logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Venus Transit: ಮಕರ ರಾಶಿಯಲ್ಲಿ ಶುಕ್ರ ಸಂಚಾರ; ಸಿಂಹ ರಾಶಿಗೆ ತಾಳ್ಮೆಯಿಂದ ಸುಖ, ಕನ್ಯಾ ರಾಶಿಗೆ ಛಲದಿಂದ ಗೆಲುವು

Venus Transit: ಮಕರ ರಾಶಿಯಲ್ಲಿ ಶುಕ್ರ ಸಂಚಾರ; ಸಿಂಹ ರಾಶಿಗೆ ತಾಳ್ಮೆಯಿಂದ ಸುಖ, ಕನ್ಯಾ ರಾಶಿಗೆ ಛಲದಿಂದ ಗೆಲುವು

Raghavendra M Y HT Kannada

Nov 24, 2024 08:00 AM IST

google News

ಮಕರ ರಾಶಿಯಲ್ಲಿ ಶುಕ್ರನ ಸಂಚಾರವು ಸಿಂಹ ಮತ್ತು ಕನ್ಯಾ ರಾಶಿಯವರಿಗೆ ಏನೆಲ್ಲಾ ಲಾಭಗಳನ್ನು ತಂದಿದೆ ಎಂಬುದನ್ನು ವಿವರಿಸಲಾಗಿದೆ.

    • ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಲೇ ಇರುತ್ತವೆ. ಸದ್ಯ ಶುಕ್ರನು ಮಕರ ರಾಶಿಗೆ ಬರಲಿದ್ದಾನೆ. ಶುಕ್ರನ ಈ ಸಂಕ್ರಮಣವು ಹಲವು ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಸಿಂಹ ಮತ್ತು ಕನ್ಯಾ ರಾಶಿಯವರಿಗೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
ಮಕರ ರಾಶಿಯಲ್ಲಿ ಶುಕ್ರನ ಸಂಚಾರವು ಸಿಂಹ ಮತ್ತು ಕನ್ಯಾ ರಾಶಿಯವರಿಗೆ ಏನೆಲ್ಲಾ ಲಾಭಗಳನ್ನು ತಂದಿದೆ ಎಂಬುದನ್ನು ವಿವರಿಸಲಾಗಿದೆ.
ಮಕರ ರಾಶಿಯಲ್ಲಿ ಶುಕ್ರನ ಸಂಚಾರವು ಸಿಂಹ ಮತ್ತು ಕನ್ಯಾ ರಾಶಿಯವರಿಗೆ ಏನೆಲ್ಲಾ ಲಾಭಗಳನ್ನು ತಂದಿದೆ ಎಂಬುದನ್ನು ವಿವರಿಸಲಾಗಿದೆ.

ಶುಕ್ರನು ಮಕರ ರಾಶಿಯಲ್ಲಿ ಡಿಸೆಂಬರ್ 2 ರಿಂದ ಡಿಸೆಂಬರ್ ತಿಂಗಳ 28 ರವರೆಗು ಸಂಚರಿಸುತ್ತಾನೆ. ಈ ಸಮಯದಲ್ಲಿ ಪ್ರತಿಯೊಂದು ರಾಶಿಯವರಿಗೂ ಉತ್ತಮ ಪ್ರಯೋಜನಗಳಿವೆ ಪ್ರಮುಖವಾಗಿ ಸಿಂಹ ಮತ್ತು ಕನ್ಯಾ ರಾಶಿಯವರು ಏನೆಲ್ಲಾ ಶುಫಫಲಗಳನ್ನು ಹೊಂದಲಿದ್ದಾನೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಸಿಂಹ ರಾಶಿ

ಸುಖ ಸಂತೋಷಗಳಿಂದ ಜೀವನವನ್ನು ನಡೆಸುವಿರಿ. ಸಾಮಾನ್ಯವಾಗಿ ಕೋಪದಿಂದ ವರ್ತಿಸುವ ಇವರು ತಾಳ್ಮೆಯ ಪ್ರತಿರೂಪವಾಗಿರುವಿರಿ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದು ನೆಮ್ಮದಿಯ ವಾತಾವರಣವನ್ನು ಸೃಷ್ಟಿಸುವಿರಿ. ನಿಮ್ಮ ಬಾಳ ಸಂಗಾತಿಯು ದುಡುಕಿನಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ವಿವಾದಗಳಿಗೆ ಸಿಲುಕದೆ ಜೀವನ ನಡೆಸುವ ಬುದ್ಧಿವಂತಿಕೆಯನ್ನು ತೋರುವ ನಿಮ್ಮಲ್ಲಿನ ಬುದ್ಧಿಶಕ್ತಿಗೆ ಸವಾಲೆನಿಸುವಂತಹ ಅನುಕೂಲತೆಗಳು ದೊರೆಯುತ್ತವೆ. ಜೀವನದಲ್ಲಿ ವಿಶೇಷವಾದಂತಹ ತಿರುವು ಕಂಡು ಬರುತ್ತದೆ.

