logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಭಗವಂತನಿಗೆ ನಮ್ಮ ಕಲ್ಪನೆಗೇ ನಿಲುಕದ ಅಸಂಖ್ಯಾತ ಶಕ್ತಿಗಳಿವೆ; ಗೀತೆಯ ಸಾರಾಂಶದ ಅರ್ಥ ತಿಳಿಯಿರಿ

ಭಗವದ್ಗೀತೆ: ಭಗವಂತನಿಗೆ ನಮ್ಮ ಕಲ್ಪನೆಗೇ ನಿಲುಕದ ಅಸಂಖ್ಯಾತ ಶಕ್ತಿಗಳಿವೆ; ಗೀತೆಯ ಸಾರಾಂಶದ ಅರ್ಥ ತಿಳಿಯಿರಿ

Raghavendra M Y HT Kannada

Sep 23, 2023 06:00 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಭಗವಂತನಿಗೆ ನಮ್ಮ ಕಲ್ಪನೆಗೇ ನಿಲುಕದ ಅಸಂಖ್ಯಾತ ಶಕ್ತಿಗಳಿವೆ ಎಂಬ ಗೀತೆಯ ಸಾರವನ್ನು ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಮರಣಕಾಲದಲ್ಲಿ ಪರಮ ಪ್ರಭುವನ್ನು ಕುರಿತು ಚಿಂತಿಸುವ ಮಾತ್ರದಿಂದಲೇ ಆಧ್ಯಾತ್ಮಿಕ ಜಗತ್ತನ್ನು ಪ್ರವೇಶಿಸುವುದು ಸಾಧ್ಯ ಎನ್ನುವ ಸಾಮಾನ್ಯ ತತ್ವವನ್ನೂ ಭಗವದ್ಗೀತೆಯು ವಿವರಿಸುತ್ತದೆ (8.6) -

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಮ್|

ತಂ ತಮೇವೈತಿ ಕೌನ್ತೇಯ ಸದಾ ತದ್ಭಾವಭಾವಿತಃ ||

"ತನ್ನ ಈಗಿನ ದೇಹವನ್ನು ಬಿಡುವಾಗ ಮನುಷ್ಯನು ಯಾವ ಭಾವವನ್ನು ಸ್ಮರಿಸುತ್ತಿರುತ್ತಾನೋ ಆ ಭಾವವನ್ನೇ ಅವನು ಖಂಡಿತವಾಗಿಯೂ ಮುಂದಿನ ಜನ್ಮದಲ್ಲಿ ಪಡೆಯುವನು." ನಾವೀಗ ಮೊದಲು ಅರ್ಥ ಮಾಡಿಕೊಳ್ಳಬೇಕಾದದ್ದು ಭೌತಿಕ ನಿಸರ್ಗವು ಭಗವಂತನ ಶಕ್ತಿಗಳಲ್ಲಿ ಒಂದರ ಅಭಿವ್ಯಕ್ತಿ ಎನ್ನುವುದನ್ನು. ವಿಷ್ಣು ಪುರಾಣದಲ್ಲಿ (6.7.61) ಭಗವಂತನ ಸಂಪೂರ್ಣ ಶಕ್ತಿಗಳನ್ನು ನಿರೂಪಿಸಲಾಗಿದೆ.

