logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ: ರಾಮನನ್ನು ರಕ್ಷಣೆಗಾಗಿ ಕಾಡಿಗೆ ಕಳುಹಿಸುವಂತೆ ಕೇಳಿದ ವಿಶ್ವಾಮಿತ್ರ; ವಿಷಯ ಕೇಳಿ ಸಿಂಹಾಸನದಿಂದ ಕೆಳಗೆ ಬಿದ್ದ ದಶರಥ

ರಾಮಾಯಣ: ರಾಮನನ್ನು ರಕ್ಷಣೆಗಾಗಿ ಕಾಡಿಗೆ ಕಳುಹಿಸುವಂತೆ ಕೇಳಿದ ವಿಶ್ವಾಮಿತ್ರ; ವಿಷಯ ಕೇಳಿ ಸಿಂಹಾಸನದಿಂದ ಕೆಳಗೆ ಬಿದ್ದ ದಶರಥ

Suma Gaonkar HT Kannada

Sep 28, 2024 05:35 PM IST

google News

ದಶರಥನ ಮೇಲೆ ವಿಶ್ವಾಮಿತ್ರರ ಕೋಪ

    • ಪರೋಕ್ಷವಾಗಿ ನಿನ್ನಿಂದ ನನಗೆ ತೊಂದರೆಯಾಗುತ್ತದೆ. ವಿಶ್ವಾಮಿತ್ರರ ಈ ಮಾತುಗಳನ್ನು ಕೇಳಿ ದುಃಖ ಮತ್ತು ಒತ್ತಡವನ್ನು ತಾಳಲಾರದೆ ದಶರಥನು ಸಿಂಹಾಸನದಿಂದ ಕೆಳಗೆ ಬೀಳುತ್ತಾನೆ. ಮೂರ್ಚೆ ಹೋದ ದಶರಥನಿಗೆ ಸ್ವಲ್ಪ ಸಮಯದ ನಂತರ ಪ್ರಜ್ಞೆ ಮರಳುತ್ತದೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)
ದಶರಥನ ಮೇಲೆ ವಿಶ್ವಾಮಿತ್ರರ ಕೋಪ
ದಶರಥನ ಮೇಲೆ ವಿಶ್ವಾಮಿತ್ರರ ಕೋಪ (Dasharatha - TN Prabhakar Book cover picture)

ದಶರಥನ ಮನದ ಇಂಗಿತವನ್ನು ಅರಿತ ವಿಶ್ವಾಮಿತ್ರರು ರಾಮನನ್ನು ನನ್ನೊಡನೆ ಕಳುಹಿಸಿ ಧರ್ಮವನ್ನು ಉಳಿಸಿಕೊ. ಈ ಕಾರ್ಯದಲ್ಲಿ ನನ್ನ ಯಜ್ಞವು ಸುಸೂತವಾಗಿ ನಡೆಯುವುದು ಮಾತ್ರವಲ್ಲದೆ ರಾಮನೊಂದಿಗೆ ನಿನ್ನ ಹೆಸರು ಸಹ ಬಹುಕಾಲ ಉಳಿಯುತ್ತದೆ. ಅನಾವಶ್ಯಕವಾಗಿ ತಡ ಮಾಡುವುದು ಬೇಡ ಎಂದು ವಿಶ್ವಾಮಿತ್ರ ತಿಳಿಸುತ್ತಾರೆ. ನಾನು ಆರಂಭಿಸಬೇಕಾದ ಯಜ್ಞವು ಸರಿಯಾದ ಮೂಹುರ್ತದಲ್ಲಿ ಆರಂಭವಾಗಬೇಕಾಗುತ್ತದೆ. ಪರೋಕ್ಷವಾಗಿ ನಿನ್ನಿಂದ ನನಗೆ ತೊಂದರೆಯಾಗುತ್ತದೆ. ವಿಶ್ವಾಮಿತ್ರರ ಈ ಮಾತುಗಳನ್ನು ಕೇಳಿ ದುಃಖ ಮತ್ತು ಒತ್ತಡವನ್ನು ತಾಳಲಾರದೆ ದಶರಥನು ಸಿಂಹಾಸನದಿಂದ ಕೆಳಗೆ ಬೀಳುತ್ತಾನೆ. ಮೂರ್ಚೆ ಹೋದ ದಶರಥನಿಗೆ ಸ್ವಲ್ಪ ಸಮಯದ ನಂತರ ಪ್ರಜ್ಞೆ ಮರಳುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಎಚ್ಚರ ಬಂದು ಎದ್ದವನೇ ವಿಶ್ವಾಮಿತ್ರರನ್ನು ಉದ್ದೇಶಿಸಿ ಮಹರ್ಷಿಗಳೇ, ನನ್ನ ಮಗ ಶ್ರೀರಾಮನು ಇನ್ನೂ ಬಾಲಕ. ಆದ್ದರಿಂದ ಅವನು ರಾಕ್ಷಸರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಲಾರ. ಆದರೆ ನಿಮ್ಮ ಯಜ್ಞ ಯಾಗಾದಿಗಳನ್ನು ಕಾಪಾಡುವ ಹೊಣೆ ನನ್ನದು. ಅನಾವಶ್ಯಕವಾಗಿ ಯೋಚನೆ ಮಾಡದಿರಿ. ನಿಮ್ಮೊಡನೆ ನನ್ನ ಸೈನ್ಯವನ್ನೇ ಕಳುಹಿಸುತ್ತೇನೆ. ನನ್ನ ಸೈನ್ಯದ ಸೈನ್ಯವನ್ನು ಸುಲಭವಾಗಿ ಎದುರಿಸಲು ಮೂರು ಲೋಕದಲ್ಲಿಯೂ ಯಾರಿಗೂ ಸಾಧ್ಯವಾಗುವುದಿಲ್ಲ. ಸೈನ್ಯದ ನಾಯಕತ್ವವನ್ನು ಸ್ವತಹ ನಾನೇ ನಿರ್ವಹಿಸಿ ರಾಕ್ಷಸರ ಸಂಹಾರ ಮಾಡುತ್ತೇನೆ. ಒಂದೇ ಮನಸ್ಸಿನಲ್ಲಿ ಆಶ್ರಮಕ್ಕೆ ಹಿಂತಿರುಗಿ, ಯಜ್ಞವನ್ನು ಆರಂಭಿಸಲು ಬೇಕಾದ ಏರ್ಪಡುಗಳನ್ನು ಮಾಡಿಕೊಳ್ಳಿ ಎಂದು ಹೇಳುತ್ತಾನೆ.

