logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಬ್ರಹ್ಮೋತ್ಸವ ಶಾಸ್ತ್ರೋಕ್ತವಾಗಿ ಮುಕ್ತಾಯ; 9 ದಿನದಲ್ಲಿ ಸಂಗ್ರಹವಾದ ಹುಂಡಿ ಹಣದ ವಿವರ ಇಲ್ಲಿದೆ

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಬ್ರಹ್ಮೋತ್ಸವ ಶಾಸ್ತ್ರೋಕ್ತವಾಗಿ ಮುಕ್ತಾಯ; 9 ದಿನದಲ್ಲಿ ಸಂಗ್ರಹವಾದ ಹುಂಡಿ ಹಣದ ವಿವರ ಇಲ್ಲಿದೆ

Raghavendra M Y HT Kannada

Oct 13, 2024 09:38 AM IST

google News

ತಿರುಪತಿಯ ತಿರುಮಲದಲ್ಲಿ ನಡದ 8 ದಿನಗಳ ಬ್ರಹ್ಮೋತ್ಸವ ಅಕ್ಟೋಬರ್ 12ರ ಶನಿವಾರ ರಾತ್ರಿ ಮುಕ್ತಾಯವಾಗಿದೆ.

    • ತಿರುಮಲದ ವೆಂಕಟೇಶ್ವರ ದೇವಸ್ಥಾನದಲ್ಲಿ ಒಂಬತ್ತು ದಿನ ನಡೆದ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವ ಅಕ್ಟೋಬರ್ 12ರ  ಶನಿವಾರ ರಾತ್ರಿ ಧ್ವಜಾರೋಹಣದೊಂದಿಗೆ ಮುಕ್ತಾಯವಾಯಿತು. ಬ್ರಹ್ಮೋತ್ಸವ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಟಿಟಿಡಿ ಇಒ ಶ್ಯಾಮಲಾ ರಾವ್ ಪ್ರಕಟಿಸಿದ್ದಾರೆ. ಈ 9 ದಿನ ನಡೆದ ಕಾರ್ಯಕ್ರಮಗಳು, ಭಕ್ತರು ಹಾಗೂ ಸಂಗ್ರಹವಾದ ಹುಂಡಿ ಹಣದ ವಿವರ ಇಲ್ಲಿದೆ.
ತಿರುಪತಿಯ ತಿರುಮಲದಲ್ಲಿ ನಡದ 8 ದಿನಗಳ ಬ್ರಹ್ಮೋತ್ಸವ ಅಕ್ಟೋಬರ್ 12ರ ಶನಿವಾರ ರಾತ್ರಿ ಮುಕ್ತಾಯವಾಗಿದೆ.
ತಿರುಪತಿಯ ತಿರುಮಲದಲ್ಲಿ ನಡದ 8 ದಿನಗಳ ಬ್ರಹ್ಮೋತ್ಸವ ಅಕ್ಟೋಬರ್ 12ರ ಶನಿವಾರ ರಾತ್ರಿ ಮುಕ್ತಾಯವಾಗಿದೆ.

