logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Karthika Masa: ಕಾರ್ತಿಕ ಮಾಸದಲ್ಲಿ ಹೆಚ್ಚಾಗಿ ಗೃಹ ಪ್ರವೇಶ, ವಿವಾಹ ಶುಭ ಕಾರ್ಯಕ್ರಮ ಮಾಡುತ್ತಾರೆ ಯಾಕೆ? ಹೀಗಿದೆ ಕಾರಣ

Karthika Masa: ಕಾರ್ತಿಕ ಮಾಸದಲ್ಲಿ ಹೆಚ್ಚಾಗಿ ಗೃಹ ಪ್ರವೇಶ, ವಿವಾಹ ಶುಭ ಕಾರ್ಯಕ್ರಮ ಮಾಡುತ್ತಾರೆ ಯಾಕೆ? ಹೀಗಿದೆ ಕಾರಣ

Raghavendra M Y HT Kannada

Nov 06, 2024 05:55 PM IST

google News

ಕಾರ್ತಿಕ ಮಾಸದಲ್ಲಿ ಗೃಹ ಪ್ರವೇಶ, ವಿವಾಹ ಸೇರಿದಂತೆ ಶುಭ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದರ ಹಿಂದಿನ ಕಾರಣವನ್ನು ತಿಳಿಯಿರಿ.

    • ಕಾರ್ತಿಕ ಮಾಸ: ಗೃಹ ಪ್ರವೇಶ ಹಾಗೂ ಮದುವೆಗೆ ಕಾರ್ತಿಕ ಮಾಸ ಅತ್ಯಂತ ಸೂಕ್ತ. ಈ ಮಾಸದಲ್ಲಿ ಮದುವೆಯಾದರೆ ಅವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂದು ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳಿದ್ದಾರೆ. ಕಾರ್ತಿಕ ಮಾಸದಲ್ಲಿನ ಶುಭ ಕಾರ್ಯಕ್ರಮಗಳ ಬಗ್ಗೆ ಚಿಲಕರ್ತಿ ಪ್ರಭಾಕರ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.
ಕಾರ್ತಿಕ ಮಾಸದಲ್ಲಿ ಗೃಹ ಪ್ರವೇಶ, ವಿವಾಹ ಸೇರಿದಂತೆ ಶುಭ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದರ ಹಿಂದಿನ ಕಾರಣವನ್ನು ತಿಳಿಯಿರಿ.
ಕಾರ್ತಿಕ ಮಾಸದಲ್ಲಿ ಗೃಹ ಪ್ರವೇಶ, ವಿವಾಹ ಸೇರಿದಂತೆ ಶುಭ ಕಾರ್ಯಗಳನ್ನು ಹೆಚ್ಚಾಗಿ ಮಾಡುವುದರ ಹಿಂದಿನ ಕಾರಣವನ್ನು ತಿಳಿಯಿರಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈಶಾಖ, ಜ್ಯೇಷ್ಠ, ಕಾರ್ತಿಕ, ಮಾಘ ಮತ್ತು ಫಾಲ್ಗುಣ ಮಾಸಗಳು ಗೃಹಪ್ರವೇಶಕ್ಕೆ ಉತ್ತಮ ತಿಂಗಳುಗಳು ಎಂದು ಪ್ರಸಿದ್ಧ ಹಾಗೂ ಶುಭಕರವಾಗಿರುತ್ತವೆ. ಕಾರ್ತಿಕ ಮಾಸವನ್ನು ಅತ್ಯಂತ ಮಂಗಳಕರ ಮಾಸವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಶಿವ, ವಿಷ್ಣು ಮುಂತಾದ ದೇವತೆಗಳನ್ನು ಪೂಜಿಸುವುದು ಅತ್ಯಂತ ಶ್ರೇಯಸ್ಕರ. ಆದ್ದರಿಂದ ಈ ಮಾಸದಲ್ಲಿ ಗೃಹಪ್ರವೇಶ ಮತ್ತು ಮದುವೆಯಂತಹ ಶುಭ ಕಾರ್ಯಗಳನ್ನು ಮಾಡುವುದು ಬಹಳ ಸಾಂಪ್ರದಾಯಿಕವಾಗಿದೆ. ಈ ಸಮಯದಲ್ಲಿ ದೇವರ ಅನುಗ್ರಹ, ಆರೋಗ್ಯ ಮತ್ತು ಸಮೃದ್ಧಿ ಸುಲಭವಾಗಿ ಸಿಗುತ್ತದೆ ಎಂದು ಭಕ್ತರು ಸಾಂಪ್ರದಾಯಿಕವಾಗಿ ನಂಬುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಗೃಹಪ್ರವೇಶವು ಒಂದು ಪ್ರಮುಖ ಮಂಗಳಕರ ಕ್ಷಣವಾಗಿದೆ. ಜ್ಯೋತಿಷ್ಯಶಾಸ್ತ್ರದ ನಿಯಮಗಳನ್ನು ಅನುಸರಿಸಿ ಈ ಶುಭ ಕಾರ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದರಿಂದ ಸಮೃದ್ಧಿ, ಸಂಪತ್ತು ಹಾಗೂ ಯೋಗಕ್ಷೇಮವನ್ನು ಪಡೆಯಬಹುದು. ಹೀಗಾಗಿ ಗೃಹಪ್ರವೇಶ ಮಾಡುವಾಗ ಜ್ಯೋತಿಷ್ಯ ಶಾಸ್ತ್ರದ ನಿಯಮಗಳನ್ನು ಪಾಲಿಸಿ ಉತ್ತಮ ಫಲಿತಾಂಶ ಪಡೆಯಲಾಗುತ್ತದೆ. ಹೊಸ ಮನೆಯನ್ನು ಪ್ರವೇಶಿಸುವ ಸಮಯವನ್ನು ದೇವತೆಗಳನ್ನು ಆಹ್ವಾನಿಸುವುದು ಮತ್ತು ಅವರ ಆಶೀರ್ವಾದವನ್ನು ಪಡೆಯುವುದು ಮುಖ್ಯ ಎಂದು ಭಕ್ತರು ನಂಬುತ್ತಾರೆ.

