Tulasi Brindavana: ತುಳಸಿ ವೃಂದಾವನ ಅಲಂಕಾರ ಮಾಡಲು ಐಡಿಯಾಗಳು; ಈ ವಿನ್ಯಾಸನಗಳು ನಿಮಗೆ ಇಷ್ಟವಾಗುತ್ತವೆ
Nov 12, 2024 02:06 PM IST
ತುಳಸಿ ವೃಂದಾನವನ್ನು ಹೇಗೆಲ್ಲಾ ಅಲಂಕಾರ ಮಾಡಬಹುದು ಎಂಬುದರ ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ.
- ತುಳಸಿ ವಿವಾಹದ ದಿನದಂದು ತುಳಸಿ ಗಿಡವನ್ನು ಮಧುವಿನಂತೆ ಅಲಂಕರಿಸಲಾಗುತ್ತದೆ. ವಿವಾಹಕ್ಕೆ ಮಂಟಪ ಅಲಂಕಾರವನ್ನೂ ಮಾಡುತ್ತಾರೆ. ಕೆಲವು ಅಲಂಕಾರದ ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ.
ವಿಶ್ವದ ಅಧಿಪತಿಯಾದ ವಿಷ್ಣುವಿನ ಆರಾಧನೆಯೊಂದಿಗೆ ತುಳಸಿ ಸಸ್ಯವನ್ನು ಪೂಜಿಸುವುದು ಶುಭವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ವಿಷ್ಣುವಿನ ಶಾಲಿಗ್ರಾಮ್ ರೂಪದಿಂದ ಪೂಜಿಸಲಾಗುತ್ತದೆ. ತುಳಸಿ ವಿವಾಹವನ್ನು ಪ್ರತಿವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನದಂದು ಆಯೋಜಿಸಲಾಗುತ್ತದೆ. ನವೆಂಬರ್ 12 ರಂದು ಉತ್ಥಾನ ದ್ವಾದಶಿ ಆಚರಣೆ ಮಾಡಲಾಗುತ್ತದೆ. ಈ ದಿನ, ಮಾತಾ ತುಳಸಿಯನ್ನು ವಿಷ್ಣುವಿನ ಶಾಲಿಗ್ರಾಮ್ ರೂಪಕ್ಕೆ ಮದುವೆ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಉತ್ಥಾನ ದ್ವಾದಶಿ ಆಚರಣೆ ದಿನದಂದು ತುಳಸಿ ವಿವಾಹವನ್ನು ಆಚರಿಸಲಾಗುತ್ತದೆ. ಈ ತುಳಸಿ ವಿವಾಹಕ್ಕೂ ಮುನ್ನ ತುಳಸಿ ವೃಂದಾವನನ್ನು ಹೇಗೆ ಅಲಂಕರಿಸಬೇಕು ಎಂಬುದನ್ನು ತಿಳಿಯೋಣ.
ತಾಜಾ ಫೋಟೊಗಳು
ಹಿಂದೂ ಸಂಪ್ರದಾಯದಲ್ಲಿ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ಇದು ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಪ್ರತಿಯೊಬ್ಬರು ತಮ್ಮ ಮನೆ ಮುಂದೆ ತುಳಸಿ ಕಟ್ಟೆಯನ್ನು ಹೊಂದಿರುತ್ತಾರೆ. ತುಳಸಿ ಕಟ್ಟೆಯನ್ನು ಪೂಜಿಸುವುದರಿಂದ ಜೀವನದಲ್ಲಿ ಶಾಂತಿ, ಸಂತೋಷ ಹಾಗೂ ಸಮೃದ್ಧಿ ಸೇರಿದಂತೆ ಹಲವು ಶುಭ ಫಲಗಳಿರುತ್ತವೆ ಎಂದು ಹೇಳಲಾಗುತ್ತದೆ. ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಮತ್ತು ವಾಸ್ತುಶಿಲ್ಪದ ಶೈಲಿಗಳನ್ನು ಪ್ರತಿಬಿಂಬಿಸುವ ವಿವಿಧ ಬಗೆಯ ತುಳಸಿ ಮಂದಿರಗಳನ್ನು ಕಾಣುತ್ತೇವೆ. ಪ್ರತಿ ವಿನ್ಯಾಸವು ತಮ್ಮ ಭಕ್ತಿ ಹಾಗೂ ಗೌರವವನ್ನು ಸೂಚಿಸುತ್ತದೆ. ನಿಮ್ಮಲ್ಲಿರುವ ತುಳಸಿ ವೃಂದಾವನವನ್ನು ಅಂಲಕಾರ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ತುಳಸಿ ವಿವಾಹದ ದಿನದಂದು ತುಳಸಿ ಮಾತೆಯನ್ನು ಅಲಂಕರಿಸುವ ಮೊದಲು ನೀವು ಕೆಲವು ಪ್ರಮುಖ ಕೆಲಸಗಳನ್ನು ಮಾಡಬೇಕು. ತುಳಸಿ ವಿವಾಹದ ದಿನದಂದು ತುಳಸಿ ಎಲೆಗಳನ್ನು ಕೀಳಬಾರದು. ತುಳಸಿ ಗಿಡದಲ್ಲಿ ಒಣಗಿದ ಮತ್ತು ಕಪ್ಪಾಗಿರುವ ಎಲೆಗಳನ್ನು ಒಂದು ದಿನ ಮೊದಲೇ ಬಿಡಿಸಿರಬೇಕು. ತುಳಸಿ ವಿವಾಹದ ದಿನ ಬೆಳಗ್ಗೆ ತುಳಸಿ ಮಾತೆಯನ್ನು ಮೊದಲು ಸ್ನಾನ ಮಾಡಿ. ಯಾವುದೇ ಧೂಳು ಇಲ್ಲದಂತೆ ಪ್ರತಿ ಎಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಇದರ ನಂತರ, ತುಳಸಿ ವೃಂದಾವನವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಯಾವುದೇ ರೀತಿಯ ಹಳೆಯ ಹೂವುಗಳು ಇದ್ದರೆ ಅವುಗಳನ್ನು ತೆಗೆದು ಹಾಕಿ.
ತುಳಸಿ ವಿವಾಹದ ದಿನದಂದು ತುಳಸಿ ಮಾತೆಯನ್ನು ಅಲಂಕರಿಸುವ ಮೊದಲು ನೀವು ಕೆಲವು ಪ್ರಮುಖ ಕೆಲಸಗಳನ್ನು ಮಾಡಬೇಕು. ತುಳಸಿ ವಿವಾಹದ ದಿನದಂದು ತುಳಸಿ ಎಲೆಗಳನ್ನು ಕೀಳಬಾರದು. ತುಳಸಿ ಗಿಡದಲ್ಲಿ ಒಣಗಿದ ಮತ್ತು ಕಪ್ಪಾಗಿರುವ ಎಲೆಗಳನ್ನು ಒಂದು ದಿನ ಮೊದಲೇ ಬಿಡಿಸಿರಬೇಕು. ತುಳಸಿ ವಿವಾಹದ ದಿನ ಬೆಳಗ್ಗೆ ತುಳಸಿ ಮಾತೆಯನ್ನು ಮೊದಲು ಸ್ನಾನ ಮಾಡಿ. ಯಾವುದೇ ಧೂಳು ಇಲ್ಲದಂತೆ ಪ್ರತಿ ಎಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಇದರ ನಂತರ, ತುಳಸಿ ವೃಂದಾವನವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಯಾವುದೇ ರೀತಿಯ ಹಳೆಯ ಹೂವುಗಳು ಇದ್ದರೆ ಅವುಗಳನ್ನು ತೆಗೆದು ಹಾಕಿ.
ತುಳಸಿ ವಿವಾಹದ ದಿನದಂದು ಸುಂದರವಾದ ಮಂಟಪವನ್ನು ನಿರ್ಮಿಸಿ ವಿವಾಹಕ್ಕೆ ಸಿದ್ಧಗೊಳಿಸಲಾಗುತ್ತದೆ. ಇದಕ್ಕಾಗಿ ಕಬ್ಬು ಮತ್ತು ಬಾಳೆ ಎಲೆಗಳ ಮಂಟಪವನ್ನು ಮಾಡಿಕೊಳ್ಳಬೇಕು. ಕಬ್ಬು ಮತ್ತು ಬಾಳೆ ಎಳೆಗಳ ಮಂಟಪ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಸೀರೆಗಳ ಸಹಾಯದಿಂದ ನೀವು ಸುಂದರವಾದ ಮಂಟಪವನ್ನು ತಯಾರಿಸಬಹುದು. ಬಿದಿರಿನ ಮೇಲೆ ಸೀರೆ ಉಡುಸಿ ಭವ್ಯ ಮಂಟಪವನ್ನು ನಿರ್ಮಿಸಬಹುದು. ಇದನ್ನು ಅಲಂಕರಿಸಲು ನೀವು ಹೂವಿನ ತಂತಿಗಳು ಅಥವಾ ಅಂಚುಗಳನ್ನು ಬಳಸಬಹುದು. ಮಂಟಪದಲ್ಲಿ ಸುಂದರವಾದ ರಂಗೋಲಿ ಹಾಕಲು ಮರೆಯದಿರಿ.
