ಭಗವದ್ಗೀತೆ: ಕಠಿಣವಾದರೂ ಮನಸ್ಸು, ಇಂದ್ರಿಯಗಳನ್ನ ನಿಯಂತ್ರಿಸಿದರೆ ಸಾಧನೆ ಸುಲಭ; ಗೀತೆಯಲ್ಲಿನ ಅರ್ಥ ತಿಳಿಯಿರಿ
Nov 22, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆ. ಮನಸ್ಸು, ಇಂದ್ರಿಯಗಳನ್ನ ನಿಯಂತ್ರಿಸಿದರೆ ಸಾಧನೆ ಸುಲಭ ಎಂಬ ಗೀತೆಯಲ್ಲಿ ಅರ್ಥ ಹೀಗಿದೆ.
ಯತತೋ ಹ್ಯಪಿ ಕೌನ್ತೇಯ ಪುರುಷಸ್ಯ ವಿಷಶ್ಚಿತಃ |
ಇನ್ದ್ರಿಯಾಣಿ ಪ್ರಮಾಥೀನಿ ಹರನ್ತಿ ಪ್ರಸಭಂ ಮನಃ ||60||
ಅರ್ಜುನ, ಇಂದ್ರಿಯಗಳು ಎಷ್ಟು ಬಲಶಾಲಿ ಮತ್ತು ಆವೇಶದಿಂದ ಕೆಲಸ ಮರಾಡುತ್ತವೆ ಎಂದರೆ ಅವುಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ವಿವೇಚನಾವಂತನ ಮನಸ್ಸನ್ನು ಸೆಳೆದುಕೊಂಡು ಹೋಗಿಬಿಡುತ್ತವೆ.
ತಾಜಾ ಫೋಟೊಗಳು
ಇಂದ್ರಿಯಗಳನ್ನು ಗೆಲ್ಲಲು ಪ್ರಯತ್ನಿಸುವ ಎಷ್ಟೋ ಮಂದಿ ವಿದ್ವಾಂಸರಾದ ಸಾಧುಗಳು, ತತ್ವಜ್ಞಾನಿಗಳು ಮತ್ತು ಆಧ್ಯಾತ್ಮಿಕವಾದಿಗಳು ಇದ್ದಾರೆ. ಆದರೆ ಅವರು ಎಷ್ಟೇ ಪ್ರಯತ್ನಪಟ್ಟರೂ ಅವರಲ್ಲಿ ಅತ್ಯಂತ ಶ್ರೇಷ್ಠರಾದವರೂ ಸಹ ಕ್ಷೋಭೆಗೊಂಡ ಮನಸ್ಸಿನ ಕಾರಣದಿಂದ ಐಹಿಕ ಇಂದ್ರಿಯಭೋಗಕ್ಕೆ ಒಮ್ಮೆಮ್ಮೆ ಬಲಿಯಾಗುತ್ತಾರೆ.
ಮಹರ್ಷಿಯೂ ಪರಿಪೂರ್ಣ ಯೋಗಿಯೂ ಆಗಿದ್ದ ವಿಶ್ವಾಮಿತ್ರರು ಕಠಿಣ ತಪ್ಪಿಸ್ಸಿನಿಂದ ಮತ್ತು ಯೋಗಾಭ್ಯಾಸದಿಂದ ಇಂದ್ರಿಯನಿಗ್ರಹಕ್ಕೆ ಪ್ರಪಂಚದ ಚರಿತ್ರೆಯಲ್ಲಿ ಇಂತಹ ಎಷ್ಟೋ ನಿರ್ದರ್ಶನಗಳಿವೆ. ಆದ್ದರಿಂದ ಪೂರ್ಣ ಕೃಷ್ಣಪ್ರಜ್ಞೆಯಿಲ್ಲದೆ ಮನಸ್ಸನ್ನೂ ಇಂದ್ರಿಯಗಳನ್ನೂ ನಿಯಂತ್ರಿಸುವುದು ಬಹುಕಷ್ಟ. ಮನಸ್ಸನ್ನು ಕೃಷ್ಣನಲ್ಲಿ ನಿಲ್ಲಿಸದೆ ಇಂತಹ ಐಹಿಕ ಚಟುವಟಿಕೆಗಳನ್ನು ಕೊನೆಗಾಣಿಸಲು ಸಾಧ್ಯವಿಲ್ಲ. ಬಹುದೊಡ್ಡ ಸಂತರೂ ಭಕ್ತರೂ ಆದ ಶ್ರೀ ಯಾಮುನಾಚಾರ್ಯರು ಒಂದು ಅನುಭವ ಸತ್ಯವಾದ ಉದಾಹರಣೆಯನ್ನು ಕೊಡುತ್ತಾರೆ.