ಕಾರ್ತಿಕ ಮಾಸದಲ್ಲಿ ಗೃಹಪ್ರವೇಶ ಮಾಡುವುದರಿಂದ ಭವಿಷ್ಯದಲ್ಲಿ ಐಶ್ವರ್ಯ, ಸುಖ, ಸಂಪತ್ತು ಮತ್ತು ಆರೋಗ್ಯ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಕಾರ್ತಿಕ ಮಾಸವು ಗೃಹ ಪ್ರವೇಶಕ್ಕೆ ಅತ್ಯಂತ ಪ್ರಶಸ್ತವಾದ ಮಾಸವಾಗಿದೆ. ಈ ಮಾಸದಲ್ಲಿ ಮಾಡುವ ಶುಭ ಕಾರ್ಯಗಳು, ದಾನ, ಪೂಜೆಗಳ ಮೂಲಕಲ ದೇವತೆಗಳನ್ನು ಮೆಚ್ಚಿಸಲಾಗುತ್ತದೆ.

ಗೃಹ ಪ್ರವೇಶ ಪೂಜಾ ವಿಧಾನ

ಮನೆಯೊಳಗೆ ಪ್ರವೇಶಿಸುವ ಮೊದಲು, ಮನೆಯನ್ನು ಶುದ್ಧೀಕರಿಸುವುದು, ಗೋವು ಅಥವಾ ಗಂಗಾಜಲವನ್ನು ಸಿಂಪಡಿಸುವುದು ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಂತಿ ಮತ್ತು ಶಿವಪೂಜೆಯಂತಹ ಪೂಜೆಗಳನ್ನು ಮಾಡುವುದರಿಂದ ಹೊಸ ಮನೆಯು ಮಂಗಳಕರವಾಗಿರುತ್ತದೆ ಎಂದು ನಂಬಲಾಗಿದೆ. ನಮ್ಮ ಪುರಾಣಗಳು ಹೇಳುವಂತೆ ದೀಪವನ್ನು ಹಚ್ಚುವುದು ಮತ್ತು ಭಕ್ತಿಯಿಂದ ಮನೆಯೊಳಗೆ ಪ್ರವೇಶ ಮಾಡುವುದು ಸಕಲ ಐಶ್ವರ್ಯವನ್ನು ನೀಡುತ್ತದೆ.