ದಶರಥನ ಪ್ರಯತ್ನ

ಪೂರ್ವ ಯೋಜನೆಯಂತೆ ನಿಮ್ಮ ಕಾರ್ಯಕ್ರಮಗಳನ್ನು ನಡೆಸಿಕೊಡುವ ಜವಾಬ್ದಾರಿ ನನ್ನದು. ರಾಮನ ಯುದ್ಧಭ್ಯಾಸವು ಇನ್ನೂ ಸಂಪೂರ್ಣವಾಗಿಲ್ಲ. ಕಪಟ ಏನೆಂದು ತಿಳಿಯದ ರಾಮನಿಗೆ ರಾಕ್ಷಸರ ಮಾಯಾ ವಿದ್ಯದ ಬಗ್ಗೆ ಅರಿವು ಇರುವುದಿಲ್ಲ. ನಿಮಗೆ ನನ್ನ ಮಾತು ಇಷ್ಟವಿಲ್ಲದೆ ಹೋದಲ್ಲಿ ರಾಮನನ್ನು ಕರೆದೊಯ್ಯಿರಿ. ಆದರೆ ರಾಮನ ಜೊತೆಯಲ್ಲಿ ನನ್ನ ಸೈನ್ಯದೊಂದಿಗೆ ನಾನು ಬರುತ್ತೇನೆ ಎಂದು ಹೇಳುತ್ತಾನೆ. ಸಾಮಾನ್ಯವಾಗಿ ರಾಕ್ಷಸರು ದೇವಾನುದೇವತೆಗಳವರವನ್ನು ಪಡೆದಿರುತ್ತಾರೆ. ನನಗದರ ಭಯವಿದೆ ಎಂದು ದಶರಥನು ತಿಳಿಸುತ್ತಾನೆ.

ಮಾರೀಚ ಮತ್ತು ಸುಭಾಹುಗಳೆಂಬ ರಾಕ್ಷಸರ ಕಾಟ

ಮಹಾರಾಜ ಬ್ರಹ್ಮನಿಂದ ವರವನ್ನು ಪಡೆದ ರಾವಣನು ರಾಕ್ಷಸ ಕುಲದ ಒಡೆಯನಾಗಿದ್ದಾನೆ. ಇವನು ಮೂರು ಲೋಕಗಳನ್ನು ಹಿಂಸಿಸಿ ಕಷ್ಟಕ್ಕೆ ಒಳಪಡಿಸುತ್ತಿದ್ದಾನೆ. ಇವನ ಹಿಂಬಾಲಕರೇ ನನಗೆ ತೊಂದರೆ ನೀಡುತ್ತಿರುವವರು. ಇವನು ಕುಬೇರನ ಸೋದರ ಹೌದು. ಅವನಿಂದ ಪ್ರಭಾವಕ್ಕೆ ಒಳಗಾಗಿ ಮಾರೀಚ ಮತ್ತು ಸುಭಾಹುಗಳೆಂಬ ರಾಕ್ಷಸರು ನನ್ನ ಯಜ್ಞ ಯಾಗಾದಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ವಿಶ್ವಾಮಿತ್ರರು ತಿಳಿಸುತ್ತಾರೆ.