ಯದವಧಿ ಮಮ ಚೇತಃ ಕೃಷ್ಣಪದಾರವಿನ್ದೇ
ನವನವರಸಧಾಮನ್ಯುದ್ಯತಂ ರನ್ತುಮಾಸೀತ್ |
ತದವಧಿ ಬತ ನಾರೀಸನ್ಗ ಮೇ ಸ್ಮರ್ಯಮಾನೇ
ಭವತಿ ಮುಖವಿಕಾರಃ ಸುಷ್ಠು ನಿಷ್ಠೀವನಂ ಚ ||
ನಾನು ಶ್ರೀಕೃಷ್ಣನ ಪಾದಪದ್ಮಗಳ ಸೇವೆಯಲ್ಲಿ ನನ್ನ ಮನಸ್ಸನ್ನು ತೊಡಗಿಸಿ ಸದಾ ಹೊಸತಾದ ದಿವ್ಯ ಮನಸ್ಥಿತಿಯನ್ನು ಸವಿಯಲು ಪ್ರಾರಂಭಿಸಿದ ಮೇಲೆ, ಸ್ತ್ರೀ ಸಂಗಮವನ್ನು ಕುರಿತು ಯೋಚಿಸಿದಾಗಲೆಲ್ಲ ಅದಕ್ಕೆ ವಿಮುಖನಾಗುತ್ತೇನೆ ಮತ್ತು ಆ ಆಲೋಚನೆಗೆ ಉಗುಳುತ್ತೇನೆ.
ಕೃಷ್ಣಪ್ರಜ್ಞೆಯು ಆಧ್ಯಾತ್ಮಿಕವಾಗಿ ಎಂತಹ ಸೊಗಸಾದ ಸಂಗತಿಯೆಂದರೆ ತಾನಾಗಿಯೇ ಐಹಿಕ ಸುಖವು ಅಸಹ್ಯವಾಗುತ್ತದೆ. ಇದು ಹಸಿದ ಮನುಷ್ಯನು ಸಾಕಷ್ಟು ಪ್ರಮಾಣದಲ್ಲಿ ಪುಷ್ಟೀಕರವಾದ ಆಹಾರವನ್ನು ತಿಂದು ಹಸಿವನ್ನು ತೃಪ್ತಿಪಡಿಸಿಕೊಂಡಂತೆ. ಮಹಾರಾಜ ಅಂಬರೀಷನ ಮನಸ್ಸು ಕೃಷ್ಣಪ್ರಜ್ಞೆಯಲ್ಲಿ ನೆಲೆಸಿರುದುದರಿಂದ ಅವನು ಮಹಾಯೋಗಿ ದುರ್ವಾಸ ಮುನಿಯನ್ನು ಸೋಲಿಸಿದ. (ಸ ವೈ ಮನಃ ಕೃಷ್ಣ ಪದಾರವಿಂದಯೋರ್ ವಚಾಂಸಿ ವೈಕುಂಠಗುಣಾನುರ್ವಣನೇ
ರಾಗದ್ವೇಷವಿಮುಕ್ತೈಸ್ತು ವಿಷಯಾನಿನ್ದ್ರಿಯೈಶ್ಚರನ್ |
ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಧಿಗಚ್ಛತಿ ||64||
ಆದರೆ ರಾಗದ್ವೇಷಗಳಿಂದ ಬಿಡುಗಡೆಯಾಗುವ ಸ್ವಾತಂತ್ರ್ಯವನ್ನು ಕ್ರಮಗೊಳಿಸುವ ತತ್ವಗಳ ಮೂಲಕ ತನ್ನ ಇಂದ್ರಿಯಗಳನ್ನು ನಿಯಂತ್ರಿಸಬಲ್ಲನು ಭಗವಂತನ ಪೂರ್ಣ ದಯೆಯನ್ನು ಪಡೆಯಬಲ್ಲ.
