ಧೋನಿ ನಾಯಕ, ರೋಹಿತ್ ಆರಂಭಿಕ; ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರರ ಸಾರ್ವಕಾಲಿಕ ಬಲಿಷ್ಠ ಪ್ಲೇಯಿಂಗ್ XI
Mar 01, 2024 10:01 PM IST
ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರರ ಸಾರ್ವಕಾಲಿಕ ಬಲಿಷ್ಠ ಪ್ಲೇಯಿಂಗ್ XI
- IPL 2024: 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರರ ಸಾರ್ವಕಾಲಿಕ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಇಲೆವೆನ್ ಹೇಗಿದೆ? ಯಾರೆಲ್ಲಾ ಈ ತಂಡದಲ್ಲಿ ಅವಕಾಶ ಪಡೆದಿದ್ದಾರೆ? ಅವರ ದಾಖಲೆ ಹೇಗಿದೆ? ಮುಂದೆ ನೋಡೋಣ.
2024ರ ಐಪಿಎಲ್ಗೆ ದಿನಗಣನೆ ಆರಂಭಗೊಂಡಿದೆ. ಮಾರ್ಚ್ 22ರಿಂದ ಶ್ರೀಮಂತ ಲೀಗ್ಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಲಿದೆ. ಈಗಾಗಲೇ 16 ಆವೃತ್ತಿಗಳನ್ನು ಪೂರ್ಣಗೊಳಿಸಿರುವ ಐಪಿಎಲ್ ತನ್ನ 17ನೇ ಸೀಸನ್ನ ಮೊದಲ ಪಂದ್ಯಕ್ಕೆ ಚೆನ್ನೈನ ಚಿದಂಬರಂ ಸ್ಟೇಡಿಯಂ ಆತಿಥ್ಯ ವಹಿಸಲಿದೆ.
ವಿಶ್ವದ ಅತಿದೊಡ್ಡ ಲೀಗ್‌ನಲ್ಲಿ ಭಾರತೀಯ ಆಟಗಾರರು ಸಿಡಿದೇಳಲು ಸಜ್ಜಾಗಿದ್ದಾರೆ. 2008ರಿಂದ 2023ರವರೆಗೂ ಅನೇಕ ಭಾರತೀಯ ಆಟಗಾರರು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಹಾಗಾದರೆ 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರರ ಸಾರ್ವಕಾಲಿಕ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಇಲೆವೆನ್ ಹೇಗಿದೆ? ಯಾರೆಲ್ಲಾ ಈ ತಂಡದಲ್ಲಿ ಅವಕಾಶ ಪಡೆದಿದ್ದಾರೆ? ಅವರ ದಾಖಲೆ ಹೇಗಿದೆ? ಮುಂದೆ ನೋಡೋಣ.
ಶಿಖರ್ ಧವನ್: ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. 217 ಪಂದ್ಯಗಳಲ್ಲಿ ಅವರು 6617 ರನ್ ಗಳಿಸಿದ್ದು, ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ನಲ್ಲಿ ಆರಂಭಿಕರಾಗಿ ಅವಕಾಶ ಪಡೆದಿದ್ದಾರೆ.
ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ಮತ್ತು ಡೆಕ್ಕನ್ ಚಾರ್ಜರ್ಸ್ ಪರ 243 ಐಪಿಎಲ್ ಪಂದ್ಯಗಳಲ್ಲಿ ರೋಹಿತ್ 6211 ರನ್ ಗಳಿಸಿದ್ದಾರೆ. ಅಲ್ಲದೆ, 15 ವಿಕೆಟ್ ಸಹ ಪಡೆದಿದ್ದಾರೆ. ನಾಯಕನಾಗಿ 5 ಸೇರಿ ಆರು ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದಾರೆ.
ವಿರಾಟ್ ಕೊಹ್ಲಿ: 16 ವರ್ಷಗಳಿಂದ ಆರ್‌ಸಿಬಿ ಪರ ಆಡುತ್ತಿರುವ ವಿರಾಟ್ 237 ಐಪಿಎಲ್ ಪಂದ್ಯಗಳಲ್ಲಿ 7263 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ.
