logo
ಕನ್ನಡ ಸುದ್ದಿ  /  ಕ್ರಿಕೆಟ್  /  Australia Test Squad: ಪ್ರಮುಖ 3 ಬದಲಾವಣೆಯೊಂದಿಗೆ ಕೊನೆಯ 2 ಟೆಸ್ಟ್​ಗಳಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

Australia Test squad: ಪ್ರಮುಖ 3 ಬದಲಾವಣೆಯೊಂದಿಗೆ ಕೊನೆಯ 2 ಟೆಸ್ಟ್​ಗಳಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

Prasanna Kumar P N HT Kannada

Dec 20, 2024 10:01 PM IST

google News

ಭಾರತ ವಿರುದ್ಧದ ಕೊನೆಯ 2 ಟೆಸ್ಟ್​ಗಳಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

    • Australia squad for 4th Test against India: ಟೀಮ್ ಇಂಡಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್​ ಪಂದ್ಯಗಳಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಪ್ರಮುಖವಾಗಿ ಮೂವರು ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ.
ಭಾರತ ವಿರುದ್ಧದ ಕೊನೆಯ 2 ಟೆಸ್ಟ್​ಗಳಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ
ಭಾರತ ವಿರುದ್ಧದ ಕೊನೆಯ 2 ಟೆಸ್ಟ್​ಗಳಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

ಬಾರ್ಡರ್ ಗವಾಸ್ಕರ್ ಟ್ರೋಫಿ 2025ರಲ್ಲಿ ಟೀಮ್ ಇಂಡಿಯಾ ವಿರುದ್ಧ ಕೊನೆಯ ಎರಡು ಟೆಸ್ಟ್​​ ಪಂದ್ಯಗಳಿಗೆ ಆಸ್ಟ್ರೇಲಿಯಾ ಬಲಿಷ್ಠ ತಂಡ ಪ್ರಕಟಿಸಿದೆ. ಅಲ್ಲದೆ, ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮೊದಲ 3 ಟೆಸ್ಟ್​ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದ ಆರಂಭಿಕ ಆಟಗಾರ ನಾಥನ್ ಮೆಕ್​ಸ್ವೀನಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಆರು ಇನ್ನಿಂಗ್ಸ್‌ಗಳ ಪೈಕಿ ಐದರಲ್ಲಿ 10 ರನ್ ದಾಟಲು ವಿಫಲರಾಗಿದ್ದ ಮೆಕ್​ಸ್ವೀನಿ ಬದಲಿಗೆ 19 ವರ್ಷದ ಕ್ರಿಕೆಟಿಗನನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.

ಆರು ಇನ್ನಿಂಗ್ಸ್‌ಗಳಲ್ಲಿ 72 ರನ್ ಗಳಿಸಿದ ನಂತರ ಮೆಕ್‌ಸ್ವೀನಿ 14.40 ಸರಾಸರಿ ಹೊಂದಿದ್ದರು. ಜಸ್ಪ್ರೀತ್ ಬುಮ್ರಾ ಬೌಲಿಂಗ್​​ನಲ್ಲಿ ಪದೇಪದೇ ವಿಕೆಟ್ ಒಪ್ಪಿಸುತ್ತಿದ್ದರು. ಇದು ತಂಡಕ್ಕೆ ಭಾರೀ ಹಿನ್ನಡೆಯಾಗುತ್ತಿತ್ತು. 19 ವರ್ಷದ ನ್ಯೂ ಸೌತ್ ವೇಲ್ಸ್ ತಂಡದ ಬ್ಯಾಟರ್ ಸ್ಯಾಮ್ ಕೊನ್‌ಸ್ಟಾಸ್​​ಗೆ ಮಣೆ ಹಾಕಲಾಗಿದ್ದು, ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆಯುವುದು ಖಚಿತ. ಶೆಫೀಲ್ಡ್ ಶೀಲ್ಡ್​ನಲ್ಲಿ ನೀಡಿದ ಅದ್ಭುತ ಪ್ರದರ್ಶನ, ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್‌ ಪರ ಬಿರುಸಿನ ಬ್ಯಾಟಿಂಗ್ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.