ಒಬ್ಬ ಮನುಷ್ಯನು ಯಾವುದಾದರೂ ಕೃತಕ ರೀತಿಗಳಲ್ಲಿ ಹೊರಗಿನಿಂದ ಇಂದ್ರಿಯಗಳನ್ನು ನಿಯಂತ್ರಿಸಬಹುದು. ಆದರೆ ಇಂದ್ರಿಯಗಳು ಭಗವಂತನ ದಿವ್ಯ ಸೇವೆಯಲ್ಲಿ ತೊಡಗಿಲ್ಲದಿದ್ದರೆ ಅವನು ಪತನವಾಗುವ ಸಾಧ್ಯತೆಯಿದೆ ಎಂದು ಆಗಲೇ ವಿವರಿಸಿದೆ. ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿರುವವನು ಭೋಗಾಸಕ್ತಿಯ ಮಟ್ಟದಲ್ಲಿದ್ದಾನೆ. ಎಂದು ಕಂಡರೂ ಅವನಿಗೆ ಕೃಷ್ಣಪ್ರಜ್ಞೆಯಿರುವುದರಿಂದ ಭೋಗಾಸಕ್ತಿ ಇರುವುದಿಲ್ಲ. ಕೃಷ್ಣಪ್ರಜ್ಞೆ ಇರುವ ಮನುಷ್ಯನಿಗೆ ಕೃಷ್ಣನ ತೃಪ್ತಿಯೇ ಮುಖ್ಯ. ಬೇರೇನೂ ಅಲ್ಲ.
ಆದುದರಿಂದ ಅವನು ಎಲ್ಲ ಮೋಹ - ನಿರ್ಮೋಹಗಳನ್ನು ಮೀರಿದವನು. ಕೃಷ್ಣನು ಬಯಸಿದರೆ ಭಕ್ತನು ಸಾಮಾನ್ಯವಾಗಿ ಅಪೇಕ್ಷಣೀಯವಲ್ಲ ಎಂದು ಭಾವಿಸಿದುದನ್ನು ಮಾಡಬಹುದು. ಕೃಷ್ಣನು ಅಪೇಕ್ಷಿಸದಿದ್ದರೆ ಸಾಮಾನ್ಯವಾಗಿ ತನ್ನ ತೃಪ್ತಿಗಾಗಿ ಅವನು ಮಾಡುತ್ತಿದ್ದದನ್ನೂ ಮಾಡಲಾಗದು. ಆದುದರಿಂದ ಏನನ್ನಾದರೂ ಮಾಡುವುದು ಅಥವಾ ಮಾಡದಿರುವುದು ಅವನ ಕೈಯಲ್ಲಿದೆ. ಏಕೆಂದರೆ ಅವನು ಕೃಷ್ಣನ ಆದೇಶಕ್ಕೆ ಅನುಗುಣವಾಗಿಯೇ ಕೆಲಸ ಮಾಡುತ್ತಾನೆ. ಈ ಪ್ರಜ್ಞೆಯು ಭಗವಂತನ ಅನಿಮಿತ್ತ ಕರುಣೆ. ಭಕ್ತನು ಇಂದ್ರಿಯಾಸಕ್ತಿಯನ್ನು ಹೊಂದಿದ್ದರೂ ಈ ಕರುಣೆಯನ್ನು ಪಡೆಯಬಹುದು.