logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಕ್ಷತ್ರ ಭವಿಷ್ಯ 2025: ಸಖತ್‌ ಮಿಂಚಲಿದ್ದಾರೆ ಆರ್ದ್ರಾ ನಕ್ಷತ್ರದವರು, ಶ್ರೀರಾಮಚಂದ್ರನಂತೆ ಕಂಗೊಳಿಸುವರು ಪುನರ್ವಸು ನಕ್ಷತ್ರದವರು

ನಕ್ಷತ್ರ ಭವಿಷ್ಯ 2025: ಸಖತ್‌ ಮಿಂಚಲಿದ್ದಾರೆ ಆರ್ದ್ರಾ ನಕ್ಷತ್ರದವರು, ಶ್ರೀರಾಮಚಂದ್ರನಂತೆ ಕಂಗೊಳಿಸುವರು ಪುನರ್ವಸು ನಕ್ಷತ್ರದವರು

Umesh Kumar S HT Kannada

Dec 02, 2024 04:59 AM IST

google News

ನಕ್ಷತ್ರ ಭವಿಷ್ಯ 2025: ಸಖತ್‌ ಮಿಂಚಲಿದ್ದಾರೆ ಆರ್ದ್ರಾ ನಕ್ಷತ್ರದವರು, ಶ್ರೀರಾಮಚಂದ್ರನಂತೆ ಕಂಗೊಳಿಸುವರು ಪುನರ್ವಸು ನಕ್ಷತ್ರದವರು

  • Nakshatra Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನ್ಮ ನಕ್ಷತ್ರ ಆಧಾರಿತ ವರ್ಷ ಭವಿಷ್ಯ ಗಮನಿಸುವವರಿದ್ದಾರೆ. 2025ರ ಭವಿಷ್ಯ ಹೇಗಿರಬಹುದು ಎಂಬ ಕುತೂಹಲ ಸಹಜ. ಅದರಂತೆ, ನಕ್ಷತ್ರ ಭವಿಷ್ಯ 2025ರ ಪ್ರಕಾರ ಈ ಬಾರಿ ಆರ್ದ್ರಾ ನಕ್ಷತ್ರದವರು ಸಖತ್‌ ಮಿಂಚಲಿದ್ದಾರೆ. ಅದೇ ರೀತಿ, ಪುನರ್ವಸು ನಕ್ಷತ್ರದವರು ಶ್ರೀರಾಮಚಂದ್ರನಂತೆ ಕಂಗೊಳಿಸುವರು. ವಿವರ ಹೀಗಿದೆ.

ನಕ್ಷತ್ರ ಭವಿಷ್ಯ 2025: ಸಖತ್‌ ಮಿಂಚಲಿದ್ದಾರೆ ಆರ್ದ್ರಾ ನಕ್ಷತ್ರದವರು, ಶ್ರೀರಾಮಚಂದ್ರನಂತೆ ಕಂಗೊಳಿಸುವರು ಪುನರ್ವಸು ನಕ್ಷತ್ರದವರು
ನಕ್ಷತ್ರ ಭವಿಷ್ಯ 2025: ಸಖತ್‌ ಮಿಂಚಲಿದ್ದಾರೆ ಆರ್ದ್ರಾ ನಕ್ಷತ್ರದವರು, ಶ್ರೀರಾಮಚಂದ್ರನಂತೆ ಕಂಗೊಳಿಸುವರು ಪುನರ್ವಸು ನಕ್ಷತ್ರದವರು