ನೊಂದ ಜನರಿಗೆ ಸಹಾಯ ಮಾಡುವಿರಿ. ಬೇರೆಯವರಿಗೆ ಬೇಸರ ಉಂಟಾದರೂ ಸತ್ಯವನ್ನು ನುಡಿಯಲು ಹಿಂಜರಿಯುವುದಿಲ್ಲ. ಆಪ್ತರು ಮತ್ತು ಬೇರೆಯವರು ಎಂಬ ಭೇದಭಾವ ತೋರದೆ ಸತ್ಯ ಧರ್ಮದ ಹಾದಿಯಲ್ಲಿ ನಡೆಯುವಿರಿ. ಹಣಗಳಿಕೆ ಉತ್ತಮವಾಗಿದ್ದರೂ ಯೋಚಿಸದೆ ಖರ್ಚು ಮಾಡುವುದರಿಂದ ಹಣದ ಕೊರತೆಯು ನಿಮ್ಮನ್ನು ಕಾಡುತ್ತದೆ. ತಂದೆಯವರ ಅಥವಾ ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಅತ್ಯುನ್ನತ ಮಟ್ಟವನ್ನು ತಲುಪಲಿದ್ದಾರೆ. ರಾಜಕೀಯದಲ್ಲಿ ಇರುವವರಿಗೆ ಉತ್ತಮ ಸ್ಥಾನವು ದೊರೆಯುತ್ತದೆ. ರಕ್ಷಣ ಇಲಾಖೆಯಲ್ಲಿ ಇರುವವರಿಗೆ ಹೆಚ್ಚಿನ ಅನುಕೂಲತೆಗಳು ದೊರೆಯುತ್ತವೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಪ್ರಶಂಸೆಯು ದೊರೆಯುತ್ತದೆ. ಮಹಿಳಾ ಉದ್ಯಮಿಗಳು ಎಲ್ಲರೂ ಮೆಚ್ಚುವಂತಹ ಸಾಧನೆಗೆ ಪಾತ್ರರಾಗುತ್ತಾರೆ. ನಿಮಗೆ ಮೆಚ್ಚುಗೆಯಾಗುವಂತಹ ವಾಹನವನ್ನು ಕೊಳ್ಳುವಿರಿ. ವಿದ್ಯಾಭ್ಯಾಸಕ್ಕೆ ತಕ್ಕಂತೆ ವಿವೇಕದಿಂದ ವರ್ತಿಸುವಿರಿ.

ಸೋದರ ಮತ್ತು ಸೋದರಿಯರು ಬುದ್ಧಿವಂತಿಕೆಯಿಂದ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತಾರೆ. ನಿಮ್ಮ ಬಾಳ ಸಂಗಾತಿ ಶೀತದ ತೊಂದರೆಯಿಂದ ಬಳಲುವರು. ಕೇವಲ ಹಣ ಸಂಪಾದನೆ ನಿಮ್ಮ ಮುಖ್ಯ ಗುರಿಯಾಗಿರುವುದಿಲ್ಲ. ನಂಬಿ ಬಂದವರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುವಿರಿ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಗೆಲುವನ್ನು ಸಾಧಿಸುವವರೆಗೂ ನಿಮ್ಮ ಪ್ರಯತ್ನವನ್ನು ಬಿಡುವುದಿಲ್ಲ. ಸಂಗೀತ ನಾಟ್ಯದಂತಹ ಶಾಸ್ತ್ರೀಯ ಕಲೆಗಳನ್ನು ಬಲ್ಲವರಿಗೆ ವಿಶೇಷ ಗೌರವಾದರಗಳು ದೊರೆಯುತ್ತವೆ.

ಕನ್ಯಾ ರಾಶಿ

ಧೈರ್ಯ ಸಾಹಸದ ಗುಣ ನಿಮ್ಮಲ್ಲಿ ಮೂಡುತ್ತದೆ. ಯಾವುದೇ ಕೆಲಸ ಕಾರ್ಯವಾದರೂ ಬುದ್ಧಿವಂತಿಕೆಯ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಜಗಳ ಕದನಗಳನ್ನು ಇಷ್ಟಪಡದೆ ಕೇವಲ ಮಾತಿನಿಂದ ಸಮಸ್ಯೆಗಳನ್ನು ಬಗೆಹರಿಸುವಿರಿ. ಸುಖ ಸಂತೋಷದಿಂದ ಜೀವನ ನಡೆಸುವುದು ನಿಮ್ಮ ಮುಖ್ಯ ಗುರಿಯಾಗಿರುತ್ತದೆ. ನಿಮ್ಮ ಸ್ವಂತ ವಿಚಾರಗಳನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಆದರೆ ಬೇರೆಯವರ ವಿಚಾರಗಳನ್ನು ಸುಲಭವಾಗಿ ಸಂಗ್ರಹಿಸುವಿರಿ. ಗಳಿಸಿದ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ.

ನಿಮ್ಮ ಸೋಲಿಗೆ ದೇವರನ್ನು ಮತ್ತು ಗುರು ಹಿರಿಯರನ್ನು ಕಾರಣವಾಗಿಸುವಿರಿ. ಸ್ತ್ರೀಯರ ಮಾತಿಗೆ ವಿಶೇಷವಾದಂತಹ ಗೌರವ ದೊರೆಯುತ್ತದೆ. ಸಮಾಜದಲ್ಲಿ ಗೌರವಾನ್ವಿತ ಸ್ಥಾನವು ದೊರೆಯುತ್ತದೆ. ಸಾಹಸದ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಸೋಲಿನ ಬಗ್ಗೆ ಯೋಚಿಸದೆ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ದೊಡ್ಡ ಮಟ್ಟದ ಕೀರ್ತಿಯು ದೊರೆಯುತ್ತದೆ. ಸಾಹಸದ ಕ್ರೀಡಾ ಪಟುಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತದೆ. ಕೆಲವೊಮ್ಮೆ ಅತಿಯಾದ ಕೋಪವೂ ಬಂದರೂ ಅದನ್ನು ತೋರ್ಪಡಿಸಿಕೊಳ್ಳುವುದಿಲ್ಲ. ಸೋದರಿಯರ ಕಷ್ಟನಷ್ಟಗಳಿಗೆ ಸ್ಪಂದಿಸಿ ಸೂಕ್ತವಾದ ಪರಿಹಾರವನ್ನು ಸೂಚಿಸುವಿರಿ. ತಿಳಿಯದೆ ಮಾಡಿದ ತಪ್ಪುಗಳನ್ನು ಮನ್ನಿಸುವಿರಿ. ಯುವಕ ಯುವತಿಯರಿಗೆ ಅವರ ಮನದಾಸೆಗಳು ಸುಲಭವಾಗಿ ಈಡೇರುವ ಸೂಚನೆಗಳಿವೆ. ಸ್ವಂತ ಮನೆಯನ್ನು ಕೊಳ್ಳುವ ಅಥವಾ ಕಟ್ಟಿಸುವ ಯೋಚನೆಗೆ ಎಲ್ಲರ ಒಮ್ಮತ ದೊರೆಯುತ್ತದೆ.

ತಾಯಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ದಂಪತಿ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ಕೂಡಿಟ್ಟ ಹಣದ ಸದ್ಬಳಕೆ ಆಗಲಿದೆ. ಸಂಗಾತಿಯ ಮನಸ್ಸನ್ನು ಅರಿತುಕೊಂಡು ನಡೆಯುವಿರಿ. ನಿಮ್ಮ ಮಾತಿಗೆ ಕುಟುಂಬದಲ್ಲಿ ಯಾವುದೇ ರೀತಿಯ ಪ್ರತಿರೋಧ ಇರುವುದಿಲ್ಲ. ಮಕ್ಕಳ ವಿಚಾರದಲ್ಲಿ ಬುದ್ದಿವಂತಿಕೆಯ ನಿರ್ಣಯವನ್ನು ತೆಗೆದುಕೊಳ್ಳುವಿರಿ. ತಂದೆಯಿಂದ ಬಳುವಳಿಯಾಗಿ ಹಣಕಾಸಿನ ಅನುಕೂಲತೆ ಇರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡುವಿರಿ. ವದಂತಿಗಳನ್ನು ಕೇಳಲು ಇಷ್ಟಪಡುವಿರಿ. ಆದರೆ ಬೇರೆಯವರ ಮಾತನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಮನೆ ಮಂದಿಯ ಜೊತೆ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ಆತುರದ ನಿರ್ಧಾರಗಳಿಂದ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಲಭಿಸುತ್ತದೆ. ಅನಿರೀಕ್ಷಿತವಾಗಿ ನಿಮ್ಮ ವರಮಾನದಲ್ಲಿ ಪ್ರಗತಿ ಕಂಡು ಬರುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