BCCI Salary vs IPL salary: ಬಿಸಿಸಿಐ ವಾರ್ಷಿಕ ಒಪ್ಪಂದ ಪಡೆದ ಆಟಗಾರರಿಗೆ ಐಪಿಎಲ್ನಲ್ಲಿ ಸಿಗುವ ವೇತನವೆಷ್ಟು?
BCCI Salary vs IPL salary : ಗುತ್ತಿಗೆ ಪಟ್ಟಿಯಲ್ಲಿರುವ ಆಟಗಾರರ ಬಿಸಿಸಿಐ ವೇತನ ಮತ್ತು ಐಪಿಎಲ್ ವೇತನದ ವ್ಯತ್ಯಾಸ ಎಷ್ಟಿದೆ ಎಂಬುದನ್ನು ಈ ಮುಂದೆ ನೋಡೋಣ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಸೀಸನ್‌ಗೆ ಒಂದು ತಿಂಗಳಿಗೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಟಗಾರರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದೆ. 2023ರ ಅಕ್ಟೋಬರ್ 1 ರಿಂದ 2024ರ ಸೆಪ್ಟೆಂಬರ್ 30ರ ಅವಧಿಗೆ ವಾರ್ಷಿಕ ಒಪ್ಪಂದ ಇರಲಿದೆ. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ರನ್ನು ಈ ಗುತ್ತಿಗೆಯಿಂದ ಹೊರಗೆ ಇಡಲಾಗಿದೆ. ಪ್ರಮುಖ ಆಟಗಾರರನ್ನು ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.
ಎ+, ಎ, ಬಿ, ಸಿ ಕೆಟಗಿರಿಯಲ್ಲಿ 30 ಆಟಗಾರರು ಅವಕಾಶ ಪಡೆದಿದ್ದಾರೆ. ಕ್ರಮವಾಗಿ 7, 5, 3, 1 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ. ಆದರೆ, ವಾರ್ಷಿಕ ಒಪ್ಪಂದದಲ್ಲಿ ಸ್ಥಾನ ಪಡೆದ ಆಟಗಾರರು ಬಿಸಿಸಿಐ ಒಪ್ಪಂದಕ್ಕಿಂತ ಇಂಡಿಯನ್ ಪ್ರೀಮಿಯರ್ ಲೀಗ್ನ ಒಪ್ಪಂದದಲ್ಲಿ ಹೆಚ್ಚಿನ ವೇತನ ಪಡೆಯುತ್ತಾರೆ. ಹಾಗಾದರೆ ಗುತ್ತಿಗೆಯಲ್ಲಿರುವ ಆಟಗಾರರ ಬಿಸಿಸಿಐ ವೇತನ ಮತ್ತು ಐಪಿಎಲ್ ವೇತನದ ವ್ಯತ್ಯಾಸ ಎಷ್ಟಿದೆ ಎಂಬುದನ್ನು ಈ ಮುಂದೆ ನೋಡೋಣ.
