logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಕ್ಷತ್ರ ಭವಿಷ್ಯ 2025: ಪುಷ್ಯದವರಿಗೆ ಜೀವನ ಪಾಠಶಾಲೆಯಲ್ಲಿ ಕಠಿಣ ಶಿಕ್ಷಣ, ಆಶ್ಲೇಷಾದವರಿಗೆ ವರ್ಷಾರಂಭ ಕಡುಕಷ್ಟ, ಅದಾಗಿ ಆನಂದ ಸಾಗರ

ನಕ್ಷತ್ರ ಭವಿಷ್ಯ 2025: ಪುಷ್ಯದವರಿಗೆ ಜೀವನ ಪಾಠಶಾಲೆಯಲ್ಲಿ ಕಠಿಣ ಶಿಕ್ಷಣ, ಆಶ್ಲೇಷಾದವರಿಗೆ ವರ್ಷಾರಂಭ ಕಡುಕಷ್ಟ, ಅದಾಗಿ ಆನಂದ ಸಾಗರ

Umesh Kumar S HT Kannada

Dec 02, 2024 03:58 PM IST

google News

ನಕ್ಷತ್ರ ಭವಿಷ್ಯ 2025: ಪುಷ್ಯದವರಿಗೆ ಜೀವನ ಪಾಠಶಾಲೆಯಲ್ಲಿ ಕಠಿಣ ಶಿಕ್ಷಣ ಸಿಕ್ಕರೆ, ಆಶ್ಲೇಷಾದವರಿಗೆ ವರ್ಷಾರಂಭ ಕಡುಕಷ್ಟ, ಅದಾಗಿ ಆನಂದ ಸಾಗರ ಎನ್ನುತ್ತಿದೆ ನಕ್ಷತ್ರ ಭವಿಷ್ಯ.

  • Nakshatra Horoscope: ಹೊಸ ವರ್ಷದ ಅಂದರೆ 2025ರ ರಾಶಿ ಭವಿಷ್ಯ ನೋಡಿದ್ರಾ? ನಕ್ಷತ್ರ ಭವಿಷ್ಯಕ್ಕಾಗಿ ಹುಡುಕಾಡ್ತಾ ಇದ್ದೀರಾ, ಇಲ್ಲಿದೆ ಪುಷ್ಯ ಮತ್ತು ಆಶ್ಲೇಷಾ ನಕ್ಷತ್ರ ಭವಿಷ್ಯ. ನಕ್ಷತ್ರ ಭವಿಷ್ಯ 2025ರ ಪ್ರಕಾರ, ಪುಷ್ಯದವರಿಗೆ ಜೀವನ ಪಾಠಶಾಲೆಯಲ್ಲಿ ಕಠಿಣ ಶಿಕ್ಷಣ ಸಿಕ್ಕರೆ, ಆಶ್ಲೇಷಾದವರಿಗೆ ವರ್ಷಾರಂಭ ಕಡುಕಷ್ಟ, ಅದಾಗಿ ಆನಂದ ಸಾಗರವಾಗಲಿದೆ.

ನಕ್ಷತ್ರ ಭವಿಷ್ಯ 2025: ಪುಷ್ಯದವರಿಗೆ ಜೀವನ ಪಾಠಶಾಲೆಯಲ್ಲಿ ಕಠಿಣ ಶಿಕ್ಷಣ ಸಿಕ್ಕರೆ, ಆಶ್ಲೇಷಾದವರಿಗೆ ವರ್ಷಾರಂಭ ಕಡುಕಷ್ಟ, ಅದಾಗಿ ಆನಂದ ಸಾಗರ ಎನ್ನುತ್ತಿದೆ ನಕ್ಷತ್ರ ಭವಿಷ್ಯ.
ನಕ್ಷತ್ರ ಭವಿಷ್ಯ 2025: ಪುಷ್ಯದವರಿಗೆ ಜೀವನ ಪಾಠಶಾಲೆಯಲ್ಲಿ ಕಠಿಣ ಶಿಕ್ಷಣ ಸಿಕ್ಕರೆ, ಆಶ್ಲೇಷಾದವರಿಗೆ ವರ್ಷಾರಂಭ ಕಡುಕಷ್ಟ, ಅದಾಗಿ ಆನಂದ ಸಾಗರ ಎನ್ನುತ್ತಿದೆ ನಕ್ಷತ್ರ ಭವಿಷ್ಯ.

