ಭಗವದ್ಗೀತೆ: ಸುಖದ ವಾಸ್ತವವಾದ ನೀರು ಆಧ್ಯಾತ್ಮಿಕ ಜಗತ್ತಿನಲ್ಲಿ ಉಂಟು; ಗೀತೆಯ ಸಾರಾಂಶದ ಅರ್ಥ ತಿಳಿಯಿರಿ
Sep 21, 2023 06:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಸುಖದ ವಾಸ್ತವವಾದ ನೀರು ಆಧ್ಯಾತ್ಮಿಕ ಜಗತ್ತಿನಲ್ಲಿ ಉಂಟು ಎಂಬ ಗೀತೆಯಲ್ಲಿನ ಸಾರಾಂಶ ತಿಳಿಯಿರಿ.
ಭಗವದ್ಗೀತೆಯ ಹೈದಿನೈದನೆಯ ಅಧ್ಯಾಯದಲ್ಲಿ ಐಹಿಕ ಪ್ರಪಂಚದ ನಿಜವಾದ ಚಿತ್ರವನ್ನು ಕೊಟ್ಟಿದೆ. ಅಲ್ಲಿ ಹೀಗೆ ಹೇಳಿದೆ.
ತಾಜಾ ಫೋಟೊಗಳು
ಊರ್ಧ್ವಮೂಮಧಃಶಾಖಮ್ ಅಶ್ವತ್ಥಂ ಪ್ರಾಹುರವ್ಯಯಮ್|
ಛನ್ದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್||
ಮೇಲ್ಭಾಗದಲ್ಲಿ ಬೇರುಗಳೂ ಕೇಳಭಾಗದಲ್ಲಿ ರೆಂಬೆಗಳೂ ಇರುವ ಒಂದು ಮರಕ್ಕೆ ಐಹಿಕ ಜಗತ್ತನ್ನು ಹೋಲಿಸಲಾಗಿದೆ. ಬೇರುಗಳು ಮೇಲಿರುವ ಮರದ ಅನುಭವ ನಮಗೆ. ಒಂದು ನದಿಯ ಅಥವಾ ಜಲಾಶಯದ ದಡದ ಮೇಲೆ ನಿಂತವನು ನೀರಿನಲ್ಲಿ ಪ್ರತಿಬಿಂಬ ಕಾಣುವ ಮರಗಳು ತಲೆಕೆಳಗಾಗಿವೆ ಎಂದು ಕಾಣುತ್ತಾನೆ.
ಕೊಂಬೆಗಳು ಕೆಳಕ್ಕೆ ಹೋಗುತ್ತವೆ ಮತ್ತು ಬೇರುಗಳು ಮೇಲೆ ಹೋಗುತ್ತವೆ. ಇದೇ ರೀತಿಯಲ್ಲಿ ಐಹಿಕ ಪ್ರಪಂಚವು ಆಧ್ಯಾತ್ಮಿಕ ಪ್ರಪಂಚದ ಪ್ರತಿಬಿಂಬ. ಐಹಿಕ ಜಗತ್ತು ವಾಸ್ತವಿಕತೆಯ ಪ್ರತಿಬಿಂಬ ಮಾತ್ರ. ಪ್ರತಿಬಿಂಬದಲ್ಲಿ ವಾಸ್ತವವಾಗಲಿ ಸಾರವಾಗಲಿ ಇಲ್ಲ. ಆದರೆ ಪ್ರತಿಬಿಂಬದಿಂದಾಗಿ ಸಾರ ಎನ್ನುವುದು.
ವಾಸ್ತವತೆ ಎನ್ನುವುದು ಉಂಟು ಎಂದು ನಾವು ಅರ್ಥಮಾಡಿಕೊಳ್ಳಬಹುದು. ಮರಳುಗಾಡಿನಲ್ಲಿ ನೀರಿನಲ್ಲ. ಆದರೆ ಮರೀಚಿಕೆಯು ನೀರು ಎನ್ನುವ ವಸ್ತು ಉಂಟು ಎನ್ನುವುದನ್ನು ಸೂಚಿಸುತ್ತದೆ. ಐಹಿಕ ಜಗತ್ತಿನಲ್ಲಿ ನೀರಿಲ್ಲ, ಸುಖವಿಲ್ಲ. ಆದರೆ ಸುಖದ ವಾಸ್ತವವಾದ ನೀರು ಆಧ್ಯಾತ್ಮಿಕ ಜಗತ್ತಿನಲ್ಲಿ ಉಂಟು.