ಭಾರತದ ಪ್ರಮುಖ ದೇವಾಲಯಗಳಲ್ಲಿ ಅಗ್ರ ಸ್ಥಾನದಲ್ಲಿರುವ ಆಂಧ್ರ ಪ್ರದೇಶದ ತಿರುಪತಿಯ ತಿರುಮಲದಲ್ಲಿ ಶ್ರೀ ವೆಂಕಟೇಶ್ವರನ ಸಾಲಕಟ್ಲ ಬ್ರಹ್ಮೋತ್ಸವ ಅಕ್ಟೋಬರ್ 12ರ ಶನಿವಾರ ರಾತ್ರಿ ಧ್ವಜಾರೋಹಣದೊಂದಿಗೆ ಸಂಪನ್ನಗೊಂಡಿತು. ಈ ಬ್ರಹ್ಮೋತ್ಸವ ಒಂಬತ್ತು ದಿನಗಳ ಕಾಲ ವೈಭವದಿಂದ ಜರುಗಿದ್ದು, ಬಂಗಾರು ತಿರುಚ್ಚಿ ಉತ್ಸವ ಶನಿವಾರ ಸಂಜೆ 7 ಗಂಟೆಗೆ ನಡೆಯಿತು. ಬಳಿಕ ಧ್ವಜಾರೋಹಣದೊಂದಿಗೆ ಶ್ರೀವಾರಿ ಬ್ರಹ್ಮೋತ್ಸವ ಅದ್ಧೂರಿಯಾಗಿ ಮುಕ್ತಾಯಗೊಂಡಿತು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಶ್ರೀವಾರಿ ಬ್ರಹ್ಮೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಟಿಟಿಡಿ ಇಒ ಶ್ಯಾಮಲಾ ರಾವ್ ಮಾಹಿತಿ ನೀಡಿದ್ದಾರೆ. ಹೆಚ್ಚುವರಿ ಇಒ ಸಿಎಚ್ ವೆಂಕಯ್ಯ ಚೌಧರಿ ಅವರೊಂದಿಗೆ ಶನಿವಾರ ತಿರುಮಲ ಅನ್ನಮಯ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ಯಾಮಲಾ ರಾವ್, ಸಾಮಾನ್ಯ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಟಿಟಿಡಿಯ ಎಲ್ಲಾ ವಿಭಾಗಗಳು ಸಮನ್ವಯದಿಂದ ಸೇವೆಗಳನ್ನು ಒದಗಿಸಿವೆ ಎಂದರಲ್ಲದೆ, ಬ್ರಹ್ಮೋತ್ಸವಕ್ಕೆ ಸಂಬಂಧಿಸಿದ ವಿವರಗಳನ್ನು ನೀಡಿದರು.

