logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Karnataka Temple: ಭಕ್ತರ ಕಷ್ಟಗಳನ್ನು ಕ್ಷಣ ಮಾತ್ರದಲ್ಲಿ ಪರಿಹರಿಸುವ ದೇವಿ; ಮಂಡ್ಯ ಜಿಲ್ಲೆಯ ಕ್ಷಣಾಂಬಿಕಾ ಶ್ರೀಚಕ್ರ ದೇವಸ್ಥಾನ ದರ್ಶನ

Karnataka Temple: ಭಕ್ತರ ಕಷ್ಟಗಳನ್ನು ಕ್ಷಣ ಮಾತ್ರದಲ್ಲಿ ಪರಿಹರಿಸುವ ದೇವಿ; ಮಂಡ್ಯ ಜಿಲ್ಲೆಯ ಕ್ಷಣಾಂಬಿಕಾ ಶ್ರೀಚಕ್ರ ದೇವಸ್ಥಾನ ದರ್ಶನ

Rakshitha Sowmya HT Kannada

Apr 16, 2024 08:31 AM IST

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಗಿನ ಕ್ಷಣಾಂಬಿಕಾ ದೇವಸ್ಥಾನ

  • Kshanambika Devi Temple: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕ್ಷಣಾಂಬಿಕಾ ದೇವಿ ದೇವಸ್ಥಾನಕ್ಕೆ ಪ್ರತಿದಿನ ಅನೇಕ ಭಕ್ತರು ಭೇಟಿ ನೀಡುತ್ತಾರೆ. ಆದಿ ಶಂಕರಾಚಾರ್ಯರು ಇಲ್ಲಿ ದೇವಿಯ ಪ್ರತಿಮೆ ಹಾಗೂ ಶ್ರೀ ಚಕ್ರವನ್ನು ಸ್ಥಾಪಿಸಿದ್ದು ಈ ದೇವಿಯು ಭಕ್ತರ ಕಷ್ಟಗಳನ್ನು ಕ್ಷಣ ಮಾತ್ರದಲ್ಲಿ ಪರಿಹರಿಸುತ್ತಾಳೆ ಎಂದು ನಂಬಲಾಗಿದೆ. 

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಗಿನ ಕ್ಷಣಾಂಬಿಕಾ ದೇವಸ್ಥಾನ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಗಿನ ಕ್ಷಣಾಂಬಿಕಾ ದೇವಸ್ಥಾನ (PC: Jaganmohan Varma, Giridhar Dixit Facebook)

ಮಂಡ್ಯ ಜಿಲ್ಲೆ: ಕರ್ನಾಟಕದ ಬಹಳಷ್ಟು ದೇವಸ್ಥಾನಗಳು ತನ್ನದೇ ಆದ ಮಹಿಮೆಗೆ ಹೆಸರಾಗಿದೆ. ಕಷ್ಟ ಎಂದು ಬರುವ ಭಕ್ತರ ಆಸೆಯನ್ನು ಈಡೇರಿಸುವ ಅನೇಕ ಶಕ್ತಿಶಾಲಿ ದೇವಾಲಯಗಳು ಕರ್ನಾಟಕದಲ್ಲಿವೆ. ಈ ದೇವಾಲಯಗಳಲ್ಲಿ ಬಹುತೇಕ ದೇವಾಲಯಗಳ ಬಗ್ಗೆ ಜನರಿಗೆ ಪರಿಚಯವೇ ಇರುವುದಿಲ್ಲ ಅದರಲ್ಲಿ ಕ್ಷಣಾಂಬಿಕಾ ದೇವಸ್ಥಾನ ಕೂಡಾ ಒಂದು.

ತಾಜಾ ಫೋಟೊಗಳು

ಶನಿ ಸಂಕ್ರಮಣದಿಂದ ರೂಪುಗೊಳ್ಳಲಿದೆ ಶಶ ರಾಜಯೋಗ; 2025ವರೆಗೆ ಈ ಮೂರೂ ರಾಶಿಯವರಿಗೆ ಹೋದಲೆಲ್ಲಾ ಹಿಂಬಾಲಿಸಲಿದೆ ಅದೃಷ್ಟ

May 09, 2024 08:25 AM

Trigrahi Yoga: ಮೇ ತಿಂಗಳಲ್ಲಿ ತ್ರಿಗ್ರಹಿ ಯೋಗ; ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

May 09, 2024 06:00 AM

ಇಂದು ವೈಶಾಖ ಅಮಾವಾಸ್ಯೆ; ಧಾರ್ಮಿಕ ಕಾರ್ಯಗಳಿಗೆ ಮೀಸಲಾದ ಈ ದಿನ ಇಂಥ ಕೆಲಸಗಳನ್ನು ಮಾಡಿ ಆರ್ಥಿಕ ಸಂಕಷ್ಟ ತಂದುಕೊಳ್ಳದಿರಿ

May 08, 2024 08:40 AM

Amavasya 2024: ಪಿತೃದೋಷ, ಕಾಳಸರ್ಪ ದೋಷ , ಶನಿ ದೋಷ ಪರಿಹಾರಕ್ಕೆ ಅಮಾವಾಸ್ಯೆಯಂದು ಈ ಕೆಲಸಗಳನ್ನು ಮಾಡಿ