Nakshatra Horoscope: ಹೊಸ ವರ್ಷದ ಅಂದರೆ 2025ರ ರಾಶಿ ಭವಿಷ್ಯ ನೋಡಿದ್ರಾ? ನಕ್ಷತ್ರ ಭವಿಷ್ಯಕ್ಕಾಗಿ ಹುಡುಕಾಡ್ತಾ ಇದ್ದೀರಾ, ಚಿಂತೆ ಮಾಡಬೇಡಿ. ಇಲ್ಲಿದೆ 2025 ರ ನಕ್ಷತ್ರ ಭವಿಷ್ಯ. ಈ ವರ್ಷ ಪುಷ್ಯ ನಕ್ಷತ್ರದವರಿಗೆ ಜೀವನ ಪಾಠಶಾಲೆಯಲ್ಲಿ ಕಠಿಣ ಶಿಕ್ಷಣ ಸಿಗಬಹುದು. ಅದೇ ತೀತಿ, ಆಶ್ಲೇಷಾ ನಕ್ಷತ್ರದವರಿಗೆ ವರ್ಷಾರಂಭ ಕಡುಕಷ್ಟ ಇರಲಿದ್ದು, ಅದಾಗಿ ಆನಂದ ಸಾಗರವಾಗಲಿದೆ ಸಂಸಾರ ಸಾಗರ ಎನ್ನುತ್ತಿದೆ ನಕ್ಷತ್ರ ಭವಿಷ್ಯ. ಮೊದಲು ಪುಷ್ಯ ನಕ್ಷತ್ರದಲ್ಲಿ ಜನಿಸಿದವರ ಮತ್ತು ಅದಾಗಿ ಆಶ್ಲೇಷಾ ನಕ್ಷತ್ರದವರ ಗುಣಲಕ್ಷಣ ಮತ್ತು ವರ್ಷ ಭವಿಷ್ಯ ಗಮನಿಸೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು, ಸಣ್ಣ ಪ್ರವಾಸಗಳು ಹೆಚ್ಚಿನ ಆನಂದವನ್ನು ನೀಡುತ್ತವೆ

Dec 02, 2024 03:50 PM

ಗಜಲಕ್ಷ್ಮಿ ರಾಜಯೋಗ; 2025 ರಲ್ಲಿ ಈ ರಾಶಿಯವರಿಗೆ ಸಾಲದ ಹೊರೆ ಕಡಿಮೆಯಾಗುತ್ತೆ, ಹಣದ ಕೊರತೆಯೇ ಇರಲ್ಲ

Dec 02, 2024 12:37 PM

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ, ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ವಿವಾದಗಳನ್ನು ತಪ್ಪಿಸಿ

Dec 01, 2024 04:26 PM

Venus Transit: ಡಿಸೆಂಬರ್ 2 ರಿಂದ ಈ 3 ರಾಶಿಯವರ ಶುಕ್ರದೆಸೆ ಶುರು ನೋಡಿ, ಉದ್ಯೋಗದಲ್ಲಿ ಉನ್ನತಿ, ಆದಾಯ ವೃದ್ಧಿ, ಒಟ್ಟಿನಲ್ಲಿ ಅದೃಷ್ಟವಂತರು