ಪೌರಾಣಿಕ ನಂಬಿಕೆ: ಪುರಾಣಗಳ ಪ್ರಕಾರ, ಕಾರ್ತಿಕ ಮಾಸದಲ್ಲಿ ಮನೆಗೆ ಪ್ರವೇಶಿಸುವುದರಿಂದ ಮನೆಗೆ ಸಮೃದ್ಧಿ, ಸಂತೋಷ ಮತ್ತು ಶಾಂತಿ ಸಿಗುತ್ತದೆ. ಇದು ವಾಸ್ತು ದೇವತೆಯನ್ನು ಮೆಚ್ಚಿಸುತ್ತದೆ ಮತ್ತು ಮನೆಯನ್ನು ಆರೋಗ್ಯವಾಗಿರಿಸುತ್ತದೆ.

ಕಾರ್ತಿಕ ಮಾಸದಲ್ಲಿ ಮದುವೆಗಳ ಮಹತ್ವ

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮದುವೆ ಒಂದು ಪವಿತ್ರ ಆಚರಣೆ. ಕಾರ್ತಿಕ ಮಾಸದಲ್ಲಿ ಮದುವೆ ಮಾಡುವುದು ಅತ್ಯಂತ ಶ್ರೇಯಸ್ಕರ ಎಂದು ಭಕ್ತರು ನಂಬುತ್ತಾರೆ. ಏಕೆಂದರೆ ಕಾರ್ತಿಕ ಮಾಸವು ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಮಂಗಳಕರ ಅವಧಿಯಾಗಿದೆ. ಈ ಮಾಸವನ್ನು ಶಿವ ಮತ್ತು ಪಾರ್ವತಿಯರ ಸಮ್ಮಿಲನದ ಸಂಕೇತವೆಂದು ಪರಿಗಣಿಸಲಾಗಿದೆ.

ಕಾರ್ತಿಕ ಮಾಸದಲ್ಲಿ ಮದುವೆ, ಶುಭ ಸಮಾರಂಭ

ಕಾರ್ತಿಕ ಮಾಸದಲ್ಲಿ ಮದುವೆಯಾದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂಬ ನಂಬಿಕೆ ಇದೆ. ವಿವಾಹದ ನಂತರ ಕಾರ್ತಿಕ ಪೂಜೆ ಮತ್ತು ಶಿವಪೂಜೆಯನ್ನು ಮಾಡುವುದರಿಂದ ದಾಂಪತ್ಯ ಜೀವನವು ಸಾರ್ಥಕವಾಗುತ್ತದೆ ಎಂದು ನಂಬಲಾಗಿದೆ.

ಮದುವೆಯ ಪೂಜಾ ವಿಧಾನ

ಮದುವೆಗೆ ಮುನ್ನ ಕಾರ್ತಿಕ ಪೂರ್ಣಿಮೆಯಂದು ಸ್ನಾನ ಮಾಡುವುದು ಮತ್ತು ಶಿವ ಮತ್ತು ವಿಷ್ಣುವಿಗೆ ವಿಶೇಷ ಪೂಜೆ ಸಲ್ಲಿಸುವುದು ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ನವದಂಪತಿ ಈ ಮಾಸದಲ್ಲಿ ದೀಪಾರಾಧನೆ ಮತ್ತು ಕಾರ್ತಿಕ ದೀಪಗಳನ್ನು ಬೆಳಗಿಸುವ ಮೂಲಕ ಸನ್ಮಾರ್ಗದಲ್ಲಿ ನಡೆಯಲು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಕಾರ್ತಿಕ ಮಾಸದಲ್ಲಿ ವಿವಾಹವಾಗುವವರು ಅಧ್ಯಾತ್ಮಿಕತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಶಿವ ಮತ್ತು ಪಾರ್ವತಿಯ ಆಶೀರ್ವಾದದಿಂದ ಸಂತೋಷ ಮತ್ತು ಶಾಂತಿಯುತ ದಾಂಪತ್ಯವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ಮನೆಗೆ ಐಶ್ವರ್ಯ: ಗೃಹಪ್ರವೇಶದಿಂದ ಮನೆಗೆ ಐಶ್ವರ್ಯ, ಸುಖ, ಸಮೃದ್ಧಿ ಮತ್ತು ಆರ್ಥಿಕ ಸ್ಥಿರತೆ ದೊರೆಯುತ್ತದೆ ಎಂದು ನಮ್ಮ ಸಾಂಪ್ರದಾಯಿಕ ವಿದ್ವಾಂಸರು ಹೇಳುತ್ತಾರೆ. ಇದು ಮನೆಯಲ್ಲಿ ಎಲ್ಲರಿಗೂ ಶಾಂತಿ ಮತ್ತು ಸಂತೋಷವನ್ನು ತರುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