Nakshatra Horoscope: ಕಾಲಚಕ್ರ ಉರುಳಿದಂತೆ ಕ್ಯಾಲೆಂಡರ್ ವರ್ಷವೂ ಉರುತ್ತಿದೆ. 2024ರ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿದ್ದೇವೆ. ಇನ್ನೇನು 2025ರ ಜನವರಿಯೂ ಬಂದುಬಿಡುತ್ತದೆ. ವರ್ಷ ಉರುಳಿದಂತೆ ಬದುಕಿನಲ್ಲಿ ಕಷ್ಟ ಕರಗಿ, ನೆಮ್ಮದಿ ನೆಲೆಸುವಂತಾಗಬೇಕು ಎಂಬುದು ಎಲ್ಲರ ಆಶಯ. ಹಾಗಾಗಿ 2025 ನಮ್ಮ ಬದುಕಿನಲ್ಲಿ ಹೇಗಿರುವುದೋ ಎಂಬ ಕುತೂಹಲ ತಣಿಸುವುದಕ್ಕಾಗಿ ಬಹುತೇಕರು ರಾಶಿಭವಿಷ್ಯವನ್ನು ಗಮನಿಸುತ್ತಾರೆ. ಇನ್ನೂ ಅನೇಕರು ಸ್ವಲ್ಪ ನಿಖರವಾಗಿರಬಹುದು ಎಂದು ನಕ್ಷತ್ರ ಭವಿಷ್ಯದ ಕಡೆಗೆ ಗಮನಹರಿಸುತ್ತಾರೆ. ಅಂಥವರ ಕುತೂಹಲ ತಣಿಸುವ 2025ರ ನಕ್ಷತ್ರ ಭವಿಷ್ಯದಲ್ಲಿ ಆರ್ದ್ರಾ ನಕ್ಷತ್ರ ಮತ್ತು ಪುನರ್ವಸು ನಕ್ಷತ್ರದಲ್ಲಿ ಜನಿಸಿದವರ ವಿವರ ಒದಗಿಸಲಾಗಿದೆ.

ತಾಜಾ ಫೋಟೊಗಳು

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ, ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ವಿವಾದಗಳನ್ನು ತಪ್ಪಿಸಿ

Dec 01, 2024 04:26 PM

Venus Transit: ಡಿಸೆಂಬರ್ 2 ರಿಂದ ಈ 3 ರಾಶಿಯವರ ಶುಕ್ರದೆಸೆ ಶುರು ನೋಡಿ, ಉದ್ಯೋಗದಲ್ಲಿ ಉನ್ನತಿ, ಆದಾಯ ವೃದ್ಧಿ, ಒಟ್ಟಿನಲ್ಲಿ ಅದೃಷ್ಟವಂತರು

Nov 30, 2024 06:55 PM

ಧನು ರಾಶಿಯಲ್ಲಿ ಸೂರ್ಯ ಸಂಚಾರ; ಈ 4 ರಾಶಿಚಕ್ರದವರು ಭಾರಿ ಅದೃಷ್ಟವಂತರು, ಶೀಘ್ರದಲ್ಲೇ ಕೈ ಸೇರಲಿದೆ ಧನ ಸಂಪತ್ತು, ಸುಖ ಸಂತೋಷಕ್ಕೂ ಇಲ್ಲ ಕೊರತೆ

Nov 30, 2024 05:54 PM

ಕನಸಲ್ಲಿ ಆನೆ ಬಂತಾ, ಎಷ್ಟು ಆನೆಗಳಿದ್ದವು, ಹೇಗಿದ್ದವು, ಆ ಕನಸಿನ ಅರ್ಥ ಏನು- ವಾಸ್ತು ತಜ್ಞ ಮುಕುಲ್ ರಸ್ತೋಗಿ ವಿವರಣೆ ಹೀಗಿದೆ ನೋಡಿ

Nov 30, 2024 04:19 PM

ಆರ್ದ್ರಾ ನಕ್ಷತ್ರ ಭವಿಷ್ಯ 2025; ಆರ್ದ್ರಾ ನಕ್ಷತ್ರದವರ ಗುಣಲಕ್ಷಣ ಮತ್ತು ವರ್ಷ ಭವಿಷ್ಯ

ಜ್ಯೋತಿಷ್ಯ ಶಾಸ್ತ್ರಾನುಸಾರ ರಾಶಿಚಕ್ರ ವ್ಯವಸ್ಥೆಯಲ್ಲಿ ಆರ್ದ್ರಾ ನಕ್ಷತ್ರವು ಆರನೇ ನಕ್ಷತ್ರ. ಮಿಥುನ ರಾಶಿಯ ವ್ಯಾಪ್ತಿಯಲ್ಲಿರುವ ಈ ನಕ್ಷತ್ರದ ಅಧಿಪತಿ ರುದ್ರ (ಶಿವ ದೇವರ ಒಂದು ರೂಪ). ಈ ನಕ್ಷತ್ರದ ಸಂಕೇತ ಕಣ್ಣೀರ ಹನಿ. ಈ ನಕ್ಷತ್ರದ ಆಡಳಿತ ಗಮನಿಸುವುದು ರಾಹು ಗ್ರಹ. ಆರ್ದ್ರಾ ಎಂಬುದು ಆಂತರಿಕ ರೂಪಾಂತರ ಮತ್ತು ಭಾವನಾತ್ಮಕ ಬಿಡುಗಡೆಯ ಮೂಲಕ ಶುದ್ಧೀಕರಣದ ಶಕ್ತಿಯನ್ನು ಸಾಕಾರಗೊಳಿಸುವಂಥದ್ದು ಎಂದು ಅರ್ಥ.

