ಭಗವದ್ಗೀತೆ: ಆಧ್ಯಾತ್ಮಿಕ ಸಂತೋಷದ ಜೊತೆಗೆ ಇವುಗಳಿಂದ ದೂರ ಉಳಿಯುವುದೇ ಗೆಲುವಿನ ಗುಟ್ಟು; ಗೀತೆಯಲ್ಲಿನ ಸಾರಾಂಶ ಹೀಗಿದೆ
Nov 23, 2023 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಯಾವ ವಿಷಯಗಳಲ್ಲಿ ಅಂತರ ಕಾಯ್ದುಕೊಂಡರೆ ಗೆದ್ದೇ ಗೆಲ್ಲುತ್ತೇವೆ ಎಂಬ ಗುಟ್ಟಿನ ಬಗ್ಗೆ ಭವದ್ಗೀತೆಯನ ವಿವರಣೆ ಮತ್ತು ಸಂಪೂರ್ಣ ವಿವರ ಇಲ್ಲಿದೆ.
ಧ್ಯಾಯತೋ ವಿಷಯಾನ್ ಪುಂಸಃ ಸನ್ಗಸ್ತೇಷೂಪಜಾಯತೇ |
ಸನ್ಗಾತ್ಸಞ್ಜಯತೇ ಕಾಮಃ ಕಾಮಾತ್ಕ್ರೋಧೋಭಿಜಾಯತೇ ||62||
ಇಂದ್ರಿಯ ವಸ್ತುಗಳನ್ನು ಕುರಿತು ಚಿಂತಿಸುವ ಮನುಷ್ಯನಿಗೆ ಅವುಗಳಲ್ಲಿ ಆಸಕ್ತಿ ಹುಟ್ಟುತ್ತದೆ. ಇಂತಹ ಆಸಕ್ತಿಯಿಂದ ಕಾಮವು ಹುಟ್ಟತ್ತದೆ. ಕಾಮದಿಂದ ಕ್ರೋಧವು ಉದ್ಭವವಾಗುತ್ತದೆ.
ತಾಜಾ ಫೋಟೊಗಳು
ಕೃಷ್ಣಪ್ರಜ್ಞೆಯಿಲ್ಲದವನು ಇಂದ್ರಿಯಗಳ ಸುಖದ ವಸ್ತುಗಳನ್ನು ಕುರಿತು ಯೋಚನೆನ ಮಾಡುವಾಗ ಐಹಿಕ ಬಯಕೆಗಳು ಉಂಟಾಗುತ್ತವೆ. ಇಂದ್ರಿಯಗಳು ವಾಸ್ತವಿಕ ಕಾರ್ಯದಲ್ಲಿ ತೊಡಗಲು ಬಯಸುತ್ತವೆ. ಅವನ್ನು ಭಗವಂತನ ಅಲೌಕಿಕ ಪ್ರೀತಿಯ ಸೇವೆಯಲ್ಲಿ ತೊಡಗಿಸದಿದ್ದರೆ ನಿಶ್ಚಯವಾಗಿಯೂ ಅವು ಪ್ರಾಪಂಚಿಕತೆಯ ಸೇವೆಯಲ್ಲಿ ತೊಡಗಲು ಬಯಸುತ್ತವೆ.
ಸ್ವರ್ಗಲೋಕಗಳಲ್ಲಿರುವ ಇತರ ದೇವತೆಗಳ ಮಾತಿರಲಿ, ಐಹಿಕ ಜಗತ್ತಿನಲ್ಲಿ ಶಿವ ಮತ್ತು ಬ್ರಹ್ಮರು ಸೇರಿದಂತೆ ಪ್ರತಿಯೊಬ್ಬನೂ ಇಂದ್ರಿಯ ವಸ್ತುಗಳ ಪ್ರಭಾವಕ್ಕೆ ಒಳಗಾಗುತ್ತಾರೆ. ಇಹಜೀವನದ ಅಸ್ತಿತ್ವದ ಸಮಸ್ಯೆಯಿಂದ ಪಾರಾಗಲು ಒಂದೇ ಮಾರ್ಗವೆಂದರೆ ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು. ಶಿವನು ಗಾಢವಾದ ಧ್ಯಾನದಲ್ಲಿದ್ದನು. ಆದರೆ ಪಾರ್ವತಿಯ ಇಂದ್ರಿಯ ಸುಖಕ್ಕಾಗಿ ಅವನನ್ನು ಕಾಡಿದಾಗ ಅವನು ಒಪ್ಪಿಕೊಂಡ. ಇದರಿಂದ ಕಾರ್ತಿಕೇಯನ ಜನನವಾಯಿತು.
ಹರಿದಾಸ ಠಾಕೂರರು ತರುಣ ಭಗವದ್ಭಕ್ತರಾಗಿದ್ದಾಗ ಇದೇ ರೀತಿ ಮಾಯಾದೇವಿಯ ಅವತಾರವು ಅವರನ್ನು ಆಕರ್ಷಿಸಲು ಪ್ರಯತ್ನಿಸಿತು. ಆದರೆ ಅವರಿಗೆ ಶ್ರೀಕೃಷ್ಣನಲ್ಲಿ ಪರಿಶುದ್ಧವಾದ ಭಕ್ತಿಯಿಲ್ಲದ್ದುದರಿಂದ ಸುಲಭವಾಗಿ ಈ ಪರೀಕ್ಷೆಯಲ್ಲಿ ಗೆದ್ದರು. ಮೇಲೆ ಹೇಳಿದ ಶ್ರೀಯಾಮುನಾಚಾರ್ಯರ ಶ್ಲೋಕದಲ್ಲಿನ ಉದಾಹರಣೆಯಂತೆ ಪ್ರಾಮಾಣಿಕನಾದ ಭಗವದ್ಭಕ್ತನು ಭಗವಂತನ ಅನುಯಾಯಿಯಾಗಿ ಉತ್ತಮ ಅಭಿರುಚಿಯನ್ನು ಬೆಳೆಸಿಕೊಂಡು ಆಧ್ಯಾತ್ಮಿಕ ಸಂತೋಷವನ್ನು ಬಯಸುತ್ತಾನೆ.
ಎಲ್ಲ ಐಹಿಕ ಇಂದ್ರಿಯ ಸುಖವನ್ನು ದೂರಮಾಡುತ್ತಾನೆ. ಇದೇ ಗೆಲುವಿನ ಗುಟ್ಟು. ಕೃಷ್ಣಪ್ರಜ್ಞೆಯಿಲ್ಲದವನು ಕೃತಕವಾದ ತುಳಿತದಿಂದ ಇಂದ್ರಿಯಗಳನ್ನು ನಿಯಂತ್ರಿಸುವುದರಲ್ಲಿ ಬಹಳ ಶಕ್ತನಾಗಿರಬಹುದು. ಆದರೂ ಅಂತಿಮವಾಗಿ ಅವನು ಸೋಲುತ್ತಾನೆ. ಏಕೆಂದರೆ ಇಂದ್ರಿಯಸುಖದ ಬಹು ಅಲ್ಪ ಯೋಚನೆಯೂ ಅವನಿಗೆ ತನ್ನ ಬಯಕೆಗಳನ್ನು ತೃಪ್ತಿಗೊಳಿಸಿಕೊಳ್ಳುವಂತೆ ಕಲಕಿಬಿಡುತ್ತದೆ.