Nov 30, 2024 06:55 PM

ಪುಷ್ಯ ನಕ್ಷತ್ರದವರ ಗುಣಲಕ್ಷಣ

ರಾಶಿಚಕ್ರ ವ್ಯವಸ್ಥೆಯಲ್ಲಿ ಎಂಟನೇ ನಕ್ಷತ್ರ ಪುಷ್ಯ. ಕರ್ಕಟಕ ರಾಶಿಯ ವ್ಯಾಪ್ತಿಯಲ್ಲಿ ಬರುವ ಈ ನಕ್ಷತ್ರದ ಸಂಕೇತ ಹಸುವಿನ ಕೆಚ್ಚಲು ಅಥವಾ ವೃತ್ತ. ನಕ್ಷತ್ರದ ಅಧಿಪತಿ ಗುರು ಗ್ರಹವಾಗಿದ್ದು, ಶನಿ ಈ ನಕ್ಷತ್ರದ ಆಡಳಿತ ನೋಡುತ್ತದೆ. ಪುಷ್ಯ ನಕ್ಷತ್ರವು ಅಧ್ಯಾತ್ಮಿಕ ಬುದ್ಧಿವಂತಿಕೆಗೆ ಪೂರಕವಾಗಿದ್ದು, ಗುರು ಮತ್ತು ಬೃಹಸ್ಮತಿಯೊಂದಿಗೆ ನಂಟು ಹೊಂದಿದೆ. ಪುಷ್ಯ ನಕ್ಷತ್ರ ಮಂಗಳಕಾರ್ಯಗಳಿಗೆ ಹೇಳಿ ಮಾಡಿಸಿದ್ದು, ಸಂಪತ್ತು, ಸಮೃದ್ಧಿ, ಬೆಳವಣಿಗೆಯ ಪ್ರತೀಕವಾಗಿ ಕಾಣಿಸಿಕೊಂಡಿದೆ. ಯಾವುದೇ ಹೊಸ ಕೆಲಸ, ಹೂಡಿಕೆ, ಚಿನ್ನ ಖರೀದಿ ಮುಂತಾದವುಗಳಿಗೂ ಇದು ಪ್ರಶಸ್ತ. ಗುರುವಾರ ಪುಷ್ಯ ನಕ್ಷತ್ರ ಬಂದರೆ ಅದರಷ್ಟು ಶ್ರೇಷ್ಠ ಇನ್ನೊಂದು ದಿನ ಇಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ

ಪುಷ್ಯ ನಕ್ಷತ್ರ ಭವಿಷ್ಯ 2025; ಪುಷ್ಯದವರಿಗೆ ಜೀವನ ಪಾಠಶಾಲೆಯಲ್ಲಿ ಕಠಿಣ ಶಿಕ್ಷಣ

ಹೊಸ ವರ್ಷ 2025ರಲ್ಲಿ ಈ ಜನ್ಮನಕ್ಷತ್ರದವರು ಯಾರಾದರೂ ಮ್ಯಾನೇಜ್‌ಮೆಂಟ್‌, ಡಾಕ್ಟರೇಟ್ ಅಧ್ಯಯನ, ನ್ಯಾಯಾಂಗ ಅಥವಾ ಸರ್ಕಾರಿ ಉದ್ಯೋಗದಲ್ಲಿದ್ದರೆ ಅಂಥವರು ಉನ್ನತ ಪದವಿ ಪಡೆಯುವ ಸಾಧ್ಯತೆ ಇದೆ. ಬದುಕಿನ ಕಲಿಕೆಯ ಪಾಠಗಳು ಶಿಸ್ತು ಮತ್ತು ಕಟ್ಟುನಿಟ್ಟಾದ ಮಾರ್ಗದರ್ಶನವನ್ನೂ ನೀಡಬಲ್ಲದು. ವೈಯಕ್ತಿಕ ಸ್ನೇಹ ಗಳಿಸದೇ ಇರುವ ವ್ಯಕ್ತಿಗಳಿಂದ ಆಗುವ ಅನುಭವಗಳು ಜೀವನಪಾಠವಾಗಿ ಕಾಣಿಸಬಹುದು. ನಿಮ್ಮ ತಂದೆಯೊಂದಿಗೆ ಸಂಪರ್ಕ, ಸಂವಹನ ಮತ್ತು ಒಡನಾಟ ಕೊಂಚ ಕಷ್ಟವಾಗಬಹುದು.

