Kartika Purnima 2024: ಕಾರ್ತಿಕ ಪೂರ್ಣಿಮಾ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಸಿಗುವ ಪ್ರಯೋಜನಗಳಿವು
Nov 15, 2024 09:00 AM IST
ಕಾರ್ತಿಕ ಹುಣ್ಣಿಮೆ ದಿನ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಸಿಗುವ ಲಾಭಗಳ ಬಗ್ಗೆ ತಿಳಿಯೋಣ
- ಕಾರ್ತಿಕ ಹುಣ್ಣಿಮೆಯಂದು ಗಂಗಾಸ್ನಾನಕ್ಕೆ ವಿಶೇಷ ಮಹತ್ವವಿದೆ. ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ವಿದ್ವಾಂಸರು ಹೇಳುತ್ತಾರೆ. ಕಾರ್ತಿಕ ಪೂರ್ಣಿಮಾ ದಿನ ಗಂಗಾ ನದಿ ಸ್ನಾನ ಮಾಡಲು ಉತ್ತಮ ಸಮಯವನ್ನು ತಿಳಿಯಿರಿ.
ಕಾರ್ತಿಕ ಶುಕ್ಲ ಪೂರ್ಣಿಮಾವನ್ನು ನವೆಂಬರ್ 15 ರಂದು ಭರಣಿ ನಕ್ಷತ್ರದೊಂದಿಗೆ ಆಚರಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಕಾರ್ತಿಕ ಪೂರ್ಣಿಮೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಕಾರ್ತಿಕ ಪೂರ್ಣಿಮೆಯು ನವೆಂಬರ್ 15 ರಂದು ಬೆಳಿಗ್ಗೆ 3.04 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 16 ರಂದು ಬೆಳಿಗ್ಗೆ 01.06 ರ ನಡುವೆ ಬರುತ್ತದೆ. ಕಾರ್ತಿಕ ಪೂರ್ಣಿಮಾ ದಿನದಂದು ಬೆಳಿಗ್ಗೆ 3.04 ರಿಂದ ನೀವು ಇಡೀ ದಿನ ಸ್ನಾನ ಮಾಡಬಹುದು. ಪೂರ್ಣಿಮಾ ವ್ರತವನ್ನು ಆಚರಿಸುವ ಭಕ್ತರು ನವೆಂಬರ್ 16 ರಂದು ತಮ್ಮ ಉಪವಾಸವನ್ನು ಮುಗಿಸುತ್ತಾರೆ. ದೇವರ ದೀಪಾವಳಿಯನ್ನು ನವೆಂಬರ್ 15 ರಂದು ಸಂಜೆ ಆಚರಿಸಲಾಗುತ್ತದೆ. ಶಾಸ್ತ್ರದಲ್ಲಿ ಮೂರು ದೀಪಾವಳಿಗಳ ಉಲ್ಲೇಖವಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಆಶ್ವಯುಜ ಅಮಾವಾಸ್ಯೆಯಂದು ಪಿತೃ ದೀಪಾವಳಿ, ಕಾರ್ತಿಕ ಅಮಾವಾಸ್ಯೆಯಂದು ಮಾನವ ದೀಪಾವಳಿ ಮತ್ತು ಕಾರ್ತಿಕ ಪೂರ್ಣಿಮಾದಿನ ದೇವತೆಗಳ ದೀಪಾವಳಿಯನ್ನು ಆಚರಿಸಲಾಗುತ್ತದೆ.
ತಾಜಾ ಫೋಟೊಗಳು
ಕಾರ್ತಿಕ ಹುಣ್ಣಿಮೆಯ ಸ್ನಾನದ ಮಹತ್ವ
ಹುಣ್ಣಿಮೆಯಂದು ಧಾರ್ಮಿಕ ಕಾರ್ಯಗಳು, ಪವಿತ್ರ ನದಿಯಲ್ಲಿ ಸ್ನಾನ, ಪೂಜೆ ಮತ್ತು ದಾನವನ್ನು ಮಾಡಲಾಗುತ್ತದೆ. ದಾನ ಮಾಡುವುದರಿಂದ ಭಕ್ತರು ಪಾಪಗಳಿಂದ ಮುಕ್ತರಾಗುತ್ತಾರೆ. ಕಾರ್ತಿಕ ಪೂರ್ಣಿಮೆಯಂದು ಯಾವುದೇ ಕೆಲಸವನ್ನು ಕೈಗೊಳ್ಳುವವರು ವಿಷ್ಣುವಿನ ಅಪಾರ ಅನುಗ್ರಹವನ್ನು ಪಡೆಯುತ್ತಾರೆ. ಈ ದಿನ ಗಂಗಾ ಸ್ನಾನ ಮಾಡುವುದರಿಂದ ಪಾಪ ನಾಶವಾಗುತ್ತದೆ ಮತ್ತು ದೇಹಕ್ಕೆ ಧನಾತ್ಮಕ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ.
