logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ದಿವ್ಯಸೇವೆಯಲ್ಲಿ ನಿರತರಾದವರು ದಾನ ಪಡೆಯಲು ಯೋಗ್ಯರು; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನ ದಿವ್ಯಸೇವೆಯಲ್ಲಿ ನಿರತರಾದವರು ದಾನ ಪಡೆಯಲು ಯೋಗ್ಯರು; ಗೀತೆಯ ಸಾರಾಂಶ ಹೀಗಿದೆ

Raghavendra M Y HT Kannada

Jul 11, 2024 06:48 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಭಗವಂತನ ದಿವ್ಯಸೇವೆಯಲ್ಲಿ ನಿರತರಾದವರು ದಾನ ಪಡೆಯಲು ಯೋಗ್ಯರು ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 48ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ತಿಳಿಯಿರಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 48

ನ ವೇದಯಜ್ಞಾಧ್ಯರ್ಯನೈರ್ನ ದಾನೈರ್

ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ |

ಏವಂರೂಪಃ ಶಕ್ಯ ಅಹಂ ನೃಲೋಕೇ

ದ್ರಷ್ಟುಂ ತ್ವದನ್ಯೇನ ಕುರುಪ್ರವೀರ ||48||

ಭಗವದ್ಗೀತೆಯ 11 ಅಧ್ಯಾಯದ 48ನೇ ಶ್ಲೋಕದ ಮುಂದುವರಿದ ಭಾಗವನ್ನು ಇಲ್ಲಿ ನೀಡಲಾಗಿದೆ. ಈ ಶ್ಲೋಕದಲ್ಲಿ ಹಲವು ಮಹತ್ವದ ಪದಗಳಿವೆ. ಉದಾಹರಣೆಗೆ ವೇದ ಯಜ್ಞಾಧ್ಯಯನೈಃ ಇದು ವೈದಿಕ ಸಾಹಿತ್ಯದ ಮತ್ತು ಯಜ್ಞಗಳ ನಿಯಮಗಳ ವಸ್ತುವಿನ ಅಧ್ಯಯನಕ್ಕೆ ಸಂಬಂಧಿಸಿದ್ದು. ವೇದ ಎನ್ನುವ ಶಬ್ದವು ನಾಲ್ಕು ವೇದಗಳು (ಋಗ್, ಯಜುರ್, ಸಾಮ ಮತ್ತು ಅಥರ್ವ) ಮತ್ತು 18 ಪುರಾಣಗಳು, ಉಪನಿಷತ್ತುಗಳು ಮತ್ತು ವೇದಾಂತ ಸೂತ್ರ ಇಂತಹ ಎಲ್ಲ ಬಗೆಯ ವೇದ ಸಾಹಿತ್ಯಕ್ಕೆ ಸಂಬಂಧಿಸಿದ್ದು. ಇವನ್ನು ಮನೆಯಲ್ಲಾಗಲೀ ಬೇರೆಲ್ಲಾದರೂ ಆಗಲಿ ಅಧ್ಯಯನ ಮಾಡಬಹುದು. ಹಾಗೆಯೇ ಯಜ್ಞವಿಧಾನವನ್ನು ಅಧ್ಯಯನ ಮಾಡಲು ಕಲ್ಪಸೂತ್ರಗಳು ಮತ್ತು ಮೀಮಾಂಸ ಸೂತ್ರಗಳಂತಹ ಸೂತ್ರಗಳಿವೆ (Bhagavad Gita Updesh in Kannada).

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ದಾನೈಃ ಶಬ್ದವು ಯೋಗ್ ಪಾತ್ರನಿಗೆ ಕೊಟ್ಟ ದಾನವನ್ನು ಸೂಚಿಸುತ್ತದೆ. ಬ್ರಾಹ್ಮಣರಂತೆ ಮತ್ತು ವೈಷ್ಣವರಂತೆ ಪ್ರಭುವಿನ ಪ್ರೀತಿಯ ದಿವ್ಯಸೇವೆಯಲ್ಲಿ ನಿರತರಾದವರು ದಾನ ಪಡೆಯಲು ಯೋಗ್ಯರು. ಹಾಗೆಯೇ ಪುಣ್ಯಕಾರ್ಯಗಳು ಎನ್ನುವುದು ಅಗ್ನಿಹೋತ್ರ ಮತ್ತು ಬೇರೆ ಬೇರೆ ಜಾತಿಗಳವರಿಗೆ ವಿಧಿಸಿರುವ ಕರ್ತವ್ಯಗಳಿಗೆ ಸಂಬಂಧಿಸಿದ್ದು. ದೇಹದಂಡನೆಯನ್ನು ಸ್ವ ಇಚ್ಛೆಯಿಂದ ಒಪ್ಪಿಕೊಳ್ಳುವುದು ತಪಸ್ಯ. ಒಬ್ಬ ಮನುಷ್ಯನು ಇವೆಲ್ಲವನ್ನೂ ಮಾಡಬಹುದು. ದೇಹದಂಡನೆಯನ್ನು ಮಾಡಿಕೊಳ್ಳಬಹುದು. ದಾನವನ್ನು ಕೊಡಬಹುದು.

ವೇದಗಳನ್ನು ಅಭ್ಯಾಸಮಾಡಬಹುದು ಇತ್ಯಾದಿ. ಆದರೆ ಆತನು ಅರ್ಜುನನಂತೆ ಭಕ್ತನಲ್ಲದಿದ್ದರೆ ಆ ವಿಶ್ವರೂಪವನ್ನು ಕಾಣಲು ಸಾಧ್ಯವಿಲ್ಲ. ನಿರಾಕಾರವಾದಿಗಳು ತಾವು ಪ್ರಭುವಿನ ವಿಶ್ವರೂಪವನ್ನು ಕಾಣುತ್ತಿದ್ದೇವೆ ಎಂದು ಭಾವಿಸುತ್ತಾರೆ. ನಿರಾಕಾರವಾದಿಗಳು ಭಕ್ತರಲ್ಲ ಎಂದು ಭಗವದ್ಗೀತೆಯಿಂದ ತಿಳಿಯುತ್ತೇವೆ. ಆದುದರಿಂದ ಪ್ರಭುವಿನ ವಿಶ್ವರೂಪವನ್ನು ನೋಡಲು ಅವರಿಗೆ ಸಾಧ್ಯವಿಲ್ಲ.

ಅವತಾರಗಳನ್ನು ಸೃಷ್ಟಿಮಾಡುವ ಹಲವು ಜನರಿದ್ದಾರೆ. ಸಾಮಾನ್ಯ ಮನುಷ್ಯನೊಬ್ಬನು ಒಂದು ಅವತಾರ ಎಂದು ಅವರ ಸುಳ್ಳು ಹೇಳಿಕೆ. ಇದೆಲ್ಲ ಮೂರ್ಖತನ. ನಾವು ಭಗವದ್ಗೀತೆಯ ತತ್ವಗಳನ್ನು ಅನುಸರಿಸಬೇಕು. ಇಲ್ಲವಾದರೆ ಪರಿಪೂರ್ಣ ಅಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಸಾಧ್ಯವೇ ಇಲ್ಲ. ಭಗವದ್ಗೀತೆಯನ್ನು ಭಗವದ್ವಿಜ್ಞಾನದ ಪೂರ್ವಭಾವಿ ಅಧ್ಯಯನವೆಂದು ಪರಿಗಣಿಸುತ್ತಾರೆ. ಅದು ಎಷ್ಟು ಪರಿಪೂರ್ಣವಾಗಿದೆ ಎಂದರೆ ಮನುಷ್ಯನು ಪ್ರತಿಯೊಂದನ್ನೂ ಅರ್ಥಮಾಡಿಕೊಳ್ಳುವ ವಿವೇಚನಾಶಕ್ತಿಯನ್ನು ಕೊಡುತ್ತದೆ.

ಹುಸಿ ಅವತಾರದ ಹಿಂಬಾಲಕರು ತಾವು ಭಗವಂತನ ದಿವ್ಯ ಅವತಾರವನ್ನು, ವಿಶ್ವರೂಪವನ್ನು ಕಂಡಿದ್ದೇವೆ ಎಂದು ಹೇಳಿಕೊಳ್ಳಬಹುದು. ಆದರೆ ಇದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ಕೃಷ್ಣನ ಭಕ್ತನಾಗದಿದ್ದರೆ ಭಗವಂತನ ವಿಶ್ವರೂಪವನ್ನು ಕಾಣಲು ಸಾಧ್ಯವಿಲ್ಲ ಎಂದು ಇಲ್ಲಿ ಹೇಳಿದೆ. ಆದುದರಿಂದ ಮೊಟ್ಟಮೊದಲು ಮನುಷ್ಯನು ಕೃಷ್ಣನ ಪರಿಶುದ್ಧ ಭಕ್ತನಾಗಬೇಕು. ಅನಂತರ ಅವನು ತಾನು ಕಂಡ ವಿಶ್ವರೂಪವನ್ನು ತೋರಿಸಬಲ್ಲೆ ಎಂದು ಹೇಳಿಕೊಳ್ಳಬಹುದು. ಕೃಷ್ಣ ಭಕ್ತನು ಹುಸಿ ಅವತಾರಗಳನ್ನಾಗಲಿ, ಹುಸಿ ಅವತಾರಗಳ ಹಿಂಬಾಲಕರನ್ನಾಗಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