ಬಿಸಿಸಿಐ ಕೇಂದ್ರ ಒಪ್ಪಂದ 2023-24 vs ಐಪಿಎಲ್ 2024 ಸಂಬಳ
ಗ್ರೇಡ್ A+ (7 ಕೋಟಿ ರೂಪಾಯಿ)
ರೋಹಿತ್ ಶರ್ಮಾ - (ಮುಂಬೈ ಇಂಡಿಯನ್ಸ್ - 16 ಕೋಟಿ ರೂಪಾಯಿ)
ವಿರಾಟ್ ಕೊಹ್ಲಿ - (ರಾಯಲ್ ಚಾಲೆಂಜರ್ಸ್ ಬೆಂಗಳೂರು - 15 ಕೋಟಿ ರೂಪಾಯಿ)
ಜಸ್ಪ್ರೀತ್ ಬುಮ್ರಾ - (ಮುಂಬೈ ಇಂಡಿಯನ್ಸ್ - 12 ಕೋಟಿ ರೂಪಾಯಿ)
ರವೀಂದ್ರ ಜಡೇಜಾ - (ಚೆನ್ನೈ ಸೂಪರ್ ಕಿಂಗ್ಸ್ - 16 ಕೋಟಿ ರೂಪಾಯಿ)
ಗ್ರೇಡ್ ಎ (5 ಕೋಟಿ ರೂಪಾಯಿ)
ರವಿಚಂದ್ರನ್ ಅಶ್ವಿನ್ - (ರಾಜಸ್ಥಾನ್ ರಾಯಲ್ಸ್ - 5 ಕೋಟಿ ರೂಪಾಯಿ)
ಮೊಹಮ್ಮದ್ ಶಮಿ - (ಗುಜರಾತ್ ಟೈಟಾನ್ಸ್ - 6.25 ಕೋಟಿ ರೂಪಾಯಿ)
ಮೊಹಮ್ಮದ್ ಸಿರಾಜ್ - (ರಾಯಲ್ ಚಾಲೆಂಜರ್ಸ್ ಬೆಂಗಳೂರು - 7 ಕೋಟಿ ರೂಪಾಯಿ)
ಕೆಎಲ್ ರಾಹುಲ್ - (ಲಕ್ನೋ ಸೂಪರ್ ಜೈಂಟ್ಸ್ - 17 ಕೋಟಿ ರೂಪಾಯಿ)
ಶುಭಮನ್ ಗಿಲ್ - (ಗುಜರಾತ್ ಟೈಟಾನ್ಸ್ - 8 ಕೋಟಿ ರೂಪಾಯಿ)
ಹಾರ್ದಿಕ್ ಪಾಂಡ್ಯ. - (ಮುಂಬೈ ಇಂಡಿಯನ್ಸ್ - 15 ಕೋಟಿ ರೂಪಾಯಿ)
ಗ್ರೇಡ್ ಬಿ (3 ಕೋಟಿ ರೂ.)
ಸೂರ್ಯ ಕುಮಾರ್ ಯಾದವ್ - (ಮುಂಬೈ ಇಂಡಿಯನ್ಸ್ - 8 ಕೋಟಿ ರೂಪಾಯಿ)
ರಿಷಭ್ ಪಂತ್ - (ದೆಹಲಿ ಕ್ಯಾಪಿಟಲ್ಸ್ - 16 ಕೋಟಿ ರೂಪಾಯಿ)
ಕುಲದೀಪ್ ಯಾದವ್ - (ದೆಹಲಿ ಕ್ಯಾಪಿಟಲ್ಸ್ - 2 ಕೋಟಿ ರೂಪಾಯಿ)
ಅಕ್ಷರ್ ಪಟೇಲ್ - (ದೆಹಲಿ ಕ್ಯಾಪಿಟಲ್ಸ್ - 9 ಕೋಟಿ ರೂಪಾಯಿ)
ಯಶಸ್ವಿ ಜೈಸ್ವಾಲ್ - (ರಾಜಸ್ಥಾನ್ ರಾಯಲ್ಸ್ - 4 ಕೋಟಿ ರೂಪಾಯಿ)
ಗ್ರೇಡ್ ಸಿ (1 ಕೋಟಿ ರೂ.)