ವಿಶ್ವವಿದ್ಯಾನಿಲಯಗಳು, ಕಾನೂನು ಶಾಲೆಗಳು ಅಥವಾ ಕಾಲೇಜುಗಳಲ್ಲಿ ಬೋಧನೆ ಮಾಡುವ ವೃತ್ತಿಪರರಿಗೆ 2025ನೇ ವರ್ಷ ಉತ್ಪಾದಕ ಸಮಯವಾಗಿರಲಿದೆ. ವಿಶೇಷವಾಗಿ ಹಿಂದುಳಿದ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುವ ಶಿಕ್ಷಕರಿಗೆ ಇದು ಹೆಚ್ಚಿನ ಶುಭ ಫಲ ನೀಡಲಿದೆ. ನೀವು ಮತ್ತು ನಿಮ್ಮ ಸಂಗಾತಿ ಈ ವರ್ಷ ಒಟ್ಟಾಗಿ ದೂರ ಪ್ರಯಾಣ, ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.ಇದು ನಿಮ್ಮ ಸಂಬಂಧವನ್ನು ತಾತ್ತ್ವಿಕವಾಗಿ, ಧಾರ್ಮಿಕವಾಗಿ ಇನ್ನಷ್ಟು ಬಲಪಡಿಸುವ ಸಾಧ್ಯತೆ ಇದೆ. ಆದಾಗ್ಯೂ, ನಿಮ್ಮ ಸಂಗಾತಿ ಕಟ್ಟುನಿಟ್ಟಾದ ಶಿಕ್ಷಕರಂತೆ ವರ್ತಿಸುತ್ತಿದ್ದಾರೆ ಎಂಬ ಭಾವನೆ ನಿಮ್ಮನ್ನು ಕಾಡಬಹುದು.

ಒಳಗೊಳಗೆ ಆತಂಕ ಕಾಡಬಹುದು. ಇವನ್ನು ನಿವಾರಿಸಲು ನಿಮಗಾಗಿ ಸ್ವಲ್ಪ ಸಮಯ ಮೀಸಲಿಟ್ಟುಕೊಂಡು ಅಂತರಂಗದ ಮಾತು ಆಲಿಸಿ ಮುಂದುವರಿಯಲು ನೀವು ಪ್ರಯತ್ನಿಸಬಹುದು. ಕೆಲವೊಮ್ಮೆ ಬಲ್ಲವರೊಂದಿಗೆ ಸಮಾಲೋಚನೆ ನಡೆಸಿ ಗೊಂದಲ ಪರಿಹರಿಸಿಕೊಳ್ಳಬಹುದು. ಈ ನಕ್ಷತ್ರದಲ್ಲಿ ಜನಿಸಿದ ನೀವು ಹಿರಿಯರಾಗಿದ್ದರೆ ನಿಮ್ಮ ಬೀಗರ ಜೊತೆಗೆ ನಡೆಸುವ ಸಂಭಾಷಣೆ ಹೊಸ ಹೊಳಹು ನೀಡಬಹುದು. ಜೀವನ ಪಾಠವೂ ಸಿಗಬಹುದು. ಪಾಲುದಾರರೊಂದಿಗೆ ಜಂಟಿಯಾಗಿ ಆರ್ಥಿಕ ಬೆಳವಣಿಗೆ ಸಾಧಿಸಬಹುದು. ಈ ಅವಧಿಯು ನಿಮಗೆ ಬುದ್ಧಿಜೀವಿಗಳು ಮತ್ತು ಉನ್ನತ ಆದರ್ಶಗಳನ್ನು ಹೊಂದಿರುವ ವ್ಯಕ್ತಿಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ಧಾರ್ಮಿಕ ಅಥವಾ ತಾತ್ವಿಕ ದೃಷ್ಟಿಕೋನಗಳನ್ನು ಹಂಚಿಕೊಳ್ಳುವ ಜನರೊಂದಿಗೆ ನೀವು ಸ್ನೇಹ ಬೆಳೆಸುವ ಸಾಧ್ಯತೆಯಿದೆ. ಆದಾಗ್ಯೂ, ಧಾರ್ಮಿಕ ನಂಬಿಕೆ ಅಥವಾ ನಿರೀಕ್ಷೆಗಳ ವ್ಯತ್ಯಾಸಗಳಿಂದಾಗಿ ನಿಮ್ಮ ಕಿರಿಯ ಸಹೋದರರೊಂದಿಗೆ ಸಂಪರ್ಕ ಸಾಧಿಸುವಲ್ಲಿ ಅಥವಾ ಒಡನಾಟ ಉಳಿಸಿಕೊಳ್ಳುವಲ್ಲಿ ತೊಂದರೆಯಾಗಬಹುದು. ನಿಮ್ಮಿಂದ ಇನ್ನಷ್ಟು ಮುಕ್ತ ಭಾವವನ್ನು ಅವರು ನಿರೀಕ್ಷಿಸುತ್ತಿರಬಹುದು.