ವಿಷ್ಣುಶಕ್ತಿಃ ಪರಾಪ್ರೋಕ್ತಾ ಕ್ಷೇತ್ರಜ್ಞಾಖ್ಯಾ ತಫಾ ಪರಾ|

ಅವಿದ್ಯಾಕರ್ಮಸಂಜ್ಞಾನ್ಯಾ ತೃತೀಯಾ ಶಕ್ತಿರಿಷ್ಯತೇ||

ಭಗವಂತನಿಗೆ, ನಮ್ಮ ಕಲ್ಪನೆಗೇ ನಿಲುಕದ ವಿವಿಧ ಮತ್ತು ಅಸಂಖ್ಯಾತ ಶಕ್ತಿಗಳಿವೆ. ಆದರೆ, ಬಲ್ಲಿದರಾದ ಋಷಿಗಳು ಅಥವಾ ಮುಕ್ತಾತ್ಮರು ಅವುಗಳನ್ನು ಅಧ್ಯಯನ ಮಾಡಿ ಅದನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಎಲ್ಲ ಶಕ್ತಿಗಳೂ ವಿಷ್ಣು ಶಕ್ತಿಗಳು, ಎಂದರೆ ವಿಷ್ಣುವಿನ ಬೇರೆ ಬೇರೆ ಶಕ್ತಿಗಳು. ಮೊದಲನೆಯ ಶಕ್ತಿಯು ಪರಾ ಎಂದರೆ ಆಧ್ಯಾತ್ಮಿಕ. ಆಗಲೇ ವಿವರಿಸಿದಂತೆ ಜೀವಿಗಳು ಸಹ ಉತ್ತಮ ಶಕ್ತಿಗೆ ಸೇರಿದವರು. ಇತರ ಶಕ್ತಿಗಳು ಅಥವಾ ಭೌತಿಕ ಶಕ್ತಿಗಳು ತಾಮಸಗುಣಕ್ಕೆ ಸೇರಿದವು. ಮರಣಕಾಲದಲ್ಲಿ ನಾವು ಈ ಭೌತಿಕ ಜಗತ್ತಿನ ಅಪರಾಶಕ್ತಿಯಲ್ಲಿ ಉಳಿಯಬಹುದು, ಇಲ್ಲವೇ ಈ ಶಕ್ತಿಯನ್ನು ಆಧ್ಯಾತ್ಮಿಕ ಜಗತ್ತಿಗೆ ವರ್ಗಾಯಿಸಬಹುದು. ಆದುದರಿಂದ ಭಗವದ್ಗೀತೆಯಲ್ಲಿ ಹೀಗೆ ಹೇಳಿದೆ (8.6)-

ಯಂ ಯಂ ವಾಪಿ ಸ್ಮರನ್ ಭಾವಂ ತೃಜತ್ಯನ್ತೇ ಕಲೇವರಮ್|

ತಂ ತಮೇವೈತಿ ಕೌನ್ತೇಯ ಸದಾ ತದ್ಭಾವಭಾವಿತಃ||

ತನ್ನ ಈಗಿನ ದೇಹವನ್ನು ಬಿಡುವಾಗ ಮನುಷ್ಯನು ಯಾವ ಭಾವವನ್ನು ಸ್ಮರಿಸುತ್ತಾನೋ ಆ ಭಾವವನ್ನೇ ಅವನು ಖಂಡಿತವಾಗಿಯೂ ಮುಂದಿನ ಜನ್ಮದಲ್ಲಿ ಪಡೆಯುವನು.

ಬದುಕಿನಲ್ಲಿ ಐಹಿಕ ಶಕ್ತಿ ಅಥವಾ ಆಧ್ಯಾತ್ಮಿಕ ಶಕ್ತಿ ಎರಡರಲ್ಲಿ ಒಂದನ್ನು ಕುರಿತು ಯೋಚಿಸುವುದು ನಮ್ಮ ಅಭ್ಯಾಸ. ನಮ್ಮ ಚಿಂತನೆಯನ್ನು ಐಹಿಕ ಶಕ್ತಿಯಿಂದ ಆಧ್ಯಾತ್ಮಿಕ ಶಕ್ತಿಗೆ ಕೊಂಡೊಯ್ಯುವುದು ಹೇಗೆ ಸಾಧ್ಯ? ನಮ್ಮ ಯೋಚನೆಗಳಲ್ಲಿ ಐಹಿಕ ಶಕ್ತಿಯನ್ನು ತುಂಬಿಸುವ ಹಲವಾರು ಬರಹೆಗಳಿವೆ-ವೃತ್ತ ಪತ್ರಿಕೆಗಳು, ನಿಯತಕಾಲಿಕಗಳು, ಕಾದಂಬರಿಗಳು ಇತ್ಯಾದಿ. ಈ ಬರಹೆಗಳಲ್ಲಿ ಮುಳುಗಿರುವ ನಮ್ಮ ಚಿಂತನೆಯನ್ನು ವೈದಿಕ ಬರಹೆಗಳನ್ನು ರಚಿಸಿದ್ದಾರೆ. ಪುರಾಣಗಳು ಕಟ್ಟುಕಥೆಗಳಲ್ಲ ಅವು ಚಾರಿತ್ರಿಕ ದಾಖಲೆಗಳು. ಚೈತನ್ಯ ಚರಿತಾಮೃತದಲ್ಲಿ (ಮಧ್ಯ 20.122) ಈ ಕೆಳಗಿನ ಶ್ಲೋಕವಿದೆ.