May 07, 2024 03:00 PM

Mars Transit: ಮೀನ ರಾಶಿಗೆ ಮಂಗಳನ ಪ್ರವೇಶ; ಸಿಂಹ, ಕನ್ಯಾ ಸೇರಿ ಈ ರಾಶಿಗಳಿಗೆ ಕಷ್ಟಕಷ್ಟ

May 06, 2024 10:00 AM

ಲಕ್ಷ್ಮೀದೇವಿಯ ಕೃಪೆ ಬೇಕು ಅಂದ್ರೆ ಈ 5 ಅಭ್ಯಾಸ ಬಿಟ್ಟುಬಿಡಿ; ಮನೆಯಲ್ಲಿ ಸಂತೋಷದೊಂದಿಗೆ ಸಮೃದ್ಧಿ ನೆಲೆಸುತ್ತೆ

May 06, 2024 09:00 AM

ನಿಮಿಷಾಂಬಾ ದೇವಸ್ಥಾನ ಕೇಳಿದ್ದೇವೆ, ಇದೇನಿದು ಕ್ಷಣಾಂಬಿಕಾ ಎಂದು ಯೋಚಿಸುತ್ತಿದ್ದೀರಾ? ಹೌದು ನಿಮಿಷಾಂಬಾ ದೇವಸ್ಥಾನದಿಂದ ಸುಮಾರು 6 ಕಿಮಿ ದೂರದಲ್ಲಿ ಈ ಕ್ಷಣಾಂಬಿಕಾ ದೇವಸ್ಥಾನವಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಈ ಕ್ಷಣಾಂಬಿಕಾ ದೇವಸ್ಥಾನ ನೆಲೆಗೊಂಡಿದೆ. ಮಂಡ್ಯ , ಮೈಸೂರಿಗೆ ಬರುವ ಬಹುತೇಕ ಭಕ್ತರು ನಿಮಿಷಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿಂದ ಕ್ಷಣಾಂಬಿಕೆಯ ದರ್ಶನ ಪಡೆದೂ ಹೋಗುತ್ತಾರೆ. ಬೆಂಗಳೂರಿನಿಂದ ಸುಮಾರು 120 ಕಿಮೀ ದೂರದಲ್ಲಿ ಮೈಸೂರಿನಿಂದ ಸುಮಾರು 18 ಕಿಮೀ ದೂರದಲ್ಲಿ ಈ ದೇವಸ್ಥಾನವಿದೆ. ಇದು ಮೈಸೂರು ಅರಸರ ಕಾಲಕ್ಕೆ ಸೇರಿದ ಅತ್ಯಂತ ಪುರಾತನ ದೇವಾಲಯವಾಗಿದೆ. ಏಕೆಂದರೆ ಹೊರಗಿನಿಂದ ನೋಡಿದರೆ ಈ ಸ್ಥಳದಲ್ಲಿ ಇಂಥದ್ದೊಂದು ವಿಶಾಲವಾದ ದೇವಾಲಯ ಇದೆ ಎಂದು ಯಾರಿಗೂ ಹೇಳಲು ಸಾಧ್ಯವೇ ಇಲ್ಲ.

ಶ್ರೀರಂಗಪಟ್ಟಣ ಬಸ್‌ ನಿಲ್ದಾಣದಿಂದ ಅರ್ಧ ಕಿಮೀ ದೂರದಲ್ಲಿರುವ ದೇವಸ್ಥಾನ

ಶ್ರೀರಂಗಪಟ್ಟದ ಪ್ರಮುಖ ಬಸ್‌ ನಿಲ್ದಾಣದ ಮೂಲಕ ಊರಿನ ಒಳಗೆ ಸಾಗಿದರೆ ಕೋಟಿ ಬಾಗಿಲು ಕಾಣಸಿಗುತ್ತದೆ. ಅಲ್ಲಿಂದ ನೀವು ಒಳಗೆ ಪ್ರವೇಶಿಸಿ ಬಂಡಿಕೇರಿ ರಸ್ತೆಯಲ್ಲಿ ಸಾಗಿದರೆ ಜುಮ್ಮಾ ಮಸೀದಿಯಿಂದ ಸ್ವಲ್ಪ ದೂರದಲ್ಲೇ ಕ್ಷಣಾಂಬಿಕಾ ದೇವಸ್ಥಾನವಿದೆ. ದೇವಾಲಯದ ಆವರಣ ಪ್ರವೇಶಿಸಿದರೆ ಎಡಭಾಗದಲ್ಲಿ ಇತರ ಸಣ್ಣ ಗುಡಿಗಳನ್ನೂ ಕಾಣಬಹುದು. ಬಲಭಾಗದಲ್ಲಿ ಕ್ಷಣಾಂಬಿಕಾ ಶ್ರೀ ಚಕ್ರ ದೇವಿಯ ಪ್ರಮುಖ ದೇವಾಲಯವಿದೆ. ನಿಮಿಷಾಂಬದಲ್ಲಿ ಇರುವಂತೆ ಇಲ್ಲಿ ಕೂಡಾ ಕ್ಷಣಾಂಬಿಕಾ ದೇವಿಯ ಸುಂದರ ವಿಗ್ರಹವನ್ನು ಕೆತ್ತಲಾಗಿದೆ. ದೇವಿಯ ಮುಂದೆ ಶ್ರೀ ಚಕ್ರವಿದೆ. ಇದರಲ್ಲಿ ಕೆತ್ತಲಾದ ಬೀಜಾಕ್ಷರಗಳು ಅತ್ಯಂತ ಪ್ರಭಾವಶಾಲಿ ಎಂದು ನಂಬಲಾಗಿದೆ.