ಆಶ್ಲೇಷಾ ನಕ್ಷತ್ರದವರ ಗುಣಲಕ್ಷಣ

ಆಶ್ಲೇಷಾ ನಕ್ಷತ್ರವು ರಾಶಿಚಕ್ರ ಚಿಹ್ನೆಯ ಒಂಬತ್ತನೇ ನಕ್ಷತ್ರ. ಇದು ಕರ್ಕಟಕ ರಾಶಿಯ ವ್ಯಾಪ್ತಿಗೆ ಬರುತ್ತದೆ. ಸುರುಳಿ ಸುತ್ತಿದ ಸರ್ಪ ಇದ ಸಂಕೇತವಾಗಿದ್ದು, ನಾಗದೇವರು ಈ ನ್ಷಕತ್ರದ ದೇವತೆಯಾಗಿದ್ದು, ಬುಧಗ್ರಹ ಆಡಳಿತ ನಡೆಸುತ್ತದೆ. ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವರು ತಮ್ಮ ತೀಕ್ಷ್ಣ ಬುದ್ಧಿವಂತಿಕೆ, ಮನವೊಲಿಸುವ ಮೋಡಿ ಮತ್ತು ಕುತಂತ್ರದ ಬುದ್ಧಿವಂತಿಕೆಯ ಲಕ್ಷಣಗಳಿಂದ ಗುರುತಿಸಲ್ಪಡುತ್ತಾರೆ. ಜೀವನ ರಹಸ್ಯ ಕಾಪಾಡುತ್ತಾರೆ. ಜ್ಞಾನದಾಹಿಗಳಾಗಿದ್ದು, ಬುದ್ಧಿವಂತರಾಗಿರುತ್ತಾರೆ.

