ಭಗವದ್ಗೀತೆ: ಉತ್ತಮ ಸಮಯಕ್ಕಾಗಿ ಎಂದೂ ಕಾಯಬೇಡಿ, ಕೆಲಸ ಮಾಡಿ; ಶ್ರೀಕೃಷ್ಣನ ಮಾತಿನ ಅರ್ಥ ಹೀಗಿದೆ
Aug 25, 2023 06:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಉತ್ತಮ ಸಮಯಕ್ಕಾಗಿ ಕಾಯಬೇಡಿ ನಿಮ್ಮ ಕೆಲಸವನ್ನು ಮಾಡಿ ಎಂದು ಹೇಳುವ ಶ್ರೀಕೃಷ್ಣನ ಮಾತಿನ ಅರ್ಥ ತಿಳಿಯಿರಿ.
ಭಗವದ್ಗೀತೆಯಲ್ಲಿ (Bhagavadgita) ಶ್ರೀಕೃಷ್ಣ (Lord Krishna) ಹೀಗೆ ಹೇಳುತ್ತಾನೆ. ಕೈಮುಗಿದು ಒಳ್ಳೆಯ ಸಮಯಕ್ಕಾಗಿ ಕಾಯುವುದು ಮೂರ್ಖತನ. ಆ ಸಮಯಕ್ಕಾಗಿ ಕಾಯುವ ಬದಲು ಕೆಲಸ ಮಾಡಿದಾಗ ಮಾತ್ರ ಒಳ್ಳೆಯ ಸಮಯ ಬರುತ್ತದೆ.
ತಾಜಾ ಫೋಟೊಗಳು
ದುರ್ಬಲರು ಮಾತ್ರ ಅದೃಷ್ಟಕ್ಕೆ ವಿಷಯಗಳನ್ನು ಬಿಡುತ್ತಾರೆ
ಹೇಡಿಗಳು ಮತ್ತು ದುರ್ಬಲರು ಮಾತ್ರ ಅದೃಷ್ಟಕ್ಕೆ ವಿಷಯಗಳನ್ನು ಬಿಡುತ್ತಾರೆ. ಬಲವಾದ ಮತ್ತು ಆತ್ಮವಿಶ್ವಾಸ ಹೊಂದಿರುವವರು ಎಂದಿಗೂ ಒಳ್ಳೆಯ ಸಮಯಕ್ಕಾಗಿ ಕಾಯುವುದಾಗಲಿ, ಅದೃಷ್ಟವನ್ನು ಅವಲಂಬಿಸುವುದಾಗಿ ಮಾಡುವುದಿಲ್ಲ.
ಕಷ್ಟಗಳು ಉತ್ತಮ ವ್ಯಕ್ತಿಗಳಿಗೆ ಮಾತ್ರ ಬರುತ್ತವೆ
ಕಷ್ಟಗಳು ಉತ್ತಮ ವ್ಯಕ್ತಿಗಳಿಗೆ ಮಾತ್ರ ಬರುತ್ತವೆ. ಏಕೆಂದರೆ ಉತ್ತಮ ವ್ಯಕ್ತಿಗಳಿಗೆ ಮಾತ್ರ ಕಷ್ಟಗಳನ್ನು ಚೆನ್ನಾಗಿ ಎದುರಿಸುವ ಶಕ್ತಿ ಇರುತ್ತದೆ. ಜೀವನದಲ್ಲಿ ಬರುವ ತೊಂದರೆಗಳಿಗೆ ಎಂದಿಗೂ ಭಯಪಡಬಾರದು ಎಂದು ಶ್ರೀಕೃಷ್ಣ ಹೇಳಿದ್ದಾನೆ.
ಕಳೆದುಕೊಂಡಾಗ ವ್ಯಕ್ತಿ ಅಥವಾ ವಸ್ತುವಿನ ಬೆಲೆ ಗೊತ್ತಾಗುತ್ತೆ
ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಸುಲಭವಾಗಿ ಬರುವ ವಿಷಯಗಳು ಹೆಚ್ಚು ಪ್ರಾಮುಖ್ಯವನ್ನು ಹೊಂದಿರುವುದಿಲ್ಲ. ಆದರೆ ಕಳೆದುಹೋದಾಗ, ವ್ಯಕ್ತಿಯು ಸಮಯ, ವ್ಯಕ್ತಿ ಮತ್ತು ಸಂಬಂಧದ ಮೌಲ್ಯವನ್ನು ಅರಿತುಕೊಳ್ಳುತ್ತಾನೆ.
ದೇಹವು ನಶ್ವರವಾಗಿದೆ. ಆದರೆ ಆತ್ಮವು ಅಮರವಾಗಿದೆ ಎಂದು ಶ್ರೀಕೃಷ್ಣ ಹೇಳುತ್ತಾನೆ. ಈ ಸತ್ಯವನ್ನು ಅರಿತುಕೊಂಡ ನಂತರವೂ ಮನುಷ್ಯನು ತನ್ನ ನಶ್ವರ ದೇಹದ ಬಗ್ಗೆ ಹೆಮ್ಮೆಪಡುತ್ತಾನೆ. ಅದು ನಿಷ್ಪ್ರಯೋಜಕವಾಗಿದೆ. ಮನುಷ್ಯನು ತನ್ನ ದೇಹದ ಬಗ್ಗೆ ಹೆಮ್ಮೆಪಡದೆ ಸತ್ಯವನ್ನು ಒಪ್ಪಿಕೊಳ್ಳಬೇಕು.
ಮಹಾಭಾರತದ ಯುದ್ಧದ ವೇಳೆ ಅರ್ಜನನಿಗೆ ಶ್ರೀಕೃಷ್ಣನ ಉಪದೇಶ
ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.
ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಡುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.
ಭಗವದ್ಗೀತೆಯಲ್ಲಿ 18 ಅಧ್ಯಾಯಗಳು, 720 ಶ್ಲೋಕಗಳನ್ನು ಹೇಳಲಾಗಿದೆ. ಇದರಲ್ಲಿನ ಧರ್ಮೋಪದೇಶಗಳು ಮನುಷ್ಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಇದರಲ್ಲಿನ ಅಂಶಗಳನ್ನು ಜೀವನದಲ್ಲಿ ಅವಳಡಿಸಿಕೊಂಡಾಗ ಶಾಂತಿ, ನೆಮ್ಮದಿ ಹಾಗೂ ಅನ್ಯೋನ್ಯವಾಗಿ ಬಾಳಿ ಬದುಕಬಹುದಾಗಿದೆ.