ಸ್ನಾನದ ನಂತರ ತುಳಸಿ ಮಾತೆಯ ಅಲಂಕಾರದ ಸರದಿ ಇರುತ್ತದೆ. ಇದಕ್ಕಾಗಿ ಮೊದಲು ಮಡಿಕೆಯ ಮೇಲೆ ಸೀರೆ ಅಥವಾ ಲೆಹೆಂಗಾದಿಂದ ಹಾಕಿ. ನೀವು ಬೇಕಾದರೆ ಮಾರುಕಟ್ಟೆಯಲ್ಲಿ ಇದಕ್ಕಾಗಿಯೇ ಸಿದ್ಧಪಡಿಸಿದ ಉಡುಪು ಸಿಗುತ್ತದೆ. ಅದನ್ನು ಬಳಸಬಹುದು. ಹೆಚ್ಚು ಕಲರ್ ಫುಲ್ ಆಗಿ ಕಾಣಲು ಬಯಸಿದರೆ ಖಾಲಿ ಮಡಿಕೆಯನ್ನು ತಲೆಕೆಳಗಾಗಿ ಮಾಡಿ. ಅದರ ಮೇಲೆ ತುಳಸಿ ಪಾತ್ರೆಯನ್ನು ಇಡಬಹುದು. ಹೀಗೆ ಮಾಡುವುದರಿಂದ ಎತ್ತರವನ್ನು ಹೆಚ್ಚಿಸಬಹುದು. ತುಳಸಿಗೆ ಸೀರೆಯನ್ನು ಉಡುಸಿದ ನಂತರ ಆಭರಣಗಳೊಂದಿಗೆ ವಧುವಿನಂತೆ ಸಿಂಗಾರ ಮಾಡಿ.
ತುಳಸಿ ಅಲಂಕಾರದ ಈ ಸರಳ ವಿಧಾನ ಅನುಸರಿಸಿ
ಇದನ್ನೂ ಓದಿ: ಕಾರ್ತಿಕ ಪೂರ್ಣಿಮಾ ದಿನ ಈ ಪರಿಹಾರ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ
ತುಳಸಿ ವಿವಾಹದ ದಿನದಂದು ತುಳಸಿ ಮಾತೆಯನ್ನು ಅಲಂಕರಿಸಲು ಮತ್ತೊಂದು ವಿಧಾನವೆಂದರೆ ಒಂದು ಗಟ್ಟಿಯಾದ ಕಡ್ಡಿಯನ್ನು ತೆಗೆದುಕೊಂಡು ಇದರೊಳಗೆ ಚಿಕ್ಕ ರಿಂಗ್ ನಲ್ಲಿ ತುಳಸಿ ಪಾಟ್ ಅನ್ನು ಪ್ರತಿಷ್ಠಾಪಿಸಬೇಕು. ಪಾಟ್ ಇಡುವ ಮುನ್ನ ಬಟ್ಟೆ ಅಥವಾ ಸೀರೆಗೆ ನೆರಿಗೆ ಹಿಡಿದು ರಿಂಗ್ ಒಳಗಡೆ ಸೇರಿಸಬೇಕು. ನಂತರ ಎಲ್ಲಾ ಬಟ್ಟೆಗೂ ಸೇರಿಸಿ ರಬ್ಬರ್ ಬ್ಯಾಂಡ್ ಹಾಕಿ. ಬಳಿಕ ಆಭರಣಗಳನ್ನು ಹಾಕಿ. ಈಗ ಬಿಳಿ ಬಟ್ಟೆಯೊಂದಿಗೆ ಒಂದು ಟೇಬಲ್ ಮೇಲೆ ಪಾಟ್ ಇಡಿ. ಬಣ್ಣದ ಎರಡು ಪೇಪರ್ ರೊಲ್ ಗಳನ್ನು ಮಾಡಿ ಅವುಗಳನ್ನು ತುಳಸಿ ಗಿಡದ ಎರಡು ಬದಿಗಳನ್ನು ಇಡಿ. ಪೇಪರ್ ರೊಲ್ ಮೇಲೆ ದೀಪಗಳನ್ನು ಬೆಳಗಿಸಿ. ಬಳಿಕ ನಿಮ್ಮ ಪೂಜಾ ವಿಧಾನವನ್ನು ಮುಂದುವರಿಸಬಹುದು.