logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Veda Mantras For Success: ಈ 7 ಮಂತ್ರಗಳನ್ನು ಪಠಿಸಿದರೆ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತೆ

Veda Mantras for Success: ಈ 7 ಮಂತ್ರಗಳನ್ನು ಪಠಿಸಿದರೆ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತೆ

Raghavendra M Y HT Kannada

Nov 23, 2024 02:22 PM IST

google News

ಜೀವನದಲ್ಲಿ ಯಶಸ್ಸಿಗಾಗಿ ಪಠಿಸಬೇಕಾದ 7 ಮಂತ್ರಗಳಿವು

    • ವೇದ ಮಂತ್ರಗಳು: ವೇದ ಮಂತ್ರಗಳ ಪಠಣವು ದೈನಂದಿನ ಜೀವನದಲ್ಲಿ ಬೆಳವಣಿಗೆಯನ್ನು ತರುತ್ತದೆ. ಗುರಿಗಳ ಮೇಲಿನ ಸ್ಪಷ್ಟತೆಯು ಭಾವನಾತ್ಮಕವಾಗಿ ಸಶಕ್ತಗೊಳಿಸುತ್ತದೆ ಹಾಗೂ ಆತಂಕವನ್ನು ಕಡಿಮೆ ಮಾಡುತ್ತದೆ. ಮಂತ್ರಗಳ ಪಠಣದಿಂದ ಇನ್ನೂ ಏನೆಲ್ಲಾ ಪ್ರಯೋಜಗಳಿವೆ ಎಂಬುದನ್ನು ತಿಳಿಯಿರಿ.
ಜೀವನದಲ್ಲಿ ಯಶಸ್ಸಿಗಾಗಿ ಪಠಿಸಬೇಕಾದ 7 ಮಂತ್ರಗಳಿವು
ಜೀವನದಲ್ಲಿ ಯಶಸ್ಸಿಗಾಗಿ ಪಠಿಸಬೇಕಾದ 7 ಮಂತ್ರಗಳಿವು

ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ, ವೇದ ಮಂತ್ರಗಳ ಪಠಣವು ಅತ್ಯಂತ ಮಂಗಳಕರವಾದ ಚಟುವಟಿಕೆಯಾಗಿದೆ. ಮಂತ್ರಗಳು ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸಲು, ಶಾಂತಿ ಹಾಗೂ ಅದೃಷ್ಟವನ್ನು ತರಲು ಸಹಾಯ ಮಾಡುತ್ತದೆ. ಆಚರಣೆಗಳಲ್ಲಿ ಮಂತ್ರಗಳ ಪಠಣವು ಕೋಟ್ಯಂತರ ಜನರ ಹೃದಯದಲ್ಲಿ ಅಪಾರ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತೊಡೆದುಹಾಕಲು ಮತ್ತು ಅಧ್ಯಾತ್ಮಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಆತನನ್ನು ಬಲಪಡಿಸಲು ವೇದ ಮಂತ್ರಗಳು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಈ ಪವಿತ್ರ ಮಂತ್ರಗಳನ್ನು ಪಠಿಸುವ ಮೂಲಕ, ಭಕ್ತರು ನೇರವಾಗಿ ದೇವರೊಂದಿಗೆ ಮಾತನಾಡುವ ತೃಪ್ತಿಯನ್ನು ಅನುಭವಿಸುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಕೆಲವು ವೈದಿಕ ಮಂತ್ರಗಳು ಅಧ್ಯಾತ್ಮಿಕ ವಿಮೋಚನೆಗೆ ಬಹಳ ಉಪಯುಕ್ತವಾಗಿವೆ ಜೊತೆಗೆ ಸ್ವಯಂ ಅರಿವು ಮತ್ತು ವೃತ್ತಿಜೀವನದಲ್ಲಿ ಬೆಳೆಯಲು ಬೇಕಾದ ನಿಯಂತ್ರಣವನ್ನು ತಿಳಿಸುತ್ತವೆ. ಧರ್ಮಶಾಸ್ತ್ರಗಳ ಪ್ರಕಾರ ವ್ಯಕ್ತಿಯು ವೃತ್ತಿಜೀವನದಲ್ಲಿ ಬೆಳೆಯಲು ಸಹಾಯ ಮಾಡುವ ಏಳು ಪ್ರಬಲ ವೇದ ಮಂತ್ರಗಳ ಬಗ್ಗೆ ತಿಳಿಯೋಣ.

ಓಂ ಶ್ರೀ ಮಹಾಲಕ್ಷ್ಮಿಯೇ ನಮಃ

ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಈ ಮಂತ್ರವನ್ನು ಪ್ರತಿದಿನ ಜಪಿಸಬೇಕು. ಈ ಮಂತ್ರವನ್ನು ಎಚ್ಚರಿಕೆಯಿಂದ ಪಠಿಸಿದರೆ ಜೀವನದಲ್ಲಿ ಬೆಳವಣಿಗೆ, ಯಶಸ್ಸು ಮತ್ತು ವಿಶೇಷ ಮನ್ನಣೆ ಸಿಗುತ್ತದೆ. ಅದೇ ಸಮಯದಲ್ಲಿ ಇದು ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ತರುತ್ತದೆ.

