Bhagavad Gita: ಭಗವಂತನಲ್ಲಿರುವ ಪ್ರತಿಯೊಬ್ಬರೂ ಅವನ ರೂಪದಿಂದಲೇ ಆಕರ್ಷಿತರಾಗುತ್ತಾರೆ; ಗೀತೆಯ ಸಾರಾಂಶ ಹೀಗಿದೆ
Jul 13, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಭಗವಂತನಲ್ಲಿರುವ ಪ್ರತಿಯೊಬ್ಬರೂ ಅವನ ರೂಪದಿಂದಲೇ ಆಕರ್ಷಿತರಾಗುತ್ತಾರೆ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧಾಯದ 50ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 50
ಮಾ ತೇ ವ್ಯಥಾ ಮಾ ಚ ವಿಮೂಢಭಾವೋ
ದೃಷ್ಟ್ವಾ ರೂಪಂ ಘೋರಮೀದೃಙ್ ಮಮೇದಮ್ |
ವ್ಯಪೇತಭೀತಃ ಪ್ರೀತಮನಾಃ ಪುನಸ್ತ್ವಮ್
ತದೇವ ಮೇ ರೂಪಮಿದಂ ಪ್ರಪಶ್ಯ ||50||
ಅನುವಾದ: ಸಂಜಯನು ಧೃತರಾಷ್ಟ್ರನಿಗೆ ಹೇಳಿದನು - ದೇವೋತ್ತಮ ಪರಮ ಪುರುಷನಾದ ಕೃಷ್ಣನು ಅರ್ಜುನನಿಗೆ ಹೀಗೆ ಹೇಳಿ, ತನ್ನ ನಿಜವಾದ ಚತುರ್ಭುಜ ರೂಪವನ್ನು ತೋರಿದನು ಮತ್ತು ಕಟ್ಟಕಡೆಗೆ ತನ್ನ ಎರಡು ಕೈಗಳ ರೂಪವನ್ನು ತೋರಿ ಭಯಗೊಂಡಿದ್ದ ಅರ್ಜುನನಿಗೆ ಧೈರ್ಯವನ್ನು ಕೊಟ್ಟನು.
ತಾಜಾ ಫೋಟೊಗಳು
ಭಾವಾರ್ಥ: ಕೃಷ್ಣನು ವಸುದೇವ-ದೇವಕಿಯರ ಮಗನಾಗಿ ಕಾಣಿಸಿಕೊಂಡಾಗ ಮೊದಲು ನಾಲ್ಕು ಕೈಗಳ ನಾರಾಯಣನಾಗಿ ಕಾಣಿಸಿಕೊಂಡ. ತನ್ನ ತಂದೆ ತಾಯಿಗಳ ಪ್ರಾರ್ಥನೆಯಂತೆ ಸಾಮಾನ್ಯ ಮಗುವಿನ ರೂಪವನ್ನು ತಳೆದ. ಹೀಗೆಯೇ, ಅರ್ಜುನನಿಗೆ ಚತುರ್ಭಜ ರೂಪವನ್ನು ಕಾಣುವ ಆಸಕ್ತಿ ಇರಲಿಲ್ಲ ಎಂದು ಕೃಷ್ಣನಿಗೆ ತಿಳಿದಿತ್ತು. ಆದರೆ ಅರ್ಜುನನು ಚತುರ್ಭುಜ ರೂಪವನ್ನು ಕಾಣಬೇಕೆಂದು ಕೇಳಿಕೊಂಡದ್ದರಿಂದ, ಕೃಷ್ಣನು ಅವನಿಗೆ ಮತ್ತೆ ಈ ರೂಪವನ್ನು ತೋರಿಸಿ ಅನಂತರ ತನ್ನ ಎರಡು ಕೈಗಳ ರೂಪದಲ್ಲಿ ಕಾಣಿಸಿಕೊಂಡ (Bhagavad Gita Updesh in Kannada).
ಸೌಮ್ಯವಪುಃ ಎನ್ನುವ ಮಾತು ಬಹು ಅರ್ಥವತ್ತಾದದ್ದು. ಸೌಮ್ಯವಪುಃ ಎಂದರೆ ಬಹು ಸುಂದರ ರೂಪ. ಇದು ಅತ್ಯಂತ ಮೋಹಕ ರೂಪ ಎಂದು ಪ್ರಸಿದ್ಧ. ಕೃಷ್ಣನಿದ್ದಲ್ಲಿ ಪ್ರತಿಯೊಬ್ಬರೂ ಅವನ ರೂಪದಿಂದಲೇ ಆಕರ್ಷಿತರಾಗುತ್ತಿದ್ದರು. ಕೃಷ್ಣನು ವಿಶ್ವದ ಸೂತ್ರಧಾರಿಯಾದದ್ದರಿಂದ ಆತನು ತನ್ನ ಭಕ್ತನಾದ ಅರ್ಜುನನ ಭಯವನ್ನು ತೊಡೆದು ಹಾಕಿದನು ಮತ್ತು ಅವನಿಗೆ ಮತ್ತೆ ಕೃಷ್ಣನ ಸುಂದರ ರೂಪವನ್ನೂ ತೋರಿದನು. ಬ್ರಹ್ಮಸಂಹಿತೆಯಲ್ಲಿ - ಪ್ರೇಮಾಂಜನಚ್ಛುರಿತ ಭಕ್ತಿ ವಿಲೋಚನೇನ - ಯಾರ ಕಣ್ಣುಗಳಿಗೆ ಪ್ರೇಮದ ಅಂಜನವನ್ನು ಹಚ್ಚಿದೆಯೋ, ಅವರು ಮಾತ್ರ ಶ್ರೀಕೃಷ್ಣನ ಸುಂದರ ರೂಪವನ್ನು ಕಾಣಬಲ್ಲರು ಎಂದು ಹೇಳಿದೆ.