2025ರ ನಕ್ಷತ್ರ ಭವಿಷ್ಯ ಗಮನಿಸುವುದಾದರೆ, ವರ್ಷದ ಮೊದಲ ಅರ್ಧಭಾಗದಲ್ಲಿ ಅಂದರೆ ಮೇ ತಿಂಗಳ ಮಧ್ಯಭಾಗದ ತನಕ ಆರ್ದ್ರಾ ನಕ್ಷತ್ರದವರ ಗಮನ ಪೂರ್ತಿಯಾಗಿ ಕೆಲಸದ ಸ್ಥಳದಲ್ಲಿ ಮತ್ತು ವೃತ್ತಿಪರ ಸಾಧನೆಯ ಮಹತ್ವಾಕಾಂಕ್ಷೆಗಳ ಮೇಲೆ ಇರುತ್ತದೆ. ಸಾರ್ವಜನಿಕವಾಗಿ ನಿಮ್ಮ ಛಾಯೆ ಉತ್ಪ್ರೇಕ್ಷೆಯಂತಾಗಬಹುದು ಮತ್ತು ಇತರರಿಗೆ ಭ್ರಮೆಯನ್ನು ಹುಟ್ಟಿಸಬಹುದು. ನೀವು ಸ್ವ ಉದ್ಯೋಗ ಮಾಡುತ್ತಿದ್ದರೆ, ನಿಮ್ಮ ಕೆಲಸಕ್ಕಾಗಿ ವಿದೇಶ ಪ್ರಯಾಣ ಅಥವಾ ವಿದೇಶಿ ಗ್ರಾಹಕರು ನಿಮ್ಮ ವ್ಯಾಪಾರದ ಕಡೆಗೆ ಆಕರ್ಷಿತರಾಗಬಹುದು.ಎಂಎನ್‌ಸಿ ಕಂಪನಿ ಉದ್ಯೋಗ ಬಯಸುವವರಿಗೆ ಸಿಗುವ ಸಾಧ್ಯತೆ ಇದೆ.

ಆದಾಗ್ಯೂ, ನೀವು ಈಗ ಇರುವಂತಹ ಉದ್ಯೋಗದಲ್ಲಿ, ವ್ಯಾಪಾರ ಅಥವಾ ವ್ಯವಹಾರದಲ್ಲಿ ಸವಾಲುಗಳು ಇದ್ದೇ ಇರುತ್ತದೆ. ಕೆಲವೊಮ್ಮೆ ಭಿನ್ನಾಭಿಪ್ರಾಯ ಉಂಟಾಗಬಹುದು. ವಿಶೇಷವಾಗಿ ಪ್ರತಿಕೂಲ ದೆಸೆಯಲ್ಲಿ ನೀವಿದ್ದರೆ, ಕೆಲಸ ತೊರೆಯುವ ಸಾಧ್ಯತೆಯೂ ಇದೆ. ಆದರೂ ಉತ್ಸಾಹ ಕಳೆದುಕೊಳ್ಳದೇ, ಎದೆಗುಂದದೇ ಮುನ್ನಡೆಯಬಲ್ಲಿರಿ. ಈ ಸನ್ನಿವೇಶವು ಅಸಾಂಪ್ರದಾಯಿಕ ವೃತ್ತಿ ಆಯ್ಕೆ ಮಾಡಲು ನಿಮ್ಮನ್ನು ಕರೆದೊಯ್ಯುತ್ತದೆ. ಈ ಅವಧಿಯಲ್ಲಿ ರಫ್ತು-ಆಮದು ವಲಯದಲ್ಲಿರುವ ಈ ನಕ್ಷತ್ರದವರಿಗೂ ಪ್ರಯೋಜನಗಳಾಗುತ್ತವೆ.