ಕಾರ್ತಿಕ ಪೂರ್ಣಿಮೆಯ ದಿನದಂದು ನಾರಾಯಣನು ತನ್ನ ಮೊದಲ ಅವತಾರವನ್ನು ಮತ್ಸ್ಯಾವತಾರವಾಗಿ ತೆಗೆದುಕೊಂಡನು ಎಂದು ಹೇಳಲಾಗುತ್ತದೆ. ಹುಣ್ಣಿಮೆಯಂದು ಭಗವಾನ್ ವಿಷ್ಣುವಿನ ಬಳಿ ದೀಪವನ್ನು ಹಚ್ಚುವುದು ಅಥವಾ ದೀಪವನ್ನು ದಾನ ಮಾಡುವುದರಿಂದ ದೈವಿಕ ಕಾಂತಿ ದೊರೆಯುತ್ತದೆ. ಇದಲ್ಲದೆ, ವ್ಯಕ್ತಿಯು ಸಂಪತ್ತು ಮತ್ತು ಖ್ಯಾತಿಯ ಲಾಭವನ್ನು ಸಹ ಪಡೆಯುತ್ತಾನೆ. ಗಂಗಾ ಸ್ನಾನದ ನಂತರ ದೀಪವನ್ನು ಅರ್ಪಿಸುವ ಮೂಲಕ ಭಕ್ತರು 10 ಯಾಗಗಳಿಗೆ ಸಮಾನವಾದ ಫಲಿತಾಂಶವನ್ನು ಪಡೆಯುತ್ತಾರೆ.
ವಿದ್ವಾಂಸರ ಪ್ರಕಾರ, ಕಾರ್ತಿಕ ಪೂರ್ಣಿಮೆಯಂದು ಗಂಗಾ ಸ್ನಾನವು ಸಂತೋಷ, ಸಂಪತ್ತು, ಸಮೃದ್ಧಿ ಮತ್ತು ಮಾನಸಿಕ ಸಂತೋಷವನ್ನು ತರುತ್ತದೆ. ಕಾರ್ತಿಕ ಮಾಸದಲ್ಲಿ ಗಂಗಾನದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾಸವಿಡೀ ಸ್ನಾನ ಮಾಡುತ್ತಾರೆ. ಹುಣ್ಣಿಮೆಯ ಸ್ನಾನದ ಮೂಲಕ ಈ ವ್ರತವೂ ಪೂರ್ಣಗೊಳ್ಳುತ್ತದೆ.
ನವೆಂಬರ್ 15 ರ ಬೆಳಿಗ್ಗೆ 4.58 ರಿಂದ 5.51 ರವರೆಗೆ ಗಂಗಾ ಸ್ನಾನ ಮಾಡಲು ಉತ್ತಮ ಸಮಯ. ಸ್ನಾನದ ನಂತರ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು ಶುಭ ಫಲಿತಾಂಶಗಳನ್ನು ತರುತ್ತದೆ. ಹಾಗೆಯೇ ಇದೇ ದಿನ ಬೆಳಗ್ಗೆ 6.44 ರಿಂದ 10.45 ರವರೆಗೆ ಸತ್ಯನಾರಾಯಣ ಪೂಜೆ ಮುಹೂರ್ತ ನಡೆಯಲಿದೆ.
ಗಂಗಾ ಸ್ನಾನದ ಪ್ರಯೋಜನಗಳು
ಪುರಾಣದಲ್ಲಿ ಕಾರ್ತಿಕ ಮಾಸದ ತ್ರಯೋದಶಿ, ಚತುರ್ದಶಿ ಮತ್ತು ಪೂರ್ಣಿಮೆಯನ್ನು ಅತಿ ಪುಷ್ಕರಿಣಿ ಎಂದು ಕರೆಯಲಾಗುತ್ತದೆ. ಸ್ಕಂದ ಪುರಾಣದ ಪ್ರಕಾರ ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಸ್ನಾನ ಮಾಡುವ ವ್ಯಕ್ತಿಯು ಸೂರ್ಯೋದಯಕ್ಕೆ ಮುನ್ನ ಈ ಮೂರು ದಿನಾಂಕಗಳಂದು ಮಾತ್ರ ಸ್ನಾನ ಮಾಡಿದರೆ ಸಂಪೂರ್ಣ ಫಲಿತಾಂಶವನ್ನು ಪಡೆಯುತ್ತಾನೆ. ಕಾರ್ತಿಕ ಪೂರ್ಣಿಮೆಯ ದಿನದಂದು ಗಂಗಾ ಸ್ನಾನದ ಮಹತ್ವವನ್ನು ಗ್ರಂಥಗಳು ಉಲ್ಲೇಖಿಸುತ್ತವೆ. ಕಾರ್ತಿಕ ಪೂರ್ಣಿಮೆಯಂದು ಗಂಗಾಸ್ನಾನ ಮಾಡುವುದರಿಂದ ವರ್ಷವಿಡೀ ಗಂಗೆಯಲ್ಲಿ ಸ್ನಾನ ಮಾಡಿದ ಫಲ ಸಿಗುತ್ತದೆ.