Planet Transit: ಫೆಬ್ರುವರಿಯಲ್ಲಿ 4 ಪ್ರಮುಖ ಗ್ರಹಗಳ ಸ್ಥಾನಪಲ್ಲಟ; ಈ 3 ರಾಶಿಯವರಿಗೆ ಅದೃಷ್ಟದ ದಿನಗಳ ಆರಂಭ
Feb 18, 2024 03:30 PM IST
ಫೆಬ್ರುವರಿಯಲ್ಲಿ 4 ಪ್ರಮುಖ ಗ್ರಹಗಳ ಸ್ಥಾನಪಲ್ಲಟ
- ಫೆಬ್ರುವರಿಯಲ್ಲಿ ನಾಲ್ಕು ಪ್ರಮುಖ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟದ ದಿನಗಳು ಆರಂಭವಾಗಲಿದೆ. ಈ ಸಂದರ್ಭದಲ್ಲಿ ಅನೇಕ ಶುಭ ಯೋಗಗಳೂ ಉಂಟಾಗಲಿದ್ದು, ಇದರಿಂದ ಯಾವೆಲ್ಲಾ ರಾಶಿಯವರ ಬದುಕು ಬದಲಾಗಲಿದೆ ನೋಡಿ.
ಜ್ಯೋತಿಷ್ಯದಲ್ಲಿ, ಗ್ರಹಗಳ ಚಲನೆಗೆ ಹೆಚ್ಚಿನ ಪ್ರಾಮುಖ್ಯವಿದೆ. ಏಕೆಂದರೆ ಗ್ರಹಗಳ ಚಿಹ್ನೆಯ ಬದಲಾವಣೆಯು ರಾಶಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಫೆಬ್ರವರಿಯಲ್ಲಿ ಹಲವಾರು ಪ್ರಮುಖ ಗ್ರಹಗಳು ತಮ್ಮ ಸ್ಥಾನವನ್ನು ಬದಲಿಸಲಿವೆ. ಆದ್ದರಿಂದ ಈ ತಿಂಗಳು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ವಿಶೇಷವಾಗಿರುತ್ತದೆ.
ತಾಜಾ ಫೋಟೊಗಳು
ಫೆಬ್ರವರಿಯಲ್ಲಿ ಸೂರ್ಯ, ಮಂಗಳ, ಶುಕ್ರ ಮತ್ತು ಬುಧ ತಮ್ಮ ರಾಶಿಯನ್ನು ಬದಲಾಯಿಸುತ್ತಿದ್ದಾರೆ. ಇಂದು (ಫೆ.1) ಗ್ರಹಗಳ ಅಧಿಪತಿ ಬುಧನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಫೆಬ್ರವರಿ 5 ರಂದು, ಮಂಗಳವು ಚಿಹ್ನೆಯನ್ನು ಬದಲಾಯಿಸುತ್ತಿದೆ. ಫೆಬ್ರವರಿ 12 ರಂದು ಶುಕ್ರ, ಶನಿಯು ಸಾಗುತ್ತಿರುವ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಫೆಬ್ರವರಿ 13 ರಂದು, ಗ್ರಹಗಳ ಅಧಿಪತಿ ಸೂರ್ಯನು ಶನಿಯ ಸ್ವಂತ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಸುಮಾರು 30 ವರ್ಷಗಳ ನಂತರ, ತಂದೆ ಮತ್ತು ಮಗ ಸೂರ್ಯ ಮತ್ತು ಶನಿಯ ಸಂಯೋಜನೆಯು ಸಂಭವಿಸಲಿದೆ. ಫೆಬ್ರುವರಿ ತಿಂಗಳಲ್ಲಿ ಸೂರ್ಯ, ಮಂಗಳ, ಶುಕ್ರ, ಬುಧ ಗ್ರಹಗಳ ಸ್ಥಾನಪಲ್ಲಟ ಹಾಗೂ ಸಂಯೋಗದಿಂದ ಹಲವು ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಲಕ್ಷ್ಮೀ ನಾರಾಯಣ ಯೋಗ, ಬುಧಾದಿತ್ಯ ರಾಜಯೋಗ ಮತ್ತು ತ್ರಿಗ್ರಾಹಿ ಯೋಗಗಳು ಉಂಟಾಗಲಿವೆ. ಇದರಿಂದ 3 ರಾಶಿಯವರು ಅದೃಷ್ಟದ ದಿನಗಳನ್ನು ಎದುರು ನೋಡಬಹುದು.