ವರ್ಷದ ದ್ವಿತೀಯಾರ್ಧದಲ್ಲಿ, ಮೇ ನಂತರ, ನಿಮ್ಮ ವಿದೇಶಿ ಪ್ರಯಾಣದ ಬಯಕೆ ಬಲವಾಗಿರುತ್ತದೆ ಮತ್ತು ಅದು ಈಡೇರಬಹುದು. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಆರ್ದ್ರಾ ನಕ್ಷತ್ರದ ವಿದ್ಯಾರ್ಥಿಗಳು ಈ ವರ್ಷವೂ ಅವಕಾಶವನ್ನು ಪಡೆಯಬಹುದು. ಒಟ್ಟಾರೆಯಾಗಿ ಇದು ಅನುಕೂಲಕರ ವರ್ಷ.

ಪುನರ್ವಸು ನಕ್ಷತ್ರ ಭವಿಷ್ಯ 2025; ಪುನರ್ವಸು ನಕ್ಷತ್ರದವರ ಗುಣಲಕ್ಷಣ ಮತ್ತು ವರ್ಷ ಭವಿಷ್ಯ

ಪುನರ್ವಸು ನಕ್ಷತ್ರವು ರಾಶಿಚಕ್ರದ ಏಳನೇ ನಕ್ಷತ್ರ. ಮಿಥುನ ರಾಶಿ ಮತ್ತು ಕರ್ಕಾಟಕ ರಾಶಿಯ ವ್ಯಾಪ್ತಿಯಲ್ಲಿದೆ ಈ ನಕ್ಷತ್ರ. ಬಾಣಗಳ ಬತ್ತಳಿಕೆ ಇದರ ಸಂಕೇತ. ದೇವತೆಗಳ ತಾಯಿ ಹಿಂದೂ ದೇವತೆ ಅದಿತಿ ಈ ನಕ್ಷತ್ರದ ಅಧಿಪತಿ. ಇದರ ಆಡಳಿತ ನಿರ್ವಹಣೆ ಗುರುಗ್ರಹದ್ದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪುನರ್ವಸು ನಕ್ಷತ್ರದವರ ಮಾತು ಮಧುರ ಮತ್ತು ಸೌಮ್ಯವಾಗಿರುತ್ತದೆ. ಅವರು ತಮ್ಮ ಸಂಗಾತಿಗೆ ನಿಷ್ಠರಾಗಿರುತ್ತಾರೆ. ಸದಾ ಗುರು ಅನುಗ್ರಹ ಹೊಂದಿರುವವರು. ಪುನರ್ವಸು ಎಂಬ ಪದವು "ಪುನರ್" ಮತ್ತು "ವಸು" ಪದಗಳಿಂದ ಬಂದಿದೆ, ಹಿಂತಿರುಗುವುದು, ನವೀಕರಣ, ಪುನಃಸ್ಥಾಪನೆ ಅಥವಾ ಪುನರಾವರ್ತನೆ ಎಂದರ್ಥ. ಪುನರ್ವಸು ನಕ್ಷತ್ರ ಬಹಳ ವಿಶೇಷ. ಅಯೋಧ್ಯೆಯ ಶ್ರೀರಾಮಚಂದ್ರ ದೇವರು ಚೈತ್ರ ಮಾಸದ ಒಂಬತ್ತನೇ ದಿನ ಜನಿಸಿದಾಗ ಇದ್ದ ನಕ್ಷತ್ರ ಇದು.

