದೆ. ಹಣ ಗಳಿಸುವ ಮಾರ್ಗ ಸುಲಭವಾಗುತ್ತದೆ. ಉದ್ಯೋಗದಲ್ಲಿ ಉತ್ತಮ ಸಂಬಳ ದೊರೆಯಲಿದೆ. ಪ್ರೇಮ ಸಂಬಂಧ ಸುಧಾರಿಸುತ್ತದೆ. ಮಗುವನ್ನು ಹೊಂದಲು ಬಯಸಿದರೆ ಇದು ಉತ್ತಮ ಸಮಯ. ಒಡಹುಟ್ಟಿದವರು ನಿಮಗೆ ಬೆಂಬಲ ನೀಡಲಿದ್ದಾರೆ.

ಅಕ್ಟೋಬರ್‌ನಲ್ಲಿ ಗುರುಗ್ರಹವು 12ನೇ ಮನೆಯಲ್ಲಿ ಕರ್ಕರಾಶಿಗೆ ಚಲಿಸಿದಾಗ ದೈಹಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ಡಿಸೆಂಬರ್‌ನಲ್ಲಿ, ಅದು ಹಿಮ್ಮುಖ ಚಲನೆ ಆರಂಭಿಸಿ 11ನೇ ಮನೆಗೆ ಪ್ರವೇಶಿಸಿದಾಗ, ನೀವು ಹಣವನ್ನು ಸಂಪಾದಿಸಲು ಶ್ರಮಿಸಬೇಕಾಗುತ್ತದೆ. ನಿಮ್ಮ ಗುರಿಗಳನ್ನು ಸಾಧಿಸುವುಲ್ಲಿ ವಿಳಂಬವಾಗಬಹುದು.

ಪರಿಹಾರ: ಪ್ರತಿ ಗುರುವಾರ ನಿಮ್ಮ ಹಣೆಗೆ ಅರಿಶಿನ ಅಥವಾ ಕುಂಕುಮದ ತಿಲಕವನ್ನು ಹಚ್ಚಿಕೊಳ್ಳಿ.

ಕನ್ಯಾ ರಾಶಿ

ಈ ರಾಶಿಯ 10ನೇ ಮನೆಗೆ ಗುರು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ, ನೀವು ಕೆಲಸದಲ್ಲಿ ಕೆಲವು ಅನಾನುಕೂಲತೆಗಳನ್ನು ಹೊಂದಬಹುದು. ಅತಿಯಾದ ಆತ್ಮವಿಶ್ವಾಸದಿಂದ ನಿರಾಸೆ ಉಂಟಾಗಬಹುದು, ಕೆಲಸದ ಸ್ಥಳದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಕುಟುಂಬದ ಜವಾಬ್ದಾರಿ ಹೆಚ್ಚಾಗಲಿದೆ. ಈ ಸಮಸಯದಲ್ಲಿ ಕೌಟುಂಬಿಕ ಸಂಬಂಧಗಳನ್ನು ಸುಧಾರಿಸಲು ನೀವು ಹೆಚ್ಚಿನ ಪ್ರಯತ್ನ ಮಾಡುತ್ತೀರಿ. ಪೋಷಕರ ಆರೋಗ್ಯ ಸುಧಾರಿಸುತ್ತದೆ. ಕುಟುಂಬದ ಸದಸ್ಯರು ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯದ ಭಾವನೆಯನ್ನು ಹಂಚಿಕೊಳ್ಳುತ್ತಾರೆ. ಅಕ್ಟೋಬರ್‌ನಲ್ಲಿ, ಗುರುವು ನಿಮ್ಮ 11ನೇ ಮನೆಗೆ ಪ್ರವೇಶಿಸಿದಾಗ, ನಿಮ್ಮ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ.

ವೈವಾಹಿಕ ಸಂಬಂಧಗಳು ಬಲಗೊಳ್ಳುತ್ತವೆ ಮತ್ತು ಪ್ರೀತಿಯ ಸಂಬಂಧ ಇನ್ನಷ್ಟು ಸುಧಾರಿಸುತ್ತದೆ. ನೀವು ಮಗುವನ್ನು ಹೊಂದಲು ಬಯಸಿದ್ದರೆ ಇದು ಉತ್ತಮ ಸಮಯ. ಗುರುವು ಡಿಸೆಂಬರ್‌ನಲ್ಲಿ ಹಿಮ್ಮುಖ ಚಲನೆ ಆರಂಭಿಸಿದಾಗ 10ನೇ ಮನೆಗೆ ಮರಳುತ್ತಾನೆ., ಆದ್ದರಿಂದ ಈ ಅವಧಿಯಲ್ಲಿ ನೀವು ಕೆಲಸದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು.

ಪರಿಹಾರ: ಪ್ರತಿ ಗುರುವಾರ ದೇವಸ್ಥಾನಕ್ಕೆ ಶುದ್ಧ ತುಪ್ಪ ದಾನ ಮಾಡಬೇಕು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