ರಾಮನು ರಾಕ್ಷಸರ ಸಂಹಾರ ಮಾಡಬೇಕು

ನಿಮ್ಮ ಈ ವಿವರಣೆಯಿಂದ ಬಾಲಕನಾದ ರಾಮನು ರಾಕ್ಷಸರ ಸಂಹಾರ ಮಾಡಲು ಸಾಧ್ಯವೇ ಎಂಬ ಅನುಮಾನ ಉಂಟಾಗಿದೆ. ನೀವೇ ನನ್ನ ಪಾಲಿನ ದೇವರಂತಾಗಿರುವಿರಿ. ದಯಮಾಡಿ ಬಾಲರಾಮನ ಮೇಲೆ ಕರುಣೆಯನ್ನು ತೋರಿಸಿ. ಮೂರು ಲೋಕದಲ್ಲಿ ಯಾರೊಬ್ಬರೂ ರಾವಣನನ್ನು ಎದುರಿಸಲು ಸಾಧ್ಯವಿಲ್ಲ ಎಂದಾಗ ರಾಮನಿಗೆ ಹೇಗೆ ಸಾಧ್ಯವಾದಿತು ಎಂದು ದಶರಥನು ಕೇಳುತ್ತಾನೆ.

ದಶರಥನ ಮೇಲೆ ವಿಶ್ವಾಮಿತ್ರರ ಕೋಪ

ದಶರಥನ ಮಾತುಗಳನ್ನು ಕೇಳಿ ವಿಶ್ವಾಮಿತ್ರರಿಗೆ ಸಹನಯು ಮರೆಯಾಗಿ ಅಸಾಧ್ಯವಾದ ಕೋಪ ಬರುತ್ತದೆ. ಅವರ ಮುಖವನ್ನು ಕಂಡರೆ ಎಂತಹವರಿಗಾದರೂ ಭಯ ಉಂಟಾಗುವಂತಿತ್ತು. ದಶರಥನಿಗೆ ಮಗನ ಮೇಲೆ ವಿಶೇಷವಾದ ವಾತ್ಸಲ್ಯ, ಮಗನನ್ನು ಬಿಡಲಾರ. ವಿಶ್ವಾಮಿತ್ರ ಕೋಪಕ್ಕೆ ಒಳಗಾಗಿ ಶಾಪಕ್ಕೆ ತುತ್ತಾಗುವ ಭಯ ಮತ್ತೊಂದು ಕಡೆ. ಅವನ ಸ್ಥಿತಿಯು ಕತ್ತಿಯ ಅಲಗಿನ ಮೇಲೆ ನಡೆಯುವಂತಿತ್ತು. ಪರಿಸ್ಥಿತಿಯನ್ನು ಎದುರಿಸಲಾಗದ ಮಾತೆ ಬರೆದಂತಾಯಿತು.

ಕೆಲಸ ಕಾರ್ಯಗಳಲ್ಲಿ ಇನ್ನು ಮುಂದೆ ಅಪಜಯದ ಶಾಪ

ದಶರಥನ ವಾದದಿಂದ ಕೋಪಗೊಂಡ ವಿಶ್ವಾಮಿತ್ರರು ಮಹಾರಾಜನೇ, ನಿನ್ನ ಅರಮನೆಗೆ ಬಂದಾಕ್ಷಣ ಒಮ್ಮೆಯೂ ಯೋಚಿಸದೆ ನನ್ನ ಕೆಲಸವನ್ನು ಮಾಡಿಕೊಡುವೆ ಎಂದು ವಾಗ್ದಾನ ಮಾಡುವೆ. ಆದರೆ ಈಗ ನಿನ್ನ ಸ್ವಾರ್ಥಕ್ಕಾಗಿ ಅದನ್ನು ಮರೆಯುತ್ತಿರುವೆ. ಇದರ ಫಲವಾಗಿ ನಿನ್ನ ಕೆಲಸ ಕಾರ್ಯಗಳಲ್ಲಿ ಇನ್ನು ಮುಂದೆ ಅಪಜಯವನ್ನು ಅನುಭವಿಸುವೆ. ನಿನ್ನೊಡನೆ ಮಾತನಾಡಲು ನನಗಿನ್ನು ಮನಸ್ಸಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ನನ್ನ ಆಶ್ರಮಕ್ಕೆ ನಾನು ಮರಳುವೆ ಎಂದು ಹೊರಡಲು ಅನುವಾದರು.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