ಧನು ರಾಶಿ
ಧನು ರಾಶಿಯವರಿಗೆ ನಾಲ್ಕು ಗ್ರಹಗಳ ಚಲನೆಯಿಂದ ಲಾಭವಾಗಲಿದೆ. ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ಏರಲಿದ್ದೀರಿ. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಬಾಸ್ನಿಂದ ಹೆಚ್ಚಿನ ಬೆಂಬಲವನ್ನು ಪಡೆಯುತ್ತೀರಿ. ಅನೇಕ ಹೊಸ ಜವಾಬ್ದಾರಿಗಳು ಕೂಡ ನಿಮ್ಮ ಹೆಗಲೇರಲಿವೆ. ಆದಾಯ ಹೆಚ್ಚಲಿದೆ. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಹೊಸ ಉತ್ತಮ ಅವಕಾಶಗಳು ಉದ್ಭವಿಸುತ್ತವೆ. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸುವುದು ಉತ್ತಮ. ಹತ್ತು ಬಾರಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಂಡರೆ ಹಣಕಾಸಿನ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಪ್ರಯೋಜನಕಾರಿಯಾಗುತ್ತವೆ. ಆರೋಗ್ಯ ಕಾಪಾಡಿಕೊಳ್ಳಲು ಜಂಕ್ಫುಡ್ನಿಂದ ದೂರವಿರಿ.
ಮೇಷ ರಾಶಿ
ಮೇಷ ರಾಶಿಯವರಿಗೆ ಸೂರ್ಯ, ಮಂಗಳ, ಶುಕ್ರ ಮತ್ತು ಬುಧ ಗ್ರಹಗಳ ಸಂಚಾರವು ಉತ್ತಮವಾಗಿರುತ್ತದೆ. ನಿರುದ್ಯೋಗಿಗಳಿಗೆ ಶುಭಸುದ್ಧಿ ಸಿಗಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಆರ್ಥಿಕವಾಗಿ ಸದೃಢರಾಗಬೇಕು ಎಂದರೆ ಉಳಿತಾಯದ ಜೊತೆಗೆ ಹೂಡಿಕೆಯತ್ತಲೂ ಗಮನ ಹರಿಸಬೇಕು. ಆರೋಗ್ಯಕರ ಆಹಾರವನ್ನು ಸೇವಿಸಿ.
ಮಕರ
ಪ್ರಮುಖ ಗ್ರಹಗಳ ಚಲನೆಯು ಮಕರ ರಾಶಿಯವರಿಗೆ ಮಧ್ಯಮ ಫಲಿತಾಂಶಗಳನ್ನು ನೀಡುತ್ತದೆ. ವ್ಯಾಪಾರಸ್ಥರಿಗೆ ಹಲವು ಹೊಸ ಅವಕಾಶಗಳು ಬಾಗಿಲು ತೆರೆಯುತ್ತವೆ. ಆದಾಯವಿದ್ದರೂ ಕೆಲವು ಏರಿಳಿತಗಳಿವೆ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದರಿಂದ ನಿಮಗೆ ಲಾಭವಾಗುತ್ತದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ. ವಿಶೇಷ ಕಾಳಜಿಯಿಂದ ನೀವು ಅವುಗಳಿಂದ ಹೊರಬರಬಹುದು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
(This copy first appeared in Hindustan Times Kannada website. To read more like this please logon to kannada.hindustantimes.com )