ಡಬ್ಲ್ಯುಟಿಸಿ ಫೈನಲ್ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಆಸ್ಟ್ರೇಲಿಯಾ, ಉಳಿದ 2 ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಹೀಗಾಗಿ ಬದಲಾವಣೆಗೆ ಕ್ರಿಕೆಟ್​ ಆಸ್ಟ್ರೇಲಿಯಾ ನಿರ್ಧರಿತು. ಮೆಕ್​ಸ್ವೀನಿ ತೀವ್ರ ಟೀಕೆಗೆ ಗುರಿಯಾದ ನಂತರ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಅವರು ಹಠಾತ್ ನಿರ್ಧಾರ ತೆಗೆದುಕೊಂಡಿದ್ದಾರೆ. ಕ್ಯಾನ್‌ಬೆರಾದಲ್ಲಿ ನಡೆದ ಪಿಂಕ್-ಬಾಲ್ ಅಭ್ಯಾಸ ಪಂದ್ಯದಲ್ಲಿ ಪ್ರೈಮ್ ಮಿನಿಸ್ಟರ್ XI ಪರ ಭಾರತದ ವಿರುದ್ಧ ಸ್ಯಾಮ್ ಕೊನ್‌ಸ್ಟಾಸ್​​ ಶತಕ ಸಿಡಿಸಿದ್ದರು.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸ್ಯಾಮ್ ಕೊನ್‌ಸ್ಟಾಸ್ ಪ್ರದರ್ಶನ​

ಪಂದ್ಯ - 11

ಇನ್ನಿಂಗ್ಸ್ - 18

ರನ್ - 718

ಸರಾಸರಿ - 42.23

ಗರಿಷ್ಠ ಸ್ಕೋರ್ - 152

50/100 - 03/02

4s/6s - 74/08

ಇಬ್ಬರು ವೇಗಿಗಳಿಗೂ ಮಣೆ

ಆತಿಥೇಯರು ಬಾಕ್ಸಿಂಗ್ ಡೇ, ಹೊಸ ವರ್ಷದ ಟೆಸ್ಟ್‌ಗೆ ಇಬ್ಬರು ಬ್ಯಾಕಪ್ ವೇಗಿಗಳಿಗೂ ಅವಕಾಶ ನೀಡಿದ್ದಾರೆ. ಜೆ ರಿಚರ್ಡ್ಸನ್ ಮೂರು ವರ್ಷಗಳ ನಂತರ ರೆಡ್-ಬಾಲ್ ತಂಡದಲ್ಲಿ ಪುನರಾಗಮನ ಮಾಡಿದ್ದಾರೆ. ಮತ್ತು ಗಾಯಾಳು ಜೋಶ್ ಹ್ಯಾಜಲ್‌ವುಡ್ ಬದಲಿಗೆ ಮೈಕೆಲ್ ನೆಸರ್‌ಗಿಂತ ಸೀನ್ ಅಬಾಟ್‌ಗೆ ಆದ್ಯತೆ ನೀಡಲಾಗಿದೆ. ರಿಚರ್ಡ್ಸನ್ ಕೊನೆಯದಾಗಿ 2021ರಲ್ಲಿ ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಆಡಿದ್ದರು. ನಿರಂತರ ಗಾಯಗಳಿಂದಾಗಿ ಆಯ್ಕೆಯಾಗಿರಲಿಲ್ಲ.'

ಮೆಲ್ಬೋರ್ನ್, ಸಿಡ್ನಿ ಟೆಸ್ಟ್​ಗಳಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

ಪ್ಯಾಟ್ ಕಮಿನ್ಸ್ (ನಾಯಕ), ಟ್ರಾವಿಸ್ ಹೆಡ್ (ಉಪನಾಯಕ), ಸ್ಟೀವ್ ಸ್ಮಿತ್ (ಉಪನಾಯಕ), ಸೀನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಸ್ಯಾಮ್ ಕೊನ್‌ಸ್ಟಾಸ್, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಜೈ ರಿಚರ್ಡ್ಸನ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