ರಿಂಕು ಸಿಂಗ್ - (ಕೋಲ್ಕತ್ತಾ ನೈಟ್ ರೈಡರ್ಸ್ - 55 ಲಕ್ಷ ರೂಪಾಯಿ)
ತಿಲಕ್ ವರ್ಮಾ - (ಮುಂಬೈ ಇಂಡಿಯನ್ಸ್ - 1.7 ಕೋಟಿ ರೂಪಾಯಿ)
ಋತುರಾಜ್ ಗಾಯಕ್ವಾಡ್ - (ಚೆನ್ನೈ ಸೂಪರ್ ಕಿಂಗ್ಸ್ - 6 ಕೋಟಿ ರೂಪಾಯಿ)
ಶಾರ್ದೂಲ್ ಠಾಕೂರ್ - (ಚೆನ್ನೈ ಸೂಪರ್ ಕಿಂಗ್ಸ್ - 4 ಕೋಟಿ ರೂಪಾಯಿ)
ಶಿವಂ ದುಬೆ - (ಚೆನ್ನೈ ಸೂಪರ್ ಕಿಂಗ್ಸ್ - 4 ಕೋಟಿ ರೂಪಾಯಿ)
ರವಿ ಬಿಷ್ಣೋಯ್ - (ಲಕ್ನೋ ಸೂಪರ್ ಜೈಂಟ್ಸ್ - 4 ಕೋಟಿ ರೂಪಾಯಿ)
ಜಿತೇಶ್ ಶರ್ಮಾ -(ಪಂಜಾಬ್ ಕಿಂಗ್ಸ್ - 20 ಲಕ್ಷ ರೂಪಾಯಿ)
ವಾಷಿಂಗ್ಟನ್ ಸುಂದರ್ - (ಸನ್‌ರೈಸರ್ಸ್ ಹೈದರಾಬಾದ್ 8.75 ಕೋಟಿ ರೂಪಾಯಿ)
ಮುಖೇಶ್ ಕುಮಾರ್ - (ದೆಹಲಿ ಕ್ಯಾಪಿಟಲ್ಸ್ - 5.50 ಕೋಟಿ ರೂಪಾಯಿ)
ಸಂಜು ಸ್ಯಾಮ್ಸನ್ - (ರಾಜಸ್ಥಾನ್ ರಾಯಲ್ಸ್ - 14 ಕೋಟಿ ರೂಪಾಯಿ)
ಅರ್ಷದೀಪ್ ಸಿಂಗ್ - (ಪಂಜಾಬ್ ಕಿಂಗ್ಸ್ - 4 ಕೋಟಿ ರೂಪಾಯಿ)
ಕೆಎಸ್ ಭರತ್ - (ಕೋಲ್ಕತ್ತಾ ನೈಟ್ ರೈಡರ್ಸ್ - 50 ಲಕ್ಷ ರೂಪಾಯಿ)
ಪ್ರಸಿದ್ಧ್ ಕೃಷ್ಣ - (ರಾಜಸ್ಥಾನ್ ರಾಯಲ್ಸ್ - 10 ಕೋಟಿ ರೂಪಾಯಿ)
ಅವೇಶ್ ಖಾನ್ - (ರಾಜಸ್ಥಾನ್ ರಾಯಲ್ಸ್ - 10 ಕೋಟಿ ರೂಪಾಯಿ)
ರಜತ್ ಪಾಟಿದಾರ್ - (ರಾಯಲ್ ಚಾಲೆಂಜರ್ಸ್ ಬೆಂಗಳೂರು - 20 ಲಕ್ಷ ರೂಪಾಯಿ)
ಧ್ರುವ್ ಜುರೆಲ್* - (ರಾಜಸ್ಥಾನ್ ರಾಯಲ್ಸ್ - 20 ಲಕ್ಷ ರೂಪಾಯಿ)
ಸರ್ಫರಾಜ್ ಖಾನ್* - (ಐಪಿಎಲ್ ಒಪ್ಪಂದವಿಲ್ಲ)
ಇಶಾನ್ ಕಿಶನ್ - ಶ್ರೇಯಸ್ ಅಯ್ಯರ್ ಕಥೆ ಏನು?
ಗುತ್ತಿಗೆಯಿಂದ ಹೊರಬಿದ್ದಿರುವ ಇಶಾನ್ ಕಿಶನ್ ಅವರು ಮುಂಬೈ ಇಂಡಿಯನ್ಸ್ ಪರ 15.25 ಕೋಟಿ ರೂಪಾಯಿ ಮತ್ತು ಶ್ರೇಯಸ್ ಅಯ್ಯರ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ 12.25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಎಲ್ಲಾ ಆಟಗಾರರು ಕೇಂದ್ರ ಒಪ್ಪಂದದ ಮೂಲಕ ನೀಡುವ ಹಣದ ಹೊರತಾಗಿ ಆಡುವ ಪ್ರತಿಯೊಂದು ಪಂದ್ಯಕ್ಕೂ (ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಪ್ರತಿ ಏಕದಿನಕ್ಕೆ 6 ಲಕ್ಷ, ಪ್ರತಿ ಟಿ20ಐಗೆ 3 ಲಕ್ಷ ರೂಪಾಯಿ) ಮೌಲ್ಯದ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ.