ಭಗವದ್ಗೀತೆ: ಕಾಮಕ್ಕೆ ತೃಪ್ತಿ ದೊರೆಯದಿದ್ದಾಗ ಅದು ಕ್ರೋಧವಾಗುತ್ತದೆ; ಗೀತೆಯ ಸಾರಾಂಶ ಹೀಗಿದೆ
Dec 22, 2023 05:58 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಕಾಮಕ್ಕೆ ತೃಪ್ತಿ ದೊರೆಯದಿದ್ದಾಗ ಅದು ಕ್ರೋಧವಾಗುತ್ತದೆ ಎಂಬ ಗೀತೆಯಲ್ಲಿ ಅರ್ಥ ಇಲ್ಲಿದೆ.
ಕಾಮ ಏಷ ಕ್ರೋಧ ಏಷ ರಜೋಗುಣ ಸಮುದ್ಭವಃ |
ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್ ||37||
ದೇವೋತ್ತಮ ಪರಮ ಪುರುಷನು ಹೇಳಿದನು - ಅರ್ಜುನಾ, ರಜೋಗುಣದ ಸಂಪರ್ಕದಿಂದ ಹುಟ್ಟಿ, ಅನಂತರ ಕ್ರೋಧವಾಗಿ ಮಾರ್ಪಡುವ ಕಾಮವೇ ಇದಕ್ಕೆ ಕಾರಣವಾಗುತ್ತದೆ. ಇದು ಎಲ್ಲವನ್ನೂ ನುಂಗಿಹಾಕುವ ಈ ಜಗತ್ತಿನ ಪಾಪಪೂರಿತ ಶತ್ರು.
ತಾಜಾ ಫೋಟೊಗಳು
ಜೀವಿಗೆ ಐಹಿಕ ಸೃಷ್ಟಿಯೊಡನೆ ಸಂಬಂಧ ಬಂದಾಗ, ರಜೋಗುಣದ ಸಹವಾಸದಿಂದ, ಕೃಷ್ಣನಲ್ಲಿ ಅವನ ನಿತ್ಯಪ್ರೇಮವು ಕಾಮವಾಗಿ ಮಾರ್ಪಡುತ್ತದೆ. ಇದನ್ನೇ ಬೇರೆ ಮಾತುಗಳಲ್ಲಿ ಹೇಳವುದಾದರೆ ಹುಳಿ ಹುಣಿಸೇಹಣ್ಣಿನ ಸಂಪರ್ಕದಿಂದ ಹಾಲು ಮೊಸರಾಗುವಂತೆ ಭಗವಂತನ ಪ್ರೇಮದ ಅರಿವು ಕಾಮವಾಗಿ ಮಾರ್ಪಡುತ್ತದೆ. ಕಾಮಕ್ಕೆ ತೃಪ್ತಿ ದೊರೆಯದಿದ್ದಾಗ ಅದು ಕ್ರೋಧವಾಗುತ್ತದೆ.
ಕ್ರೋಧವು ಮಾಯೆಯಾಗಿ ಪರಿವರ್ತನೆಯಾಗುತ್ತದೆ. ಮಾಯೆಯಿಂದ ಐಹಿಕ ಅಸ್ತಿತ್ವವು ಮುಂದುವರಿಯುತ್ತದೆ. ಆದುದರಿಂದ ಕಾಮವು ಮನುಷ್ಯನ ಅತ್ಯಂತ ದೊಡ್ಡ ಶತ್ರು. ಶುದ್ಧವಾದ ಜೀವಿಯು ಐಹಿಕ ಜಗತ್ತಿನ ಬಲೆಯಲ್ಲಿಯೇ ಉಳಿದುಕೊಳ್ಳುವಂತೆ ಪ್ರೇರೇಪಿಸುವುದು ಕಾಮವೇ. ಕೋಪವು ತಮೋಗುಣದ ಅಭಿವ್ಯಕ್ತಿ. ಈ ಗುಣಗಳು ಕ್ರೋಧ ಮತ್ತು ಇದಕ್ಕೆ ಸಂಬಂಧಿಸಿದ ಇತರ ಫಲಗಳಾಗಿ ಕಾಣಿಸಿಕೊಳ್ಳುತ್ತವೆ. ರಜೋಗುಣವು ತಮೋಗುಣವಾಗಿ ಕೀಳುಮಟ್ಟಕ್ಕೆ ಇಳಿಯದೆ, ಬದುಕಿನ ಮತ್ತು ಕೆಲಸ ಮಾಡುವ ನಿಯತ ರೀತಿಯಿಂದ ಸತ್ವಗುಣಕ್ಕೆ ಏರಿದರೆ ಮನುಷ್ಯನು ಅಧಃಪತನದಿಂದ ಆಧ್ಯಾತ್ಮಿಕ ಆಸಕ್ತಿಯ ಮೂಲಕ ಉದ್ದಾರವಾಗಬಹುದು.
ದೇವೋತ್ತಮ ಪರಮ ಪುರುಷನು ಸದಾ ಬೆಳೆಯುತ್ತಿರುವ ತನ್ನ ದಿವ್ಯಾನಂದಕ್ಕಾಗಿ ತನ್ನನ್ನು ಅನೇಕವಾಗಿ ವಿಸ್ತರಿಸಿಕೊಂಡ. ಜೀವಿಗಳು ಈ ದಿವ್ಯಾನಂದದ ವಿಭಿನ್ನ ಅಂಶಗಳು. ಅವಕ್ಕೆ ಸ್ವಲ್ಪಮಟ್ಟಿನ ಸ್ವಾತಂತ್ರ್ಯವಿದೆ. ಆದರೆ ಈ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡಾಗ ಸೇವಾಭಾವವು ಇಂದ್ರಿಯಭೋಗದ ಪ್ರವೃತ್ತಿಯಾಗಿ ಪರಿವರ್ತನೆಯಾಗುತ್ತದೆ. ಆಗ ಅವರು ಕಾಮವಶರಾಗುತ್ತಾರೆ. ಬದ್ಧಾತ್ಮಗಳು ತಮ್ಮ ಈ ಕಾಮಪ್ರವೃತ್ತಿಗಳನ್ನು ಪೂರೈಸಿಕೂಳ್ಳಲೆಂದೇ ಭಗವಂತನು ಐಹಿಕ ಜಗತ್ತನ್ನು ಸೃಷ್ಟಿಸಿದ್ದಾನೆ. ದೀರ್ಘಕಾಲದ ಕಾಮಪೂರಿತ ಚಟುವಟಿಕೆಗಳಿಂದ ಜೀವಿಗಳು ದಿಗ್ಭ್ರಮೆಗೊಂಡಾಗ ಅವು ತಮ್ಮ ನಿಜವಾದ ಸ್ಥಾನವನ್ನು ಕುರಿತು ಅನ್ವೇಷಿಸಲು ಪ್ರಾರಂಭಿಸುತ್ತವೆ.
ಈ ಅನ್ವೇಷಣೆಯೇ ವೇದಾಂತಸೂತ್ರಗಳ ಪ್ರಾರಂಭ. ಅಲ್ಲಿ ಅಥಾತೋ ಬ್ರಹ್ಮಜಿಜ್ಞಾಸಾ, ಅನುಷ್ಯನು ಪರಾತ್ಪರನ್ನು ಕುರಿತು ಜಿಜ್ಞಾಸೆಯನ್ನು ಮಾಡಬೇಕು ಎಂದು ಹೇಳಿದೆ. ಶ್ರೀಮದ್ಭಾಗವತದಲ್ಲಿ ಪರಾತ್ಪರವನ್ನು ಜನ್ಮಾದೃಸ್ಯ ಯತೋನ್ವಯಾತ್ ಇತರತಶ್ಚ ಅಥವಾ ಎಲ್ಲದರ ಮೂಲವೂ ಪರಬ್ರಹ್ಮ ಎಂದು ವಿವರಿಸಿದರು. ಆದುದರಿಂದ ಕಾಮದ ಮೂಲವೂ ಪರಾತ್ಪರವೇ. ಆದುದರಿಂದ ಕಾಮವನ್ನು ಪರಾತ್ಪರದ ಪ್ರೇಮವನ್ನಾಗಿ ಪರಿವರ್ತಿಸಿದರೆ, ಅಥವಾ ಕೃಷ್ಣಪ್ರಜ್ಞೆಯಾಗಿ-ಬೇರೆ ಮಾತುಗಳಲ್ಲಿ ಹೇಳುವುದಾದರೆ, ಎಲ್ಲವನ್ನೂ ಕೃಷ್ಣನಿಗಾಗಿ ಬಯಸುವುದನ್ನಾಗಿ ಪರಿವರ್ತಿಸಿದರೆ ಕಾಮವನ್ನೂ ಕ್ರೋಧವನ್ನಾಗಿ ಅಧ್ಯಾತ್ಮವಾಗಿ ಪರಿವರ್ತಿಸಬಹುದು.
ಶ್ರೀರಾಮನ ಮಹಾಭಕ್ತನಾದ ಹನುಮಂತನು ರಾವಣನ ಸ್ವರ್ಣನಗರವನ್ನು ಸುಟ್ಟು ತನ್ನ ಕೋಪವನ್ನು ತೀರಿಸಿಕೊಂಡನು. ಆದರೆ ಹೀಗೆ ಮಾಡಿ ಆತನು ಭಗವಂತನ ಅತ್ಯಂತ ಶ್ರೇಷ್ಠ ಭಕ್ತನಾದನು. ಇಲ್ಲಿ ಭಗವದ್ಗೀತೆಯಲ್ಲಿ ಸಹ ಭಗವಂತನ ತೃಪ್ತಿಗಾಗಿ ಅರ್ಜುನನು ತನ್ನ ಶತ್ರುಗಳ ಮೇಲೆ ತನ್ನ ಕೋಪವನ್ನು ಪ್ರಯೋಗಿಸುವಂತೆ ಭಗವಂತನು ಅವನನ್ನು ಶತ್ರುಗಳ ಮೇಲೆ ತನ್ನ ಕೋಪವನ್ನು ಪ್ರಯೋಗಿಸುವಂತೆ ಭಗವಂತನು ಅವನನ್ನ ಪ್ರೇರೇಪಿಸುತ್ತಾನೆ. ಆದುದರಿಂದ ಕಾಮ ಕ್ರೋಧಗಳನ್ನು ಕೃಷ್ಣಪ್ರಜ್ಞೆಯಲ್ಲಿ ಬಳಸಿಕೊಂಡಾಗ ಅವು ನಮ್ಮ ಶತ್ರುಗಳಾಗದೆ ಮಿತ್ರರಾಗುತ್ತವೆ.