ಸುರೇಶ್ ರೈನಾ: 205 ಐಪಿಎಲ್ ಪಂದ್ಯಗಳಲ್ಲಿ ರೈನಾ 5528 ರನ್ ಗಳಿಸಿದ್ದಾರೆ. ಅಲ್ಲದೆ, 25 ವಿಕೆಟ್ ಸಹ ಪಡೆದಿದ್ದಾರೆ. ಈ ತಂಡದಲ್ಲಿ ನಾಲ್ಕನೇ ತಂಡದಲ್ಲಿ ಕಣಕ್ಕಿಳಿಯಲಿದ್ದಾರೆ.
ಎಂಎಸ್ ಧೋನಿ: 250 ಐಪಿಎಲ್ ಪಂದ್ಯಗಳಲ್ಲಿ ಧೋನಿ ಸಿಎಸ್‌ಕೆ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ 5082 ರನ್ ಗಳಿಸಿದ್ದಾರೆ. ಅವರು ಸಾರ್ವಕಾಲಿಕ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಹಾರ್ದಿಕ್ ಪಾಂಡ್ಯ: ನಾಯಕನಾಗಿ 1 ಸಲ ಸೇರಿ ಐದು ಬಾರಿ ಐಪಿಎಲ್ ವಿಜೇತರಾಗಿರುವ ಹಾರ್ದಿಕ್, 123 ಪಂದ್ಯಗಳಲ್ಲಿ 2309 ರನ್ ಗಳಿಸಿ 53 ವಿಕೆಟ್ ಪಡೆದಿದ್ದಾರೆ. ಆಲ್ರೌಂಡರ್ ಆಗಿದ್ದಾರೆ.
ಯೂಸಫ್ ಪಠಾಣ್: 174 ಐಪಿಎಲ್ ಪಂದ್ಯಗಳಲ್ಲಿ ಯೂಸುಫ್ 3204 ರನ್ ಗಳಿಸಿ 42 ವಿಕೆಟ್ ಪಡೆದಿದ್ದಾರೆ. ಅವರು ಮೂರು ಬಾರಿ ಐಪಿಎಲ್ ವಿಜೇತರಾಗಿದ್ದಾರೆ.
ರವೀಂದ್ರ ಜಡೇಜಾ: 226 ಐಪಿಎಲ್ ಪಂದ್ಯಗಳಲ್ಲಿ ಜಡೇಜಾ, 2692 ರನ್ ಗಳಿಸಿದ್ದಾರೆ. ಮತ್ತು 152 ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ.
ಭುವನೇಶ್ವರ್ ಕುಮಾರ್: 160 ಐಪಿಎಲ್ ಪಂದ್ಯಗಳಲ್ಲಿ 170 ವಿಕೆಟ್ ಪಡೆದಿರುವ ಭುವಿ, 283 ರನ್ ಗಳಿಸಿದ್ದಾರೆ. ನಗದು ಸಮೃದ್ಧ ಲೀಗ್‌ನಲ್ಲಿ ಅವರು ಎರಡು ಬಾರಿ ಪರ್ಪಲ್ ಕ್ಯಾಪ್ ವಿಜೇತರಾಗಿದ್ದಾರೆ.
ಜಸ್ಪ್ರೀತ್ ಬುಮ್ರಾ: ಮುಂಬೈ ಇಂಡಿಯನ್ಸ್ ಪರ 120 ಐಪಿಎಲ್ ಪಂದ್ಯಗಳಲ್ಲಿ ಬುಮ್ರಾ, ಈವರೆಗೆ 145 ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ.
ಯುಜುವೇಂದ್ರ ಚಹಲ್: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. 145 ಪಂದ್ಯಗಳಲ್ಲಿ 187 ವಿಕೆಟ್ ಪಡೆದಿದ್ದಾರೆ.