ಮಾಯಾ ಮುಗ್ಧ ಜೀವೇರ ನಾಹಿ ಸ್ವತಃ ಕೃಷ್ಣಜ್ಞಾನ|

ಜೀವೇರೇ ಕೃಪಾಯ ಕೈಲಾ ಕೃಷ್ಣ ವೇದ ಪುರಾಣ||

ವಿಸ್ಮೃತಿಗೊಂಡ ಜೀವಿಗಳು ಅಥವಾ ಬದ್ಧ ಆತ್ಮರು ಭಗವಂತನೊಡನೆ ತಮ್ಮ ಸಂಬಂಧವನ್ನು ಮರೆತಿರುತ್ತಾರೆ. ಐಹಿಕ ಚಟುವಟಿಕೆಗಳನ್ನು ಕುರಿತು ಯೋಜನೆ ಮಾಡುವುದರಲ್ಲಿ ತನ್ಮಯರಾಗಿರುತ್ತಾರೆ. ಅವರ ಯೋಚನಾ ಶಕ್ತಿಯನ್ನು ಆಧ್ಯಾತ್ಮಿಕ ಗಗನಕ್ಕೆ ಏರಿಸಲು ಕೃಷ್ಣದ್ವೈಪಾಯನ ವ್ಯಾಸರು ಹಲವಾರು ವೈದಿಕ ಕೃತಿಗಳನ್ನು ಕೊಟ್ಟಿದ್ದಾರೆ.

ಮೊದಲು ಅವರು ವೇದಗಳನ್ನು ನಾಲ್ಕು ಭಾಗ ಮಾಡಿದರು. ಅನಂತರ ಅವುಗಳನ್ನು ಪುರಾಣಗಳಲ್ಲಿ ವಿವರಿಸಿದರು ಮತ್ತು ಅಷ್ಟು ಸಾಮರ್ಥ್ಯವಿಲ್ಲದಿರುವವರಿಗಾಗಿ ಮಹಾಭಾರತವನ್ನು ಬರೆದರು. ಮಹಾಭಾರತದಲ್ಲಿ ಭಗವದ್ಗೀತೆಯನ್ನು ಅಳವಡಿಸಿದರು. ಅನಂತರ ವೈದಿಕ ಸಾಹಿತ್ಯವನ್ನೆಲ್ಲ ವೇದಾಂತ ಸೂತ್ರದಲ್ಲಿ ಸಂಗ್ರಹಿಸಿದರು.

ಮುಂದಿನ ಮಾರ್ಗದರ್ಶನಕ್ಕಾಗಿ ವೇದಾಂತ ಸೂತ್ರಕ್ಕೆ ನಿಜಭಾಷ್ಯ ರೂಪವಾಗಿ ವ್ಯಾಸರು ಶ್ರೀಮದ್ಭಾಗವತವನ್ನು ರಚಿಸಿದರು. ಲೌಕಿಕರು ವೃತ್ತ ಪತ್ರಿಕೆಗಳನ್ನೂ ನಿಯತಕಾಲಿಕೆಗಳನ್ನೂ ಮತ್ತಿತರ ಎಷ್ಟೋ ಲೌಕಿಕ ಬರಹೆಗಳನ್ನೂ ಓದವುದರಲ್ಲಿ ಮನಸ್ಸನ್ನು ತೊಡಗಿಸುವಂತೆ, ನಾವು ವೇದವ್ಯಾಸರು ನಮಗೆ ಕೊಟ್ಟಿರುವ ಈ ಕೃತಿಗಳನ್ನು ಓದಬೇಕು. ಈ ರೀತಿಯಲ್ಲಿ ಮರಣ ಕಾಲದಲ್ಲಿ ಭಗವಂತನನ್ನು ಸ್ಮರಿಸುವುದು ನಮಗೆ ಸಾಧ್ಯವಾಗುತ್ತದೆ.

ಭಗವಂತನು ಸೂಚಿಸಿರುವ ಮಾರ್ಗ ಇದೊಂದೇ. ಇದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿ ಇದರ ಪರಿಣಾಮವನ್ನು ಕುರಿತು ಅವನು ಖಂಡಿತವಾದ ಭರವಸೆಯನ್ನು ಕೊಟ್ಟಿದ್ದಾನೆ. ಕೃಪೆ- ಭಗವದ್ಗೀತೆ ಯಥಾರೂಪ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