ತಿರುಮಲದ ವೆಂಕಟೇಶ್ವರ ಸನ್ನಿಧಿಯಲ್ಲಿ ನಡೆದ ಬ್ರಹ್ಮೋತ್ಸವದ ವಿವರಗಳು

  • ಬ್ರಹ್ಮೋತ್ಸವದ ಅಂಗವಾಗಿ ತಿರುಮಲ ಶ್ರೀವಾರಿ ದೇವಸ್ಥಾನಕ್ಕೆ 6 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. 15 ಲಕ್ಷ ಭಕ್ತರು ಶ್ರೀವಾಹನ ಸೇವೆ ವೀಕ್ಷಿಸಿದ್ದಾರೆ
  • ಗರುಡ ಸೇವೆಯ ದಿನ 82,043 ಮಂದಿ ಭಕ್ತರು ಭೇಟಿ ನೀಡಿದ್ದಾರೆ. ಇದೇ ವೇಳೆ ಸುಮಾರು 3.5 ಲಕ್ಷ ಭಕ್ತರು ಗರುಡಸೇವೆಯಲ್ಲಿ ಪಾಲ್ಗೊಂಡಿದ್ದರು
  • 7 ಲಕ್ಷ ಲಡ್ಡು ಬಫರ್ ಸ್ಟಾಕ್ ನಲ್ಲಿತ್ತು. ಒಟ್ಟು 30 ಲಕ್ಷ ಲಡ್ಡಗಳು ಮಾರಾಟವಾಗಿವೆ
  • 9 ದಿನಗಳ ಶ್ರೀವಾರಿ ಬ್ರಹ್ಮೋತ್ಸವದಲ್ಲಿ ಒಟ್ಟು ಹುಂಡಿ ಕಾಣಿಕೆಯಾಗಿ 26 ಕೋಟಿ ರೂಪಾಯಿ ಸಂಗ್ರಹವಾಗಿದೆ
  • ⁠ಬ್ರಹ್ಮೋತ್ಸವದಲ್ಲಿ 475 ಲಕ್ಷ ಗ್ಯಾಲನ್ ನೀರು ಬಳಕೆಯಾಗಿದೆ
  • ಬ್ರಹ್ಮೋತ್ಸವದ 9 ದಿನಗಳಲ್ಲಿ 26 ಲಕ್ಷ ಊಟ ಮತ್ತು ತಿಂಡಿಗಳನ್ನು ನೀಡಲಾಯಿತು.
  • 8.71 ಲಕ್ಷ ಜನರಿಗೆ ಅನ್ನಪ್ರಸಾದ ಮತ್ತು ಉಪಹಾರ, 3.47 ಲಕ್ಷ ಜನರಿಗೆ ಚಹಾ, ಕಾಫಿ, ಹಾಲು, ಬಾದಾಮಿ ಹಾಲು, 4 ಲಕ್ಷ ಮಜ್ಜಿಗೆ ಪ್ಯಾಕೆಟ್‌ಗಳು, 4 ಲಕ್ಷ ಕುಡಿಯುವ ನೀರಿನ ಬಾಟಲಿಗಳು, ಸಂಡಾಸ್ ಮತ್ತು ಬಿಸ್ಕತ್‌ಗಳನ್ನು ತಿಂಡಿಯಾಗಿ ನೀಡಲಾಗಿದೆ
  • 68 ಸಾವಿರಕ್ಕೂ ಹೆಚ್ಚು ಭಕ್ತರು ವೈದ್ಯಕೀಯ ಸೇವೆ ಪಡೆದಿದ್ದಾರೆ
  • 18 ರಾಜ್ಯಗಳ 261 ಕಲಾತಂಡಗಳ 6,884 ಕಲಾವಿದರು ತಮ್ಮ ಕಲಾ ಪ್ರಕಾರಗಳನ್ನು ಹಿಂದೂ ಚಾರಿಟಬಲ್ ಪ್ರಾಜೆಕ್ಟ್‌ಗಳ ಆಶ್ರಯದಲ್ಲಿ ಪ್ರದರ್ಶಿಸಿದ್ದಾರೆ
  • ಬ್ರಹ್ಮೋತ್ಸವದಲ್ಲಿ 40 ಟನ್ ಹೂವುಗಳು, 3.50 ಲಕ್ಷ ಕತ್ತರಿಸಿದ ಹೂವುಗಳು ಮತ್ತು 80 ಸಾವಿರ ಸೀಸನ್ ಹೂವುಗಳನ್ನು ಬಳಸಲಾಗಿದೆ.
  • ಸುಮಾರು 7 ರಾಜ್ಯಗಳ 4,000 ಶ್ರೀವಾರಿ ಸೇವಕರು ಭಕ್ತರಿಗೆ ಸೇವೆ ಸಲ್ಲಿಸಿದ್ದಾರೆ
  • ತಿರುಮಲದಲ್ಲಿ ಭಕ್ತರನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಉಚಿತವಾಗಿ ಸಾಗಿಸಲು 14 ಧರ್ಮ ರಥಗಳನ್ನು ಸ್ಥಾಪಿಸಲಾಗಿತ್ತು
  • 9.53 ಲಕ್ಷ ಜನರು ಎಪಿಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ತಿರುಮಲಕ್ಕೆ ಪ್ರಯಾಣಿಸಿದ್ದಾರೆ.
  • ಗರುಡ ಸೇವೆ ದಿನ ಆರ್‌ಟಿಸಿ ಬಸ್‌ಗಳು ತಿರುಪತಿಯಿಂದ ತಿರುಮಲಕ್ಕೆ 2,764 ಟ್ರಿಪ್‌ಗಳಲ್ಲಿ 97,402 ಭಕ್ತರನ್ನು ಕರೆತಂದಿವೆ. ತಿರುಮಲದಿಂದ ತಿರುಪತಿಗೆ 2,711 ಟ್ರಿಪ್‌ಗಳಲ್ಲಿ 89,181 ಭಕ್ತರು ತಲುಪಿದ್ದಾರೆ.

ಬ್ರಹ್ಮೋತ್ಸವ ಹಿನ್ನೆಲೆಯಲ್ಲಿ ತಿರುಮಲಕ್ಕೆ ಭಕ್ತ ಸಾಗರ ಹರಿದು ಬಂದಿತ್ತು. ಶ್ರೀ ವೆಂಕಟೇಶ್ವರನ ಬ್ರಹ್ಮೋತ್ಸವದ ಧಾರ್ಮಿಕ ಚಟುವಟಿಕೆಗಳನ್ನು ಕಣ್ತುಂಬಿಕೊಂಡಿದ್ದಾರೆ. ಉತ್ಸವ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ವೀಕ್ಷಿಸಿದ್ದಾರೆ. ಸಾಮಾನ್ಯವಾಗಿ ಆಂಧ್ರಪ್ರದೇಶದ ತಿರುಪತಿಯ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ನಿತ್ಯ ಲಕ್ಷಾಂತರ ಮಂದಿ ಭಕ್ತರು ಬರುತ್ತಾರೆ. ಆದರೆ ವಿಶೇಷ ದಿನಗಳು ಇದ್ದಾಗ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