ಈ ವರ್ಷ ನಿಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಮತ್ತು ನಿಮ್ಮ ಗುಣಗಳನ್ನು ಹೆಚ್ಚಿಸಲು ಸಹಕಾರಿ. ಇದು ನಿಮ್ಮ ಮನಸ್ಸನ್ನು ಚುರುಕುಗೊಳಿಸುತ್ತದೆ, ನಿಮ್ಮ ಕಲಿಕೆಯ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಸ್ಮರಣೆಯನ್ನು ಹೆಚ್ಚಿಸುತ್ತದೆ. ವೈಯಕ್ತಿಕ ಬೆಳವಣಿಗೆ ಮತ್ತು ಬುದ್ಧಿವಂತಿಕೆಗೆ ಇದು ಉತ್ತಮ ಸಮಯ. ವೃತ್ತಿಪರವಾಗಿ, ಇದು ಅನುಕೂಲಕರ ವರ್ಷವಾಗಿರಲಿದೆ. ವಿಶೇಷವಾಗಿ ತತ್ವಜ್ಞಾನಿಗಳು, ಸಲಹೆಗಾರರು, ಮಾರ್ಗದರ್ಶಕರು ಅಥವಾ ಶಿಕ್ಷಕರಾಗಿ ಕೆಲಸ ಮಾಡುವವರಿಗೆ, ನೀವು ಇತರರ ಮೇಲೆ ಬಲವಾದ ಪ್ರಭಾವ ಬೀರುವಿರಿ. ಡೇಟಾ ವಿಜ್ಞಾನಿಗಳು, ಸಮಾಲೋಚಕರು ಅಥವಾ ಬ್ಯಾಂಕಿಂಗ್, ಮಾಧ್ಯಮ ಅಥವಾ ವ್ಯಾಪಾರ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಸಹ ಈ ಅವಧಿಯಲ್ಲಿ ಪ್ರಯೋಜನವನ್ನು ಪಡೆಯುತ್ತಾರೆ. ನಕ್ಷತ್ರ ಜಾತಕ 2025ರ ಪ್ರಕಾರ, ವೈಯಕ್ತಿಕ ಅಥವಾ ವೃತ್ತಿಪರವಾಗಿರಲಿ ಯಾವುದೇ ರೀತಿಯ ಪಾಲುದಾರಿಕೆಯನ್ನು ಸ್ಥಾಪಿಸಲು ಇದು ಸೂಕ್ತ ಸಮಯ ಎಂಬ ಭವಿಷ್ಯ ನುಡಿ ಇದೆ.

ಇನ್ನು ಮದುವೆಯಾಗಲು ಸಿದ್ಧರಾಗಿರುವ ಈ ಜನ್ಮನಕ್ಷತ್ರದವರಿಗೆ ಸರಿಯಾದ ಸಂಗಾತಿಯನ್ನು ಹುಡುಕಲು ಮತ್ತು ಗಂಟು ಕಟ್ಟಲು ಇದು ಉತ್ತಮ ಸಮಯ. ನೀವು ವಿವಾಹಿತರಾಗಿದ್ದರೆ ಮತ್ತು ಕುಟುಂಬವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಮಗುವನ್ನು ಹೊಂದಲು ಇದು ಅತ್ಯುತ್ತಮ ಸಮಯ. ಇದು ನಿಮ್ಮ ದಾಂಪತ್ಯವನ್ನು ಬಲಪಡಿಸುತ್ತದೆ ಮತ್ತು ಸಂಘರ್ಷಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ನಿಮ್ಮ ಸಂಗಾತಿಯು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಹ ಅವರ ಆರೋಗ್ಯವು ಸುಧಾರಿಸುತ್ತದೆ.

ಉನ್ನತ ಶಿಕ್ಷಣಕ್ಕಾಗಿ ತಯಾರಿ ನಡೆಸುತ್ತಿರುವ ಅಥವಾ ಅನುಸರಿಸುತ್ತಿರುವ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ವರ್ಷವಾಗಿದೆ. ಪುನರ್ವಸು ನಕ್ಷತ್ರದ ವಿದ್ಯಾರ್ಥಿಗಳು ತಮ್ಮ ತಂದೆ, ಶಿಕ್ಷಕರು ಅಥವಾ ಗುರುಗಳ ಬಲವಾದ ಬೆಂಬಲದೊಂದಿಗೆ ಶೈಕ್ಷಣಿಕವಾಗಿ ಪ್ರಯೋಜನ ಪಡೆಯುತ್ತಾರೆ. ನೀವು ಧಾರ್ಮಿಕ ಚಟುವಟಿಕೆಗಳಿಗೆ ಆಕರ್ಷಿತರಾಗಬಹುದು ಮತ್ತು ತೀರ್ಥಯಾತ್ರೆಯನ್ನು ಯೋಜಿಸಬಹುದು. ಅದೃಷ್ಟವು ನಿಮ್ಮ ಕಡೆ ಇರುತ್ತದೆ. 2025ರ ಅಕ್ಟೋಬರ್ 19 ರಿಂದ ಡಿಸೆಂಬರ್ 4 ರವರೆಗೆ, ನಿಮ್ಮ ಉಳಿತಾಯ ಮತ್ತು ಹಣಕಾಸು ಸ್ಥಿತಿ ಸುಧಾರಿಸಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ, ಇದು ವರ್ಷವಿಡೀ ನಿಮ್ಮ ಶ್ರಮದ ಫಲವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