2. ಓಂ ವಕ್ರತುಂಡಾಯ ಹುಂ

ಈ ಶಕ್ತಿಯುತ ಮತ್ತು ಅದ್ಭುತವಾದ ಮಂತ್ರದ ಪಠಣವು ದೀರ್ಘಕಾಲದ ಅಡೆತಡೆಗಳನ್ನು ನಿವಾರಿಸುತ್ತದೆ. ಅಡೆತಡೆಗಳಿಲ್ಲದೆ ವೃತ್ತಿಜೀವನವನ್ನು ಮಾಡುತ್ತದೆ. ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲಾಗುತ್ತದೆ. ವೃತ್ತಿಪರ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುವಿರಿ.

3. ಓಂ ಶ್ರೀ ಧನ್ವಂತರಿ ನಮಃ

ಧನ್ವಂತರಿ ಮಾತೆಯ ಅನುಗ್ರಹಕ್ಕಾಗಿ ಈ ಮಂತ್ರವನ್ನು ಜಪಿಸಬೇಕು. ಪರಿಣಾಮವಾಗಿ, ಆರೋಗ್ಯ ಮತ್ತು ಸಮೃದ್ಧಿ ನಿಮ್ಮದಾಗುತ್ತದೆ. ಜೀವನದಲ್ಲಿ ಯಶಸ್ಸಿಗೆ ಅಗತ್ಯವಾದ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ಈ ಮಂತ್ರವನ್ನು ಪ್ರತಿದಿನ ಪಠಿಸುವುದರಿಂದ ಧನಾತ್ಮಕ ಶಕ್ತಿ ಮತ್ತು ಅದೃಷ್ಟವನ್ನು ತರುತ್ತದೆ.

4. ಓಂ ಸರ್ವೇ ಭದ್ರಾಣಿ ಪಶ್ಯಂತು

ಈ ಮಂತ್ರವನ್ನು ಪಠಿಸುವುದರಿಂದ ಸಕಾರಾತ್ಮಕ ಮನೋಭಾವ ಉಂಟಾಗುತ್ತದೆ. ಪ್ರತಿದಿನ ಮಂತ್ರವನ್ನು ಪಠಿಸುವುದರಿಂದ ವೃತ್ತಿಯಲ್ಲಿ ಬೆಳವಣಿಗೆ ಮತ್ತು ಯಶಸ್ಸನ್ನು ತರುತ್ತದೆ. ಅದೇ ಸಮಯದಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಾಮರಸ್ಯ ಮತ್ತು ಸಮತೋಲನವಿದೆ.

5. ಓಂ ಶ್ರೀ ರಾಮಾಯ ನಮಃ

ಶ್ರೀರಾಮನು ಮಾನವ ರೂಪದಲ್ಲಿ ಕಾಣಿಸಿಕೊಂಡ ಶ್ರೀ ಮಹಾವಿಷ್ಣುವಿನ ಅವತಾರ. ಪರಿಪೂರ್ಣತೆ ಮತ್ತು ಸದ್ಗುಣದ ವ್ಯಕ್ತಿತ್ವವಾದ ರಾಮನನ್ನು ಮೆಚ್ಚಿಸಲು ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವು ಕೆಲಸದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಧೈರ್ಯ, ಆತ್ಮವಿಶ್ವಾಸ ಮತ್ತು ನಾಯಕತ್ವದ ಕೌಶಲ್ಯಗಳನ್ನು ಪ್ರೋತ್ಸಾಹಿಸುತ್ತದೆ. ಇದಲ್ಲದೆ, ಇದನ್ನು ಪ್ರತಿದಿನ ಪಠಿಸುವುದರಿಂದ ಶಕ್ತಿ ಮತ್ತು ಅದೃಷ್ಟವನ್ನು ತರುತ್ತದೆ.

6. ಓಂ ನಮಃ ಶಿವಾಯ

ಪರಮಾತ್ಮನನ್ನು ಮೆಚ್ಚಿಸಲು ' ಓಂ ನಮಃ ಶಿವಾಯ' ಎಂಬ ಮಂತ್ರವನ್ನು ಪ್ರತಿದಿನ ಜಪಿಸಬೇಕು. ಈ ಶಕ್ತಿಯುತ ಮಂತ್ರವನ್ನು ಪಠಿಸುವುದರಿಂದ ವೃತ್ತಿಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ. ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ವೃತ್ತಿಪರ ಕೆಲಸದಲ್ಲಿ ಯಶಸ್ವಿಯಾಗುವಿರಿ.

7. ಓಂ ಶ್ರೀ ಗಣೇಶಾಯ ನಮಃ

ಈ ಮಂತ್ರವನ್ನು ಪಠಿಸುವುದರಿಂದ ಅಡೆತಡೆಗಳನ್ನು ನಿವಾರಿಸಲು ಗಣೇಶನ ಕೃಪೆಗೆ ಪಾತ್ರರಾಗುತ್ತಾರೆ. ದಿನನಿತ್ಯದ ಪಾರಾಯಣ ವೃತ್ತಿಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ. ಸಮಸ್ಯೆ ಪರಿಹರಿಸುವ ಕೌಶಲ್ಯಗಳು ಸುಧಾರಿಸುತ್ತವೆ. ವೃತ್ತಿಪರ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