ನಾವು ಆಧ್ಯಾತ್ಮಿಕ ಜಗತ್ತನ್ನು ಈ ರೀತಿಯಲ್ಲಿ ಸೇರಬಹುದೆಂದು ಭಗವಂತನು ಸೂಚಿಸುತ್ತಾನೆ. (ಗೀತಾ 15.5)
ನಿರ್ಮಾನಮೋಹಾ ಜಿತಸಜ್ಞದೋಷಾ
ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ |
ದ್ವನ್ದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೆ-
ರ್ಗಚ್ಫಂತ್ಯಮೂಢಾಃ ಪದಮವ್ಯಯಂ ತತ್||
ನಿರ್ಮಾನ ಮೋಹಾ ಆದವನು ಪರಮ್ ಅವ್ಯಯಮ್ ಎಂದರೆ ಸನಾತನ ರಾಜ್ಯವನ್ನು ಸೇರಬಲ್ಲ. ಹಾಗೆಂದರೆ ಅರ್ಥವೇನು? ನಮಗೆ ಸ್ಥಾನಗಳ ಹಸೆರುಗಳ ಮೋಹ. ಒಬ್ಬನಿಗೆ ಸರ್ ಎಂದು ಕರೆಸಿಕೊಳ್ಳುವ ಆಸೆ, ಮತ್ತೊಬ್ಬನಿಗೆ ಲಾರ್ಡ್ ಆಗುವ ಆಸೆ. ಮತ್ತೊಬ್ಬನಿಗೆ ಅಧ್ಯಕ್ಷನಾಗುವ, ಶ್ರೀಮಂತನಾಗುವ ಅಥವಾ ರಾಜನಾಗುವ ಇಲ್ಲವೇ ಬೇರೋನೋ ಆಗುವ ಬಯಕೆ. ಈ ಸ್ಥಾನಗಳ ಹೆಸರುಗಳಿಗೆ ಅಂಚಿಕೊಂಡಿರುವಷ್ಟು ಕಾಲವೂ ನಾವು ದೇಹಕ್ಕೆ ಅಂಟಿಕೊಂಡಿರುತ್ತೇವೆ. ಏಕೆಂದರೆ ಈ ಸ್ಥಾನಮಾನಗಳು ದೇಹಕ್ಕೆ ಸೇರಿದವು.
ಆದರೆ ನಾವು ದೇಹಗಳಲ್ಲ. ಇದರ ಅರಿವೇ ಆಧ್ಯಾತ್ಮಿಕ ಅರಿವಿನಲ್ಲಿ ಮೊದಲ ಹೆಜ್ಜೆ. ನಮಗೆ ತ್ರಿವಿಧ ಪ್ರಕೃತಿ ಗುಣಗಳ ಸಂಬಂಧವಿದೆ. ಆದ್ದರಿಂದ ನಾವು ಭಗವಂತನ ಭಕ್ತಿ ಸೇವೆಯ ಮೂಲಕ ನಿರ್ಮಾನ ಮೋಹರಾಗಬೇಕು. ನಾವು ಭಗವಂತನ ಭಕ್ತಿ ಸೇವೆಗೆ ಅಂಟಿಕೊಳ್ಳದಿದ್ದರೆ ತ್ರಿವಿಧ ಪ್ರಕೃತಿ ಗುಣಗಳಿಂದ ದೂರವಾಗಲಾರೆವು. ಸ್ಥಾನಮಾನಗಳಿಗೂ ಮೋಹಗಳಿಗೊ ನಮ್ಮ ಕಾಮ ಮತ್ತು ಅಪೇಕ್ಷೆಗಳೇ ಕಾರಣ.
ಪ್ರಕೃತಿ ಗುಣಗಳ ಮೇಲೆ ಯಜಮಾನಿಕೆಯನ್ನು ಪ್ರದರ್ಶಿಸುವ ಪ್ರವೃತ್ತಿಯನ್ನು ನಾವು ಬಿಟ್ಟುಕೊಡುವವರೆಗೆ ಭಗವದ್ಧಾಮಕ್ಕೆ ಹಿಂದಿರುಗುವ ಸಾಧ್ಯತೆಯೇ ಇಳ್ಲ. ಹುಸಿ ಐಹಿಕ ಭೋಗಗಳ ಆಕರ್ಷಣೆಯಿಂದ ದಿಗ್ಭ್ರಮೆಯಾಗದವನು ಮಾತ್ರ, ಭಗವಂತನ ಸೇವೆಯಲ್ಲಿ ನಿಷ್ಠನಾದವನು ಮಾತ್ರ, ಎಂದೂ ನಾಶವಾಗದ ಆ ಸನಾತನ ರಾಜ್ಯದ ಬಳಿ ಹೋಗಬಲ್ಲ. ಹೀಗೆ ನಿಷ್ಠನಾದವನು ಸುಲಭವಾಗಿ ಪರಂಧಾಮದ ಬಳಿ ಸಾರಬಲ್ಲ.
ಗೀತೆಯಲ್ಲಿ ಬೇರೊಂದು ಕರೆ (8.21) ಹೀಗೆ ಹೇಳಿದೆ-
ಅವ್ಯಕ್ತೋಕ್ಷರ ಇತ್ಯುಕ್ತಸ್ತಮಾಹುಃ ಪರಮಾಂ ಗತಿಮ್ |
ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ ||
ಅವ್ಯಕ್ತ ಎಂದರೆ ವ್ಯಕ್ತವಾಗದಿರುವುದು. ಐಹಿಕ ಜಗತ್ತೆಲ್ಲವೂ ನಮ್ಮ ಮುಂದೆ ವ್ಯಕ್ತವಾಗಿಲ್ಲ. ಇಮ್ಮ ಇಂದ್ರಿಯಗಳು ಎಷ್ಟು ಅಪರಿಪೂರ್ಣ ಎಂದರೆ ಈ ಐಹಿಕ ವಿಶ್ವದ ಎಲ್ಲ ನಕ್ಷತ್ರಗಳನ್ನು ಸಹ ನಾವು ನೋಡಲಾರೆವು. ವೈದಿಕ ಸಾಹಿತ್ಯದಲ್ಲಿ ಎಲ್ಲ ಗ್ರಹಗಳ ವಿಷಯವಾಗಿ ನಮಗೆ ಬಹಳ ಮಾಹಿತಿ ದೊರಕುತ್ತದೆ. ನಾವು ಅದನ್ನೆಲ್ಲ ನಂಬಬಹುದು ಅಥವಾ ನಂಬದಿರಬಹುದು.
ವೈದಿಕ ಸಾಹಿತ್ಯದಲ್ಲಿ, ಮುಖ್ಯವಾಗಿ ಶ್ರೀಮದ್ಭಾಗವದಲ್ಲಿ ಎಲ್ಲ ಮುಖ್ಯ ಗ್ರಹಗಳ ವರ್ಣನೆಯಿದೆ. ಈ ಭೌತಿಕ ಆಕಾಶದಾಚೆ ಇರುವ ಆಧ್ಯಾತ್ಮಿಕ ಜಗತ್ತನ್ನು ಅವ್ಯಕ್ತ, ವ್ಯಕ್ತವಾಗದಿರುವುದು ಎಂದು ವರ್ಣಿಸಿದೆ. ಮನುಷ್ಯನಾದವನು ಆ ಪರಮ ಸಾಮ್ರಾಜ್ಯಕ್ಕಾಗಿ ಹಂಬಲಿಸಬೇಕು. ಏಕೆಂದರೆ ಆ ಸಾಮ್ರಾಜ್ಯವನ್ನು ಸೇರಿದವನು ಈ ಐಹಿಕ ಜಗತ್ತಿಗೆ ಹಿಂದಿರುಗಬೇಕಾಗಿಲ್ಲ.