ಆಶ್ಲೇಷಾ ನಕ್ಷತ್ರ ಭವಿಷ್ಯ 2025; ವರ್ಷಾರಂಭ ಕಡುಕಷ್ಟಗಳಿದ್ದರೂ ನಂತರ ಶುಭಫಲವೇ ಹೆಚ್ಚು

ನಕ್ಷತ್ರ ಭವಿಷ್ಯದ ಪ್ರಕಾರ 2025ನೇ ಇಸವಿಯು ಈ ನಕ್ಷತ್ರದವರಿಗೆ ಕೆಲವು ತೊಂದರೆ, ತೊಡಕು ಮತ್ತು ಸವಾಲುಗಳ ಕಾರಣ ಬದುಕು ಕಷ್ಟಗಳನ್ನು ಒಡ್ಡಬಹುದು. ನಿಮ್ಮ ಕೆಲಸಗಳು, ನಡವಳಿಕೆ ವಿಚಾರದಲ್ಲಿ ಜಾಗರೂಕರಾಗಿರಿ. ನಿಮ್ಮ ವಿರೋಧಿಗಳು ಬಹಳ ಸಕ್ರಿಯರಾಗಿದ್ದು, ನಿಮ್ಮನ್ನು ಮಟ್ಟಹಾಕಲು ಪ್ರಯತ್ನಿಸುತ್ತಿರುತ್ತಾರೆ. ಜನವರಿ ತಿಂಗಳು ಸಂಕಷ್ಟ ಹೆಚ್ಚು. ಫೆಬ್ರವರಿಯಲ್ಲಿ ಸಂಗಾತಿ ಬಗ್ಗೆ ಒಲವು ಹೆಚ್ಚಾಗುತ್ತದೆ. ಉತ್ತಮ ಸಂವಹನದ ಮೂಲಕ ಕುಟುಂಬ ಸಂಬಂಧವನ್ನು ಬಲಪಡಿಸುವಿರಿ. ಸಂಗಾತಿಯ ಆರೋಗ್ಯದ ಬಗ್ಗೆ ಹುಷಾರಾಗಿರಿ. ನಿಮ್ಮ ಸಂವಹನ ಕೌಶಲ್ಯಗಳನ್ನು ಸುಧಾರಿಸಲು ಮಾರ್ಚ್ ಅನುಕೂಲಕರ ತಿಂಗಳಾಗಿದ್ದು, ಈ ಅವಧಿಯಲ್ಲಿ ನಿಮ್ಮ ಆರೋಗ್ಯ ಜೋಪಾನ. ಚರ್ಮಕ್ಕೆ ಸಂಬಂಧಿಸಿ ಅಥವಾ ಶರೀರ ಅಸ್ವಸ್ಥಗೊಳಿಸುವ ಕೀಟದ ಕಡಿತ ಉಂಟಾಗುವ ಸಾಧ್ಯತೆ ಇದೆ. ಮೇ ಮತ್ತು ಜೂನ್ ತಿಂಗಳಲ್ಲಿ ವೃತ್ತಿಪರವಾಗಿ ಧನಾತ್ಮಕ ಬೆಳವಣಿಗೆ ಕಾಣಬಹುದು. ಕೆಲಸದ ಬಗ್ಗೆ ಹೆಚ್ಚು ವಿಶ್ವಾಸ ಇರಲಿದ್ದು, ಉತ್ತಮ ಮತ್ತು ಮುಕ್ತ ಸಂವಹನ ನಡೆಸುತ್ತಿರುತ್ತೀರಿ. ನಿಮ್ಮ ಸೃಜನಶೀಲ ವಿಚಾರಗಳು ಸ್ಪಷ್ಟವಾಗಿ ಅಭಿವ್ಯಕ್ತಗೊಳ್ಳುವ ಕಾರಣ ಸೂಕ್ತ ಮತ್ತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗಬಹುದು. ಅನಗತ್ಯ ವಿಷಯಗಳಿಗೆ ಹೆಚ್ಚು ಹಣವನ್ನು ಖರ್ಚು ಮಾಡಬೇಡಿ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ.

ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವರ ಜೀವನದಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳು ಎಲ್ಲ ರೀತಿಯಿಂದಲೂ ಅನುಕೂಲಕರ. ಸೆಪ್ಟೆಂಬರ್‌ನಲ್ಲಿ ಮುಂಬರುವ ಹಬ್ಬದ ಸೀಸನ್‌ಗಾಗಿ ಕುಟುಂಬದ ಹೊಣೆಗಾರಿಕೆ ನಿಭಾಯಿಸಲು ಹಣಕಾಸು ನಿರ್ವಹಣೆ ಮತ್ತು ಉಳಿತಾಯದ ಕಡೆಗೆ ಗಮನಹರಿಸುವಿರಿ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹಬ್ಬದ ವಾತಾವರಣ ಇರುತ್ತದೆ. ನೀವು ಕುಟುಂಬ ಜೀವನದ ಆನಂದವನ್ನು ಅನುಭವಿಸಲಿದ್ದೀರಿ. ಪ್ರೀತಿಪಾತ್ರರ ಜತೆಗೆ ಸಮಯ ಕಳೆಯಲಿದ್ದೀರಿ. ತಾಯಿಯವರಿಂದ ಅಮೂಲ್ಯ ಜೀವನ ಕೌಶಲ್ಯ ನಿಮಗೆ ಸಿಗಲಿದ್ದು, ಈ ವರ್ಷ ಶುಭಫಲ ಹೆಚ್ಚಾಗಿರಲಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