ನಿಮಿಷಾಂಬ ದೇವಿಯು ತನ್ನನ್ನು ಬೇಡಿದ ಭಕ್ತರ ಆಸೆಗಳನ್ನು ನಿಮಿಷದಲ್ಲಿ ನೆರವೇರಿಸಿದರೆ ಕ್ಷಣಾಂಬಿಕೆಯು ಕ್ಷಣ ಮಾತ್ರದಲ್ಲಿ ಭಕ್ತರ ಕೋರಿಕೆಗಳಿಗೆ ಅಸ್ತು ಎನ್ನುತ್ತಾಳೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಈ ದೇವಾಲಯ ಬಹಳ ಖ್ಯಾತಿ ಪಡೆದಿದೆ. ಸುಮಾರು 6ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಈ ದೇವಾಲಯದಲ್ಲಿ ಕ್ಷಣಾಂಬಿಕಾ ದೇವಿಯ ವಿಗ್ರಹ ಹಾಗೂ ಶ್ರೀಚಕ್ರವನ್ನು ಸ್ಥಾಪಿಸಿದರು ಎಂದು ನಂಬಲಾಗಿದೆ. ಕಲ್ಲಿನಿಂದ ಕೆತ್ತಲಾದ ಯಂತ್ರವು ಅತ್ಯಂತ ಶಕ್ತಿಶಾಲಿಯಾಗಿದ್ದು ಇದು ಜ್ಯಾಮಿತೀಯ ರೂಪದಲ್ಲಿ ವಿಶ್ವವನ್ನು ಪ್ರತಿನಿಧಿಸುತ್ತದೆ. ಶ್ರೀಚಕ್ರವು 9 ತ್ರಿಕೋನಗಳನ್ನು ಹೊಂದಿದ್ದು ಅವುಗಳಲ್ಲಿ 4 ಶಿವನನ್ನುಉಳಿದ 5 ತ್ರಿಕೋನಗಳು ಶಕ್ತಿ (ಪಾರ್ವತಿ)ಯನ್ನು ಪ್ರತಿನಿಧಿಸುತ್ತವೆ.

ಜ್ಯೋತಿರ್ಮಹೇಶ್ವರ ದೇವಸ್ಥಾನ ಎಂದೂ ಖ್ಯಾತಿ ಗಳಿಸಿರುವ ಕ್ಷಣಾಂಬಿಕಾ ದೇವಸ್ಥಾನ

ದೇವಸ್ಥಾನ ಕಟ್ಟಲಾದ ಆರಂಭದಲ್ಲಿ ಪ್ರತಿ ವಿಶೇಷ ಸಂದರ್ಭಗಳಲ್ಲೂ ದೇವಾಲಯದ ಆವರಣದಲ್ಲಿ ಜನರು ಲಕ್ಷದೀಪೋತ್ಸವ ಬೆಳಗುತ್ತಿದ್ದರು. ಕ್ರಮೇಣ ಈ ಆಚರಣೆ ನಿಂತರೂ, ಚಾಮರಾಜ ಒಡೆಯರ್‌ ಅವರ ಕಾಲದಲ್ಲಿ ಮತ್ತೆ ಈ ಸಂಪ್ರದಾಯ ಆರಂಭವಾಯಿತು. ಈ ಆಚರಣೆಯಿಂದಲೇ ಈ ದೇವಸ್ಥಾನವನ್ನು ಜ್ಯೋತಿರ್ಮಹೇಶ್ವರ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಈ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ ಕೂಡ ನಡೆಯಲಿದ್ದು ಅನೇಕ ಭಕ್ತರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಇಲ್ಲಿ ಬಂದು ಸಮಸ್ಯೆಯನ್ನು ಪರಿಹರಿಸಿಕೊಂಡು ಹೋಗಿದ್ದಾರೆ. ಭಾನುವಾರದಿಂದ ಸೋಮವಾರದವರೆಗೂ ಬೆಳಗ್ಗೆ 8.30 ರಿಂದ 11.30 ಹಾಗೂ ಸಂಜೆ 5.30 ರಿಂದ 8.30ವರೆಗೂ ದೇವಿಯ ದರ್ಶನಕ್ಕೆ ಅವಕಾಶವಿದೆ. ದಸರಾ ಸಮಯದಲ್ಲಿ ಕೂಡಾ ಈ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಒಮ್ಮೆ ಕ್ಷಣಾಂಬಿಕಾ ಶ್ರೀಚಕ್ರ ದೇವಸ್ಥಾನಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು